ಆಪಲ್ ಕಂಪೆನಿಯಿಂದ ಐಫೋನ್ 15 ಸರಣಿಯ ಮೇಲೆ ಭರ್ಜರಿ ಡಿಸ್ಕೌಂಟ್!
ಟೆಕ್ ಲೋಕದ ದಿಗ್ಗಜ ಆಪಲ್ ಕಂಪೆನಿ ತನ್ನ ಹೊಸ ಐಫೋನ್ 15 ಸರಣಿ ಮೇಲೆ ತ್ವರಿತ ರಿಯಾಯಿತಿಯನ್ನು ಘೋಷಿಸಿದೆ. ಈ ಮೂಲಕ ಐಫೋನ್ ಖರೀದಿಸಬೇಕೆಂದು ಕೊಂಡವರಿಗೆ ಬಿಗ್ ಡಿಸ್ಕೌಂಟ್ ನೀಡುತ್ತಿದೆ. ಐಫೋನ್ 15 ಸರಣಿ ಮಾತ್ರವಲ್ಲ, ಐಫೋನ್ 14 ಸರಣಿ, ಐಫೋನ್ 13 ಮೇಲೂ ಕೂಡ ಡಿಸ್ಕೌಂಟ್ ಲಭ್ಯವಾಗಲಿದೆ.
ಹೌದು, ಐಫೋನ್ 15 ಸರಣಿಯ ಬೆಲೆಯಲ್ಲಿ ಭಾರಿ ರಿಯಾಯಿತಿಯನ್ನು ಘೋಷಿಸಲಾಗಿದೆ. ಇದು ಅರ್ಹ HDFC ಬ್ಯಾಂಕ್ ಕಾರ್ಡ್‌ಗಳನ್ನು ಬಳಸುವ ಖರೀದಿದಾರರಿಗೆ ಲಭ್ಯವಾಗಲಿದೆ ಎನ್ನಲಾಗಿದೆ. ಇದಲ್ಲದೆ ಆಪಲ್ ಕಂಪೆನಿಯ ಅಧಿಕೃತ ಆನ್‌ಲೈನ್ ಸ್ಟೋರ್, ಸೆಲೆಕ್ಟ್ ಸಿಟಿವಾಕ್‌ನಲ್ಲಿರುವ ಆಪಲ್ ಸ್ಟೋರ್ ನಲ್ಲಿ ರಿಯಾಯಿತಿ ಲಭ್ಯವಾಗಲಿದೆ. ಹಾಗಾದ್ರೆ ಆಫಲ್ ಕಂಪೆನಿ ಹೊಸ ಐಫೋನ್ 15 ಸರಣಿ ಮೇಲೆ ಘೋಷಿಸಿರುವ ರಿಯಾಯಿತಿ ಎಷ್ಟು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಐಫೋನ್ 15 ಸರಣಿ ಮೇಲೆ ಲಭ್ಯವಾಗ್ತಿರುವ ಡಿಸ್ಕೌಂಟ್ ಎಷ್ಟಿದೆ?
ಆಪಲ್ ಕಂಪೆನಿ ಭಾರತದಲ್ಲಿ ತನ್ನ ಐಫೋನ್ ಮತ್ತು ಆಪಲ್ ವಾಚ್ ಲೈನ್‌ಅಪ್‌ನ ಖರೀದಿಯ ಮೇಲೆ 6,000 ರೂಪಾಯಿಗಳ ತ್ವರಿತ ಉಳಿತಾಯವನ್ನು ಘೋಷಿಸಿದೆ. ಇದು ಅರ್ಹ HDFC ಬ್ಯಾಂಕ್ ಕಾರ್ಡ್‌ಗಳನ್ನು ಬಳಸುವ ಖರೀದಿದಾರರಿಗೆ ಲಭ್ಯವಾಗಲಿದೆ. ಅಲ್ಲದೆ HDFC ಬ್ಯಾಂಕ್ ಕಾರ್ಡ್ ತ್ವರಿತ ಡಿಸ್ಕೌಂಟ್ ಜೊತೆಗೆ ಆಪಲ್ 3 ಮೇಲೆ ನೋ ಕಾಸ್ಟ್ EMI ಪ್ರಯೋಜನವನ್ನು ಸಹ ನೀಡುತ್ತಿದೆ.
ಹೊಸ ಡಿವೈಸ್ ಖರೀದಿಸಿ ಹಲವು ಪ್ರಯೋಜನ ಪಡೆಯಿರಿ
ಇನ್ನು ಆಪಲ್ ಕಂಪೆನಿ ತನ್ನ ಗ್ರಾಹಕರಿಗೆ ಡೆಲಿವರಿ ಮತ್ತು ಪಿಕಪ್ ಆಯ್ಕೆಗಳನ್ನು ನೀಡುತ್ತಿದೆ. ಹೆಚ್ಚುವರಿಯಾಗಿ, ಕಂಪನಿಯು ಇನ್-ಸ್ಟಾಕ್ ಐಟಂಗಳ ಮೇಲೆ ಎಕ್ಸ್‌ಪ್ರೆಸ್ ಡೆಲಿವರಿಯನ್ನು ಸಹ ನೀಡುತ್ತಿದೆ. ಇದರೊಂದಿಗೆ ಮುಂಬೈ ಮತ್ತು ದೆಹಲಿ ನಿವಾಸಿಗಳು ತಮ್ಮ ಹೊಸ ಐಫೋನ್ 15 ಸರಣಿಯ ಡಿವೈಸ್‌ಗಳನ್ನು ಸೆಪ್ಟೆಂಬರ್ 22 ರಂದು ಆಯ್ಕೆ ಮಾಡಿಕೊಳ್ಳಬಹುದು. ಇನ್ನು ಮೊದಲ ಬಾರಿಗೆ ಆಪಲ್ ಡಿವೈಸ್‌ಗಳಿಗೆ ಬದಲಾಯಿಸುವ ಹೊಸ ಗ್ರಾಹಕರು ಆನ್‌ಲೈನ್ ಪರ್ಸನಲ್ ಸೆಷನ್‌ನಿಂದ ಪ್ರಯೋಜನ ಪಡೆಯಬಹುದಾಗಿದೆ.
ಇನ್ನು ಆಪಲ್ ಕಂಪೆನಿ ಪರಿಚಯಿಸಿರುವ ಐಫೋನ್ 15 ಸರಣಿಯಲ್ಲಿ ಐಫೋನ್ 15 ಪ್ರೊ ಸಾಕಷ್ಟು ವಿಶೇಷವಾಗಿದೆ. ಇದು ಟೈಟಾನಿಯಂ ವಿನ್ಯಾಸವನ್ನು ಹೊಂದಿದ್ದು, ಮುಂಭಾಗದಲ್ಲಿ ಸೆರಾಮಿಕ್ ಶೀಲ್ಡ್ ಅನ್ನು ಹೊಂದಿದೆ. ಈ ಐಫೋನ್ 6.1 ಇಂಚಿನ ಸೂಪರ್ ರೆಟಿನಾ XDR ಡಿಸ್‌ಪ್ಲೇಯನ್ನು ಹೊಂದಿದೆ. ಐಫೋನ್ 15 ಪ್ರೊ A17 ಪ್ರೊ ಚಿಪ್‌ಸೆಟ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಇದು ಪ್ರತಿ ಸೆಕೆಂಡಿಗೆ 35 ಟ್ರಿಲಿಯನ್ ಕಾರ್ಯಾಚರಣೆಗಳಿಗೆ ಬೆಂಬಲಿಸುವ ಹೊಸ ಆರ್ಕಿಟೆಕ್ಚರ್‌ನೊಂದಿಗೆ ಸುಸಜ್ಜಿತವಾಗಿದೆ. ಐಫೋನ್ 15 ಪ್ರೊ 48 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಮುಖ್ಯ ಕ್ಯಾಮೆರಾವನ್ನು ಹೊಂದಿದೆ. ಇದು ಸೂಪರ್-ಹೈ-ರೆಸಲ್ಯೂಶನ್ ಫೋಟೋಗಳಿಗೆ ಬೆಂಬಲವನ್ನು ನೀಡಲಾಗಿದೆ.
ಐಫೋನ್ 15 ಪ್ರೊ ಅತ್ಯುತ್ತಮವಾದ ಬ್ಯಾಟರಿ ಬ್ಯಾಕ್‌ಅಪ್ ಅನ್ನು ಹೊಂದಿದೆ. ಇದು ಯುಎಸ್‌ಬಿ ಸಿ ಪೋರ್ಟ್ ಚಾರ್ಜಿಂಗ್ ಅನ್ನು ಹೊಂದಿದೆ. ಇದನ್ನು 15W MagSafe ವೈರ್‌ಲೆಸ್ ಚಾರ್ಜಿಂಗ್ ಬೆಂಬಲಿಸಲಿದೆ. ಅಲ್ಲದೆ 7.5W Qi ವೈರ್‌ಲೆಸ್ ಚಾರ್ಜಿಂಗ್ ಅನ್ನು ಸಹ ಬೆಂಬಲಿಸಲಿದೆ. ಇನ್ನು ಆಪಲ್ ಕಂಪೆನಿ ಹೇಳಿರುವಂತೆ ಈ ಐಫೋನ್ 10 ಗಿಗಾಬಿಟ್ ವರ್ಗಾವಣೆ ವೇಗಕ್ಕಾಗಿ ಯುಎಸ್‌ಬಿ 3 ಬೆಂಬಲದೊಂದಿಗೆ ಹ್ಯಾಂಡ್‌ಸೆಟ್ ಯುಎಸ್‌ಬಿ ನಿಯಂತ್ರಕವನ್ನು ಸಹ ಹೊಂದಿದೆ.
ಇದಲ್ಲದೆ ಐಫೋನ್ 15 ಪ್ರೊನಲ್ಲಿ ಮ್ಯೂಟ್ ಬಟನ್ ಬದಲಿಗೆ 'ಆಕ್ಷನ್' ಬಟನ್ ಅನ್ನು ನೀಡಲಾಗಿದೆ. ವಾಯ್ಸ್ ರೆಕಾರ್ಡಿಂಗ್ ಅನ್ನು ತ್ವರಿತವಾಗಿ ಪ್ರಾರಂಭಿಸುವಂತಹ ಇತರ ಕಾರ್ಯಗಳನ್ನು ನಿರ್ವಹಿಸಲು ಇದನ್ನು ಪ್ರೋಗ್ರಾಮ್ ಮಾಡಬಹುದು. ಆಕ್ಷನ್ ಬಟನ್ ಸೈಲೆಂಟ್ ಮೋಡ್, ಫೋಕಸ್, ಕ್ಯಾಮೆರಾ, ಫ್ಲ್ಯಾಶ್‌ಲೈಟ್, ವಾಯ್ಸ್ ಮೆಮೊ, ಟ್ರಾನ್ಸ್‌ಲೇಟ್11, ಮ್ಯಾಗ್ನಿಫೈಯರ್, ಶಾರ್ಟ್‌ಕಟ್ ಫೀಚರ್ಸ್‌ಗಳನ್ನು ಒಳಗೊಂಡಿದೆ.


Click it and Unblock the Notifications








