ಸೆಪ್ಟೆಂಬರ್ 23 ರಿಂದ ಭಾರತದಲ್ಲಿ ಶುರುವಾಗಲಿದೆ ಆಪಲ್ ಸ್ಟೋರ್!

|

ಇಷ್ಟು ದಿನ ಆಪಲ್‌ ಸಂಸ್ಥೆಯ ಐಫೋನ್‌ ಅಥವಾ ಇನ್ನಾವುದೇ ಆಪಲ್ ಪ್ರಾಡಕ್ಟ್‌ಗಳನ್ನ ಖರೀದಿಸುವುದಕ್ಕೆ ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳಿಗೆ ಅಥವಾ ಹತ್ತಿರದ ಆಪಲ್ ಅಧಿಕೃತ ರಿಸ್ಟೋರ್‌ಗೆ ಹೋಗಬೇಕಿತ್ತು. ಆದರೆ ಸೆಪ್ಟೆಂಬರ್ 23 ರಿಂದ, ನೇರವಾಗಿ ಆಪಲ್‌ ಆನ್‌ಲೈನ್‌ ಸ್ಟೋರ್‌ನಲ್ಲಿಯೇ ಖರೀದಿಸಬಹುದಾಗಿದೆ. ಹೌದು, ಭಾರತದಲ್ಲಿ ಕಾರ್ಯಾಚರಣೆ ಆರಂಭಿಸಿ 20 ವರ್ಷಗಳ ನಂತರ, ಆಪಲ್ ತನ್ನ ಚಿಲ್ಲರೆ ಸೇವೆಯನ್ನು ಆಪಲ್ ಸ್ಟೋರ್ ಆನ್‌ಲೈನ್‌ನಲ್ಲಿ ಪ್ರಾರಂಭಿಸುತ್ತಿದೆ. ಜಾಗತಿಕ ಸ್ಟೋರ್‌ನಲ್ಲಿ ಲಭ್ಯವಾಗುವ ಎಲ್ಲಾ ಉತ್ಪನ್ನಗಳು ಮತ್ತು ಸೇವೆಗಳನ್ನು ಗ್ರಾಹಕರಿಗೆ ನೀಡುತ್ತದೆ.

ಆಪಲ್‌

ಹೌದು, ಆಪಲ್‌ ತನ್ನ ಅಧಿಕೃತ ಆಪಲ್‌ ಸ್ಟೋರ್‌ ಅನ್ನು ಭಾರತದಲ್ಲಿ ತೆರೆಯಲು ಮುಂದಾಗಿದೆ. ಇದೇ ಸೆಪ್ಟೆಂಬರ್‌ 23 ರಂದು ಆಪಲ್‌ ಆನ್‌ಲೈನ್‌ ಸ್ಟೋರ್‌ ಭಾರತದಲ್ಲಿ ಪ್ರಾರಂಭವಾಗಲಿದೆ. ಈ ಸ್ಟೋರ್‌ನಲ್ಲಿ ಆಪಲ್‌ನ ಎಲ್ಲಾ ಪ್ರಾಡಕ್ಟ್‌ಗಳು ಮತ್ತು ಸೇವೆಗಳನ್ನು ಒದಗಿಸಲಿದೆ. ಗ್ರಾಹಕರು ಈ ಸ್ಟೋರ್‌ನಲ್ಲಿ ಐಫೋನ್‌ಗಳು, ಐಪ್ಯಾಡ್‌ಗಳು, ಕೈಗಡಿಯಾರಗಳು, ಮ್ಯಾಕ್‌ಗಳು ಮತ್ತು ಆಪಲ್‌ನ ಇತರೆ ಪ್ರಾಡಕ್ಟ್‌ಗಳನ್ನು ಖರೀದಿಸಬಹುದು. ಇದಲ್ಲದೆ ಹೆಚ್ಚುವರಿಯಾಗಿ, ಆಪಲ್ ತನ್ನ ಆಪಲ್ ತಜ್ಞರ ಮೂಲಕ ಶಾಪಿಂಗ್ ಅನುಭವಕ್ಕೆ ಸಹಾಯ ಮಾಡಲಿದೆ ಎನ್ನಲಾಗಿದೆ. ಇನ್ನುಳಿದಂತೆ ಈ ಸ್ಟೋರ್‌ನ ವಿಶೇಷತೆ ಏನಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಆಪಲ್ ಕೇರ್ +

ಆಪಲ್ ತನ್ನ ಆಪಲ್ ಕೇರ್ + ಪ್ರೊಗ್ರಾಮ್‌ ಅನ್ನು ಭಾರತೀಯ ಗ್ರಾಹಕರಿಗಾಗಿ ತರುತ್ತದೆ. ಆಪಲ್‌ಕೇರ್ + ಆಪಲ್ ಡಿವೈಸ್‌ಗಳ ಮೇಲೆ 2 ವರ್ಷಗಳ ವಾರಂಟಿ ಮತ್ತು 2 ವರ್ಷಗಳ technical support and accidental damage cover ಅನ್ನು ನಿಡಲಿದೆ. ಅಲ್ಲದೆ ಕಮ್ಯೂನಿಕೇಷನ್‌ ಮೂಲಕ ಎಲ್ಲಾ ಸಮಸ್ಯೆಗಳನ್ನು ಪರಿಹರಿಸಲು ಈ ಸೇವೆಯು ಗ್ರಾಹಕರ ಬೆಂಬಲವನ್ನು ನೀಡುತ್ತದೆ. ಇದಲ್ಲದೆ, ಆಪಲ್ ಬೆಂಬಲವು ಆಪಲ್ ಐಡಿಯನ್ನು ಮತ್ತೆ ಪಡೆದುಕೊಳ್ಳುವುದಕ್ಕೆ ಅವಕಾಶವನ್ನು ನೀಡಿದೆ. ಅಲ್ಲದೆ ಡ್ಯಾಮೇಜ್‌ ಆಗಿರುವ ಪಾರ್ಟ್‌ ಅನ್ನು ಸರಿ ಪಡಿಸುವುದಕ್ಕೆ ಸಹಾಯವನ್ನು ಮಾಡಲಿದೆ.

ಆಪಲ್‌ ಕೇರ್‌ ಸ್ಟೋರ್

ಇನ್ನು ಈ ಆಪಲ್‌ ಕೇರ್‌ ಸ್ಟೋರ್‌ನಿಂದ ಸಾಮಾನ್ಯ ಮಾರಾಟ ಮತ್ತು ಸೇವೆಯ ಹೊರತಾಗಿ, ಆಪಲ್ ಆನ್‌ಲೈನ್ ಅಂಗಡಿಯೊಂದಿಗೆ ಅನುಕೂಲಕರ ಸ್ಟೂಡೆಂಟ್ಸ್‌ ಆಫರ್‌ಗಳನ್ನು ಪಡೆದುಕೊಳ್ಳಬಹುದಾಗಿದೆ. ಹಣಕಾಸು ಆಯ್ಕೆಗಳು ಮತ್ತು ಲಭ್ಯವಿರುವ ಟ್ರೇಡ್-ಇನ್ ಪ್ರೋಗ್ರಾಂನೊಂದಿಗೆ, ವಿದ್ಯಾರ್ಥಿಗಳು ವಿಶೇಷ ಬೆಲೆಯೊಂದಿಗೆ ಮ್ಯಾಕ್ ಅಥವಾ ಐಪ್ಯಾಡ್‌ಗಳನ್ನು ಶಾಪಿಂಗ್ ಮಾಡಬಹುದು. ಅಲ್ಲದೆ ಐಫೋನ್‌, ಐಪ್ಯಾಡ್‌ಗಳ ಬಿಡಿಭಾಗಗಳನ್ನ ಸ್ಟೂಡೇಟ್ಸ್‌ ಆಪರ್‌ ಮೂಲಕ ಆಪಲ್‌ಕೇರ್ + ನಲ್ಲಿ ರಿಯಾಯಿತಿಯನ್ನು ಪಡೆಯಬಹುದು.

ಐಪ್ಯಾಡ್

ಇದನ್ನು ಹೊರತುಪಡಿಸಿ, ಆಯ್ದ ಡಿವೈಸ್‌ಗಳಿಗೆ ಎಮೋಜಿ , engraving ಟೆಸ್ಟ್‌ ಅನ್ನು ಹೊಂದಿದೆ. ಗ್ರಾಹಕರು ಏರ್‌ಪಾಡ್‌ಗಳಲ್ಲಿ ಇಂಗ್ಲಿಷ್, ಬಂಗಾಳಿ, ಗುಜರಾತಿ, ಹಿಂದಿ, ಕನ್ನಡ, ಮರಾಠಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಪಠ್ಯವನ್ನು ಟೈಪ್‌ಮಾಡಬಹುದಾಗಿದೆ. ಜೊತೆಗೆ ಐಪ್ಯಾಡ್ ಮತ್ತು ಆಪಲ್ ಪೆನ್ಸಿಲ್‌ಗಾಗಿ ಇಂಗ್ಲಿಷ್ engraving ಲಭ್ಯವಿದೆ. ಇದಲ್ಲದೆ ಮ್ಯೂಸಿಕ್‌ ಮೇಲೆ ಕೇಂದ್ರೀಕರಿಸಿದ ಸ್ಥಳೀಯ ಸೃಜನಾತ್ಮಕ ಸಾಧಕರ ನೇತೃತ್ವದ ಆನ್‌ಲೈನ್ "ಟುಡೆ ಆಪಲ್" ಸೆಷನ್‌ಗಳನ್ನು ಗ್ರಾಹಕರು ನಿರೀಕ್ಷಿಸಬಹುದು ಎಂದು ಹೇಳಲಾಗಿದೆ. ಸದ್ಯ COVID-19 ಪರಿಸ್ಥಿತಿಯಿಂದಾಗಿ, ಆಪಲ್ ಸ್ಟೋರ್ ಆನ್‌ಲೈನ್ ಉತ್ಪನ್ನಗಳನ್ನ Contact-freeಯಾಗಿ ಮನೆ ಬಾಗಿಲಿಗೆ ತಲುಪಿಸುತ್ತದೆ ಎಂದು ಹೇಳಲಾಗ್ತಿದೆ.

Best Mobiles in India

English summary
Apple is finally bringing its retail service to India after 20 years of entering the market. The Apple Store online will go live from September 23 with all the services and benefits.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X