Apple: ಆಪಲ್‌ನ ಬಹುನಿರೀಕ್ಷಿತ WWDC-2024ರಲ್ಲಿ ಹಾರ್ಡ್‌ವೇರ್ ಅಪ್‌ಡೇಟ್ ಘೋಷಣೆ ಅನುಮಾನ !
ಆಪಲ್ (Apple) ಸಂಸ್ಥೆ ತನ್ನ ಬಹು ನಿರೀಕ್ಷಿತ ವರ್ಲ್ಡ್‌ವೈಡ್ ಡೆವಲಪರ್ಸ್ ಕಾನ್ಫರೆನ್ಸ್ (WWDC) 2024ನ್ನು ಜೂನ್ 10 ರಿಂದ 14ರವರೆಗೆ ನಡೆಸಲು ಈಗಾಗಲೆ ಸಮಯ ನಿಗದಿಪಡಿಸಿದೆ. ಜೂನ್ 10ರ ಸೋಮವಾರ ಬೆಳಗ್ಗೆ 10 ಗಂಟೆಗೆ ಈ ಪ್ರಮುಖ ಕಾರ್ಯಕ್ರಮ ಆರಂಭವಾಗಲಿದೆ. ಈ ಸಂದರ್ಭಗಳಲ್ಲಿ ಪ್ರತೀ ವರ್ಷದಂತೆ iOS 18, ಐಪ್ಯಾಡ್ OS 18, ವಾಚ್ OS ಅಪ್ಡೇಟ್‌ಗಳು ಮತ್ತು ಹೊಸ ಮ್ಯಾಕ್OS ಸೇರಿದಂತೆ ಹೊಸ ಸಾಫ್ಟ್‌ವೇರ್ ಅಪ್ಡೇಟ್‌ಗಳ ಕುರಿತು ಮಾಹಿತಿ ನೀಡಲಿದೆ. ಆದರೆ ಈ ಭಾರಿ ಯಾವುದೇ ನೂತನ ಹಾರ್ಡ್‌ವೇರ್ ಅಪ್ಡೇಟ್‌ನ ಕುರಿತು ಪ್ರಕಟಣೆ ಹೊರಡಿಸುವುದಿಲ್ಲ ಎಂದು ವರದಿಯಾಗಿದೆ.
ಆಪಲ್ (Apple) ವರ್ಲ್ಡ್‌ವೈಡ್ ಡೆವಲಪರ್ಸ್ ಕಾನ್ಫರೆನ್ಸ್ (WWDC) 2024ರಲ್ಲಿ ಯಾವುದೇ ಹಾರ್ಡ್‌ವೇರ್ ಸಂಬಂಧಿತ ಪ್ರಕಟಣೆಗಳನ್ನು ಹೊರಡಿಸುವ ನಿರೀಕ್ಷೆಯಿಲ್ಲ ಎಂದು ವರದಿಯೊಂದು ತಿಳಿಸಿದೆ. ಈ ಕಾರ್ಯಕ್ರಮದಲ್ಲಿ iOS, iPadOS ಮತ್ತು ಇತರ ಆಪಲ್ ಸಾಫ್ಟ್‌ವೇರ್‌ನ ಮುಂದಿನ ಅಪ್ಡೇಟ್‌ಗಳನ್ನು ಮಾಡಲು ಸಲಹೆ ನೀಡಲಾಗುತ್ತದೆ. ಅದರ ಹೊರತಾಗಿಯೂ ಹೊಸ ವರದಿ ಪ್ರಕಾರ ಕೆಲವು ಸಾಫ್ಟ್‌ವೇರ್ ಕುರಿತು ಪ್ರಕಟಣೆ ಹೊರಡಿಸಬಹುದು ಎನ್ನಲಾಗಿದೆ.

WWDC 2024 ರಲ್ಲಿ ಯಾವುದೇ ಹಾರ್ಡ್‌ವೇರ್ ಅಪ್ಡೇಟ್ ಕುರಿತು ಇರುವುದಿಲ್ಲ:
ಬ್ಲೂಮ್‌ಬರ್ಗ್‌ನ ಮಾರ್ಕ್ ಗುರ್ಮನ್ ತನ್ನ ಪವರ್ ಆನ್ ಸುದ್ದಿಪತ್ರದಲ್ಲಿ ಹೇಳಿರುವಂತೆ, ಕ್ಯುಪರ್ಟಿನೊ ಮೂಲದ ಟೆಕ್ ದೈತ್ಯ ತನ್ನ ಡೆವಲಪರ್ ಸಮ್ಮೇಳನದಲ್ಲಿ ಯಾವುದೇ ಹಾರ್ಡ್‌ವೇರ್ ಅನ್ನು ಅನಾವರಣ ಮಾಡಲು ಯೋಜಿಸುತ್ತಿಲ್ಲ ಎಂದು ತಿಳಿಸಿದ್ದಾರೆ. WWDC ನಲ್ಲಿ ಘೋಷಿಸಲು ಯಾವುದೇ ಹಾರ್ಡ್‌ವೇರ್ ಇಲ್ಲ, ಆಪಲ್ ಪೂರ್ವವೀಕ್ಷಣೆ ಮಾಡದ ಹೊರತು ಯಾವುದೇ ಹಾರ್ಡ್‌ವೇರ್ ಅನ್ನು ಘೋಷಣೆ ಮಾಡುವುದಿಲ್ಲ ಎಂದು ತಿಳಿಸಿದ್ದಾರೆ.
2024 ರ ಮೊದಲಾರ್ಧದಲ್ಲಿ ಆಪಲ್ ನೆಕ್ಸ್ಟ್ ಜನರೇಷನ್ ಟಿವಿ ಬರುವ ವದಂತಿಗಳನ್ನು ತಳ್ಳಿ ಹಾಕಲಾಗಿದೆ. ಗುರ್ಮನ್ ಈ ಹಿಂದೆ ಹೊಸ ಆಪಲ್ ಟಿವಿಯ ಬಗ್ಗೆ ವೇಗದ ಪ್ರೊಸೆಸರ್ ಮತ್ತು ಅಗ್ಗದ ಬೆಲೆಯ ಟ್ಯಾಗ್ ಅನ್ನು ಡೆವಲಪರ್ ಕಾನ್ಫರೆನ್ಸ್‌ನಲ್ಲಿ ತೋರಿಸಬಹುದೆಂದು ಊಹಿಸಿದ್ದರು. ಇದೀಗ ವಿಶ್ಲೇಷಕರು ಅದರ ಲಾಂಚಿಂಗ್ ಸಮಯ ಶೀಘ್ರದಲ್ಲಿಇಲ್ಲ ಎಂದು ಹೇಳುತ್ತಿದ್ದಾರೆ.
ಏನನ್ನು ನಿರೀಕ್ಷಿಸಬಹುದು?
WWDC 2024 ರಲ್ಲಿ ಐಫೋನ್, iPad, ಮತ್ತು Mac ನಂತಹ ಬಹು ಆಪಲ್ ಸಾಧನಗಳ ಆಪರೇಟಿಂಗ್ ಸಿಸ್ಟಮ್‌ಗಳಿಗೆ ಸಂಬಂಧಿಸಿದಂತೆ ಪ್ರದರ್ಶನಗಳನ್ನು ಒಳಗೊಂಡಿರುತ್ತದೆ ಎಂದು ನಿರೀಕ್ಷಿಸಲಾಗಿದೆ. ಐಫೋನ್‌ನ ಮುಂದಿನ ದೊಡ್ಡ ಅಪ್‌ಡೇಟ್ iOS 18, ಕೃತಕ ಬುದ್ಧಿಮತ್ತೆಯ (AI) ಅಳವಡಿಕೆಯಿಂದ ಪ್ರಯೋಜನ ಪಡೆಯಬಹುದು ಎಂದು ವದಂತಿಗಳು ಸೂಚಿಸುತ್ತವೆ.
ಆಪಲ್ ನ (Apple) ಧ್ವನಿ ಸಹಾಯಕ ಸಿರಿ ಮಾಹಿತಿಯನ್ನು ಪುನರಾವರ್ತನೆ ಮಾಡದೆಯೇ ಫಾಲೋ-ಅಪ್ ಪ್ರಶ್ನೆಗಳನ್ನು ಕೇಳುವ ಸಾಮರ್ಥ್ಯ ಒಳಗೊಂಡಂತೆ ದೊಡ್ಡ ಅಪ್ಡೇಟ್ ಪಡೆಯಲು ಸಲಹೆ ನೀಡಲಾಗಿದೆ. ಇತ್ತೀಚಿನ ವರದಿಯು ಆಪಲ್ ತನ್ನ ಸಂಭಾಷಣೆಯ ಚಾಟ್‌ಬಾಟ್, ಚಾಟ್‌ಜಿಪಿಟಿ ಸೇರಿದಂತೆ ತನ್ನ ಸ್ವಾಮ್ಯದ AI ತಂತ್ರಜ್ಞಾನವನ್ನು ನೀಡಲು ಓಪನ್AI ಜೊತೆ ಒಪ್ಪಂದವನ್ನು ಮಾಡಿಕೊಂಡಿದೆ ಎಂದು ತಿಳಿಸಿದೆ.
IOS 18, AI ಚಾಲಿತ ಕಸ್ಟಮ್ ಎಮೋಜಿಗಳನ್ನು ಐಫೋನ್ (iPhone) ನ ಅಸ್ತಿತ್ವದಲ್ಲಿರುವ ಎಮೋಜಿ ಲೈಬ್ರರಿಯ ಹೊರಗೆ ತರಬಹುದು ಎಂದು ಗುರ್ಮನ್ ವರದಿ ಮಾಡಿದೆ. ಇದಲ್ಲದೆ ಇದು ಪರದೆಯ ವಿನ್ಯಾಸವನ್ನು ಕಸ್ಟಮೈಸ್ ಮಾಡುವ ಸಾಮರ್ಥ್ಯವನ್ನು ಸಹ ನೀಡುತ್ತದೆ, ಬಳಕೆದಾರರು ಐಕಾನ್‌ಗಳನ್ನು ಹೆಚ್ಚು ಮುಕ್ತವಾಗಿ ಜೋಡಿಸಲು ಅನುವು ಮಾಡಿಕೊಡುತ್ತದೆ.
ಅದರ ಹೊರತಾಗಿಯೂ ಆಪಲ್ (Apple) ತನ್ನ ಈವೆಂಟ್‌ನಲ್ಲಿ ಕೀ ನೋಟ್ ಸಮಯದಲ್ಲಿ ಕೆಲವು ಪ್ರಕಟಣೆಗಳನ್ನು ಹೊರಡಿಸಬಹುದು ಅಲ್ಲಿಯವರೆಗೂ ಗೌಪ್ಯತೆ ಕಾಪಾಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಹಾಗಾಗಿಬಳಕೆದಾರರು ಆಪಲ್ ಅಪ್ಡೇಟ್‌ಗಳ ಕುರಿತು ಮಹಿತಿ ತಿಳಿಯಲು WWDC 2024ರವರೆಗೆ ಕಾಯಬೇಕಾಗಿದೆ.


Click it and Unblock the Notifications








