ಡಿಸ್ಕೌಂಟ್‌ನಲ್ಲಿ ಮ್ಯಾಕ್‌ಬುಕ್ ಏರ್ M1 ಖರೀದಿಸಲು ಇಲ್ಲಿದೆ ಉತ್ತಮ ಅವಕಾಶ!
ಆಪಲ್ ಕಂಪೆನಿ ತನ್ನ ಮ್ಯಾಕ್‌ಬುಕ್ ಏರ್ M1 ಖರೀದಿಸಬೇಕೆಂದು ಕೊಂಡವರಿಗೆ ಗುಡ್ ನ್ಯೂಸ್ ನೀಡಿದೆ. ಈಗಾಗಲೇ ಮಾರುಕಟ್ಟೆಯಲ್ಲಿ ಸಾಕಷ್ಟು ಜನಪ್ರಿಯತೆ ಪಡೆದಿರುವ ಲ್ಯಾಪ್‌ಟಾಪ್‌ಗಳಲ್ಲಿ ಮ್ಯಾಕ್‌ಬುಕ್ ಏರ್ M1 ಕೂಡ ಒಂದೆನಿಸಿಕೊಂಡಿದೆ. ಸದ್ಯ ಭಾರತದಲ್ಲಿ ಮ್ಯಾಕ್‌ಬುಕ್ ಏರ್ M1 ಭಾರೀ ರಿಯಾಯಿತಿಯನ್ನು ಪಡೆದುಕೊಂಡಿದೆ. ಈ ವರ್ಷ ಮ್ಯಾಕ್‌ಬುಕ್ ಏರ್ ಎಂ1 ಖರೀದಿಸಲು ಆಸಕ್ತಿ ಹೊಂದಿರುವವರಿಗೆ ಇದು ಕೊನೆಯ ಅವಕಾಶವಾಗಿದೆ.

ಹೌದು, ಭಾರತದಲ್ಲಿ ಮ್ಯಾಕ್‌ಬುಕ್ ಏರ್ M1 ಬಿಗ್ ಡಿಸ್ಕೌಂಟ್ ಪಡೆದುಕೊಂಡಿದೆ. ಕಳೆದ ವರ್ಷ 92,900 ರೂ.ಗೆ ಬಿಡುಗಡೆಯಾಗಿದ್ದ ಈ ಲ್ಯಾಪ್‌ಟಾಪ್ ಇದೀಗ 7,400ರೂ.ಗಳ ಫ್ಲಾಟ್ ತ್ವರಿತ ರಿಯಾಯಿತಿಯನ್ನು ಪಡೆದಿದೆ. ಇದರಿಂದ ರಿಯಾಯಿತಿ ದರದಲ್ಲಿ ಈ ಲ್ಯಾಪ್‌ಟಾಪ್ ಅನ್ನು ನಿವು ಕೇವಲ 85,500ರೂ.ಗಳಿಗೆ ಖರೀದಿಸಬಹುದಾಗಿದೆ. ಇದಲ್ಲದೆ, ಆಸಕ್ತ ಗ್ರಾಹಕರು ಬ್ಯಾಂಕ್ ಆಫರ್ ಅನ್ನು ಸಹ ಪಡೆಯಬಹುದಾಗಿದೆ. ಹಾಗಾದ್ರೆ ಮ್ಯಾಕ್‌ಬುಕ್ ಏರ್ M1 ಮೇಲೆ ಯಾವೆಲ್ಲಾ ಆಫರ್ ದೊರೆಯಲಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಆಪಲ್ ಮ್ಯಾಕ್‌ಬುಕ್ ಏರ್ M1 ಅನ್ನು ಅಧಿಕೃತ ಆಪಲ್ ರಿ ಸೇಲರ್ ಆಗಿರುವ ಇಮ್ಯಾಜಿನ್ ಸ್ಟೋರ್‌ನಲ್ಲಿ ರಿಯಾಯಿತಿ ದರದಲ್ಲಿ ಖರೀದಿಸಬಹುದಾಗಿದೆ. ಸದ್ಯ ಇಮ್ಯಾಜಿನ್ ಸ್ಟೋರ್ 7,400ರೂ.ಗಳ ರಿಯಾಯಿತಿ ನೀಡುತ್ತಿದೆ. ಇದಲ್ಲದೆ HDFC ಬ್ಯಾಂಕ್ ಕಾರ್ಡ್ ಹೊಂದಿರುವ ಗ್ರಾಹಕರು ಲ್ಯಾಪ್‌ಟಾಪ್ ಖರೀದಿಯ ಮೇಲೆ 6,000ರೂ.ವರೆಗೆ ಕ್ಯಾಶ್‌ಬ್ಯಾಕ್ ಪಡೆಯಬಹುದು. ಈ ಕ್ಯಾಶ್‌ಬ್ಯಾಕ್ ಆಫರ್ EMI ವಹಿವಾಟುಗಳಿಗೂ ಅನ್ವಯಿಸುತ್ತದೆ. HDFC ಬ್ಯಾಂಕ್ ಕ್ಯಾಶ್‌ಬ್ಯಾಕ್ ಆಫರ್ ಮತ್ತು ತ್ವರಿತ ರಿಯಾಯಿತಿ ಎರಡು ಸೇರಿ ಗ್ರಾಹಕರು ಮ್ಯಾಕ್‌ಬುಕ್ ಏರ್ M1 ಅನ್ನು ಕೇವಲ 79,500 ರೂಪಾಯಿಗಳಿಗೆ ಖರೀದಿಸಬಹುದಾಗಿದೆ.

ಇನ್ನು ಮ್ಯಾಕ್‌ಬುಕ್ ಏರ್ M1 79,500ರೂ.ಗಳಿಗೆ ದೊರೆಯುತ್ತಿರುವುದು ಸಾಕಷ್ಟು ಕಡಿಮೆ ಬೆಲೆ ಅಂತಾನೇ ಹೇಳಬಹುದಾಗಿದೆ. ಏಕೆಂದರೆ ಕಳೆದ ಅಕ್ಟೋಬರ್‌ನಲ್ಲಿ, ಅಮೆಜಾನ್ ಸುಮಾರು 9,000ರೂ. ರಿಯಾಯಿತಿಯೊಂದಿಗೆ ಲ್ಯಾಪ್‌ಟಾಪ್ ಅನ್ನು ಸೇಲ್ ಮಾಡುವಾಗ ಇದು 80,900ರೂ. ಬೆಲೆ ಪಡೆದಿತ್ತು. ಆದರೆ ಇದೀಗ ಅದಕ್ಕಿಂತಲೂ ಕಡಿಮೆ ಬೆಲೆಯಲ್ಲಿ ಈ ಲ್ಯಾಪ್‌ಟಾಪ್ ಲಭ್ಯವಾಗುತ್ತಿದೆ. ಇನ್ನು ಈ ಲ್ಯಾಪ್‌ಟಾಪ್ M1 ಚಿಪ್ ಅನ್ನು ಪ್ಯಾಕ್ ಮಾಡುತ್ತದೆ, ಇದು ಮ್ಯಾಕ್‌ಗಾಗಿ ಕಂಪನಿಯಿಂದ ಚಿಪ್‌ನಲ್ಲಿ ಮೊದಲ ಸಿಸ್ಟಮ್ ಆಗಿದೆ. M1 ಚಿಪ್ 8-ಕೋರ್ CPU ಮತ್ತು 8-ಕೋರ್ GPU ಜೊತೆಗೆ 8GB ಮೆಮೊರಿ ಮತ್ತು 256GB SSD ಸಂಗ್ರಹಣೆಯನ್ನು ಪ್ಯಾಕ್ ಮಾಡುತ್ತದೆ.

ಮ್ಯಾಕ್‌ಬುಕ್ ಏರ್ ಎಂ1 2560x1600 ಪಿಕ್ಸೆಲ್‌ಗಳ ರೆಸಲ್ಯೂಶನ್ ಸಾಮರ್ಥ್ಯದ 13.3-ಇಂಚಿನ LED-ಬ್ಯಾಕ್‌ಲಿಟ್ ಡಿಸ್‌ಪ್ಲೇ ಹೊಂದಿದೆ. ಇದು 400 ನಿಟ್‌ಗಳ ಗರಿಷ್ಠ ಬ್ರೈಟ್‌ನೆಸ್ ಅನ್ನು ನೀಡುತ್ತದೆ. ಇನ್ನು ಈ ಮ್ಯಾಕ್‌ಬುಕ್ ಏರ್ 720p ಫೇಸ್‌ಟೈಮ್ HD ಕ್ಯಾಮೆರಾವನ್ನು ಹೊಂದಿದೆ. ಜೊತೆಗೆ ಈ ಲ್ಯಾಪ್‌ಟಾಪ್ ಟಚ್ ಐಡಿಯನ್ನು ಕೂಡ ಹೊಂದಿದೆ. ಇದು ಪವರ್ ಆನ್ ಬಟನ್‌ಗೆ ಸಂಯೋಜಿಸಲ್ಪಟ್ಟಿದೆ. ಈ ಲ್ಯಾಪ್‌ಟಾಪ್ ಫೋರ್ಸ್ ಟಚ್ ಟ್ರ್ಯಾಕ್‌ಪ್ಯಾಡ್‌ನೊಂದಿಗೆ ಬರುತ್ತದೆ. ಇದು Wi-Fi 6 ಅನ್ನು ಬೆಂಬಲಿಸುತ್ತದೆ ಮತ್ತು ಎರಡು Thunderbolt ಪೋರ್ಟ್‌ಗಳೊಂದಿಗೆ ಬರುತ್ತದೆ. MacBook Air M1 ನ ಅತಿ ದೊಡ್ಡ ಹೈಲೈಟ್ ಎಂದರೆ ಇದು 18 ಗಂಟೆಗಳ ಬ್ಯಾಟರಿ ಬಾಳಿಕೆ ನೀಡಲಿದೆ.


Click it and Unblock the Notifications








