ನ್ಯೂ ಐಪ್ಯಾಡ್ ಮಾರ್ಚ್ 16 ರಂದು ಭಾರತಕ್ಕೆ ಯಾಕೆ ಬರುವುದಿಲ್ಲ

By Varun
|
ನ್ಯೂ ಐಪ್ಯಾಡ್ ಮಾರ್ಚ್ 16 ರಂದು ಭಾರತಕ್ಕೆ ಯಾಕೆ ಬರುವುದಿಲ್ಲ

ಭಾರತೀಯ ಬಳಕೆದಾರರು ಆಪಲ್ ನ ನ್ಯೂ ಐಪ್ಯಾಡ್ ಟ್ಯಾಬ್ಲೆಟ್ ಅನ್ನು ಖರೀದಿ ಮಾಡಲು ಜೂನ್ ತಿಂಗಳ ವರೆಗೂ ಕಾಯಬೇಕಾಗಬಹುದು.

ಯಾಕೆಂದರೆ ಆಪಲ್ ನ ಹೊಸ ಐಪ್ಯಾಡ್ 4ನೇ ತಲೆಮಾರಿನ ಸಾಧನವಾಗಿದ್ದು (4G ತಂತ್ರಜ್ಞಾನ) ಸದ್ಯಕ್ಕೆ ಭಾರತದ ಯಾವ ಟೆಲಿಕಾಂ ಕಂಪನಿಯೂ ಈ ಸೌಲಭ್ಯ ಹೊಂದಿಲ್ಲ. ಈ ತಂತ್ರಜ್ಞಾನ ಮೇ ನಲ್ಲಿ ಮಧ್ಯ ಪ್ರದೇಶ ದಲ್ಲಿ ಶುರುವಾಗಲಿದ್ದು, ಅಖಂಡ ಭಾರತದ ಪರವಾನಗಿ ತೆಗೆದುಕೊಂಡಿರುವಏರ್ಟೆಲ್, ಏರ್ಸೆಲ್, ಕ್ವಾಲ್ಕಾಮ್, ಟಿಕೋನ ಮತ್ತು ಆಗೆರ್ ಕಂಪನಿಗಳು ಪರವಾನಗಿ ಹೊಂದಿದ್ದರೂ ವರ್ಷದ ಕೊನೆಗೆ 4G ಸೌಲಭ್ಯ ಶುರು ಮಾಡಬಹುದು. ಕಾರಣ, ಅವುಗಳ್ಯಾವೂ ಈ ತಂತ್ರಜ್ಞಾನವನ್ನು ಒದಗಿಸುವ ನೆಟ್ವರ್ಕ್ ಅನ್ನೇ ಹೊಂದಿಲ್ಲ.

ಹೀಗಾಗಿಯೇ ಆಪಲ್ ಈ ಟ್ಯಾಬ್ಲೆಟ್ ನ ಬಿಡುಗಡೆಯನ್ನು ಸದ್ಯಕ್ಕೆ ಭಾರತದಲ್ಲಿ ಬಿಡುಗಡೆ ಮಾಡಿಲ್ಲ. ಇನ್ನು ಕೆಲವೇ ತಿಂಗಳಲ್ಲಿ ಇಲ್ಲಿ ಲಭ್ಯವಿದ್ದರೂ ಕೂಡ ವೈ-ಫೈ ನ ಮಾಡಲ್ ತೆಗೆದುಕೊಳ್ಳಬೇಕು, ಇಲ್ಲವೆ 4G ತೆಗೆದುಕೊಂಡರೂ ಕೂಡ 3G ಸೌಲಭ್ಯವನ್ನೇ ಉಪಯೋಗಿಸಬೇಕು.

ಮಾರುಕಟ್ಟೆಗೆ ಬಂದ ಆಪಲ್ ಮನೆಗೆ ಬರಲ್ಲಿಲ್ಲ ಎನ್ನುವುದು ಈ ಸಂದರ್ಭದಲ್ಲಿಸೂಕ್ತವಾದೀತು

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X