ಕೋವಿಡ್ -19 ವಿರುದ್ದದ ಹೋರಾಟದಲ್ಲಿ ಕಲಾವಿದರ ಬೆನ್ನಿಗೆ ನಿಂತ ಆಪಲ್‌ ಮ್ಯೂಸಿಕ್‌!

|

ಪ್ರಸ್ತುತ ಇಡೀ ಜಗತ್ತು ಕೊರೊನಾ ವೈರಸ್‌ ಬೀತಿಯಿಂದ ತಲ್ಲಣಿಸುತ್ತಿದೆ. ಮಾನವ ಕುಲಕ್ಕೆ ಮಾರಕವಾಗಿರುವ ಕೋವಿಡ್‌-19 ನಿಂದ ಲಕ್ಷಾಂತರ ಮಂದಿ ಈಗಾಗಲೇ ತಮ್ಮ ಜೀವವನ್ನ ಚೆಲ್ಲಿದ್ದಾರೆ. ಚೀನಾದಲ್ಲಿ ಹುಟ್ಟಿ ಇಂದು ಇಡೀ ಜಗತ್ತನ್ನೇ ಕಾಡುತ್ತಿರುವ ಕೊರೊನಾ ವೈರಸ್‌ನಿಂದ ಬಚಾವ್‌ ಆಗಲು ಎಲ್ಲಾ ರಾಷ್ಟ್ರಗಳು ಹವಣಿಸುತ್ತಿವೆ. ಅಷ್ಟೇ ಅಲ್ಲ ಏಕಾಏಕಿ ಬಂದು ವಕ್ಕರಿಸಿದ ಈ ಕೊರೊನಾ ವೈರಸ್‌ನಿಂದ ಎಲ್ಲಾ ವಲಯಗಳು ಕೂಡ ನಷ್ಟವನ್ನ ಅನುಭವಿಸುತ್ತಿವೆ. ಆದರೂ ಜಗತ್ತಿನ ಪ್ರಮುಖ ಕಂಪೆನಿಗಳು ತಮ್ಮ ಸಹಾಯ ಹಸ್ತವನ್ನು ಚಾಚುತ್ತಿವೆ.

ಜಾಗತಿಕವಾಗಿ

ಹೌದು, ಜಾಗತಿಕವಾಗಿ ಹರಡುತ್ತಿರುವ ಕೊರೊನಾ ವೈರಸ್‌ ವಿರುದ್ದ ಇಡೀ ವಿಶ್ವವೇ ಸಮರ ಸಾರಿದೆ. ಕೋವಿಡ್‌-19 ನಿಂದ ಪಾರಾಗಲು ಎಲ್ಲಾ ರಾಷ್ಟ್ರಗಳು ತಮ್ಮದೇ ಆದ ಕಾರ್ಯಸೂಚಿಯನ್ನ ಪಾಲಿಸುತ್ತಿವೆ. ಇದುವರೆಗೂ ಲಸಿಕೆಯನ್ನ ಕಂಡು ಹಿಡಿಯಲು ಆಗಿಲ್ಲ. ಆದರೂ ಜಗತ್ತಿನ ಪ್ರಮುಖ ರಾಷ್ಟ್ರಗಳು ಕೊರೊನಾ ವಿರುದ್ದ ಹೋರಾಡುತ್ತಲೇ ಇವೆ. ಇನ್ನು ಈ ಮಾರಕ ವೈರಸ್‌ ವಿರುದ್ದ ಹೊರಾಡಲು ಸಾಕಷ್ಟು ದನ ಸಹಾಯದ ಅಗತ್ಯವಿದೆ. ಇದಕ್ಕಾಗಿ ಈಗಾಗಲೇ ಹಲವು ಕಂಪೆನಿಗಳು, ಪ್ರನಮುಖ ವಲಯಗಳು, ಎಲ್ಲಾ ಸಂಘ ಸಂಸ್ಥೆಗಳು ದಾರಾಳ ಸಹಾಯವನ್ನ ಮಾಡಿವೆ. ಇದೀಗ ವಿಶ್ವದ ಪ್ರಮುಖ ಟೆಕ್‌ ದಿಗ್ಗಜ ಆಪಲ್‌ ಕಂಪೆನಿ ತನ್ನ ಸಹಾಯ ಹಸ್ತವನ್ನ ಚಾಚಿದೆ.

ಕೋವಿಡ್

ಇದೀಗ ಕೋವಿಡ್ -19 ಬೀತಿಯಿಂದ ಜಗತ್ತಿನ ಎಲ್ಲ ಕೈಗಾರಿಕೆಗಳ ಕಾರ್ಯಾಚರಣೆಯ ಮೇಲೆ ಪರಿಣಾಮ ಬೀರಿದೆ. ಧ್ವನಿಮುದ್ರಣಗಳು, ಸಂಗೀತ ಕಚೇರಿಗಳು ಮತ್ತು ಟೂರಿಸಂ ವಲಯವೂ ಕೂಡ ತನ್ನ ಬಹುಪಾಲು ಆದಾಯವನ್ನ ಕಳೆದುಕೊಮಡಿದೆ. ಸದ್ಯ ಇದೇ ಹಾದಿಯಲ್ಲಿ ಮ್ಯೂಸಿಕ್‌ ಉದ್ಯಮ ಕೂಡ ಸಂಕಷ್ಟವನ್ನ ಅನುಭವಿಸುತ್ತಿದೆ. ಇದಕ್ಕೆ ಆಪಲ್‌ ಮ್ಯೂಸಿಕ್‌ ಸಂಸ್ಥೆ ಕೂಡ ಹೊರತಾಗಿಲ್ಲ. ಇದೇ ಕಾರಣಕ್ಕೆ ಈಗಾಗಲೇ ಆಪಲ್ ಮ್ಯೂಸಿಕ್ ತನ್ನ ರೆಕಾರ್ಡ್ ಲೇಬಲ್‌ಗಳು ಮತ್ತು ಕಲಾವಿದರು ಈ ಸಾಂಕ್ರಾಮಿಕ ರೋಗವನ್ನು ಎದುರಿಸಲು ಸಹಾಯ ಮಾಡಲು ಆಪಲ್‌ ಕಂಪೆನಿ ಮುಂದಾಗಿದೆ.

ಆಪಲ್‌

ಆಪಲ್‌ ಕಂಪನಿಯು ತನ್ನ ಸ್ವತಂತ್ರ ರೆಕಾರ್ಡ್ ಲೇಬಲ್‌ಗಳಿಗೆ ಇಮೇಲ್ ಮೂಲಕ ಪ್ರಕಟಣೆ ನೀಡಿದ್ದು, ಕಲಾವಿದರ ಆರೋಗ್ಯ ರಕ್ಷಣೆಗಾಗಿ 50 ಮಿಲಿಯನ್ ಡಾಲರ್‌ ಹಣವನ್ನು ಸಹಾಯ ದನವನ್ನಾಗಿ ನೀಡಿದೆ. ಈ ಕುರಿತು ತನ್ನ ಕಲಾವಿದರಿಗೆ ಸಂಸ್ಥೆಯು ಇಮೇಲ್‌ ಕಳುಹಿಸಿದ್ದು, ಇದರಲ್ಲಿ ಹಣವನ್ನು ಪಡೆಯುವ ನಿಯಮಗಳು ಮತ್ತು ಷರತ್ತುಗಳನ್ನು ವಿವರಿಸಲಾಗಿದೆ. ಸದ್ಯ ಸಂಸ್ಥೆಯ ಕಲಾವಿದರಾದ ರೋಲಿಂಗ್ ಸ್ಟೋನ್ ಅವರಿಗೆ ಲಭ್ಯವಾಗಿರುವ ಪತ್ರದ ಪ್ರಕಾರ, ಕಲಾವಿದರಿಗೆ ಹಣ ಪಾವತಿಸಲು ಮತ್ತು ಕಾರ್ಯಾಚರಣೆಗಳನ್ನು ನಿರ್ವಹಿಸಲು ಕಂಪನಿಯು ಭವಿಷ್ಯದ ಲೇಬಲ್‌ಗಳಿಗೆ ಸ್ವತಂತ್ರ ಲೇಬಲ್‌ಗಳಿಗೆ ಮುಂಗಡ ಹಣವನ್ನು ಪಾವತಿಸುತ್ತದೆ.

ಮ್ಯೂಸಿಕ್‌

ಸದ್ಯ ಜಾಗತಿಕವಾಗಿ ಮ್ಯೂಸಿಕ್‌ ಇಂಡಸ್ಟ್ರಿ ಕಷ್ಟದ ಸಮಯವನ್ನ ಎದುರಿಸುತ್ತಿದೆ. ಅಲ್ಲದೆ ಮ್ಯೂಸಿಕ್‌ ವಲಯವನ್ನೇ ಅವಲಂಬಿಸಿರುವ ಕಲಾವಿದರು ನಷ್ಟದಲ್ಲಿದ್ದಾರೆ ಇದಕ್ಕಾಗಿ ಆಪಲ್‌ ಸಂಸ್ಥೆ ಸಹಾಯ ಮಾಡಲು ಮುಂದಾಗಿದೆ. ವಿಶ್ವದ ಅತ್ಯುತ್ತಮ ಲೇಬಲ್‌ಗಳು ಮತ್ತು ಕಲಾವಿದರೊಂದಿಗೆ ನಿಕಟ ಸಹಭಾಗಿತ್ವದಲ್ಲಿರುವುದಕ್ಕೆ ನಮ್ಮ ಸಂಸ್ಥೆ ಹೆಮ್ಮೆ ಪಡುತ್ತದೆ. ಇದಕ್ಕಾಗಿ ನಾವು ಸಹಾಯ ಮಾಡಲು ಬಯಸುತ್ತೇವೆ, "ಎಂದು ಕಂಪನಿ ಹೇಳಿದೆ. ಇನ್ನು ಈಗಾಗಲೇ ಮ್ಯೂಸಿಕ್‌ ವಿಚಾರದಲ್ಲಿ ಆಪಲ್ ಮ್ಯೂಸಿಕ್‌ನೊಂದಿಗೆ ನೇರ ಒಪ್ಪಂದವನ್ನು ಹೊಂದಿರುವ ಮತ್ತು ತಮ್ಮ ತ್ರೈಮಾಸಿಕ ಆಪಲ್ ಮ್ಯೂಸಿಕ್ ಗಳಿಕೆಯಲ್ಲಿ ಕನಿಷ್ಠ $ 10,000 ಗಳಿಸುವ ಸ್ವತಂತ್ರ ಲೇಬಲ್‌ಗಳಿಗೆ ಮುಂಗಡ ರಾಯಧನವನ್ನು ನೀಡಲಾಗುವುದು. ಇದಲ್ಲದೆ, ಪ್ರತಿ ಮುಂಗಡವು ಲೇಬಲ್‌ನ ಹಿಂದಿನ ಗಳಿಕೆಯನ್ನು ಆಧರಿಸಿರುತ್ತದೆ ಎಂದು ಕಂಪನಿ ಹೇಳಿದೆ.

Best Mobiles in India

English summary
According to the letter, the advance royalties will be given to independent labels that have a direct deal with Apple Music and who earn at least $10,000 in their quarterly Apple Music earnings.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X