ಐಫೋನ್ 5, iOS 6, ಐಪಾಡ್ ಒಂದೇ ದಿನ ಬರುತ್ತೆ

Posted By: Varun
ಐಫೋನ್ 5, iOS 6, ಐಪಾಡ್ ಒಂದೇ ದಿನ ಬರುತ್ತೆ

ಆಪಲ್ ಚಪಲ ಹತ್ತಿರುವವರು ತಮ್ಮ ಡೈರಿಯಲ್ಲಿ ದಿನಾಂಕ ಸೆಪ್ಟೆಂಬರ್ 12 2012 ಅನ್ನು ಕೆಂಪು ಪೆನ್ನಿನಲ್ಲಿ ಮಾರ್ಕ್ ಮಾಡಿಟ್ಟುಕೊಳ್ಳುವುದು ಒಳ್ಳೆಯದು.

ಯಾಕೆ ಅಂತಾ ಕೇಳ್ತೀರಾ? ಆಪಲ್ ತನ್ನ ಮೂರು ಉತ್ಪನ್ನಗಳನ್ನು ಅವತ್ತು ಬಿಡುಗಡೆ ಮಾಡಲಿದೆ ಎಂಬ ಸುದ್ದಿ ಬಂದಿದೆ. ಹೌದು, ಸ್ಯಾಮ್ಸಂಗ್ ಗ್ಯಾಲಕ್ಸಿ S3 ಸ್ಮಾರ್ಟ್ ಫೋನ್ ನಂತರ ಈ ವರ್ಷದ ಅತಿ ಕುತೂಹಲಕಾರಿ ಫೋನ್ ಎಂದರೆ ಅದು ಐಫೋನ್ 5. ಅದನ್ನ, iOS 6 ತಂತ್ರಾಂಶ ಹಾಗು ಐಪಾಡ್ ಟಚ್ ಅನ್ನ ಆಪಲ್ ಕಂಪನಿ ಸೆಪ್ಟೆಂಬರ್ 12 ರಂದೇ ಬಿಡುಗಡೆ ಮಾಡಲಿದೆ ಎಂಬ ಸುದ್ದಿ ಬಂದಿದೆ.

ಹೋದ ವರ್ಷ ಅಕ್ಟೋಬರ್ ರಲ್ಲಿ ಬಿಡುಗಡೆಯಾಗಿದ್ದ ಐಫೋನ್ 4S ಹಾಗು ಹಾಗು ಜೂನ್ ನಲ್ಲಿ ಸಿದ್ದಪಡಿಸಲಾಗಿರುವ ಐಒಸ್ 6 ತಂತ್ರಾಂಶ ಹಾಗು ಐಪಾಡ್ ಟಚ್ ಪ್ಲೇಯರ್ ಅನ್ನು ಒಂದೇ ದಿನ ಬಿಡುಗಡೆ ಮಾಡಲಿರುವ ಆಪಲ್ ತನ್ನ ಅಭಿಮಾನಿಗಳಿಗೆ ಟ್ರಿಪಲ್ ಧಮಾಕಾ ನೀಡುವ ಹಾಗಿದೆ.

ಈಗಾಗಲೇ ಸ್ಯಾಮ್ಸಂಗ್ ಗ್ಯಾಲಕ್ಸಿ S3, ಗೆ ನೇರ ಸ್ಪರ್ಧಿಯಾಗಿ ಐಫೋನ್ 5 ಹೇಗೆ ಬರುತ್ತೆ, ಯಾವ ಡಿಸೈನ್ ನಲ್ಲಿ ಬರುತ್ತೆ ಅಂತ ಕುತೂಹಲ ಒಂದು ಕಡೆ ಇದ್ದರೆ ಮತ್ತೊಂದು ಕಡೆ iOS 6 ನಲ್ಲಿ ಫೇಸ್ ಬುಕ್ ಆಪ್ ಅನ್ನು ಸೇರ್ಪಡೆ ಗೊಳಿಸಲಾಗಿದ್ದು, ಈಗಾಗಲೇ ಗೂಗಲ್ ಮ್ಯಾಪ್, ಯೂಟ್ಯೂಬ್ ಆಪ್ ಗಳನ್ನು ಕೈಬಿಡಲಾಗಿದ್ದು, ಅದರ ಬದಲಿಗೆ ಯಾವ ಹೊಸ ಫೀಚರುಗಳು ಬರಲಿವೆ ಎಂದು ಬಳಕೆದಾರರು ಕಾಯುತ್ತಿದ್ದಾರೆ.

ಇವಿಷ್ಟು ಕುತೂಹಲಗಳು ನಮ್ಮಲ್ಲಿ ಇದ್ದರೂ ಕೂಡ ಆಪಲ್ ಮತ್ತೇನು ಸರ್ಪ್ರೈಸ್ ಕೊಡುತ್ತೆ ಅಂತ ತಿಳಿದುಕೊಳ್ಳಲು ನಾವು ಸೆಪ್ಟೆಂಬರ್ 12 ರ ವರೆಗೂ ಕಾಯಲೇಬೇಕು.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot