Subscribe to Gizbot

ಆಪಲ್ ಹೊಸ ಜಾದೂ ನಿಮ್ಮ ಐಫೋನ್ ಇನ್ನು ರಿಮೋಟ್ ಕಂಟ್ರೋಲರ್

Posted By:


ನಿಮ್ಮ ಐಫೋನ್ ಇನ್ನು ನಿಮ್ಮ ಮನೆಯ ರಿಮೋಟ್ ಕಂಟ್ರೋಲರ್ ಆಗಿ ಬದಲಾಗಲಿದೆ. ಹೌದು ಸ್ವತಃ ಆಪಲ್ ಈ ಜಾದೂವನ್ನು ಮಾಡಲಿದ್ದು ಇದನ್ನು ಕುರಿತ ಸಕಲ ಸಿದ್ಧತೆಗಳನ್ನು ಅದು ಮಾಡಿಕೊಂಡಿದೆ ಎಂದು ವರದಿಯೊಂದು ಪ್ರಕಟಿಸಿದೆ.

ಸ್ಮಾರ್ಟ್ ಹೋಮ್ ಎಂದು ಕರೆಯಾದ ಈ ಸಾಫ್ಟ್‌ವೇರ್ ಅನ್ನು ಜೂನ್‌ನಲ್ಲಿ ಆಪಲ್ ಲಾಂಚ್ ಮಾಡುವ ನಿರೀಕ್ಷೆ ಇದೆ. ಈ ಸಾಫ್ಟ್‌ವೇರ್ ನಿಮ್ಮ ಐಫೋನ್‌ ಅನ್ನು ರಿಮೋಟ್ ಕಂಟ್ರೋಲರ್ ಆಗಿ ಮಾರ್ಪಡಿಸಲಿದ್ದು ನಿಮ್ಮ ಮನೆಯ ಲೈಟ್‌ಗಳು, ಹಾಗೂ ಭದ್ರತಾ ವ್ಯವಸ್ಥೆಯನ್ನು ಕುಳಿತಲ್ಲೇ ನಿಮ್ಮ ನಿಯಂತ್ರಣದಲ್ಲಿ ನಿಮಗೆ ಇರಿಸಬಹುದಾಗಿದೆ.

ವಾವ್! ಸದ್ಯದಲ್ಲೇ ಬರಲಿದೆ ರಿಮೋಟ್ ಕಂಟ್ರೋಲರ್ ಐಫೋನ್!

ಆಪಲ್ ಈ ಸಾಫ್ಟ್‌ವೇರ್ ಅನ್ನು ಜೂನ್ ಎರಡನೆಯ ತಾರೀಕಿಗೆ ಹೊರತರಲಿದ್ದು ತನ್ನ ಸದ್ಯದ ಎದುರಾಳಿಗಳಾಗಿರುವ ಗೂಗಲ್ ಮತ್ತು ಸ್ಯಾಮ್‌ಸಂಗ್‌ಗೆ ಭರ್ಜರಿ ಪೈಪೋಟಿಯನ್ನು ನೀಡಲಿದೆ. ಸ್ಯಾನ್‌ ಫ್ರಾನ್ಸಿಸ್ಕೋದ ವಿಶ್ವ ಡೆವಲಪರ್ ಕಾನ್ಫರೆನ್ಸ್‌ನಲ್ಲಿ ಆಪಲ್ ಈ ಸಾಫ್ಟ್‌ವೇರ್ ಲಾಂಚ್ ಅನ್ನು ಮಾಡಲಿದೆ ಎಂಬುದು ದೊರೆತಿರುವ ಸುದ್ದಿಯಾಗಿದೆ.

ಆಪಲ್‌ನ ಸುಧಾರಿತ ವ್ಯವಸ್ಥೆಯೊಂದು "ಸ್ಮಾರ್ಟ್‌ ಹೋಮ್" ಸಾಫ್ಟ್‌ವೇರ್ ಅನ್ನು ಹೊಂದಿಸುವ ನಿರ್ವಹಿಸುವ ಜವಬ್ದಾರಿಯನ್ನು ತೆಗೆದುಕೊಂಡಿದ್ದು ತಂತ್ರಜ್ಞಾನ ಜಗತ್ತನಲ್ಲೇ ಇದು ಅತ್ಯಂತ ಪರಿಣಾಮಕಾರಿ ಪ್ರಯೋಗ ಎಂಬ ಘಟನೆಯಾಗಲಿದೆ. ಉದಾಹರಣೆಗೆ ಮನೆಯ ಮಾಲೀಕ ಮನೆಯನ್ನು ಪ್ರವೇಶಿಸುತ್ತಿದ್ದಂತೆ ತನ್ನ ಐಫೋನ್ ಅನ್ನು ವೈರ್‌ಲೆಸ್‌ಗೆ ಸಂಪರ್ಕಪಡಿಸಿ ದೀಪಗಳನ್ನು ಉರಿಸುವುದು. ಇವೇ ಮುಂತಾದ ಕೆಲಸಗಳನ್ನು ಐಫೋನ್ ನಿರ್ವಹಿಸಲಿದೆ.

Read more about:
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot