Home
ಸುದ್ದಿಜಾಲ

ಭಾರತದಲ್ಲಿ ಐಫೋನ್ ರಿಪೇರಿ ವ್ಯವಹಾರ ಟಾಟಾ ಗ್ರೂಪ್ ಪಾಲಿಗೆ?!

ಭಾರತದಲ್ಲಿ ಅತಿ ವೇಗವಾಗಿ ಬೆಳೆಯುತ್ತಿರುವ ಮಾರುಕಟ್ಟೆಯಲ್ಲಿ, ಐಫೋನ್‌ಗಳು ಮತ್ತು ಮ್ಯಾಕ್‌ಬುಕ್ ಸಾಧನಗಳ ರಿಪೇರಿಗಳನ್ನು ನಿರ್ವಹಿಸಲು ಆಪಲ್ ಸಂಸ್ಥೆಯು ಟಾಟಾ ಗ್ರೂಪ್‌ನೊಂದಿಗೆ ಕೈಜೋಡಿಸಿದೆ ಎನ್ನಲಾಗಿದೆ. ಚೀನಾದ ಹೊರತಾಗಿ ಉತ್ಪಾದನಾ ನೆಲೆಯನ್ನು ವಿಸ್ತರಿಸಲು ಆಪಲ್ ನೋಡುತ್ತಿರುವಾಗ, ಟಾಟಾ ಇಂಡಿಯಾ ಕ್ರಮೇಣ ಅದರ ಪ್ರಮುಖ ಪೂರೈಕೆದಾರರಲ್ಲಿ ಒಂದಾಗಿ ಹೊರಹೊಮ್ಮಿದೆ. ಈಗಾಗಲೇ ದಕ್ಷಿಣ ಭಾರತದಲ್ಲಿರುವ ತನ್ನ ಮೂರು ಸೌಲಭ್ಯಗಳಲ್ಲಿ ಐಫೋನ್‌ಗಳನ್ನು ಜೋಡಿಸುತ್ತಿದೆ. ಈ ಸೌಲಭ್ಯಗಳಲ್ಲಿ ಒಂದು ಐಫೋನ್‌ನ ಕೆಲವು ಘಟಕಗಳನ್ನೂ ಸಹ ತಯಾರಿಸುತ್ತಿದೆ. ಈ ನಡೆಯು ಅಮೆರಿಕದ ಟೆಕ್ ದೈತ್ಯದ ಪೂರೈಕೆ ಸರಪಳಿಯಲ್ಲಿ ಟಾಟಾದ ಪಾತ್ರ ಮತ್ತಷ್ಟು ಆಳವಾಗುವುದನ್ನು ಸೂಚಿಸುತ್ತದೆ ಎಂದು ಗ್ಯಾಜೆಟ್ 360 ವರದಿಯು ತಿಳಿಸಿವೆ.

ಈ ಹೊಸ ಪಾಲುದಾರಿಕೆಯ ಅಡಿಯಲ್ಲಿ, ಟಾಟಾ ತೈವಾನ್‌ನ ವಿಸ್ಟ್ರಾನ್‌ನ ಭಾರತೀಯ ಘಟಕವಾದ ಐಸಿಟಿ ಸರ್ವಿಸ್ ಮ್ಯಾನೇಜ್‌ಮೆಂಟ್ ಸೊಲ್ಯೂಷನ್ಸ್‌ನಿಂದ ರಿಪೇರಿ ಆದೇಶಗಳನ್ನು ತೆಗೆದುಕೊಳ್ಳಲಿದೆ. ಕರ್ನಾಟಕದಲ್ಲಿರುವ ತನ್ನ ಐಫೋನ್ ಅಸೆಂಬ್ಲಿ ಕ್ಯಾಂಪಸ್‌ನಿಂದಲೇ ಈ ಮಾರಾಟದ ನಂತರದ ರಿಪೇರಿಗಳನ್ನು ನಿರ್ವಹಿಸಲಿದೆ. ಭಾರತದಲ್ಲಿ ಐಫೋನ್ ಮಾರಾಟ ಗಗನಕ್ಕೇರುತ್ತಿರುವುದರಿಂದ ರಿಪೇರಿ ಮಾರುಕಟ್ಟೆಯೂ ಏಳಿಗೆ ಕಾಣುತ್ತಿದೆ. ಕೌಂಟರ್‌ಪಾಯಿಂಟ್ ರಿಸರ್ಚ್ ಪ್ರಕಾರ, ಕಳೆದ ವರ್ಷ ಭಾರತದಲ್ಲಿ ಸುಮಾರು 11 ಮಿಲಿಯನ್ ಐಫೋನ್‌ಗಳು ಮಾರಾಟವಾಗಿವೆ. ಇದು ಆಪಲ್‌ಗೆ ಶೇ. 7ರಷ್ಟು ಮಾರುಕಟ್ಟೆ ಪಾಲನ್ನು ತಂದುಕೊಟ್ಟಿದೆ. 2020ರಲ್ಲಿ ಇದು ಕೇವಲ ಶೇ. 1ರಷ್ಟಿತ್ತು. ಇದರಿಂದಲೇ ಆಪಲ್‌ನ ಗಮನ ಟಾಟಾ ಗ್ರೂಪ್ ಮೇಲೆ ಇರಬಹುದು ಎಂದು ಹೇಳಲಾಗಿದೆ.

ಆಪಲ್ ತನ್ನ ಉತ್ಪಾದನೆಯನ್ನು ಚೀನಾದಿಂದ ದೂರವಿಡಲು ಪ್ರಯತ್ನಿಸುತ್ತಿರುವುದರಿಂದ, ಭಾರತದಲ್ಲಿ ಟಾಟಾ ವೇಗವಾಗಿ ಅದರ ಪ್ರಮುಖ ಪೂರೈಕೆದಾರರಾಗಿ ಹೊರಹೊಮ್ಮಿದೆ. ಈ ಇತ್ತೀಚಿನ ಒಪ್ಪಂದವು ಟಾಟಾ ಮೇಲಿನ ಆಪಲ್‌ನ ಹೆಚ್ಚುತ್ತಿರುವ ವಿಶ್ವಾಸವನ್ನು ಎತ್ತಿ ತೋರಿಸುತ್ತದೆ. ಟಾಟಾ ವಿಶ್ವದ ಅತ್ಯಂತ ಮೌಲ್ಯಯುತ ಸ್ಮಾರ್ಟ್‌ಫೋನ್ ಕಂಪನಿಯಿಂದ ಇನ್ನಷ್ಟು ವ್ಯವಹಾರವನ್ನು ಪಡೆಯುವ ನಿರೀಕ್ಷೆಯಲ್ಲಿದೆ. ಸೈಬರ್‌ಮೀಡಿಯಾ ರಿಸರ್ಚ್‌ನ ಉಪಾಧ್ಯಕ್ಷ ಪ್ರಭು ರಾಮ್ ಅವರ ಪ್ರಕಾರ, "ಆಪಲ್‌ನೊಂದಿಗಿನ ಟಾಟಾದ ಈ ಆಳವಾದ ಪಾಲುದಾರಿಕೆಯು ಆಪಲ್ ಯುನೈಟೆಡ್ ಸ್ಟೇಟ್ಸ್‌ನಲ್ಲಿ ಪ್ರಸ್ತುತ ಮಾಡುತ್ತಿರುವಂತೆ, ಭಾರತದಲ್ಲಿ ನವೀಕರಿಸಿದ ಸಾಧನಗಳನ್ನು ನೇರವಾಗಿ ಮಾರಾಟ ಮಾಡಲು ಅಡಿಪಾಯ ಹಾಕಬಹುದು." ಎಂದಿದ್ದಾರೆ.

ಟಾಟಾದಿಂದ ಐಸಿಟಿಯನ್ನು ಸ್ವಾಧೀನಪಡಿಸಿಕೊಳ್ಳುವ ಪ್ರಕ್ರಿಯೆ ಪ್ರಸ್ತುತ ನಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ. ಆದಾಗ್ಯೂ, ಆಪಲ್, ವಿಸ್ಟ್ರಾನ್, ಮತ್ತು ಟಾಟಾ ಈ ವಿಷಯದ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ. ಭಾರತದಾದ್ಯಂತ ಇರುವ ಆಪಲ್‌ನ ಅಧಿಕೃತ ಸೇವಾ ಕೇಂದ್ರಗಳು ಸಾಮಾನ್ಯ ರಿಪೇರಿಗಳನ್ನು ನಿರ್ವಹಿಸಬಹುದಾದರೂ, ಈಗ ಹೆಚ್ಚು ಸಂಕೀರ್ಣ ಸಮಸ್ಯೆಗಳಿರುವ ಫೋನ್‌ಗಳು ಮತ್ತು ಲ್ಯಾಪ್‌ಟಾಪ್‌ಗಳನ್ನು ಟಾಟಾದ ಸೌಲಭ್ಯಕ್ಕೆ ಕಳುಹಿಸಲಾಗುವುದು. ಆದಾಗ್ಯೂ, ವಿಸ್ಟ್ರಾನ್‌ನ ಐಸಿಟಿ ಆಪಲ್ ಹೊರತುಪಡಿಸಿ ಇತರ ಗ್ರಾಹಕರಿಗೂ ಸೇವೆ ಸಲ್ಲಿಸುವುದನ್ನು ಮುಂದುವರಿಸಲಿದೆ ಎನ್ನಲಾಗಿದೆ.

ಭಾರತದಲ್ಲಿ ಐಫೋನ್ ರಿಪೇರಿ ವ್ಯವಹಾರ ಟಾಟಾ ಗ್ರೂಪ್ ಪಾಲಿಗೆ?!

ಅಮೆರಿಕದ ಹಿಂದಿನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಚೀನಾದ ಮೇಲೆ ಸುಂಕ ವಿಧಿಸುವ ಬೆದರಿಕೆ ಹಾಕಿದಾಗಿನಿಂದ ಭಾರತವು ಐಫೋನ್ ರಫ್ತಿಗೆ ಅನುಕೂಲಕರ ತಾಣವಾಗಿ ಹೊರಹೊಮ್ಮಿದೆ. ಜೂನ್ ತ್ರೈಮಾಸಿಕದಲ್ಲಿ ಅಮೆರಿಕದಲ್ಲಿ ಮಾರಾಟವಾಗುವ ಹೆಚ್ಚಿನ ಐಫೋನ್‌ಗಳನ್ನು ಭಾರತದ ಕಾರ್ಖಾನೆಗಳಲ್ಲಿ ತಯಾರಿಸಲಾಗುವುದು ಎಂದು ಆಪಲ್ ಸಿಇಒ ಟಿಮ್ ಕುಕ್ ಈ ಹಿಂದೆ ಹೇಳಿದ್ದರು. ಇದು ಭಾರತದ ಉತ್ಪಾದನಾ ಸಾಮರ್ಥ್ಯದ ಮೇಲೆ ಆಪಲ್ ಇಟ್ಟಿರುವ ಭರವಸೆಯನ್ನು ಮತ್ತಷ್ಟು ಬಲಪಡಿಸುತ್ತದೆ. ಈ ಕುರಿತಂತೆ ನಿಮ್ಮ ಅಭಿಪ್ರಾಯ ಏನು ಎಂಬುದನ್ನು ಈ ಕೆಳಗೆ ಕಾಮೆಂಟ್ ಮಾಡಿ ತಿಳಿಸಿ. ಮತ್ತು ಎಲ್ಲಾ ಪ್ರಮುಖ ಟೆಕ್ ಸುದ್ದಿಗಳಿಗಾಗಿ ಕನ್ನಡ ಗಿಜ್‌ಬಾಟ್‌ನಲ್ಲಿ ಲೈಟ್ ಆಗಿರಿ.

Best Mobiles in India

English summary
As Apple seeks to diversify its manufacturing away from China, Tata has quickly become a crucial supplier. The company currently assembles iPhones for both domestic and international markets at three facilities in India
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+