ಹೆಚ್ಚಿದ ಬೇಡಿಕೆಯಿಂದ ಐಫೋನ್ X, ಐಫೋನ್ SE ಪೂರೈಕೆ ಸ್ಥಗಿತ ಸಾಧ್ಯತೆ..!

By GizBot Bureau
|

ಹೊಸ ನೀರು ಬಂದಾಗ ಹಳೆ ನೀರು ಕೊಚ್ಚಿ ಹೋಗಬೇಕು. ಈ ಸಿದ್ಧಾಂತವನ್ನು ಆಪಲ್ ಸಂಸ್ಥೆ ಸರಿಯಾಗೇ ಅಳವಡಿಸಿಕೊಳ್ಳುತ್ತದೆ ಎಂದು ಅನ್ನಿಸುತ್ತದೆ. ಮಾರ್ಕೆಟ್ ನಲ್ಲಿ ಆಪಲ್ ಫೋನ್ ಗಳಿಗೆ ಇಂದಿಗೂ ಕೂಡ ಹೆಚ್ಚಿನ ಬೇಡಿಕೆ ಇದ್ದು, ಮಾರುಕಟ್ಟೆಯ ಮಹಾರಾಜ ಆಗಿ ಆಪಲ್ ಮೆರೆಯುತ್ತಿದೆ ಅಂದರೆ ಅದಕ್ಕೆ ಕಾರಣ ಆಪಲ್ ತನ್ನನ್ನು ತಾನು ಮಾರುಕಟ್ಟೆಗೆ ತೆರೆದುಕೊಳ್ಳುವ ರೀತಿ ಮತ್ತು ಬುದ್ಧಿವಂತಿಕೆ ಕಾರಣ.

ಆಪಲ್ ತನ್ನ ಸಂಸ್ಥೆಯ ವಸ್ತುಗಳ ಮಾರಾಟದಲ್ಲಿ ಮತ್ತು ಪೂರೈಕೆಯಲ್ಲಿ ಮಾಡುವ ಕೆಲವು ಬದಲಾವಣೆಗಳು ಕಂಪೆನಿಯ ಒಟ್ಟಾರೆ ಲಾಭ ಗಳಿಕೆಗೆ ಹೆಚ್ಚು ನೆರವು ನೀಡುತ್ತದೆ. ಅಂತಹದ್ದೇ ಒಂದು ನಿರ್ಧಾರವನ್ನು ಆಪಲ್ ಕೈಗೊಳ್ಳುವ ನಿರೀಕ್ಷೆ ಇದೆ.

ಹೆಚ್ಚಿದ ಬೇಡಿಕೆಯಿಂದ ಐಫೋನ್ X, ಐಫೋನ್ SE ಪೂರೈಕೆ ಸ್ಥಗಿತ ಸಾಧ್ಯತೆ..!

ಇನ್ನು ಕೆಲವೇ ತಿಂಗಳಲ್ಲಿ ಆಪಲ್ ಸಂಸ್ಥೆ ಪ್ರಮುಖ ಹಾರ್ಡ್ ವೇರ್ ಕಾರ್ಯಕ್ರಮವೊಂದನ್ನು ಆಯೋಜಿಸಿ ಪ್ರಮುಖ ಮೂರು ಹೊಸ ಐಫೋನ್ ಗಳನ್ನು ಘೋಷಿಸುವ ನಿರೀಕ್ಷೆ ಇದೆ. ಈ 2018 ರ ಐಫೋನ್ ಗಳು ಅತ್ಯಂತ ಹೆಚ್ಚು ಬೇಡಿಕೆಯುಳ್ಳದ್ದು ಮತ್ತು ಕೆಲವು ವಿಶ್ಲೇಷಣಾಕಾರರು ಹೇಳುವಂತೆ ಆಪಲ್ ಸಂಸ್ಥೆಯು ಐಫೋನ್ ಎಕ್ಸ್ ಮತ್ತು ಐಫೋನ್ ಎಸ್ ಇ ಯ ಪೂರೈಕೆಯನ್ನು ಸ್ಥಗಿತಗೊಳಿಸುವ ನಿರೀಕ್ಷೆ ಇದ್ದು, ಆ ಮೂಲಕ ಹೊಸ ಐಫೋನ್ ಗಳಿಗೆ ಹೆಚ್ಚಿನ ಗಮನವನ್ನು ಕೇಂದ್ರೀಕರಿಸುವ ನಿರ್ಧಾರವನ್ನು ಆಪಲ್ ಸಂಸ್ಥೆ ಮಾಡಿದೆಯಂತೆ.

ಅತಿ ಹೆಚ್ಚು ಬೇಡಿಕೆ

ಅತಿ ಹೆಚ್ಚು ಬೇಡಿಕೆ

ಬ್ಲೂಫಿನ್ ನ ಇತ್ತೀಚೆಗಿನ ಹೂಡಿಕೆದಾರರ ಪ್ರಕಾರ, ಐಫೋನ್ ಗಳಲ್ಲಿ ಕಳೆದ ಕೆಲವು ವರ್ಷಗಳಲ್ಲಿ ಅಪ್ ಡೇಟ್ ಆಕ್ಟಿವಿಟಿಗಳು ಅಧಿಕಗೊಂಡಿದೆ. ಇದನ್ನು 9ಟು5 ಮ್ಯಾಕ್ ವರದಿ ಕೂಡ ಹೇಳಿದೆ. ಆಪಲ್ 5.8 ಇಂಚಿನ ಐಫೋನ್ ಎಕ್ಸ್ ನ ಸಕ್ಸಸರ್, 6.5 ಇಂಚಿನ ಐಫೋನ್ ಎಕ್ಸ್ ಪ್ಲಸ್ ಮಾಡೆಲ್ ಮತ್ತು ಕೈಗೆಟುಕುವ ಬೆಲೆಯ 6.1 ಇಂಚಿನ ಎಲ್ಸಿಡಿ ಐಫೋನ್ ನ್ನು ಅನಾವರಣಗೊಳಿಸಿದೆ. ಈ ಎಲ್ಲಾ ಫೋನ್ ಗಳು ಅತೀ ಹೆಚ್ಚು ಬೇಡಿಕೆಯನ್ನು ಸೃಷ್ಟಿ ಮಾಡಿದೆ. ಅದರಲ್ಲೂ ಎಲ್ಸಿಡಿ ಐಫೋನ್ ಗ್ರಾಹಕರ ಬೇಡಿಕೆಯ ನಂಬರ್ ಒನ್ ಫೋನ್ ಆಗಿತ್ತು.

92 ಮಿಲಿಯನ್ ಫೋನ್ ತಯಾರಿಕೆಗೆ ತಯಾರಿ

92 ಮಿಲಿಯನ್ ಫೋನ್ ತಯಾರಿಕೆಗೆ ತಯಾರಿ

ಬ್ಲೂಫಿನ್ ವಿಶ್ಲೇಷಕರು ಹೇಳುವ ಪ್ರಕಾರ 2018 ರ ಮೂರು ಮತ್ತು ನಾಲ್ಕನೇ ತ್ರೈಮಾಸಿಕದಲ್ಲಿ ಸುಮಾರು 91 ಮಿಲಿಯನ್ 2018 ಐಫೋನ್ ಯೂನಿಟ್ ಗಳನ್ನು ತಯಾರಿಸಿದೆ. ಇನ್ನು 2019 ರ ಮೊದಲ ಎರಡು ತ್ರೈಮಾಸಿಕದಲ್ಲಿ 92 ಮಿಲಿಯನ್ ಫೋನ್ ತಯಾರಿಕೆಗೆ ಸಿದ್ಧತೆ ನಡೆದಿದೆ. ಅದು ಆಪಲ್ ನ ಸಾಂಪ್ರದಾಯಿಕ ತಯಾರಿಕಾ ಮಟ್ಟಕ್ಕಿಂತ ಬಹಳ ದೊಡ್ಡದು ಎಂಬುದು ವಿಶ್ಲೇಷಕರ ಅಭಿಪ್ರಾಯ.

28 ಮಿಲಿಯನ್ ಐಫೋನ್

28 ಮಿಲಿಯನ್ ಐಫೋನ್

28 ಮಿಲಿಯನ್ ಐಫೋನ್ 9,11,11 ಪ್ಲಸ್ ಮಾಡೆಲ್ ನ್ನು ಮೂರನೇ ತ್ರೈಮಾಸಿಕದಲ್ಲಿ ತಯಾರಿಸಲಾಗಿದೆ ಆದರೆ ಕೇವಲ 24 ಮಿಲಿಯನ್ ತಯಾರಿಸುವ ಗುರಿಯನ್ನು ಹೊಂದಲಾಗಿತ್ತು. ಇನ್ನು ನಾಲ್ಕನೇ ತ್ರೈಮಾಸಿಕದಲ್ಲಿ 63 ಮಿಲಿಯನ್ ನಿರೀಕ್ಷಿಸಲಾಗಿದೆ. ಮುಂದಿನ ವರ್ಷದ ಮೊದಲ ಮತ್ತು ಎರಡನೇ ತ್ರೈಮಾಸಿಕದಲ್ಲಿ ಅವರ ನಿರೀಕ್ಷೆ 46 ಮಿಲಿಯನ್ ಆಗಿದೆ. ಆದರೆ ಈ ಎಲ್ಲಾ ನಂಬರ್ ಗಳು ಇದುವರೆಗಿನ ಆಪಲ್ ನ ನಿರೀಕ್ಷೆಯ ಮಟ್ಟಕ್ಕಿಂತ ಬಹಳ ದೊಡ್ಡದು. ವಿಶ್ಲೇಷಕರ ಪ್ರಕಾರ ಆಪಲ್ 20 ಮಿಲಿಯನ್, 60 ಮಿಲಿಯನ್,45 ಮಿಲಿಯನ್ ಮತ್ತು 40 ಮಿಲಿಯನ್ ಯುನಿಟ್ಸ್ ನ್ನು 2018 ಐಫೋನ್ ಗಳನ್ನು ಮುಂದಿನ ನಾಲ್ಕು ತ್ರೈಮಾಸಿಕಗಳಲ್ಲಿ ಕ್ರಮವಾಗಿ ನಿರೀಕ್ಷಿಸುತ್ತಿದ್ದಾರೆ.

ಐಫೋನ್ ಎಕ್ಸ್ ಪ್ಲಸ್ ಬೆಲೆ 999 ಡಾಲರ್

ಐಫೋನ್ ಎಕ್ಸ್ ಪ್ಲಸ್ ಬೆಲೆ 999 ಡಾಲರ್

ಐಫೋನ್ ಎಕ್ಸ್ ನ್ನು ಐಫೋನ್ ಎಕ್ಸ್ ಪ್ಲಸ್ ಗಿಂತ ಚಿಕ್ಕದು ಎಂದು ಗ್ರಾಹಕ ಭಾವಿಸಬಹುದು ಎಂಬ ಊಹೆಯನ್ನು ತಜ್ಞರು ನೀಡುತ್ತಿದ್ದಾರೆ. ಐಫೋನ್ ಎಕ್ಸ್ ಪ್ಲಸ್ ಗಾಳಿಸುದ್ದಿಯ ಪ್ರಕಾರ ಐಫೋನ್ ಎಕ್ಸ್ ನ ಬೆಲೆಯನ್ನೇ ಹೊಂದಿರುತ್ತದೆ ಅದುವೇ 999 ಡಾಲರ್. ಅದರ ಜೊತೆಗೆ 6.1 ಇಂಚಿನ ಎಸಿಡಿ ಐಫೋನ್ ಮೂರರಲ್ಲಿ ಅತೀ ಕಡಿಮೆ ಬೆಲೆಯುಳ್ಳದ್ದು ಎಂದಾಗುತ್ತದೆ ಮತ್ತು ಬೆಲೆಯ ಆಧಾರದಲ್ಲಿ ಹೆಚ್ಚು ಗ್ರಾಹಕರನ್ನು ಮಾರ್ಕೆಟ್ ನಲ್ಲಿ ಸೆಳೆಯುವ ಸಾಧ್ಯತೆ ಇದೆ ಎಂಬುದು ಕುಯೋ ಅವರ ಅಭಿಪ್ರಾಯವಾಗಿದೆ.

ಐಫೋನ್ 11 ಪ್ಲಸ್ ಯಾರು ಐಫೋನ್ ಎಕ್ಸ್ ನ ಸೈಜ್ ವಿಚಾರದಲ್ಲಿ ಖುಷಿಯಾಗಿಲ್ಲವೋ ಅವರನ್ನು ಸಂತುಷ್ಟಿಗೊಳಿಸುತ್ತದೆ. ಆದರೆ ಐಫೋನ್ 9 ಬಜೆಟ್ ವಿಚಾರದಲ್ಲಿ ಹೆಚ್ಚು ಒಲವು ತೋರಿಸುವ ಗ್ರಾಹಕರನ್ನು ಸೆಳೆಯುತ್ತದೆ. ಐಫೋನ್ 8 ಅತ್ಯಂತ ದುಬಾರಿ ಅನ್ನಿಸುವ ಸಾಧ್ಯತೆ ಇದೆ.

ಹೊರಬರದ ಐಫೋನ್ ಎಸ್ ಇ 2

ಹೊರಬರದ ಐಫೋನ್ ಎಸ್ ಇ 2

ಕುಯೋ ಪ್ರಕಾರ ಎಲ್ಸಿಡಿ ಐಫೋನ್ ಗಳ ಬೆಲೆಯು ಹೆಚ್ಚು ಕಡಿಮೆ 600 ರಿಂದ 700 ಡಾಲರ್ ಇರುವ ನಿರೀಕ್ಷೆ ಇದೆ. ಇದು ಹೆಚ್ಚು ಕಡಿಮೆ ಐಫೋನ್ ಎಸ್ಸಿಯ ಬದಲಿ ಎಂಬಂತೆ ಭಾಸವಾಗಬಹುದು. 2018 ರ ಆರಂಭದಲ್ಲಿ ಐಫೋನ್ ಎಸ್ ಇ 2 ಬಿಡುಗಡೆಗೊಳ್ಳುತ್ತದೆ ಎಂಬ ಸುದ್ದಿಗಳಿದ್ದವು, ಆದರೆ ಆ ಫೋನ್ ಬರಲೇ ಇಲ್ಲ. ಬಹುಶ್ಯಃ ಎಲ್ಸಿಡಿ ಐಫೋನ್ ಅದರ ಭಾಗವೇ ಆಗಿರುವ ನಿರೀಕ್ಷೆ ಇದೆ.
ಆದರೆ, ಇಷ್ಟೆಲ್ಲ ಊಹಾಪೋಹಗಳ ನಡುವೆ ಆಪಲ್ ಐಫೋನ್ ಎಕ್ಸ್ ಮತ್ತು ಐಫೋನ್ ಎಸ್ಇ ಯ ತಯಾರಿಕೆಯನ್ನು ಸ್ಥಗತಿಗೊಳಿಸುತ್ತದೆಯೇ ಎಂಬ ಬಗ್ಗೆ ಕರಾರುವಕ್ಕಾದ ಅಧಿಕೃತ ಮಾಹಿತಿ ಲಭ್ಯವಿಲ್ಲ. ಐಫೋನ್ ಗಳಿಗೆ ಆಂಡ್ರಾಯ್ಡ್ ಫೋನ್ ಗಳಿಗಿಂತ ಹೆಚ್ಚು ಆಯಸ್ಸು ಇದೆ. ಹಾಗಾಗಿ ಆಪಲ್ ಐಫೋನ್ ಎಕ್ಸ್ ನ್ನು ಬಿಡುಗಡೆಗೊಳಿಸಿದ ಒಂದೇ ವರ್ಷಕ್ಕೆ ಅದರ ಪೂರೈಕೆಯನ್ನು ನಿಲ್ಲಿಸುತ್ತದೆಯೇ ಎಂಬುದು ಪ್ರಶ್ನಾತ್ಮಕ..!

Best Mobiles in India

English summary
Apple may discontinue iPhone X, iPhone SE soon as it expects high demand for 2018 iPhones. To know more this visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X