Subscribe to Gizbot

ಆಪಲ್ ಹಾಗೂ ಬೀಟ್ಸ್ ಮಾಡುವುದೇ ಮ್ಯೂಸಿಕ್ ಮೇಲೆ ಮೋಡಿ

Written By:

ಆಪಲ್ ಕಂಪೆನಿಯು ಹೆಡ್‌ಪೋನ್ ತಯಾರಿಕಾ ಕಂಪೆನಿ ಬೀಟ್ಸ್ ಅನ್ನು ಮೂರು ಬಿಲಿಯನ್‌ (ಭಾರತೀಯ ದರ ರೂ 1765350,00,000.00) ಗೆ ಖರೀದಿಸಿದೆ. ಆಪಲ್ ಈ ಹೆಡ್‌ಫೋನ್ ತಯಾರಿಕಾ ಕಂಪೆನಿಯೊಂದಿಗೆ ಒಪ್ಪಂದವನ್ನು ಏಕೆ ಮಾಡಿಕೊಂಡಿದೆ ಎಂಬುದಕ್ಕೆ ಮೂರು ಕಾರಣಗಳನ್ನು ನೀಡಿದೆ.

*ಈ ವರ್ಷ ಐಟ್ಯೂನ್‌ಗಳ ಬಿಡುಗಡೆಯ ಪ್ರಮಾಣ ಕಡಿಮೆಯಾಗಿರುವುದು
*ಐಟ್ಯೂನ್‌ಗಳ ಮಾರಾಟ ಸ್ಥಗಿತಗೊಂಡಿರುವುದು.
*ಆಪಲ್‌ನ ಇಯರ್‌ಬಡ್‌ಗಳು ತುಂಬಾ ಕೆಟ್ಟದಾಗಿರುವುದು

ದಕ್ಷಿಣ ಕ್ಯಾಲಿಫೋರ್ನಿಯಾದಲ್ಲಿ ನಡೆದ ಸಂದರ್ಶನವೊಂದರಲ್ಲಿ ಆಪಲ್‌ನ ಕಾರ್ಯಕಾರಿ ಎಡ್ಡಿ ಕ್ಯೂ ಮತ್ತು ಬೀಟ್ಸ್ ಸಿಇಒ ಜಿಮ್ಮಿ ಲೊವೈನ್ ತಮ್ಮ ಒಪ್ಪಂದಗಳ ಬಗೆಗೆ ಮಾತುಕಥೆ ನಡೆಸಿದ್ದಾರೆ. ಕ್ಯೂ ಹೇಳುವಂತೆ ಈ ದಿನಗಳಲ್ಲಿ ಸಂಗೀತಕ್ಕೆ ಬೇಡಿಕೆ ಇಲ್ಲದಿರುವುದರಿಂದ ಅದು ಬೆಳೆಯುತ್ತಿಲ್ಲ ಇದರಿಂದಾಗಿ ಐಟ್ಯೂನ್ ಉತ್ಪನ್ನಗಳ ಮೇಲೆ ಭಾರೀ ಹೊಡೆತ ಬಿದ್ದಿರುವುದರಿಂದ ಆಪಲ್ ಮತ್ತು ಬೀಟ್ಸ್ ಜೊತೆಯಾಗಿ ಒಪ್ಪಂದವನ್ನು ಮಾಡಿಕೊಂಡಿದೆ.

ಆಪಲ್ ಹಾಗೂ ಬೀಟ್ಸ್ ಮಾಡುವುದೇ ಮ್ಯೂಸಿಕ್ ಮೇಲೆ ಮೋಡಿ

ಐಟ್ಯೂನ್‌ನ ತಯಾರಿಯನ್ನು ಈ ವರ್ಷ ಕಂಪೆನಿಯು ಕಡಿಮೆ ಪ್ರಮಾಣದಲ್ಲಿ ಉತ್ಪಾದಿಸಿದ್ದು ಸಂಗೀತಕ್ಕಿರುವ ಬೇಡಿಕೆಯನ್ನು ಕುಸಿಯುವಂತೆ ಮಾಡಿದೆ. ಮತ್ತು ಹಾಡುಗಳ ಮಾರಾಟ ಪ್ರಮಾಣ ಕೂಡ ಇದರಿಂದ ಕಂಪೆನಿಯಾಗಿದೆ ಎಂದು ಕ್ಯೂ ನುಡಿದಿದ್ದಾರೆ. ಬೀಟ್ಸ್ ಬಗ್ಗೆ ಹೇಳುವುದಿದ್ದರೆ ಅದಕ್ಕೆ ಒಳ್ಳೆಯ ಮಾರುಕಟ್ಟೆ ಮತ್ತು ಬೇಡಿಕೆ ಇದೆ. ಇದರಿಂದ ಆಪಲ್‌ ಉತ್ಪನ್ನಕ್ಕೂ ಒಳ್ಳೆಯ ಬೇಡಿಕೆ ಬರಲಿದೆ. ಇದು ಬಳಕೆದಾರರಿಗೆ ಉತ್ತಮವಾದ ಪ್ಲೇಲಿಸ್ಟ್‌ಗಳನ್ನು ಒದಗಿಸಲು ಪ್ರಮುಖ ಪಾತ್ರ ವಹಿಸಿದೆ.

ಬೀಟ್ಸ್‌ನ ಹೆಡ್‌ಫೋನ್‌ಗಳೆಂದು ಕರೆಯಲಾದ " ಅಮೇಜಿಂಗ್ ಪ್ರೀಮಿಯಂ ಹೆಡ್‌ಫೋನ್‌ಗಳನ್ನು" ಮಾರಾಟ ಮಾಡಲು ಆಪಲ್ ಹೆಚ್ಚು ಉತ್ಸಾಹದಲ್ಲಿದೆ ಮತ್ತು ಜನರ ವಿಶ್ವಾಸಕ್ಕೆ ನಾವು ಪುನಃ ಪಾತ್ರರಾಗುತ್ತೇವೆ ಎಂಬ ನಂಬಿಕೆ ಇದೆ ಎಂದು ಎಡ್ಡಿ ಸಂದರ್ಶನದಲ್ಲಿ ತಿಳಿಸಿದ್ದಾರೆ.

Read more about:
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot