Subscribe to Gizbot

ಆಪಲ್ ನಿಂದ ಶೀಘ್ರವೇ ಕಡಿಮೆ ಬೆಲೆ ಐಪ್ಯಾಡ್ ಲಾಂಚ್

Written By: Lekhaka

ಜಾಗತೀಕ ಟ್ಯಾಬ್ಲೆಟ್ ಮಾರುಕಟ್ಟೆಯಲ್ಲಿ ಆಪಲ್ ಸರಿ ಸುಮಾರು 8.9 ಮಿಲಿಯನ್ ಐಪ್ಯಾಡ್ ಗಳನ್ನು ಗಳನ್ನು ಮಾರಾಟ ಮಾಡಿದೆ ಎನ್ನಲಾಗಿದೆ. ಈ ಹಿನ್ನಲೆಯಲ್ಲಿ ಹೊಸ ಮಾದರಿಯಲ್ಲಿ ಕಡಿಮೆ ಬೆಲೆಯ ಐಪ್ಯಾಡ್ ಅನ್ನು ಮಾರುಕಟ್ಟೆಗೆ ಪರಿಚಯ ಮಾಡಲು ಆಪಲ್ ಉತ್ಸಾಹ ತೋರಿದ್ದು, ಈಗಾಗಲೇ ಮಾರುಕಟ್ಟೆಯಲ್ಲಿ ಇರುವ ಬೇಡಿಕೆಯನ್ನು ಮತ್ತಷ್ಟು ಹೆಚ್ಚಿಸಿಕೊಳ್ಳುವುದು ಇದರ ಉದ್ದೇಶವಾಗಿದೆ.

ಆಪಲ್ ನಿಂದ ಶೀಘ್ರವೇ ಕಡಿಮೆ ಬೆಲೆ ಐಪ್ಯಾಡ್ ಲಾಂಚ್

ಸದ್ಯ ಈಗಾಗಲೇ ಲೀಕ್ ಆಗಿರುವ ಮಾಹಿತಿಯ ಪ್ರಕಾರ. 9.7 ಇಂಚಿನ ಐಪ್ಯಾಡ್ ಶೀಘ್ರವೇ ಮಾರುಕಟ್ಟೆಯನ್ನು ಪ್ರವೇಶಿಸಲಿದ್ದು, ಇದರ ಬೆಲೆ ಸರಿ ಸುಮಾರು ರೂ.16,500 ಗಳಾಗಲಿದೆ ಎನ್ನಲಾಗಿದೆ. ಇದು ಎರಡು ಆವೃತ್ತಿಯಲ್ಲಿ ದೊರೆಯಲಿದ್ದು, ಮತ್ತೊಂದು ಆವೃತ್ತಿ ರೂ. 21,000ಕ್ಕೆ ಲಭ್ಯವಿರಲಿದೆ ಎನ್ನುವ ಮಾಹಿತಿ ಲೀಕ್ ಆಗಿದೆ.

ಈ ಐಪ್ಯಾಡ್ ಗಳು ಮಾರುಕಟ್ಟೆಯಲ್ಲಿ ದೊರೆಯುವ ಆಪಲ್ ನ ಅತೀ ಕಡಿಮೆ ಬೆಲೆಯ ಐಪ್ಯಾಡ್ ಗಳಾಗಲಿದ್ದು, ಇದರಿಂದಾಗಿ ಮಾರುಕಟ್ಟೆಯಲ್ಲಿ ಇರುವ ಹಲವು ಟ್ಯಾಬ್ಲೆಟ್ ತಯಾಕರು ಹೊಡೆತ ತಿನ್ನಲಿದ್ದಾರೆ. ಕಡಿಮೆ ಬೆಲೆಗೆ ಆಪಲ್ ಉತ್ಪನ್ನ ದೊರೆಯುತ್ತಿರುವ ಸಂದರ್ಭದಲ್ಲಿ ಇತರೆ ಟ್ಯಾಬ್ ಗಳನ್ನು ಕೇಳುವವರಿಲ್ಲದಂತಾಗಲಿದೆ.

ಚೀನಾ ಮೊಬೈಲ್‌ಗಳ ಬೆಲೆ ಕಡಿಮೆ ಏಕೆ?..ಕಾರಣ ನಿಮಗೆ ಗೊತ್ತಿಲ್ಲಾ!!

ಈಗಾಗಲೇ ಆಪಲ್ ನೂತನ 9.7 ಚಿಂನ ಟ್ಯಾಬ್ ತಯಾರಿಕೆಗೆ ಮುಂದಾಗಿದ್ದು, ಶೀಘ್ರವೇ ಮಾರುಕಟ್ಟೆಯನ್ನು ಪ್ರವೇಶಿಸಲಿದೆ. ಮೂಲಗಳ ಪ್ರಕಾರ ಫೆಬ್ರವರಿಯಲ್ಲಿ ಈ ಟ್ಯಾಬ್ ಮಾರುಕಟ್ಟೆಯನ್ನು ಪ್ರವೇಶಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಈ ಕುರಿತು ಈಗಾಗಲೇ ಸಾಕಷ್ಟು ಸುದ್ದಿಗಳಾಗಿದೆ.

ಭಾರತವೇ ಟಾರ್ಗೇಟ್ ಆಪಲ್ ನೂತನವಾಗಿ ಲಾಂಚ್ ಮಾಡುತ್ತಿರುವ ಕಡಿಮೆ ಬೆಲೆಯ ಟ್ಯಾಬ್ ಭಾರತೀಯ ಮಾರುಕಟ್ಟೆಯನ್ನು ಗುರಿಯಾಗಿಟ್ಟುಕೊಂಡು ನಿರ್ಮಿಸಲಾಗುತ್ತಿದೆ ಎನ್ನುವ ಮಾಹಿತಿ ಇದೆ.

English summary
Apple is rumored to be all set to launch a low-cost 9.7-inch iPad priced around Rs. 25,000 in India in 2018.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot