ವಿಶ್ವದಾದ್ಯಂತ ಸಂಚಲನ ಮೂಡಿಸಿದ 'ಆಪಲ್'ನ ಹೊಸ ಉತ್ಪನ್ನಗಳು!

|

ನೆಟ್‌ಫ್ಲಿಕ್ಸ್, ಅಮೆಜಾನ್‌ ಪ್ರೈಮ್ನಂತಹ ಬೃಹತ್‌ ಜಾಗತಿಕ ಕಂಪನಿಗಳಿಗೆ ಸೆಡ್ಡು ಹೊಡೆಯಲು ತಂತ್ರಜ್ಞಾನ ದಿಗ್ಗಜ ಆಪಲ್ ದಾಗುಂಡಿ ಇಟ್ಟಿದೆ. ಆಪಲ್‌ ಐಟ್ಯೂನ್ಸ್ ಹೆಸರಿನಲ್ಲಿ ಸಂಗೀತ ಕ್ಷೇತ್ರದಲ್ಲಿ ಸಾಕಷ್ಟು ಜನಪ್ರಿಯತೆಯನ್ನು ಗಳಿಸಿದ್ದ ಆಪಲ್ ಇದೀಗ ಭಾರಿ ಹೂಡಿಕೆ ಮತ್ತು ಬೆಳವಣಿಗೆ ಕಾಣುತ್ತಿರುವ ವಿಡಿಯೋ ಸ್ಟ್ರೀಮಿಂಗ್ ಕ್ಷೇತ್ರಕ್ಕೆ ಕಾಲಿಟ್ಟಿದ್ದು, 'ಆಪಲ್‌ ಟಿವಿ ಪ್ಲಸ್‌' ಎಂಬ ಹೆಸರಿನ ವಿಡಿಯೋ ಸ್ಟ್ರೀಮಿಂಗ್ ಆಪ್ ಇದೀಗ ತಡವಾಗಿ ಬಿಡುಗಡೆ ಮಾಡಿದೆ.

ಹೌದು, ಅಮೆಜಾನ್ ಮತ್ತು ನೆಟ್‌ಫ್ಲಿಕ್ಸ್ ಜತೆ ನೇರ ಸ್ಪರ್ಧೆಗಿಳಿದಿರುವ ಟೆಕ್‌ ದೈತ್ಯ ಆಪಲ್‌ ಹೊಸ ತಲೆಮಾರಿನ ತಂತ್ರಜ್ಞಾನಗಳ ಮೂಲಕ ವಿಡಿಯೋ ಕ್ಷೇತ್ರಕ್ಕೆ ಕಾಲಿಟ್ಟಿದ್ದು, ಸದ್ಯದ ಆನ್‌ಲೈನ್‌ ವಿಡಿಯೋ ಸ್ಟ್ರೀಮಿಂಗ್ ಮಾರುಕಟ್ಟೆಯ ದಿಗ್ಗಜರಾ ನೆಟ್‌ಫ್ಲಿಕ್ಸ್ ಮತ್ತು ಅಮೆಜಾನ್‌ಗೆ ಹೊಸ ಸರಕು ಮತ್ತು ತಂತ್ರಜ್ಞಾನಗಳ ಮೂಲಕ ಟಾಂಗ್ ನೀಡಿರುವ ಆಪಲ್ಮ ತನ್ನ ಐಪೋನ್ ಬಳಕೆದಾರರನ್ನು ತನ್ನ ವಿಡಿಯೋ ಸ್ಟ್ರೀಮಿಂಗ್ ಕ್ಷೇತ್ರಕ್ಕೆ ಸೆಳೆಯುವ ತಯಾರಿಯನ್ನು ನಡೆಸಿದೆ .

ವಿಶ್ವದಾದ್ಯಂತ ಸಂಚಲನ ಮೂಡಿಸಿದ 'ಆಪಲ್'ನ ಹೊಸ ಉತ್ಪನ್ನಗಳು!

ಅಮೆರಿಕಾ ಟಿವಿ ದಂತಕತೆ ಓಪ್ರಾ ವಿನ್‌ಫ್ರೇ, ನಟರಾದ ಒಕ್ಟಾವಿಯಾ ಸ್ಪೆನ್ಸರ್‌, ಜೆನ್ನಿಫರ್‌ ಅನಿಸ್ಟಾನ್ ಮತ್ತು ಸೂಪರ್‌ ಸ್ಟಾರ್‌ ನಿರ್ದೇಶಕ ಸ್ಟೀವನ್‌ ಸ್ಪಿಲ್‌ಬರ್ಗ್ ಸೇರಿದಂತೆ ಭಾರೀ ಸೆಲೆಬ್ರಿಟಿಗಳನ್ನು 'ಆಪಲ್‌ ಟಿವಿ ಪ್ಲಸ್‌' ಬಿಡುಗಡೆಗೆ ಕರೆಸಿರುವುದು ವಿಡಿಯೋ ಸ್ಟ್ರೀಮಿಂಗ್ ಕ್ಷೇತ್ರದ ಪೈಪೋಟಿಗೆ ಮೊದಲ ಹೆಜ್ಜೆಯಾಗಿದೆ ಎನ್ನಲಾಗಿದೆ. ಹಾಗಾದರೆ, ವಿಡಿಯೋ ಸ್ಟ್ರೀಮಿಂಗ್ ಕ್ಷೇತ್ರದಲ್ಲಿ ಮತ್ತೊಂದು ಪೈಪೋಟಿಗೆ ಕಾರಣವಾಗಲಿರುವ 'ಆಪಲ್‌ ಟಿವಿ ಪ್ಲಸ್‌' ಆಪ್ ಬಗ್ಗೆ ನಾವು ಸ್ವಲ್ಪ ತಿಳಿಯೋಣ ಬನ್ನಿ.!

‘ಆಪಲ್‌ ಟಿವಿ ಪ್ಲಸ್‌’

‘ಆಪಲ್‌ ಟಿವಿ ಪ್ಲಸ್‌’

ಮೊದಲೇ ಹೇಳಿದಂತೆ, ನೆಟ್‌ಫ್ಲಿಕ್ಸ್, ಅಮೆಜಾನ್‌ನಂತೆ ‘ಆಪಲ್‌ ಟಿವಿ ಪ್ಲಸ್‌' ಕೂಡ ವಿಡಿಯೋ ಸ್ಟ್ರೀಮಿಂಗ್ ಆಪ್ ಆಗಿದೆ. ಈ ಆಪಲ್‌ ಟಿವಿ ಪ್ಲಸ್‌ನಲ್ಲಿ ಎಕ್ಸ್‌ಕ್ಲೂಸಿವ್ ಟಿವಿ ಪ್ರೋಗ್ರಾಂಗಳು ಇರಲಿವೆ. ಇವು ಜಾಹೀರಾತು ರಹಿತ ವಿಡಿಯೋ ಸೇವೆಗಳಾಗಿದ್ದು, ನೆಟ್‌ಫ್ಲಿಕ್ಸ್, ಅಮೆಜಾನ್‌ನಂತೆ ಆಪಲ್‌ಗೂ ತಿಂಗಳ ಚಂದಾ ಇರಲಿದೆ.ಇದರ ಜತೆಗೆ ಎಚ್‌ಬಿಒ, ಶೋಟೈಮ್ಸ್, ಸ್ಟಾರ್ಜ್ ಮತ್ತು ಸಿಬಿಎಸ್‌ನ ಕಾರ್ಯಕ್ರಮಗಳೂ ಪ್ರಸಾರವಾಗಲಿವೆ ಎಂದು ತಿಳಿದುಬಂದಿದೆ.

100 ದೇಶಗಳ ಜನರು ವೀಕ್ಷಿಸಬಹುದು!

100 ದೇಶಗಳ ಜನರು ವೀಕ್ಷಿಸಬಹುದು!

ನೆಟ್‌ಫ್ಲಿಕ್ಸ್, ಅಮೆಜಾನ್‌ನಂತೆ ಆಪಲ್‌ಗೂ ತಿಂಗಳ ಚಂದಾ ಇರಲಿದೆ ಎಂಬುದು ತಿಳಿದುಬಂದಿದೆಯಾದರೂ, ‘ಆಪಲ್‌ ಟಿವಿ ಪ್ಲಸ್‌' ಚಂದಾದಾರಿಕೆ ಎಷ್ಟು ಎಂಬುದು ತಿಳಿದುಬಂದಿಲ್ಲ. ಆದರೆ, ಸೋಮವಾರ ನಡೆದ ಕಾರ್ಯಕ್ರಮದಲ್ಲಿ ‘ಆಪಲ್‌ ಟಿವಿ ಪ್ಲಸ್‌' ಜಾಹೀರಾತು ರಹಿತ ವಿಡಿಯೋ ಸೇವೆಗಳನ್ನು 100 ದೇಶಗಳ ಜನರು ವೀಕ್ಷಿಸಬಹುದಾಗಿದೆ ಎಂಬುದನ್ನು ಆಪಲ್ ತಿಳಿಸಿದೆ. ಐಟ್ಯೂನ್ಸ್ ಹೆಸರಿನಲ್ಲಿ ಸಂಗೀತ ಕ್ಷೇತ್ರದಲ್ಲಿ ಸಾಕಷ್ಟು ಜನಪ್ರಿಯತೆಯನ್ನು ಗಳಿಸಿದ್ದ ಆಪಲ್ 'ಆಪಲ್‌ ಟಿವಿ ಪ್ಲಸ್‌' ಮೂಲಕ ಜನಪ್ರಿಯತೆ ಪಡೆಯಲು ಮುಂದಾಗಿದೆ.

 ಕಂಟೆಂಟ್‌ನತ್ತ ಆಪಲ್!

ಕಂಟೆಂಟ್‌ನತ್ತ ಆಪಲ್!

ತಂತ್ರಜ್ಞಾನ ದಿಗ್ಗಜನೆಂದೇ ಕರೆಸಿಕೊಂಡಿರುವ ಆಪಲ್ ಎಂದೂ ವಿಡಿಯೋ ಕಂಟೆಂಟ್ ಬಗ್ಗೆ ತಲೆಕೆಡಿಸಿಕೊಮಡಿರಲಿಲ್ಲ. ಗ್ರಾಹಕರು ಆಪಲ್‌ ಐಫೋನ್‌ ಮತ್ತು ಟ್ಯಾಬ್ಲೆಟ್‌ಗಳ ಖರೀದಿಗೆ ಮುಗಿಬೀಳುತ್ತಿದ್ದರಿಂದ ಕಂಪನಿಗೆ ದೊಡ್ಡ ಮೊತ್ತದ ಲಾಭವನ್ನು ತಂದುಕೊಡುತ್ತಿತ್ತು. ಆದರೆ, ಈಗ ಅಮೆಜಾನ್ ಮತ್ತು ನೆಟ್‌ಫ್ಲಿಕ್ಸ್ ಮಾರುಕಟ್ಟೆ ಬೆಳವಣಿಗೆ ಆಪಲ್‌ ಕಂಪೆನಿಗೆ ತಲೆಕೆಡಿಸಿದೆ. ಹಾಗಾಗಿಯೇ, ಕೇವಲ ಉತ್ಪನ್ನಗಳ ಮಾರಾಟವವನ್ನು ಬಿಟ್ಟು ಕಂಟೆಂಟ್‌ನತ್ತ ಆಪಲ್ ವಾಲಿದೆ.

ಮಾರುಕಟ್ಟೆಯಲ್ಲಿ ಭಾರೀ ಪೈಪೋಟಿ

ಮಾರುಕಟ್ಟೆಯಲ್ಲಿ ಭಾರೀ ಪೈಪೋಟಿ

ಸದ್ಯದ ಆನ್‌ಲೈನ್‌ ವಿಡಿಯೋ ಸ್ಟ್ರೀಮಿಂಗ್ ಮಾರುಕಟ್ಟೆಯನ್ನು ನೆಟ್‌ಫ್ಲಿಕ್ಸ್ ಮತ್ತು ಅಮೆಜಾನ್‌ ಆಳುತ್ತಿವೆ. ಕೆಲವು ತಿಂಗಳ ಹಿಂದೆಬ್ರಿಟನ್‌ನ ಪ್ರಮುಖ ಬ್ರಾಡ್‌ಕಾಸ್ಟ್‌ ಕಂಪನಿಗಳಾದ ಬಿಬಿಸಿ ಮತ್ತು ಐಟಿವಿ ಒಂದಾಗಿ 'ಬ್ರಿಟ್‌ಬಾಕ್ಸ್‌' ಹೆಸರಿನಲ್ಲಿ ಸ್ಟ್ರೀಮಿಂಗ್ ಮಾರುಕಟ್ಟೆಯನ್ನು ಪಡೆದುಕೊಳ್ಳಲು ಮುಂದಾಗಿವೆ. ಇದೇ ವೇಳೆಯಲ್ಲಿ ಆನ್‌ಲೈನ್‌ ವಿಡಿಯೋ ಸ್ಟ್ರೀಮಿಂಗ್ ಮಾರುಕಟ್ಟೆಗೆ ಆಪಲ್‌ನ ಪ್ರವೇಶವಾಗಿರುವುದು ಮಾರುಕಟ್ಟೆಯಲ್ಲಿ ಭಾರೀ ಪೈಪೋಟಿ ಕಾರಣವಾಗಬಹುದು ಎಂದು ಹೇಳಲಾಗುತ್ತಿದೆ.

ಇನ್ನೂ ಹಲವು ಸೇವೆಗಳ ಬಿಡುಗಡೆ!

ಇನ್ನೂ ಹಲವು ಸೇವೆಗಳ ಬಿಡುಗಡೆ!

ವಿಡಿಯೋ ಸ್ಟ್ರೀಮಿಂಗ್ 'ಆಪಲ್‌ ಟಿವಿ ಪ್ಲಸ್‌' ಜತೆಗೆ ಆಪಲ್ ಗೇಮ್‌ ಆಪ್‌ ‘ಆರ್ಕೇಡ್‌' ಮತ್ತು ಸುದ್ದಿಗಳನ್ನು ನೀಡುವ ‘ನ್ಯೂಸ್‌ +' ಆಪ್‌ಗಳನ್ನು ಸಹ ಬಿಡುಗಡೆ ಮಾಡುವುದಾಗಿ ಹೇಳಿದೆ. ದಿ ನ್ಯೂಯಾರ್ಕರ್, ನ್ಯಾಷನಲ್‌ ಜಿಯೋಗ್ರಾಫಿಕ್, ಇನ್‌ಸ್ಟೈಲ್ ಮತ್ತು ದಿ ವಾಲ್‌ ಸ್ಟೀಟ್ ಜರ್ನಲ್‌ ಮೊದಲಾದ 300 ಕ್ಕೂ ಹೆಚ್ಚು ನಿಯತಕಾಲಿಕೆ ಪ್ರಸಾರ ಮಾಡಲಾಗುವ ‘ನ್ಯೂಸ್‌ +' ಸೇವೆಗೆ ತಿಂಗಳಿಗೆ 9.9 ಡಾಲರ್‌ (ಅಂದಾಜು 700 ರೂಪಾಯಿ) ಹಣ ನಿಗದಿ ಪಡಿಸಿದೆ.

Best Mobiles in India

English summary
Apple has announced its Apple TV Plus streaming service "on every screen of your life" said Apple CEO Tim Cook. In a nearly two-hour live. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X