Subscribe to Gizbot

2019ರಲ್ಲಿ ಮಾರುಕಟ್ಟೆಗೆ ಬರಲಿದೆ ಶಕ್ತಿಶಾಲಿ ಮ್ಯಾಕ್ ಪ್ರೋ...!

Posted By: Precilla Dias

ಹೊಸ ಆವಿಷ್ಕಾರಗಳಿಗೆ ಹೆಸರಾಗಿರುವ ಆಪಲ್, ಡೆಸ್ಕ್ ಟಾಪ್ ವಿಭಾಗದಲ್ಲಿ ಈಗಾಗಲೇ ಕಾಂತ್ರಿಕಾರಕ ಬದಲಾವಣೆಗಳಿಗೆ ಸಾಕ್ಷಿಯಾಗಿದೆ. ಇದೇ ಮಾದರಿಯಲ್ಲಿ 2019ರಲ್ಲಿ ಹೊಸದಾಗಿ ಮ್ಯಾಕ್ ಪ್ರೋ ವನ್ನು ಲಾಂಚ್ ಮಾಡಲು ಇಂದಿನಿಂದಲೇ ತಯಾರಿಯನ್ನು ಆರಂಭಿಸಿದ್ದು, ಇನ್ನಷ್ಟು ಹೊಸತನದೊಂದಿಗೆ ಮಾರುಕಟ್ಟೆಯಲ್ಲಿ ಕಾಣಿಸಿಕೊಳ್ಳಲಿದೆ ಎನ್ನಲಾಗಿದೆ,

2019ರಲ್ಲಿ ಮಾರುಕಟ್ಟೆಗೆ ಬರಲಿದೆ ಶಕ್ತಿಶಾಲಿ ಮ್ಯಾಕ್ ಪ್ರೋ...!

ಈ ಕುರಿತು ಮಾಹಿತಿಯನ್ನು ನೀಡಿರುವ ಆಪಲ್. ಮ್ಯಾಕ್ ಪ್ರೋ 2018ರಲ್ಲಿ ಬಿಡುಗಡೆಯಾಗುವುದಿಲ್ಲ. ಅದನ್ನು ನಿರ್ಮಿಸಲು ಇನ್ನು ಹೆಚ್ಚಿನ ಸಮಯದ ಅವಶ್ಯಕತೆ ಇದೆ. ಈ ಹಿನ್ನಲೆಯಲ್ಲಿ 2019ರಲ್ಲಿಯೇ ಮ್ಯಾಕ್ ಪ್ರೋವನ್ನು ಲಾಂಚ್ ಮಾಡಲಾಗುವುದು. ಅಭಿಮಾನಿಗಳಿಗೆ ಮೆಚ್ಚುಗೆ ಆಗುವ ರೀತಿಯಲ್ಲಿ ವಿನ್ಯಾಸವನ್ನು ಮಾಡಲಾಗುತ್ತಿದೆ ಎಂದು ತಿಳಿಸಿದೆ.

ಆಪಲ್ ತನ್ನ ಮ್ಯಾಕ್ ಪ್ರೋ ಬಳಕೆದಾರನ್ನು ಸಂಪೂರ್ಣವಾಗಿ ಅರ್ಥ ಮಾಡಿಕೊಂಡಿದ್ದು, ಅವರನ್ನು ಮೆಚ್ಚಿಸುವ ಸಲುವಾಗಿ, ನೂತನ ಮ್ಯಾಕ್ ಪ್ರೋನಲ್ಲಿ ಹೊಸ ಹೊಸ ಆಯ್ಕೆಗಳನ್ನು ಸೇರಿದಂತೆ ಹಚ್ಚಿನ ಸೇವೇಯನ್ನು ನೀಡಲು ಆಪಲ್ ಶ್ರಮಿಸುತ್ತಿದೆ. ಮುಂದಿನ ತಲೆ ಮಾರಿನ ಮ್ಯಾಕ್ ಅನ್ನು ಬಳಕೆಗೆ ನೀಡುವುದು ಗುರಿಯಾಗಿದೆ ಎನ್ನಲಾಗಿದೆ.

ಹೆಚ್ಚಿನ ಶಕ್ತಿಶಾಲಿಯಾಗಿರುವಂತಹ ಮ್ಯಾಕ್ ಪ್ರೋ ಅನ್ನು ಅಭಿವೃದ್ದಿ ಪಡಿಸಲು ಆಪಲ್ ತಂಡವು ಪ್ರಯತ್ನಿಸುತ್ತಿದ್ದು, ಮಾರುಕಟ್ಟೆಯಲ್ಲಿ ಇರುವರೆಗೂ ಲಭ್ಯವಿರದ ಪ್ರಾಡೆಕ್ಟ್ ಅನ್ನು ಬಳಕೆಗೆ ನೀಡುವ ಗುರಿಯಿಂದಲೇ ಹೊಸ ತಂತ್ರಜ್ಞಾನವನ್ನು ಅಭಿವೃದ್ಧಿ ಪಡಿಸುವಂತಹ ಕಾರ್ಯವೂ ಜೋರಾಗಿ ನಡೆಯುತ್ತಿದೆ. ಇದಕ್ಕದೇ ಹೆಚ್ಚಿನ GPU ವನ್ನು ಅಳಡಿಸಿ, ಗೇಮಿಂಗ್ ಮತ್ತು ಎಡಿಟಿಂಗ್ ಗೆ ಸಪೋರ್ಟ್ ಮಾಡುವಂತೆ ಮಾಡಲು ಮುಂದಾಗಿದೆ.

How to Check Your Voter ID Card Status (KANNADA)
ಈಗಾಗಲೇ ಮ್ಯಾಕ್ ಪ್ರೋ ವಿಡಿಯೋ ಎಡಿಟಿಂಗ್ ಮತ್ತು ಗೇಮಿಂಗ್ ಗಾಗಿ ವಿನ್ಯಾಸವನ್ನು ಮಾಡಲಾಗುತ್ತಿದ್ದು, ಈ ಬಾರಿ ವರ್ಚುವಲ್ ರಿಯಾಲ್ಟಿಯನ್ನು ಇದಕ್ಕಾಗಿ ನೀಡುವ ಸಾಧ್ಯತೆ ಇದೆ. ಈ ಬಾರಿ AMD GPUಗಳನ್ನು ಆಪಲ್ ಬಳಕೆ ಮಾಡಿಕೊಂಡು ಬಳಕೆದಾರರಿಗೆ ಉತ್ತಮವಾದ ಮ್ಯಾಕ್ ಪ್ರೋವನ್ನು ನೀಡಲಿದೆ ಎನ್ನಲಾಗಿದೆ,.
English summary
Apple, according to senior executives, will be bringing a new Mac Pro in 2019.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot