Apple WWDC 2021:ಈ ಭಾರಿ ಐಮೆಸೇಜ್‌ ಸ್ವರೂಪ ಬದಲಾಗುವುದು ಪಕ್ಕಾ?

|

ಆಪಲ್‌ ಸಸ್ಥೆಯ WWDC 2021 ಪ್ರಾರಂಭವಾಗೋದಕ್ಕೆ ಉಳಿದಿರೋದು ಕೇವಲ ಮೂರೇ ದಿನ. ನಿಮಗೆಲ್ಲಾ ತಿಳಿದಿರುವ ಹಾಗೇ ಇದೇ ಜೂನ್‌ 7 ರಂದು WWDC 2021 ಪ್ರಾರಂಭವಾಗಲಿದೆ. ಕೊರೊನಾ ಎರಡನೇ ಅಲೆ ಕಾರಣದಿಂದಾಗಿ ಈ ಬಾರಿಯು ವರ್ಚವಲ್‌ ಸಮ್ಮೇಳನ ನಡೆಯಲಿದೆ. ಇನ್ನು ಈ ಸಮ್ಮೇಳನದ ದಿನ ಹತ್ತರ ಬರುತ್ತಿದ್ದಂತೆ ಸಾಕಷ್ಟು ನಿರೀಕ್ಷೆಗಳು ಗರಿಗೆದರಿವೆ. ಅದರಲ್ಲೂ ಐಒಎಸ್, ಮ್ಯಾಕೋಸ್, ಐಪ್ಯಾಡೋಸ್ ಮತ್ತು ವಾಚ್‌ಒಎಸ್‌ಗೆ ಆವೃತ್ತಿ ಅಪ್ಡೇಟ್‌ ಬಗ್ಗೆ ಸಾಕಷ್ಟು ನಿರೀಕ್ಷೆ ಇದೆ. ಅಲ್ಲದೆ ಈ ಭಾರಿ ಐಮೆಸೇಜ್‌ನಲ್ಲಿ ಆಪಲ್ ಸ್ವತಃ ಸಾಕಷ್ಟು ಹೊಸ ಸಂಗತಿಗಳನ್ನು ಪರಿಚಯಿಸುವುದಾಗಿ ಹೇಳಿಕೊಂಡಿದೆ.

 ಆಪಲ್‌ WWDC 2021

ಹೌದು, ಆಪಲ್‌ WWDC 2021 ಪ್ರಾರಂಭಕ್ಕೆ ಕೆಲ ದಿನವಷ್ಟೆ ಬಾಕಿ ಇದೆ. ಈಗಾಗಲೇ ಈ ಸಮ್ಮೇಳನದಲ್ಲಿ ಏನೆಲ್ಲಾ ಘೋಷಣೆ ಆಗಬಹುದು ಎನ್ನುವುದರ ಕಡೆಗೆ ಆಪಲ್‌ ಪ್ರಿಯರು ಗಮನ ಹರಿಸಿದ್ದಾರೆ. ಸದ್ಯ ಇದೀಗ ಆಪಲ್‌ ಫೋನ್‌ ಪ್ರಿಯರಿಗೆ ಸಂಸ್ಥೆ ಸಿಹಿ ಸುದ್ದಿ ನೀಡಿದ್ದು, ಐಮೆಸೇಜ್‌ನಲ್ಲಿ ಬಿಗ್‌ ಅಪ್ಡೇಟ್‌ ತರುವುದಾಗಿ ಹೇಳಿದೆ. ಹಾಗಾದ್ರೆ ಈ ಸಮ್ಮೇಳನದಲ್ಲಿ ಐಮೆಸೇಜ್‌ನಲ್ಲಿ ಏನೆಲ್ಲಾ ಬದಲಾವಣೆ ನಿರೀಕ್ಷಿಸಬಹುದು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಆಪಲ್ ಐಮೆಸೇಜ್‌ನಲ್ಲಿ ಮೇಜರ್‌ ಅಪ್ಡೇಟ್‌

ಆಪಲ್ ಐಮೆಸೇಜ್‌ನಲ್ಲಿ ಮೇಜರ್‌ ಅಪ್ಡೇಟ್‌

ಆಪಲ್‌ ಸಂಸ್ಥೆಯ WWDC 2021 ನೋಂದಣಿ ಪುಟದಲ್ಲಿ ಟೀಸರ್ ಒಂದನ್ನು ಬಿಡುಗಡೆ ಮಾಡಲಾಗಿದೆ. ಈ ಟೀಸರ್‌ನಲ್ಲಿ ಐಒಎಸ್‌ನಲ್ಲಿ ಹಿಂದೆ ಕಾಣದ ಹೊಸ ಬೆಳಕಿನ ಎಫೆಕ್ಟ್‌ಗಳೊಂದಿಗೆ ಸಾಕಷ್ಟು ಸುಧಾರಿತ ಅನಿಮೋಜಿಗಳನ್ನು ತೋರಿಸುತ್ತದೆ. ಇದು ಹೊಸದಾಗಿ ಅಪ್ಡೇಟ್‌ ಮಾಡಿದ ಅನಿಮೋಜಿ ವಿನ್ಯಾಸಗಳು ಮತ್ತು ಬಹುಶಃ ಹೆಚ್ಚು ವಿಶೇಷ ಎಫೆಕ್ಟ್‌ ಹೊಂದಿರುವ ಅನಿಮೋಜಿಗಳು ಎಂದು ಭಾವಿಸಲಾಗಿದೆ.

ವೀಡಿಯೊ

ಇನ್ನು ಆಪಲ್‌ನ ಟ್ವಿಟರ್ ಪುಟದಲ್ಲಿ, ವೀಡಿಯೊ ಟೀಸರ್ ಅನ್ನು ಶೇರ್‌ ಮಾಡಲಾಗಿದೆ. ಇದರಲ್ಲಿ ತೇಲುವಂತಹ ದೊಡ್ಡ "ಹೃದಯ" ವನ್ನು ತೋರಿಸಲಾಗಿದೆ. ಇದರ ಸುತ್ತಮುತ್ತಲಿನ ಅನಿಮೋಜಿಗಳನ್ನು ನೀಡಲಾಗಿದೆ. ಇದು ಐಮೆಸೇಜ್ ನಲ್ಲಿ ಬದಲಾಗಬಹುದಾದ ಮೇಜರ್‌ ಅಪ್ಡೇಟ್‌ ಎಂದು ಹೇಳಲಾಗ್ತಿದೆ. ಇವುಗಳನ್ನು ವಾಟ್ಸಾಪ್ ಮತ್ತು ಇನ್‌ಸ್ಟಾಗ್ರಾಮ್‌ನಲ್ಲಿ ಶೇರ್‌ ಮಾಡಬಹುದು ಎಂದು ಊಹಿಸಲಾಗಿದೆ. ಹೊಸ ಹೊಸ ಅನಿಮೋಜಿಗಳು ಬಳಕೆದಾರರ ಗಮನ ಸೆಳೆಯುವುದು ಪಕ್ಕಾ ಎನ್ನಲಾಗಿದೆ.

iMessage

ಸದ್ಯ ಆಪಲ್ ಈ ವರ್ಷ ಐಮೆಸೇಜ್‌ಗೆ ದೊಡ್ಡ ನವೀಕರಣಗಳನ್ನು ಯೋಜಿಸಿದೆ. ಹೆಚ್ಚಿನ ಮೆಸೇಜಿಂಗ್ ಅಪ್ಲಿಕೇಶನ್‌ಗಳು ಈಗ ಜನಪ್ರಿಯ ಕಥೆಗಳ ಸ್ವರೂಪವನ್ನು ಅಳವಡಿಸಿ ಕೊಂಡಿರುವುದರಿಂದ, ಆಪಲ್ ಅದೇ ಮಾದರಿಯನ್ನು ಅನುಸರಿಸಲು ಮುಂದಾಗಿದೆ. iMessage ನಿಮ್ಮ ಸಂಪರ್ಕಗಳನ್ನು ಒಟ್ಟುಗೂಡಿಸಬಹುದು ಮತ್ತು ಕಥೆಗಳನ್ನು ಪೋಸ್ಟ್ ಮಾಡಲು ಅರ್ಥಗರ್ಭಿತ ಹೊಸ ಮಾರ್ಗಗಳನ್ನು ನೀಡಬಹುದು. ಇದಕ್ಕಾಗಿ ಅಪ್ಲಿಕೇಶನ್ ಸಾಮಾನ್ಯ SMS ಅಪ್ಲಿಕೇಶನ್‌ನಿಂದ ಪ್ರತ್ಯೇಕವಾಗಬಹುದು. ಈ ಎಲ್ಲಾ ಐಮೆಸೇಜ್ ನವೀಕರಣಗಳನ್ನು ಐಒಎಸ್ 15 ನೊಂದಿಗೆ ಜೋಡಿಸಬಹುದು, ಇದು ಹೆಚ್ಚಿನ ಗ್ರಾಹಕೀಕರಣ ಆಯ್ಕೆಗಳನ್ನು ಮತ್ತು ಸುಧಾರಿತ ಗೌಪ್ಯತೆಯನ್ನು ನೀಡುತ್ತದೆ ಎಂದು ನಿರೀಕ್ಷಿಸಲಾಗಿದೆ.

Best Mobiles in India

Read more about:
English summary
The WWDC 21 livestream link has gone online and the teaser image hints a lot at new iMessage features. Have a look at what all those can mean.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X