ಬೆಂಗಳೂರಿನಲ್ಲಿ ಪ್ರೀಮಿಯಂ ಐಫೋನ್ ತಯಾರಿಕೆಗೆ ಆಪಲ್ ಒಲವು!..ಯಾರಿಗೆ ಲಾಭ?

|

ಭಾರತದ ಅಧಿಕ ಆಮದು ತೆರಿಗೆ ದರದಿಂದ ಮುಕ್ತರಾಗಲು ಆಪಲ್ ಕಂಪೆನಿಯು ದೇಶದಲ್ಲೇ ಪ್ರೀಮಿಯಂ ಐಫೋನ್‌ಗಳ ತಯಾರಿಕೆಗೆ ಮುಂದಾಗುತ್ತಿದೆ ಎನ್ನಲಾಗಿದೆ. ದೇಶದಲ್ಲಿ ಆಮದು ಉತ್ಪನ್ನಗಳ ಮೇಲೆ ಅಧಿಕ ತೆರಿಗೆ ವಿಧಿಸುತ್ತಿರುವುದರಿಂದ ಸಹಜವಾಗಿ ಐಫೋನ್‌ಗಳ ಬೆಲೆ ಏರಿಕೆಯಾಗುತ್ತಿದ್ದು, ಐಫೋನ್‌ಗಳ ಮಾರಾಟದಲ್ಲಿ ಆಪಲ್ ಕಂಪೆನಿ ಸಂಕಷ್ಟ ಎದುರಿಸುತ್ತಿದೆ. ಹಾಗಾಗಿ, ಬೆಂಗಳೂರಿನಲ್ಲಿರುವ ಐಫೋನ್ ಜೋಡಣಾ ಘಟಕದಲ್ಲಿ ಹೆಚ್ಚಿನ ಪ್ರೀಮಿಯಂ ಐಫೋನ್ ಉತ್ಪಾದನೆಗೆ ಆಪಲ್ ಒತ್ತು ನೀಡಲಿದೆ ಎಂದು ತಿಳಿದುಬಂದಿದೆ.

ಬೆಂಗಳೂರಿನಲ್ಲಿ ಪ್ರೀಮಿಯಂ ಐಫೋನ್ ತಯಾರಿಕೆಗೆ ಆಪಲ್ ಒಲವು!..ಯಾರಿಗೆ ಲಾಭ?

ಹೌದು, ದೇಶದ ಪ್ರೀಮಿಯಂ ಮಾರುಕಟ್ಟೆಯಲ್ಲಿ ಒನ್‌ಪ್ಲಸ್ ಅಬ್ಬರ ಜೋರಾದ ನಂತರ ಆಪಲ್ ಕಂಪೆನಿ ತಲೆಕೆಡಿಸಿಕೊಂಡಿರುವಂತಿದೆ. ಇದರ ಜೊತೆಗೆ ಅಧಿಕ ಆಮದು ತೆರಿಗೆ ಕೂಡ ಐಫೋನ್‌ಗಳ ಮಾರಾಟಕ್ಕೆ ತಡೆಯಾಗಿದೆ. ಹಾಗಾಗಿ, ತನ್ನ ಪ್ರೀಮಿಯಂ ಐಫೋನ್‌ಗಳ ಬೆಲೆ ಇಳಿಕೆ ಮಾಡುವ ಸಲುವಾಗಿ ದೇಶದಲ್ಲೇ ಹೆಚ್ಚೆಚ್ಚು ಪ್ರೀಮಯಂ ಐಫೋನ್ ಉತ್ಪಾದನೆ ಮಾಡಲು ಆಪಲ್ ಕಂಪೆನಿ ಮುಂದಾಗಿದೆ. ಹಾಗಾದರೆ, ಆಪಲ್ ಮಾಡಿಕೊಂಡಿರುವ ಹೊಸ ಪ್ಲ್ಯಾನ್ ಏನು? ಇದರಿಂದ ಯಾರಿಗೆ ಲಾಭ ಎಂಬುದನ್ನು ಮುಂದಿನ ಸ್ಲೈಡರ್‌ಗಳಲ್ಲಿ ಓದಿ ತಿಳಿಯಿರಿ.

ಯಾವ ಐಫೋನ್‌ಗಳ ತಯಾರಿಕೆಗೆ ಒಲವು?

ಯಾವ ಐಫೋನ್‌ಗಳ ತಯಾರಿಕೆಗೆ ಒಲವು?

ಆಪಲ್ ಕಂಪೆನಿ ಐಫೋನ್ ಎಕ್ಸ್‌ಆರ್ ಮತ್ತು ಎಕ್ಸ್‌ಎಸ್ ಭಾರತದಲ್ಲಿ ಹೆಚ್ಚು ಅಗ್ಗವಾಗಬಹುದು. ಏಕೆಂದರೆ, ಆಪಲ್ ಕಂಪನಿಯು ತನ್ನ ಹೈ-ಎಂಡ್ ಫೋನ್‌ಗಳನ್ನು ಭಾರತದ ಆವೃತ್ತಿಯಲ್ಲಿ ಮುಂದಿನ ತಿಂಗಳ ಆರಂಭದಲ್ಲಿ ಮಾರಾಟ ಮಾಡಲು ಪ್ರಾರಂಭಿಸುತ್ತದೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ. ರಾಯಿಟರ್ಸ್ ವರದಿಯ ಪ್ರಕಾರ, ಬಾಕಿ ಇರುವ ಅನುಮೋದನೆಗಳು ಬಂದ ಕೂಡಲೇ ಭಾರತದಲ್ಲಿ ನಿರ್ಮಿತ ಐಫೋನ್ ಎಕ್ಸ್‌ಆರ್ ಮತ್ತು ಎಕ್ಸ್‌ಎಸ್ ಆಗಸ್ಟ್‌ನಿಂದ ಮಳಿಗೆಗಳಲ್ಲಿ ಲಭ್ಯವಿರುತ್ತವೆ ಎಂದು ಹೇಳಿದೆ .

ಶೇ.15 ರಿಂದ ಶೇ.20 ರಷ್ಟು ಬೆಲೆ ಇಳಿಕೆ

ಶೇ.15 ರಿಂದ ಶೇ.20 ರಷ್ಟು ಬೆಲೆ ಇಳಿಕೆ

ಬೆಂಗಳೂರಿನಲ್ಲಿರುವ ಐಫೋನ್ ಜೋಡಣಾ ಘಟಕದಲ್ಲಿ ಹೆಚ್ಚಿನ ಪ್ರೀಮಿಯಂ ಐಫೋನ್‌ಗಳ ತಯಾರಾದರೆ, ದೇಶದಲ್ಲಿ ಪ್ರೀಮಿಯಂ ಐಫೋನ್ ಬೆಲೆಗಳು ಶೇ.15 ರಿಂದ ಶೇ.20 ರಷ್ಟು ಇಳಿಕೆಯಾಗುತ್ತದೆ ಎಂದು ಮೊಬೈಲ್ ಮಾರುಕಟ್ಟೆ ಅಂದಾಜಿಸಿದೆ. ಅಂದರೆ, ಈಗ ಪ್ರೀಮಿಯಂ ಜನರಿಗೆ ಮಾತ್ರ ಲಭ್ಯವಿರುವ ಕೆಲ (ಐಫೋನ್ ಎಕ್ಸ್‌ಆರ್ ಮತ್ತು ಎಕ್ಸ್‌ಎಸ್) ಐಫೋನ್‌ಗಳ ಬೆಲೆ 50 ಸಾವಿರಕ್ಕಿಂತ ಕಡಿಮೆಯಾಗಲಿದೆ. ಇದು ಐಫೋನ್‌ಗಳ ಮಾರಾಟಕ್ಕೆ ಹೆಚ್ಚು ಸಹಾಯವಾಗಲಿದೆ ಎಂದು ಆಪಲ್ ಕಂಪೆನಿ ಪ್ಲ್ಯಾನ್ ಮಾಡಿಕೊಂಡಿದೆ.

ಮಧ್ಯಮ ವರ್ಗದ ಭಾರತೀಯರಿಗೆ ಉಪಯೋಗವಿಲ್ಲ.!

ಮಧ್ಯಮ ವರ್ಗದ ಭಾರತೀಯರಿಗೆ ಉಪಯೋಗವಿಲ್ಲ.!

ಇನ್ನು ಇದರಿಂದ ಮಧ್ಯಮ ವರ್ಗದ ಭಾರತೀಯರಿಗೆ ಹೆಚ್ಚು ಉಪಯೋಗವಾಗುವುದಿಲ್ಲ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ದೇಶದ ಮಾರುಕಟ್ಟೆಯಿಂದ ಜನಪ್ರಿಯ ಹಳೆಯ ಮಾದರಿ ಐಪೋನ್‌ಗಳಿನ್ನು ಹೊರನಡೆಯುತ್ತಿವೆ. ಹೆಚ್ಚಿನ ಭಾರತೀಯರು ಖರೀದಿಸುವ ಆಪಲ್ ಐಫೋನ್ SE, ಐಫೋನ್ 6, ಐಫೋನ್ 6 ಪ್ಲಸ್ ಮತ್ತು 6S ಸರಣಿಯ ಐಫೋನ್‌ಗಳ ಮಾರಾಟವನ್ನು ನಿಲ್ಲಿಸಲು ಕಂಪೆನಿ ಮುಂದಾಗಿರುವುದರಿಂದ, ಇದರ ಉಪಯೋಗವು ಪ್ರೀಮಿಯಂ ಐಫೋನ್ ಖರೀದಿದಾರರಿಗೆ ಮಾತ್ರ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಬಜೆಟ್ ಐಫೋನ್‌ಗಳ ಸ್ಥಗಿತ ಏಕೆ?

ಬಜೆಟ್ ಐಫೋನ್‌ಗಳ ಸ್ಥಗಿತ ಏಕೆ?

ಕೆಲವು ವಿಶ್ಲೇಷಣೆಗಳ ಪ್ರಕಾರ, ಆಪಲ್‌ನ ಸ್ಮಾರ್ಟ್‌ಫೋನ್‌ಗಳು ಸರಾಸರಿ ಭಾರತೀಯರ ಬಜೆಟ್‌ಗಿಂತ ಹೆಚ್ಚಿನ ಬೆಲೆಯಿದೆ ಎಂದು ಹೇಳಿವೆ. ಅದಕ್ಕಾಗಿ, ಐಫೋನ್ SE, ಐಫೋನ್ 6, ಐಫೋನ್ 6 ಪ್ಲಸ್ ಮತ್ತು 6S ಸರಣಿಯ ಐಫೋನ್‌ಗಳ ಮಾರಾಟವನ್ನು ಆಪಲ್ ನಿಲ್ಲಿ ಕ್ರಮವನ್ನು ಕೈಗೊಂಡಿದೆ ಎಂದು ಹೇಳಲಾಗುತ್ತಿದೆ. ಆದರೆ, ಮತ್ತೊಂದೆಡೆ ಆಪಲ್ 10 ಸರಣಿ ಸ್ಮಾರ್ಟ್‌ಫೋನ್‌ಗಳ ಪ್ರವೇಶದ ಬೆನ್ನಲ್ಲೇ ಅಮೆರಿಕದಲ್ಲಿ ಹಳೆಯ ಮಾದರಿಗಳಾದ ಐಪೋನ್ ಎಸ್‌ಇ, ಐಫೋನ್ 6 ಮತ್ತು 6s ಮಾರಾಟವನ್ನು ಸ್ಥಗಿತಗೊಳಿಸಿತ್ತು.

ಮಾರುಕಟ್ಟೆ ತಜ್ಞರು ಹೇಳುವುದೇನು?

ಮಾರುಕಟ್ಟೆ ತಜ್ಞರು ಹೇಳುವುದೇನು?

ಆಪಲ್ ತನ್ನ ಘಟಕಗಳಿಂದ ಹೆಚ್ಚು ಲಾಭ ಗಳಿಸುವದೃಷ್ಟಿಕೋನದಿಂದ, ಅಗ್ಗದ ಮಾದರಿಗಳನ್ನು ತೊಡೆದುಹಾಕಲು ಅರ್ಥವಿಲ್ಲ. ಕಂಪೆನಿಯು ಹೇಗಾದರೂ ಮಾಡಿ ತನ್ನ ಮಾರಾಟ ಸಂಖ್ಯೆಗಳ ಪಂದ್ಯವನ್ನು ಗೆಲ್ಲಲು ಮುಂದಾಗಿದೆ. ಹಾಗಾಗಿ, ಆಪಲ್ ಭಾರತದಲ್ಲಿ ತನ್ನ ಪ್ರೀಮಿಯಂ ನೆಸ್ ಅನ್ನು ದ್ವಿಗುಣಗೊಳಿಸುತ್ತಿದೆ ಎಂದು ತೋರುತ್ತಿದೆ. ಏಕೆಂದರೆ, ಆಪಲ್ ಡಿವೈಸ್‌ಗಳು ಉತ್ತಮ ಜನರಿಗೆ (ಹಣ ಉಳ್ಳವರು ಎಂಬರ್ಥದಲ್ಲಿ) ಮಾತ್ರ ಮಾರಾಟವಾಗುತ್ತಿದೆ ಎಂದು ಕೆಲ ವರದಿಗಳು ಅಭಿಪ್ರಾಯಪಟ್ಟಿವೆ ಎಂದು ಮಾರುಕಟ್ಟೆ ತಜ್ಞರು ತಿಳಿಸಿದ್ದಾರೆ.

Best Mobiles in India

English summary
Can local manufacturing make Apple iPhone XR, XS cheaper in India?. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X