Home
ಸುದ್ದಿಜಾಲ

ಆಪಲ್ AI ವಿಭಾಗಕ್ಕೆ ನೂತನ ಉಪಾಧ್ಯಕ್ಷರಾಗಿ ಬೆಂಗಳೂರಿನ ಸಂಜಾತ ಆಯ್ಕೆ!

ಟೆಕ್ ದೈತ್ಯ ಆಪಲ್ ತನ್ನ ಕೃತಕ ಬುದ್ಧಿಮತ್ತೆ (AI) ವಿಭಾಗದ ಉಪಧ್ಯಕ್ಷರಾಗಿ ಭಾರತೀಯ ಮೂಲದ (ಬೆಂಗಳೂರಿನಲ್ಲಿ ಹುಟ್ಟಿ ಬೆಳೆದವರು) ಇಂಜಿನಿಯರ್ 'ಅಮರ್ ಸುಬ್ರಮಣ್ಯ' ಅವರನ್ನು ಹೊಸದಾಗಿ ನೇಮಕ ಮಾಡಿದೆ. ಆಪಲ್‌ನ ತನ್ನ AI ಪ್ರಯತ್ನಗಳಿಗೆ ಹೊಸ ದಿಕ್ಕು ನೀಡುವ ಸಲುವಾಗಿ, ತನ್ನ ಕೃತಕ ಬುದ್ಧಿಮತ್ತೆ (AI) ವಿಭಾಗದಲ್ಲಿ ದೊಡ್ಡ ಮಟ್ಟದ ಪುನರ್‌ರಚನೆ ನಡೆಸಿದೆ ಎಂದು ತಿಳಿದುಬಂದಿದ್ದು, AI ಕ್ಷೇತ್ರದಲ್ಲಿ ಹಲವು ವರ್ಷಗಳ ಅನುಭವ ಹೊಂದಿರುವ ಹಿರಿಯ ತಂತ್ರಜ್ಞರಾದ ಅಮರ್ ಸುಬ್ರಮಣ್ಯ ಅವರು ಹೊಸ ಉಪಧ್ಯಾಕ್ಷ ಸ್ಥಾನಕ್ಕೆ ಅರ್ಹವ್ಯಕ್ತಿಯಾಗಿ ಹೊರಹೊಮ್ಮಿದ್ದಾರೆ.

ಆಪಲ್‌ನ AI ತಂಡವನ್ನು ದೀರ್ಘಕಾಲ ಮುನ್ನಡೆಸಿದ ಜಾನ್ ಜಿಯಾನಂದ್ರಿಯಾ (John Giannandrea) ಅವರು ಮುಂದಿನ ವಸಂತದಲ್ಲಿ ನಿವೃತ್ತಿಯಾಗಲಿದ್ದು, ಅವರ ಸ್ಥಾನವನ್ನು ಅಮರ್ ಸುಬ್ರಮಣ್ಯ ಅವರು ತುಂಬಲಿದ್ದಾರೆ. ಹೊಸ ವ್ಯವಸ್ಥೆಯಲ್ಲಿ, ಅಮರ್ ಸುಬ್ರಮಣ್ಯ ಅವರು foundation models, ಯಂತ್ರ ಕಲಿಕೆ ಸಂಶೋಧನೆ ಮತ್ತು ಎಐ ಸುರಕ್ಷತಾ ತಂಡಗಳನ್ನು ನೇರವಾಗಿ ಮುನ್ನಡೆಸುತ್ತಾರೆ. ಅವರು ಕ್ರೇಗ್ ಫೆಡರಿಗಿಗೆ ವರದಿ ಮಾಡುವರು. ಉಳಿದ ಕಾರ್ಯಾಚರಣೆಗಳು ಈಗ Sabih Khan ಮತ್ತು Eddy Cue ಅವರ ಮೇಲ್ವಿಚಾರಣೆಗೆ ದೊರೆತಿವೆ ಎಂದು ತಿಳಿದುಬಂದಿದೆ

ಯಾರು ಈ ಅಮರ್ ಸುಬ್ರಮಣ್ಯ?
ಮೊದಲೇ ಹೇಳಿದಂತೆ, ಅಮರ್ ಸುಬ್ರಮಣ್ಯ ಅವರು AI ಕ್ಷೇತ್ರದಲ್ಲಿ ಹಲವು ವರ್ಷಗಳ ಅನುಭವ ಹೊಂದಿರುವ ಹಿರಿಯ ತಜ್ಞರು. ಈ ಮೊದಲು ಗೂಗಲ್ ಮತ್ತು ಮೈಕ್ರೋಸಾಫ್ಟ್‌ನಲ್ಲಿ ಅನುಭವ ಹೊಂದಿರುವ ಇವರು, ಗೂಗಲ್‌ನಲ್ಲಿ ಮೂಲ ಸಂಶೋಧನೆ ಮತ್ತು ಉತ್ಪನ್ನ-ಮಟ್ಟದ AI ವ್ಯವಸ್ಥೆಗಳ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಹಾಗೆಯೇ, ಮೈಕ್ರೋಸಾಫ್ಟ್‌ನಲ್ಲಿ ದೊಡ್ಡ ಮಾದರಿ ವ್ಯವಸ್ಥೆಗಳ ವಿನ್ಯಾಸ ಮತ್ತು ವಿಸ್ತರಣೆಯಲ್ಲಿ ಅವರು ಕೊಡುಗೆ ನೀಡಿದ್ದಾರೆ.

ಆಪಲ್ AI ವಿಭಾಗಕ್ಕೆ ನೂತನ ಉಪಾಧ್ಯಕ್ಷರಾಗಿ ಬೆಂಗಳೂರಿನ ಸಂಜಾತ ಆಯ್ಕೆ!

ಇವರು ಬೆಂಗಳೂರಿನ ಸಂಜಾತ!
ಸುಬ್ರಹ್ಮಣ್ಯ ಅವರು ಬೆಂಗಳೂರಿನಲ್ಲಿ ಹುಟ್ಟಿ ಬೆಳೆದವರು.! ಇಲ್ಲಿ ಅವರು 2001 ರಲ್ಲಿ ಬೆಂಗಳೂರು ವಿಶ್ವವಿದ್ಯಾಲಯದಿಂದ ಎಲೆಕ್ಟ್ರಿಕಲ್, ಎಲೆಕ್ಟ್ರಾನಿಕ್ಸ್ ಮತ್ತು ಸಂವಹನದಲ್ಲಿ ತಮ್ಮ ಪದವಿ ಎಂಜಿನಿಯರಿಂಗ್ ಅನ್ನು ಪೂರ್ಣಗೊಳಿಸಿದ್ದಾರೆ. ನಂತರ ಅವರು ಯುನೈಟೆಡ್ ಸ್ಟೇಟ್ಸ್‌ಗೆ ತೆರಳಿ , 2009 ರಲ್ಲಿ ಸಿಯಾಟಲ್‌ನ ವಾಷಿಂಗ್ಟನ್ ವಿಶ್ವವಿದ್ಯಾಲಯದಲ್ಲಿ ಪಿಎಚ್‌ಡಿ ಪದವಿ ಪಡೆದಿದ್ದಾರೆ.

ಮಾಧ್ಯಮಗಳು ಇವರನ್ನು "ಭಾರತೀಯ ಮೂಲದವರು" ಎಂದು ಉಲ್ಲೇಖಿಸುತ್ತಿದ್ದರೂ, ಅವರು ಅವರ ಪ್ರಸ್ತುತ ಕಾನೂನುಬದ್ಧ ರಾಷ್ಟ್ರೀಯತೆಯನ್ನು ಸ್ಪಷ್ಟವಾಗಿ ಹೇಳುವುದಿಲ್ಲ (ಅವರು ಭಾರತೀಯ ಪೌರತ್ವವನ್ನು ಉಳಿಸಿಕೊಂಡಿದ್ದಾರೆಯೇ, ಯುಎಸ್ ಪೌರತ್ವವನ್ನು ಹೊಂದಿದ್ದಾರೆಯೇ ಎಂಬ ಬಗ್ಗೆ ಮಾಹಿತಿ ಇಲ್ಲ). ಆದರೆ, ಪ್ರಸ್ತುತ ಭಾರತೀಯ ಮೂಲದವರು ಎಂದು ಹೇಳಲಾಗುತ್ತಿದೆ.

ಆಪಲ್‌ನ AI ಭವಿಷ್ಯಕ್ಕಾಗಿ ಅಮರ್ ಸುಬ್ರಮಣ್ಯ?
ಕೃತಕ ಬುದ್ಧಿಮತ್ತೆ ವಿಭಾಗದಲ್ಲಿ ಪ್ರತಿಸ್ಪರ್ಧಿಗಳು ಕ್ಲೌಡ್-ಮೂಲಕ ದೊಡ್ಡ ಮಾದರಿಗಳತ್ತ ಸಾಗುತ್ತಿದ್ದರೂ, ಆಪಲ್ ತನ್ನ on-device AI ತತ್ವವನ್ನು ಮುಂದುವರಿಸುತ್ತಿದೆ. ಈ ವಿಧಾನವು ಗೌಪ್ಯತೆ ಮತ್ತು ವೇಗದ ಪ್ರಯೋಜನ ನೀಡುವುದರ ಜೊತೆಗೆ ತಾಂತ್ರಿಕವಾಗಿ ಹೆಚ್ಚು ಸಂಕೀರ್ಣವಾಗಿದೆ.ಕಂಪನಿ ಈಗ Apple Intelligence ವೈಶಿಷ್ಟ್ಯಗಳನ್ನು ಹೆಚ್ಚಿನ ಸಾಧನಗಳಿಗೆ ವಿಸ್ತರಿಸುತ್ತಿದ್ದು, Siri ಯ ಹೊಸ ತಲೆಮಾರನ್ನು ಅಭಿವೃದ್ಧಿಪಡಿಸುವ ಕಾರ್ಯ ಗಟ್ಟಿಯಾಗಿ ನಡೆಯುತ್ತಿದೆ.

Siri 2026ಕ್ಕೆ ಮುಂದೂಡಲ್ಪಟ್ಟಿರುವುದರಿಂದ, ಆಪಲ್ ಎಐ ಕ್ಷೇತ್ರದಲ್ಲಿ ಹಿಂದೆಬಿದ್ದಿದೆಯೇ ಎಂಬ ಪ್ರಶ್ನೆಗಳು ಏರಿದ್ದವು. ಹೊಸ ನಾಯಕತ್ವ ಅದರ ಉತ್ತರವನ್ನು ನೀಡಲು ಪ್ರಯತ್ನಿಸುತ್ತಿರಬಹುದು. ಇದಕ್ಕೆ ಅಮರ್ ಸುಬ್ರಮಣ್ಯ ಆಯ್ಕೆ ಸೂಕ್ತ ಎಂದು ಆಪಲ್ ನಿರ್ಧರಿಸಿದಂತಿದೆ. ತಜ್ಞರ ಅಭಿಪ್ರಾಯದಲ್ಲಿ, ಸುಬ್ರಮಣ್ಯರ ನೇಮಕವು ಆಪಲ್‌ಗೆ ಮುಂದಿನ ಹಂತದ AI ತಂತ್ರಜ್ಞಾನ ನಿರ್ಮಾಣದಲ್ಲಿ ನಿರ್ಣಾಯಕವಾಗಲಿದೆ. iPhone, iPad ಮತ್ತು Mac ಸಾಧನಗಳಲ್ಲಿ ಹೆಚ್ಚು AI ಇಂಟಿಗ್ರೇಟ್ ಆಗುತ್ತಿದ್ದು, ಈ ಪರಿವರ್ತನೆಗೆ ಬೇಕಾದ ತಂತ್ರಜ್ಞಾನವನ್ನು ಮುನ್ನಡೆಸುವ ಜವಾಬ್ದಾರಿ ಈಗ ಅವರ ಮೇಲಿದೆ. ಶುಭ ಹಾರೈಸೋಣ.!

ಆಧಾರ: Apple

Best Mobiles in India

English summary
Apple has reportedly carried out a major restructuring of its artificial intelligence (AI) division to give a new direction to its AI efforts, with Amar Subramanya, a senior technologist with many years of experience in the AI ​​field, emerging as the right person for the new vice president position.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+