ಬಹು ನಿರೀಕ್ಷಿತ ಆಪಲ್ ಒನ್ ಪ್ಲ್ಯಾನ್ ಪ್ರಾರಂಭ!.ತಿಂಗಳಿಗೆ 195 ರೂ ಮಾತ್ರ!
ಆಪಲ್ ತನ್ನ ಬಹುನಿರೀಕ್ಷಿತ ಆಪಲ್ ಒನ್ ಬಂಡಲ್ ಸೇವೆಯನ್ನು ಭಾರತದಲ್ಲಿ ಪ್ರಾರಂಭಿಸಿದೆ. ಆಪಲ್‌ನ ಚಂದಾದಾರಿಕೆ ಬಂಡಲ್ ಸೇವೆಯಲ್ಲಿ ಆಪಲ್ ಮ್ಯೂಸಿಕ್, ಆಪಲ್ ಟಿವಿ +, ಆಪಲ್ ಆರ್ಕೇಡ್ ಮತ್ತು ಐಕ್ಲೌಡ್ ಸ್ಟೋರೆಜ್ ಅನ್ನು ಒಳಗೊಂಡಿದೆ. ನೀವು ಆಪಲ್ ಒನ್ ಅನ್ನು ಆರಿಸಿದರೆ ಈ ಸೇವೆಗಳಿಗೆ ನೀವು ಪ್ರತ್ಯೇಕವಾಗಿ ಚಂದಾದಾರಿಕೆಗಳನ್ನು ಪಡೆಯುವ ಅವಶ್ಯಕತೆ ಇರುವುದಿಲ್ಲ. ಇನ್ನು ಭಾರತದಲ್ಲಿ ಆಪಲ್ ಒನ್ ಚಂದಾದಾರಿಕೆಯನ್ನು ತಿಂಗಳಿಗೆ 195 ರೂ. ಮತ್ತು ಯುಎಸ್‌ನಲ್ಲಿ ಒಬ್ಬ ವ್ಯಕ್ತಿಗೆ $ 15 ದರ ನಿಗದಿಪಡಿಸಲಾಗಿದೆ.

ಹೌದು, ಆಪಲ್ ತನ್ನ ಆಪಲ್ ಒನ್ ಬಂಡಲ್ ಸೇವೆಯನ್ನು ಭಾರತದಲ್ಲಿ ಪರಿಚಯಿಸಿದೆ. ಈ ಮೂಲಕ ತನ್ನ ಗ್ರಾಹಕರಿಗೆ ಭರ್ಜರಿ ಪ್ಲ್ಯಾನ್ ಅನ್ನೇ ಪರಿಚಯಿಸಿದೆ. ಸದ್ಯ ಆಪಲ್ ಒನ್ ಸೇವೆಯಲ್ಲಿ ಹಲವು ಮಾದರಿಯ ಪ್ಲ್ಯಾನ್‌ಗಳನ್ನ ನೀಡಿದ್ದು, ಬಳಕೆದಾರರಿಗೆ ಒಂದೇ ಪ್ಲ್ಯಾನ್‌ನಲ್ಲಿ ಹಲವು ಸೇವೆಗಳನ್ನು ಒದಗಿಸಲಿದೆ. ಇನ್ನು ಆಪಲ್ ಒನ್ ಪ್ಯಾಮಿಲಿ ಸಬ್‌ಸ್ಕ್ರೈಬ್ ಪ್ಲ್ಯಾನ್ ತಿಂಗಳಿಗೆ 365 ರೂ ಆಗಿದ್ದು, ನೀವು ಯಾವಾಗ ಬೇಕಾದರೂ ಈ ಪ್ಲ್ಯಾನ್ ಅನ್ನು ಸೈನ್ ಅಪ್ ಮಾಡಬಹುದಾಗಿದೆ. ಇನ್ನುಳಿದಂತೆ ಆಪಲ್ ಒನ್ ಪ್ಲ್ಯಾನ್ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಆಪಲ್ ಒನ್ ಪ್ಲ್ಯಾನ್ ಮೂಲಕ ಹಲವು ಸೇವೆಗಳನ್ನ ಪಡೆದುಕೊಳ್ಳಬಹುದಾಗಿದ್ದು, ಪರ್ಸನಲ್ ಪ್ಲ್ಯಾನ್‌ನಲ್ಲಿ, ಆಪಲ್ ಆಪಲ್ ಮ್ಯೂಸಿಕ್, ಆಪಲ್ ಟಿವಿ +, ಆಪಲ್ ಆರ್ಕೇಡ್ ಮತ್ತು 50GB ಐಕ್ಲೌಡ್ ಸ್ಟೋರೇಜ್‌ಗೆ ಚಂದಾದಾರಿಕೆಯನ್ನು ನೀಡುತ್ತದೆ. ಇನ್ನು ಫ್ಯಾಮಿಲಿ ಪ್ಲ್ಯಾನ್ ನಲ್ಲಿ 200GB ಐಕ್ಲೌಡ್ ಸಂಗ್ರಹಣೆಯನ್ನು ನೀಡುತ್ತದೆ ಮತ್ತು ಇತರ ಎಲ್ಲ ಪ್ರಯೋಜನಗಳು ಪರ್ಸನಲ್ ಪ್ಲ್ಯಾನ್‌ನಂತೆಯೇ ಇರುತ್ತವೆ. ಈ ಸೇವೆಗಳನ್ನು ಆರು ಕುಟುಂಬ ಸದಸ್ಯರೊಂದಿಗೆ ಹಂಚಿಕೊಳ್ಳಬಹುದಾಗಿದೆ.

ಇನ್ನು ಆಪಲ್ ಮ್ಯೂಸಿಕ್ ಮೂಲತಃ ವಿದ್ಯಾರ್ಥಿಗಳಿಗೆ ತಿಂಗಳಿಗೆ 49 ರೂ, ಸಾಮಾನ್ಯ ವ್ಯಕ್ತಿಗೆ ತಿಂಗಳಿಗೆ 99 ರೂ, ಮತ್ತು ಫ್ಯಾಮಿಲಿಗೆ ತಿಂಗಳಿಗೆ 149 ರೂ ಚಂದಾದರಿಕೆ ಬೆಲೆಯನ್ನು ಹೊಂದಿದೆ. ಇದಲ್ಲದೆ, ಆಪಲ್ ಟಿವಿ + ಮತ್ತು ಆಪಲ್ ಆರ್ಕೇಡ್ ತಿಂಗಳಿಗೆ 99 ರೂ., ಐಕ್ಲೌಡ್ 50GBಗೆ ತಿಂಗಳಿಗೆ 75 ರೂ, 200GBಗೆ ತಿಂಗಳಿಗೆ 219 ರೂ, ಮತ್ತು 2TBಗೆ ತಿಂಗಳಿಗೆ 749 ರೂ.ಬೆಲೆಯನ್ನು ನಿಗದಿಪಡಿಸಲಾಗಿದೆ. ಹಾಗೆಯೇ ಆಪಲ್ ನ್ಯೂಸ್ + ಮತ್ತು ಆಪಲ್ ಫಿಟ್‌ನೆಸ್ + ಯುಎಸ್‌ನಲ್ಲಿ ತಿಂಗಳಿಗೆ $ 10 ಬೆಲೆಯನ್ನು ಹೊಂದಿದೆ.

ಸದ್ಯ ಆಪಲ್ ಒನ್‌ಗೆ ಚಂದಾದಾರರಾಗುವ ಪ್ರಕ್ರಿಯೆಯು ಸುಲಭ ಮತ್ತು ಸರಳವಾಗಿದೆ. ಆಪಲ್ ಒನ್ ಚಂದಾದಾರಿಕೆಗಾಗಿ ಸೈನ್ ಅಪ್ ಮಾಡಲು, ನೀವು ಆಪಲ್ ಆಪ್ ಸ್ಟೋರ್‌ಗೆ ಹೋಗಿ ನಂತರ ಪ್ರೊಫೈಲ್ ಚಿತ್ರದ ಮೇಲೆ ಕ್ಲಿಕ್ ಮಾಡಬೇಕಾಗುತ್ತದೆ. ನಂತರ ಚಂದಾದಾರಿಕೆಗಳ ಮೇಲೆ ಕ್ಲಿಕ್ ಮಾಡಿ, ನಂತರ ‘Get the Apple One' ಅಡಿಯಲ್ಲಿ "Try it now" ಆಯ್ಕೆಯನ್ನು ಕ್ಲಿಕ್ ಮಾಡಿ. ಮೊದಲ ತಿಂಗಳು, ಸೇವೆಯನ್ನು ಬಳಸಲು ನೀವು ಪಾವತಿಸಬೇಕಾದ Free compliance ಮೂಲಕ ನೀವು ಆಪಲ್ ಒನ್ ಸೇವೆಗೆ ಪ್ರವೇಶವನ್ನು ಪಡೆಯಲು ಸಾಧ್ಯವಾಗಲಿದೆ.


Click it and Unblock the Notifications