Home
ಸುದ್ದಿಜಾಲ

ಆಪಲ್ ಐಫೋನ್ 8 - ಬರಲಿದೆ 2 ವಿಭಿನ್ನ ಗಾತ್ರಗಳಲ್ಲಿ!

ಬಹು ಬೇಡಿಕೆಯ ಆಪಲ್ ಪ್ರೀಮಿಯಂ OLED ಐಫೋನ್ ಗಳು 5.8 ಇಂಚ್ ಮತ್ತು 6 ಇಂಚ್ಗಳ 2 ವಿಭಿನ್ನ ಗಾತ್ರಗಳಲ್ಲಿ ಲಾಂಚ್ ಆಗಲಿದೆ.ಸ್ಯಾಮ್ಸಂಗ್ನ ಡಿಸ್ಪ್ಲೇ ತಯಾರಾಗುತ್ತಿರುವ ವರ್ಕ್ಶಾಪ್ ನಲ್ಲೇ ಆಪಲ್ OLED ಪ್ಯಾನಲ್ಗಳು ತಯಾರಾಗಲಿದೆ.

By Tejaswini P G

ಆಪಲ್ ಐಫೋನ್ ಪ್ರಿಯರಿಗೊಂದು ಸಿಹಿ ಸುದ್ದಿ. ನಿಮ್ಮ ನೆಚ್ಚಿನ ಆಪಲ್ ಪ್ರೀಮಿಯಂ OLED ಐಫೋನ್ ಗಳು 2 ವಿಭಿನ್ನ ಗಾತ್ರಗಳಲ್ಲಿ ಲಾಂಚ್ ಆಗಲಿದೆ ಎಂಬ ಸುದ್ದಿ ಈಗ ಕೇಳಿಬರುತ್ತಿದೆ.ಸ್ಯಾಮ್ಸಂಗ್ ಡಿಸ್ಪ್ಲೇ ಪ್ರೊಡಕ್ಷನ್ ಪ್ಲ್ಯಾಂಟ್ ಬಗ್ಗೆ ಮಾಹಿತಿ ನೀಡಿದವರೇ ಈ ಕುರಿತು ಕೂಡ ಮಾಹಿತಿ ನೀಡಿದ್ದಾರೆ. ಆಪಲ್ ಒಎಲ್ಇಡಿ ಪ್ಯಾನಲ್ ಗಳನ್ನೂ ಇದೇ ವರ್ಕ್ಶಾಪ್ ನಲ್ಲಿ ತಯಾರಿಸಲಾಗುತ್ತದೆಯಂತೆ.

ಆಪಲ್ ಐಫೋನ್ 8 - ಬರಲಿದೆ 2 ವಿಭಿನ್ನ ಗಾತ್ರಗಳಲ್ಲಿ!

ಆಗಸ್ಟ್ ತಿಂಗಳಾಂತ್ಯದ ಒಳಗೆ ಐಫೋನ್ ಗಳ OLED ಪ್ಯಾನಲ್ಗಳ ಪೂರ್ಣ ಪ್ರಮಾಣದ ಉತ್ಪಾದನೆ ಆರಂಭವಾಗಲಿದೆ.ಒಂದೇ ಉತ್ಪಾದನಾ ಘಟಕದಲ್ಲಿ ಐಫೋನ್ಗಾಗಿ 5.8 ಇಂಚ್ ಮತ್ತು 6 ಇಂಚ್ಗಳ 2 ವಿಭಿನ್ನ ಗಾತ್ರದ OLED ಪ್ಯಾನಲ್ಗಳ ಉತ್ಪಾದನೆಯಾಗಲಿದೆ.

ಈ ಹಿಂದೆ ಆಪಲ್ LCD ಡಿಸ್ಪ್ಲೇ ಹೊಂದಿರುವ ಎರಡು ಐಫೋನ್ 7S ಮಾಡೆಲ್ಗಳನ್ನು ಹಾಗೂ ಒಂದು 5.8 ಇಂಚ್ ನ OLED ಐಫೋನ್ ಅನ್ನು ಐಫೋನ್ 8/X ಎಂಬ ಹೆಸರಿನಲ್ಲಿ ಬಿಡುಗಡೆ ಮಾಡಲಿದೆ ಎಂಬ ಸುದ್ದಿ ಹರಿದಾಡುತಿತ್ತು.ಆದರೆ ಈಗ ಬಂದಿರುವ ಮಾಹಿತಿಗಳು ಹಿಂದಿನ ಸುದ್ದಿಯನ್ನು ಅಲ್ಲಗೆಳೆಯುವಂತಿದೆ. ಐಫೋನ್ಗಳ ಯಶಸ್ವೀ 10 ವರ್ಷಗಳನ್ನು ಸೂಚಿಸಲೆಂದೇ ಬಿಡುಗಡೆ ಮಾಡಲಾಗುತ್ತಿರುವ ಐಫೋನ್ ನ ವಿಶೇಷ ಆವೃತ್ತಿಯೇ ಐಫೋನ್ 8/X ಎಂದು ಭಾವಿಸಲಾಗುತ್ತಿದೆ.

ಈಗ ಪ್ಯಾನಲ್ಗಳನ್ನು ಉತ್ಪಾದಿಸಲಿದೆ ಎಂದು ಹೇಳಲಾಗುತ್ತಿರುವ ಘಟಕಗಳು ಹೆಚ್ಚೆಂದರೆ ವಾರ್ಷಿಕ 124 ಮಿಲಿಯನ್ 6 ಇಂಚ್ ಪ್ಯಾನಲ್ಗಳು ಹಾಗೂ 130 ಮಿಲಿಯನ್ 5.8 ಇಂಚ್ ಪ್ಯಾನಲ್ಗಳನ್ನು ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ.ಚಾಲ್ತಿಯಲ್ಲಿರುವ ಮಾಹಿತಿಯ ಅನುಸಾರ ಈ ಘಟಕಗಳ ಸಧ್ಯದ ಕಾರ್ಯಕ್ಷಮತೆ 60%ನಷ್ಟಿದ್ದು 75 ಮಿಲಿಯನ್ 6 ಇಂಚ್ ಪ್ಯಾನಲ್ಗಳು ಹಾಗೂ 79 ಮಿಲಿಯನ್ 5.8 ಇಂಚ್ ಪ್ಯಾನಲ್ಗಳನ್ನು ಐಫೋನ್ಗಾಗಿ ಉತ್ಪಾದಿಸಲಿದೆ.

ಹಾಗಾಗಿ ಆಪಲ್ ಹೊಸ ಐಫೋನ್ಗಳ ಕೊರತೆಯನ್ನು ಎದುರಿಸಲಿದೆ ಎನ್ನುವ ವರದಿಗಳು ನಿಜವಾಗಲಿದೆ. ಹೊಸದಾಗಿ ಬರಲಿರುವ ಐಫೋನ್ಗಳ ಬೇಡಿಕೆ 200 ಮಿಲಿಯನ್ ಇದ್ದು ಈ ಬೇಡಿಕೆಯನ್ನು ಈಡೇರಿಸುವುದು ಕಷ್ಟಸಾಧ್ಯ.

ಇತ್ತೀಚಿಗಿನ ಪತ್ರಿಕಾ ಘೋಷ್ಠಿಯೊಂದರಲ್ಲಿ ಟಿಮ್ ಕುಕ್ ಆಪಲ್ ಎರ್ಪಾಡ್ಗಳಿಗೆ ಸಿಕ್ಕಿರುವ ಅಮೋಘ ಪ್ರತಿಕ್ರಿಯೆಯಿಂದಾಗಿ ಅದರ ಕೋರಿಕೆ ಮತ್ತು ಪೂರೈಕೆಗಳಲ್ಲಿ ಸಮತೋಲನವನ್ನು ಕಾಯ್ದಿರಿಸಿಕೊಳ್ಳುವುದು ಕಷ್ಟವಾಗಿದೆ ಎಂದು ತಿಳಿಸಿದ್ದಾರೆ.ಇದೇ ರೀತಿ ಮುಂದುವರೆದರೆ, ಇನ್ನು ಮುಂದೆ ಬರಲಿರುವ ಆಪಲ್ ಉತ್ಪನ್ನಗಳ ಪೂರೈಕೆಯಲ್ಲಿಯೂ ಕೊರತೆಯುಂಟಾಗಲಿದೆ ಎಂದರೆ ತಪ್ಪಾಗಲಾರದು.

Best Mobiles in India

English summary
Apple may launch the upcoming iPhone 8 with two different screen sizes of 5.8-inch and 6-inch.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+