Home
ಸುದ್ದಿಜಾಲ

ಆಪಲ್ 'ಪೀಕ್ ಪರ್ಫಾರ್ಮೆನ್ಸ್' ಈವೆಂಟ್: ಏನೆಲ್ಲಾ ನಿರೀಕ್ಷಿಸಬಹುದು!

ಟೆಕ್‌ ದೈತ್ಯ ಆಪಲ್‌ ಕಂಪೆನಿಯ ಲಾಂಚ್‌ ಈವೆಂಟ್‌ ಮೇಲೆ ಪ್ರತಿಭಾರಿಯೂ ಹೊಸ ನಿರೀಕ್ಷೆಗಳು ಸೃಷ್ಟಿಯಾಗುತ್ತವೆ. ಆಪಲ್‌ ಕಂಪೆನಿ ಕೂಡ ತನ್ನ ಈವೆಂಟ್‌ಗಳಲ್ಲಿ ಹೊಸತನವನ್ನು ಪ್ರದರ್ಶಿಸುತ್ತಲೇ ಬಂದಿದೆ. ಇದೆ ಕಾರಣಕ್ಕೆ ಆಪಲ್‌ ಕಂಪೆನಿಯ ಈ ವರ್ಷದ ಮೊದಲ ಲಾಂಚ್‌ ಈವೆಂಟ್‌ ಆಪಲ್‌ 'ಪೀಕ್ ಪರ್ಫಾರ್ಮೆನ್ಸ್' ಈವೆಂಟ್ ಮೇಲೆ ಸಾಕಷ್ಟು ನಿರೀಕ್ಷೆ ಇಡಲಾಗಲಿದೆ. ಸದ್ಯ ಆಪಲ್‌ನ ಈವೆಂಟ್‌ ಭಾರತೀಯ ಕಾಲಮಾನ ಇಂದು ರಾತ್ರಿ 11:30pm ಕ್ಕೆ ನಡೆಯಲಿದೆ. ಈ ಈವೆಂಟ್‌ನಲ್ಲಿ ಆಪಲ್‌ ಕಂಪನಿಯು ಹೊಸ ಐಪ್ಯಾಡ್ ಏರ್ ಸೇರಿದಂತೆ ಬಹುನಿರೀಕ್ಷಿತ ಹೊಸ ಐಫೋನ್‌ SE 3 ಅನ್ನು ಪರಿಚಯಿಸಲಿದೆ.

ಈವೆಂಟ್‌

ಹೌದು, ಆಪಲ್‌ ಕಂಪೆನಿಯ ಈ ವರ್ಷದ ಮೊದಲ ಈವೆಂಟ್‌ ಭಾರತೀಯ ಕಾಲಮಾನ ಇಂದು ರಾತ್ರಿ 11:30pm ಕ್ಕೆ ನಡೆಯಲಿದೆ. ಈ ಈವೆಂಟ್‌ನಲ್ಲಿ ಏನೆಲ್ಲಾ ಬಿಡುಗಡೆ ಆಗಲಿದೆ ಎನ್ನುವುದರ ಮಾಹಿತಿ ಈಗಾಗಲೇ ಆನ್‌ಲೈನ್‌ನಲ್ಲಿ ಸೋರಿಕೆಯಾಗಿದೆ. ಅದರಂತೆ ಈ ವರ್ಷದ ಮೊದಲ ಈವೆಂಟ್‌ನಲ್ಲಿ ಗ್ರೀನ್‌ ಐಫೋನ್ 13, ಮ್ಯಾಕ್‌ ಸ್ಟುಡಿಯೋ, ಹೊಸ ಮ್ಯಾಕ್‌ಬುಕ್‌ ಪ್ರೊ ಸೇರಿದಂತೆ ಅನೇಕ ಡಿವೈಸ್‌ಗಳು ಲಾಂಚ್‌ ಆಗಲಿವೆ ಎನ್ನಲಾಗಿದೆ. ಇನ್ನುಳಿದಂತೆ ಈ ಈವೆಂಟ್‌ನಲ್ಲಿ ಏನೆಲ್ಲಾ ನಿರೀಕ್ಷಿಸಬಹುದು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಗ್ರೀನ್‌ ಐಫೋನ್ 13

ಗ್ರೀನ್‌ ಐಫೋನ್ 13

ಆಪಲ್‌ ಕಂಪೆನಿ 'ಪೀಕ್ ಪರ್ಫಾರ್ಮೆನ್ಸ್' ಈವೆಂಟ್‌ನಲ್ಲಿ ಗ್ರೀನ್‌ ಕಲರ್‌ ಆಯ್ಕೆಯ ಐಫೋನ್ 13 ಅನ್ನು ಪರಿಚಯಿಸಲಿದೆ. ಕಳೆದ ವರ್ಷ ತನ್ನ ಸ್ಪ್ರಿಂಗ್ ಈವೆಂಟ್‌ನಲ್ಲಿ ನೆರಳೆ ಬಣ್ಣದ ಐಫೋನ್ 12 ಪರಿಚಯಿಸಿದ್ದ ಆಪಲ್‌ ಈ ಬಾರಿ ಗ್ರೀನ್‌ ಕಲರ್‌ ಆಯ್ಕೆಯನ್ನು ಪರಿಚಯಿಸಲು ಮುಂದಾಗಿದೆ. ಆಪಲ್ ಕಳೆದ ವರ್ಷದ ಮಾದರಿಗಳನ್ನು ಅನುಸರಿಸಿದರೆ ಹಸಿರು ಬಣ್ಣವು ಐಫೋನ್ 13 ಮಿನಿಗೆ ಬರಬಹುದು.

ಮ್ಯಾಕ್ ಸ್ಟುಡಿಯೋ ಮತ್ತು ಸ್ಟುಡಿಯೋ ಡಿಸ್‌ಪ್ಲೇ

ಮ್ಯಾಕ್ ಸ್ಟುಡಿಯೋ ಮತ್ತು ಸ್ಟುಡಿಯೋ ಡಿಸ್‌ಪ್ಲೇ

ಇನ್ನು ಈ ಈವೆಂಟ್‌ನಲ್ಲಿ ಮ್ಯಾಕ್ ಸ್ಟುಡಿಯೋ ಎಂದು ಹೆಸರಿಸಲಾಗಿರುವ ಹೊಸ ಮ್ಯಾಕ್ ಅನ್ನು ಬಿಡುಗಡೆ ಮಾಡುವ ನಿರೀಕ್ಷೆಯಿದೆ. ಯೂಟ್ಯೂಬರ್ ಲ್ಯೂಕ್ ಮಿಯಾನಿ ಅವರ ವರದಿಯ ಪ್ರಕಾರ, ಈ ಡಿವೈಸ್‌ ಹೆಚ್ಚು ಶಕ್ತಿಶಾಲಿ ಮ್ಯಾಕ್ ಮಿನಿ ಅಥವಾ ಚಿಕ್ಕದಾದ ಮ್ಯಾಕ್ ಪ್ರೊ ಆಗಿದೆ ಎಂದು ಹೇಳಲಾಗಿದೆ. ಇದಲ್ಲದೆ ಆಪಲ್ ಸ್ಪ್ರಿಂಗ್ ಈವೆಂಟ್‌ನಲ್ಲಿ ಹೊಸ ಎಕ್ಸಟ್ರನಲ್‌ ಡಿಸ್‌ಪ್ಲೇ ಪ್ರಾರಂಭಿಸಲು ಯೋಜಿಸಿದ, ಇದನ್ನು ಸ್ಟುಡಿಯೋ ಡಿಸ್ಪ್ಲೇ ಎಂದು ಹೆಸರಿಸಬಹುದು. ಈ ಹೊಸ ಡಿಸ್ಪ್ಲೇ ಪ್ರೊ ಡಿಸ್ಪ್ಲೇ XDR ನ ಉತ್ತರಾಧಿಕಾರಿಯಾಗಲಿದೆ ಎಂದು ನಿರೀಕ್ಷಿಸಲಾಗಿದೆ.

ನ್ಯೂ 13 ಇಂಚಿನ ಮ್ಯಾಕ್‌ಬುಕ್ ಪ್ರೊ

ನ್ಯೂ 13 ಇಂಚಿನ ಮ್ಯಾಕ್‌ಬುಕ್ ಪ್ರೊ

ಇನ್ನು ಇದೇ ಈವೆಂಟ್‌ನಲ್ಲಿ ನ್ಯೂ 13 ಇಂಚಿನ ಮ್ಯಾಕ್‌ಬುಕ್ ಪ್ರೊ ಕೂಡ ಬಿಡುಗಡೆಯಾಗುವ ಸಾಧ್ಯತೆಯಿದೆ. ಈ ಮ್ಯಾಕ್‌ಬುಕ್ ಪ್ರೊ ಹೊಸ M2 ಚಿಪ್ ಅನ್ನು ಬಳಸಬಹುದು. ಅಲ್ಲದೆ M2 ಚಿಪ್-ಚಾಲಿತ ಮ್ಯಾಕ್‌ಬುಕ್ ಏರ್ ಜೊತೆಗೆ ಈ ವರ್ಷದ ನಂತರ ಪ್ರಾರಂಭಿಸಬಹುದು ಎಂದು ನಿರೀಕ್ಷಿಸಲಾಗಿದೆ.

ನ್ಯೂ ಐಫೋನ್ ಕೇಸಸ್‌

ನ್ಯೂ ಐಫೋನ್ ಕೇಸಸ್‌

ಐಫೋನ್ ಲೈನ್‌ಅಪ್‌ಗಾಗಿ ನ್ಯೂ ಕೇಸ್ ಗಳನ್ನು ಪರಿಚಯಿಸಲಿದೆ ಎನ್ನಲಾಗಿದೆ. ಈ ಹೊಸ ಬಣ್ಣಗಳು ತಿಳಿ ನೀಲಿ, ಕಿತ್ತಳೆ, ಗಾಢವಾದ ವೈಡೂರ್ಯದ ಛಾಯೆ ಮತ್ತು ಇನ್ನೂ ಕೆಲವು ಬಣ್ಣಗಳ ಆಯ್ಕೆಯಲ್ಲಿ ಒಳಗೊಂಡಿವೆ.

iOS 15.4, ಮ್ಯಾಕ್‌OS Monterey 12.3 ರಿಲೀಸ್‌ ಡೇಟ್‌

iOS 15.4, ಮ್ಯಾಕ್‌OS Monterey 12.3 ರಿಲೀಸ್‌ ಡೇಟ್‌

ಇನ್ನು ಆಪಲ್‌ ಕಂಪೆನಿ ಕಳೆದ ಕೆಲವು ದಿನಗಳಿಂದ iOS 15.4, iPadOS 15.4 ಮತ್ತು macOS Monterey 12.3 ಅನ್ನು ಪರೀಕ್ಷಿಸುತ್ತಿದೆ. ಈ ಸಾಫ್ಟ್‌ವೇರ್ ನವೀಕರಣಗಳ ಸ್ಥಿರ ಆವೃತ್ತಿಯ ಅಧಿಕೃತ ಬಿಡುಗಡೆ ದಿನಾಂಕದ ಪ್ರಕಟಣೆಯು ಶೀಘ್ರದಲ್ಲೇ ಬೀಳುವ ನಿರೀಕ್ಷೆಯಿದೆ. ಇದೇ ಈವೆಂಟ್‌ನಲ್ಲಿ ಪ್ರಕಟವಾದರೂ ಅಚ್ಚರಿಯಿಲ್ಲ.

Best Mobiles in India

English summary
Apple is set to host ‘Peek Performance’ event tonight at 11:30 pm IST.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+