ಇದೇ ವರ್ಷ ಆಪಲ್‌ನಿಂದ ಬರಲಿದೆ ಹೊಸ ಲ್ಯಾಪ್‌ಟಾಪ್! ಫೀಚರ್ಸ್ ನಿರೀಕ್ಷೆ ಏನು?
ಟೆಕ್ ದೈತ್ಯ ಆಪಲ್ ಕಂಪೆನಿ ಈ ವರ್ಷಾಂತ್ಯದ ವೇಳೆಗೆ ಹೊಸ ಮ್ಯಾಕ್‌ಬುಕ್ ಏರ್ ಪರಿಚಯಿಸಲಿದೆ ಎಂದು ವರದಿಯಾಗಿದೆ. ಇನ್ನು ಈ ಹೊಸ ಮ್ಯಾಕ್‌ಬುಕ್ ಏರ್ 15.5 ಇಂಚಿನ ಡಿಸ್‌ಪ್ಲೇ ಹೊಂದಿರಲಿದೆ ಎನ್ನಲಾಗಿದೆ. ಜೊತೆಗೆ ಹೊಸ M3 ಸರಣಿಯ ಚಿಪ್‌ನಲ್ಲಿ ಕಾರ್ಯನಿರ್ವಹಿಸಲಿದೆ ಎಂದು ನಿರೀಕ್ಷಿಸಲಾಗಿದೆ.
ಹೌದು, ಆಫಲ್ ಕಂಪೆನಿ ಹೊಸ ಮ್ಯಾಕ್‌ಬುಕ್ ಏರ್ ಅನ್ನು ಪರಿಚಯಿಸುವ ನಿರೀಕ್ಷೆಯಿದೆ. ಇದು WWDC 2023 ಅಲ್ಲಿ ಅನಾವರಣಗೊಳ್ಳುವ ನಿರೀಕ್ಷೆಯಿದೆ. ಇದಲ್ಲದೆ ಎಂಟು-ಕೋರ್ CPU ಮತ್ತು 10-ಕೋರ್ GPU ಜೊತೆಗೆ 8GB RAM ಅನ್ನು ಹೊಂದಿರುತ್ತದೆ ಎನ್ನಲಾಗಿದೆ. ಹಾಗಾದ್ರೆ ಆಪಲ್ ಮ್ಯಾಕ್‌ಬುಕ್ ಏರ್‌ನಲ್ಲಿ ಏನೆಲ್ಲಾ ನಿರೀಕ್ಷಿಸಬಹುದು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಆಪಲ್ ಕಂಪೆನಿಯ ಹೊಸ ಮ್ಯಾಕ್‌ಬುಕ್ ಏರ್ 15 ಇಂಚಿನ ಡಿಸ್‌ಪ್ಲೇಯನ್ನು ಹೊಂದಿರಲಿದೆ. ಇನ್ನು ಲ್ಯಾಪ್‌ಟಾಪ್ ಎಂ-ಸರಣಿಯ ಹೊಸ ಚಿಪ್ ಅನ್ನು ಹೊಂದಿರಲಿದ್ದು, ಎಂಟು-ಕೋರ್ CPU ಮತ್ತು 10-ಕೋರ್ GPU ಸಪೊರ್ಟ್ ಪಡೆದಿರಬಹುದು ಎಂದು ಅಂದಾಜಿಸಲಾಗಿದೆ. ಜೊತೆಗೆ 8GB RAM ಅನ್ನು ಹೊಂದಿರುತ್ತದೆ ಎಂದು ಹೇಳಲಾಗಿದೆ.
ಇನ್ನು ಸಣ್ಣ ಮ್ಯಾಕ್‌ಬುಕ್‌ಗಳಿಗೆ ಹೋಲಿಸಿದರೆ ಹೊಸ ಮ್ಯಾಕ್‌ಬುಕ್ ಏರ್ ಕಡಿಮೆ ದಟ್ಟವಾದ ಡಿಸ್‌ಪ್ಲೇಯನ್ನು ಹೊಂದಿರಲಿದೆ. ಸದ್ಯ ಆನ್‌ಲೈನ್‌ನಲ್ಲಿ ಬಹಿರಂಗವಾಗಿರುವ ಫೀಚರ್ಸ್ ಮಾಹಿತಿಯಂತೆ ಈ ಲ್ಯಾಪ್‌ಟಾಪ್ MacOS 14 ಅನ್ನು ಚಾಲನೆ ಮಾಡಲಿದೆ ಎನ್ನಲಾಗಿದೆ. ಸದ್ಯ ಕಳೆದ ವರ್ಷ ಬಿಡುಗಡೆಯಾಗಿದ್ದ ಮ್ಯಾಕ್‌ಬುಕ್ ಏರ್ 13 ಇಂಚಿನ ಲ್ಯಾಪ್‌ಟಾಪ್‌ಗಿಂತ ಭಿನ್ನವಾಗಿರಲಿದೆ.

ಹೊಸ ಮ್ಯಾಕ್‌ಬುಕ್ ಏರ್ ಕನೆಕ್ಟಿವಿಟಿ ಆಯ್ಕೆಗಳಲ್ಲಿ ಎರಡು ಯುಎಸ್‌ಬಿ ಟೈಪ್-ಸಿ ಪೋರ್ಟ್‌ಗಳು ಮತ್ತು 3.5 ಎಂಎಂ ಹೆಡ್‌ಫೋನ್ ಜ್ಯಾಕ್ ಅನ್ನು ಮಾತ್ರ ನೀಡುವ ಸಾಧ್ಯತೆಯಿದೆ. ಆದರೆ ಇದರಲ್ಲಿ ದೊಡ್ಡ ಏರ್ SD ಕಾರ್ಡ್ ಪೋರ್ಟ್ ಅಥವಾ ಎರಡು ಯುಎಸ್‌ಬಿ ಟೈಪ್-ಸಿ ಥಂಡರ್‌ಬೋಲ್ಟ್ ಪೋರ್ಟ್‌ಗಳನ್ನು ನೀಡುವ ನಿರೀಕ್ಷೆಯಿಲ್ಲ ಎನ್ನಲಾಗಿದೆ.
ಆಪಲ್ 15 ಇಂಚಿನ ಮಾದರಿಯ ಜೊತೆಗೆ, ಆಪಲ್ 13-ಇಂಚಿನ ಏರ್‌ನ ನವೀಕರಿಸಿದ ಆವೃತ್ತಿಯಲ್ಲಿ ಪರಿಚಯಿಸುವುದಕ್ಕೆ ಕಾರ್ಯನಿರ್ವಹಿಸುತ್ತಿದೆ ಎಂದು ವರದಿಯಾಗಿದೆ. ಇನ್ನು ಆಪಲ್ WWDC 2023 ರಲ್ಲಿ, ಆಪಲ್ M2 ಅಲ್ಟ್ರಾ ಎಂಬ M2 ಚಿಪ್ ಅನ್ನು ಪರಿಚಯಿಸುವ ನಿರೀಕ್ಷೆಯಿದೆ. ಜೊತೆಗೆ ಹೊಸ ಮ್ಯಾಕ್ ಪ್ರೊ ಪ್ರಾರಂಭಿಸುವ ಸಾಧ್ಯತೆಯಿದೆ ಎಂದು ಅಂದಾಜಿಸಲಾಗಿದೆ.

ಇತ್ತೀಚಿಗೆ ಆಪಲ್ ಐಫೋನ್ 15 (Apple iPhone 15) ಸರಣಿಯ ಬೆಲೆ ಆನ್‌ಲೈನ್‌ನಲ್ಲಿ ಲೀಕ್ ಆಗಿದೆ. ಫೋರ್ಬ್ಸ್‌ನ ವರದಿಯ ಪ್ರಕಾರ, ಐಫೋನ್ 15 ಮತ್ತು ಐಫೋನ್ 15 ಪ್ರೊ ಮಾಡೆಲ್‌ಗಳ ನಡುವೆ ಬೆಲೆಯಲ್ಲಿ ಭಾರೀ ವ್ಯತ್ಯಾಸಗಳನ್ನು ಹೊಂದಿರಬಹುದು ಎಂದು ಹೇಳಲಾಗ್ತಿದೆ. ಹಾಗೆಯೇ ಆಪಲ್ ಈ ವರ್ಷದ ಐಫೋನ್ 15 ಪ್ರೊ ಸರಣಿಯ ಬೆಲೆಯನ್ನು ಹೆಚ್ಚಿಸುವ ಸಾಧ್ಯತೆ ಇದ್ದು, ಇದು ಐಫೋನ್ 15 ಪ್ಲಸ್‌ನೊಂದಿಗೆ ಅಂತರವನ್ನು ಇನ್ನಷ್ಟು ವಿಸ್ತರಿಸುತ್ತದೆ' ಎಂದು ತಿಳಿದುಬಂದಿದೆ.
ನೂತನ ಐಫೋನ್ 15 ಫೋನ್ $799 ಬೆಲೆಯಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಗಳಿವೆ. ಆದರೆ ಐಫೋನ್ 15 ಪ್ಲಸ್ $899 ಬೆಲೆಯಲ್ಲಿ ಬಿಡುಗಡೆ ಆಗಬಹುದು ಎಂದು ವರದಿಯಿಂದ ತಿಳಿದುಬಂದಿದೆ. ಅದೇ ರೀತಿ ಆಪಲ್ ಐಫೋನ್ 15 ಪ್ರೊ ಮತ್ತು ಐಫೋನ್ 15 ಅಲ್ಟ್ರಾ ಕ್ರಮವಾಗಿ $ 1,099 ಮತ್ತು $ 1,199 ಬೆಲೆಯಲ್ಲಿ ಮಾರುಕಟ್ಟೆಗೆ ಲಗ್ಗೆ ಇಡಬಹುದು ಎನ್ನಲಾಗಿದೆ. ಇನ್ನು ಆಪಲ್ ನೂತನ ಐಫೋನ್ 15 ಮತ್ತು ಐಫೋನ್ 15 ಪ್ಲಸ್ ಫೋನ್‌ಗಳ ಕ್ಯಾಮೆರಾ ಸೆನ್ಸಾರ್ ಅನ್ನು ಹೆಚ್ಚಿಸುವ ಸಾಧ್ಯತೆಗಳಿವೆ.ಐಫೋನ್ 15 ಮತ್ತು ಐಫೋನ್ 15 ಪ್ಲಸ್ ಫೋನ್‌ಗಳು ಮೂರು ಕ್ಯಾಮೆರಾ ಹೊಂದಿರಬಹುದು.


Click it and Unblock the Notifications








