ಆಪಲ್ ಬಳಕೆದಾರರಿಗೆ ಸಿಕ್ಕಿತು ಐಒಎಸ್ 12.3 ಅಪ್‌ಡೇಟ್!..ಹೊಸದು ಏನಿದೆ?

|

ಆಪಲ್ ಕಂಪೆನಿ ತನ್ನ ನೂತನ ಐಒಎಸ್ 12.3 ಅಪ್‌ಡೇಟ್ ಬಿಡುಗಡೆ ಮಾಡಿದೆ. ಮಾರ್ಚ್‌ನಲ್ಲಿ ನಡೆದಿದ್ದ ಆಪಲ್ ಈವೆಂಟ್‌ನಲ್ಲಿ ಕಂಪೆನಿ ಘೋಷಿಸಿದ್ದ ಆಪಲ್ ಟಿವಿ+, ಆಪಲ್ ಟಿವಿ ಆಪ್, ಕಿಡ್ಸ್ ಟಿವಿ, ಚಾನೆಲ್‌ಗಳ ಹೊಸ ಅಪ್‌ಡೇಟ್‌ ಆಪಲ್ ಬಳಕೆದಾರರಿಗೆ ಇದೀಗ ದೊರೆತಿದ್ದು, ಆಪಲ್ ಬಳಕೆದಾರರ ನೂತನ ಅಪ್‌ಡೇಟ್‌ ಅನ್ನು ಐಫೋನ್ ಸೆಟ್ಟಿಂಗ್ಸ್ ತೆರೆದು ಜನರಲ್‌ಗೆ ಹೋಗಿ ಅಲ್ಲಿ ಸಾಫ್ಟ್‌ವೇರ್ ಅಪ್‌ಡೇಟ್ ಚೆಕ್ ಮಾಡಬಹುದು. ನಂತರ ಸಾಫ್ಟ್‌ವೇರ್ ಅನ್ನು ಡೌನ್‌ಲೋಡ್ ಮಾಡಿಕೊಂಡು ಇನ್‌ಸ್ಟಾಲ್ ಮಾಡಬಹುದಾಗಿದೆ.

ಆಪಲ್ ಬಳಕೆದಾರರಿಗೆ ಸಿಕ್ಕಿತು ಐಒಎಸ್ 12.3 ಅಪ್‌ಡೇಟ್!..ಹೊಸದು ಏನಿದೆ?

ಹೊಸ ವೈಶಿಷ್ಟ್ಯಗಳೊಂದಿಗೆ ಐಒಎಸ್ 12.3 ಅಪ್‌ಡೇಟ್ ಆಗಿದ್ದು, ಮೊದಲು ಆರು ಬೀಟಾ ಆವೃತ್ತಿಗಳು ಕಾಣಿಸಿಕೊಂಡಿವೆ. ಇದರಲ್ಲಿ ಬಗ್ ಫಿಕ್ಸ್ ಮತ್ತು ಆಪಲ್ ಟಿವಿಗೆ ಸಂಬಂಧಿಸಿದ ಹಲವು ಮಹತ್ವದ ಅಪ್‌ಡೇಟ್‌ಗಳಿವೆ. ಆಪಲ್ ಟಿವಿ ಆಪ್ ಸ್ಯಾಮ್‌ಸಂಗ್ ಟಿವಿಯಲ್ಲೂ ದೊರೆಯುತ್ತಿದ್ದು, ಟಿವಿ ಓಎಸ್ ಕೂಡ ಅಪ್‌ಡೇಟ್ ಆಗಿದೆ. ಉಳಿದಂತೆ ಏರ್‌ಪ್ಲೇ 2, ಆಪಲ್ ಟಿವಿ ಆಪ್ ಕೂಡ ಅಪ್‌ಡೇಟ್ ಆಗಿದ್ದು, ಬಳಕೆದಾರರಿಗೆ ಹೊಸ ಅನುಭವ ನೀಡಲಿದೆ ಎಂದು ಮಾಧ್ಯಮ ವರದಿಗಳಿಂದ ತಿಳಿದುಬಂದಿದೆ.

ಆಪಲ್ ಬಳಕೆದಾರರಿಗೆ ಸಿಕ್ಕಿತು ಐಒಎಸ್ 12.3 ಅಪ್‌ಡೇಟ್!..ಹೊಸದು ಏನಿದೆ?

ನೆಟ್‌ಫ್ಲಿಕ್ಸ್, ಅಮೆಜಾನ್‌ ಪ್ರೈಮ್ನಂತಹ ಬೃಹತ್‌ ಜಾಗತಿಕ ಕಂಪನಿಗಳಿಗೆ ಸೆಡ್ಡು ಹೊಡೆಯಲು ತಂತ್ರಜ್ಞಾನ ದಿಗ್ಗಜ ಆಪಲ್ ವಿಡಿಯೋ ಸ್ಟ್ರೀಮಿಂಗ್ ಕ್ಷೇತ್ರಕ್ಕೆ ದಾಗುಂಡಿ ಇಟ್ಟಿತ್ತು. ಆಪಲ್‌ ಐಟ್ಯೂನ್ಸ್ ಹೆಸರಿನಲ್ಲಿ ಸಂಗೀತ ಕ್ಷೇತ್ರದಲ್ಲಿ ಸಾಕಷ್ಟು ಜನಪ್ರಿಯತೆಯನ್ನು ಗಳಿಸಿದ್ದ ಆಪಲ್ ಭಾರಿ ಹೂಡಿಕೆ ಮತ್ತು ಬೆಳವಣಿಗೆ ಕಾಣುತ್ತಿರುವ ವಿಡಿಯೋ ಸ್ಟ್ರೀಮಿಂಗ್ ಕ್ಷೇತ್ರಕ್ಕಾಗಿ 'ಆಪಲ್‌ ಟಿವಿ ಪ್ಲಸ್‌' ಎಂಬ ಹೆಸರಿನ ವಿಡಿಯೋ ಸ್ಟ್ರೀಮಿಂಗ್ ಆಪ್ ಅನ್ನು ಬಿಡುಗಡೆ ಮಾಡಿತ್ತು. ಅದರ ಸಂಪೂರ್ಣ ವಿವರಗಳು ಈ ಕೆಳಗಿನಂತಿವೆ.

‘ಆಪಲ್‌ ಟಿವಿ ಪ್ಲಸ್‌’

‘ಆಪಲ್‌ ಟಿವಿ ಪ್ಲಸ್‌’

ಮೊದಲೇ ಹೇಳಿದಂತೆ, ನೆಟ್‌ಫ್ಲಿಕ್ಸ್, ಅಮೆಜಾನ್‌ನಂತೆ ‘ಆಪಲ್‌ ಟಿವಿ ಪ್ಲಸ್‌' ಕೂಡ ವಿಡಿಯೋ ಸ್ಟ್ರೀಮಿಂಗ್ ಆಪ್ ಆಗಿದೆ. ಈ ಆಪಲ್‌ ಟಿವಿ ಪ್ಲಸ್‌ನಲ್ಲಿ ಎಕ್ಸ್‌ಕ್ಲೂಸಿವ್ ಟಿವಿ ಪ್ರೋಗ್ರಾಂಗಳು ಇರಲಿವೆ. ಇವು ಜಾಹೀರಾತು ರಹಿತ ವಿಡಿಯೋ ಸೇವೆಗಳಾಗಿದ್ದು, ನೆಟ್‌ಫ್ಲಿಕ್ಸ್, ಅಮೆಜಾನ್‌ನಂತೆ ಆಪಲ್‌ಗೂ ತಿಂಗಳ ಚಂದಾ ಇರಲಿದೆ.ಇದರ ಜತೆಗೆ ಎಚ್‌ಬಿಒ, ಶೋಟೈಮ್ಸ್, ಸ್ಟಾರ್ಜ್ ಮತ್ತು ಸಿಬಿಎಸ್‌ನ ಕಾರ್ಯಕ್ರಮಗಳೂ ಪ್ರಸಾರವಾಗಲಿವೆ ಎಂದು ತಿಳಿದುಬಂದಿದೆ.

100 ದೇಶಗಳ ಜನರು ವೀಕ್ಷಿಸಬಹುದು!

100 ದೇಶಗಳ ಜನರು ವೀಕ್ಷಿಸಬಹುದು!

ನೆಟ್‌ಫ್ಲಿಕ್ಸ್, ಅಮೆಜಾನ್‌ನಂತೆ ಆಪಲ್‌ಗೂ ತಿಂಗಳ ಚಂದಾ ಇರಲಿದೆ ಎಂಬುದು ತಿಳಿದುಬಂದಿದೆಯಾದರೂ, ‘ಆಪಲ್‌ ಟಿವಿ ಪ್ಲಸ್‌' ಚಂದಾದಾರಿಕೆ ಎಷ್ಟು ಎಂಬುದು ತಿಳಿದುಬಂದಿಲ್ಲ. ಆದರೆ, ಸೋಮವಾರ ನಡೆದ ಕಾರ್ಯಕ್ರಮದಲ್ಲಿ ‘ಆಪಲ್‌ ಟಿವಿ ಪ್ಲಸ್‌' ಜಾಹೀರಾತು ರಹಿತ ವಿಡಿಯೋ ಸೇವೆಗಳನ್ನು 100 ದೇಶಗಳ ಜನರು ವೀಕ್ಷಿಸಬಹುದಾಗಿದೆ ಎಂಬುದನ್ನು ಆಪಲ್ ತಿಳಿಸಿದೆ. ಐಟ್ಯೂನ್ಸ್ ಹೆಸರಿನಲ್ಲಿ ಸಂಗೀತ ಕ್ಷೇತ್ರದಲ್ಲಿ ಸಾಕಷ್ಟು ಜನಪ್ರಿಯತೆಯನ್ನು ಗಳಿಸಿದ್ದ ಆಪಲ್ 'ಆಪಲ್‌ ಟಿವಿ ಪ್ಲಸ್‌' ಮೂಲಕ ಜನಪ್ರಿಯತೆ ಪಡೆಯಲು ಮುಂದಾಗಿದೆ.

ಕಂಟೆಂಟ್‌ನತ್ತ ಆಪಲ್!

ಕಂಟೆಂಟ್‌ನತ್ತ ಆಪಲ್!

ತಂತ್ರಜ್ಞಾನ ದಿಗ್ಗಜನೆಂದೇ ಕರೆಸಿಕೊಂಡಿರುವ ಆಪಲ್ ಎಂದೂ ವಿಡಿಯೋ ಕಂಟೆಂಟ್ ಬಗ್ಗೆ ತಲೆಕೆಡಿಸಿಕೊಮಡಿರಲಿಲ್ಲ. ಗ್ರಾಹಕರು ಆಪಲ್‌ ಐಫೋನ್‌ ಮತ್ತು ಟ್ಯಾಬ್ಲೆಟ್‌ಗಳ ಖರೀದಿಗೆ ಮುಗಿಬೀಳುತ್ತಿದ್ದರಿಂದ ಕಂಪನಿಗೆ ದೊಡ್ಡ ಮೊತ್ತದ ಲಾಭವನ್ನು ತಂದುಕೊಡುತ್ತಿತ್ತು. ಆದರೆ, ಈಗ ಅಮೆಜಾನ್ ಮತ್ತು ನೆಟ್‌ಫ್ಲಿಕ್ಸ್ ಮಾರುಕಟ್ಟೆ ಬೆಳವಣಿಗೆ ಆಪಲ್‌ ಕಂಪೆನಿಗೆ ತಲೆಕೆಡಿಸಿದೆ. ಹಾಗಾಗಿಯೇ, ಕೇವಲ ಉತ್ಪನ್ನಗಳ ಮಾರಾಟವವನ್ನು ಬಿಟ್ಟು ಕಂಟೆಂಟ್‌ನತ್ತ ಆಪಲ್ ವಾಲಿದೆ.

ಮಾರುಕಟ್ಟೆಯಲ್ಲಿ ಭಾರೀ ಪೈಪೋಟಿ

ಮಾರುಕಟ್ಟೆಯಲ್ಲಿ ಭಾರೀ ಪೈಪೋಟಿ

ಸದ್ಯದ ಆನ್‌ಲೈನ್‌ ವಿಡಿಯೋ ಸ್ಟ್ರೀಮಿಂಗ್ ಮಾರುಕಟ್ಟೆಯನ್ನು ನೆಟ್‌ಫ್ಲಿಕ್ಸ್ ಮತ್ತು ಅಮೆಜಾನ್‌ ಆಳುತ್ತಿವೆ. ಕೆಲವು ತಿಂಗಳ ಹಿಂದೆಬ್ರಿಟನ್‌ನ ಪ್ರಮುಖ ಬ್ರಾಡ್‌ಕಾಸ್ಟ್‌ ಕಂಪನಿಗಳಾದ ಬಿಬಿಸಿ ಮತ್ತು ಐಟಿವಿ ಒಂದಾಗಿ 'ಬ್ರಿಟ್‌ಬಾಕ್ಸ್‌' ಹೆಸರಿನಲ್ಲಿ ಸ್ಟ್ರೀಮಿಂಗ್ ಮಾರುಕಟ್ಟೆಯನ್ನು ಪಡೆದುಕೊಳ್ಳಲು ಮುಂದಾಗಿವೆ. ಇದೇ ವೇಳೆಯಲ್ಲಿ ಆನ್‌ಲೈನ್‌ ವಿಡಿಯೋ ಸ್ಟ್ರೀಮಿಂಗ್ ಮಾರುಕಟ್ಟೆಗೆ ಆಪಲ್‌ನ ಪ್ರವೇಶವಾಗಿರುವುದು ಮಾರುಕಟ್ಟೆಯಲ್ಲಿ ಭಾರೀ ಪೈಪೋಟಿ ಕಾರಣವಾಗಬಹುದು ಎಂದು ಹೇಳಲಾಗುತ್ತಿದೆ.

 ಇನ್ನೂ ಹಲವು ಸೇವೆಗಳ ಬಿಡುಗಡೆ!

ಇನ್ನೂ ಹಲವು ಸೇವೆಗಳ ಬಿಡುಗಡೆ!

ವಿಡಿಯೋ ಸ್ಟ್ರೀಮಿಂಗ್ 'ಆಪಲ್‌ ಟಿವಿ ಪ್ಲಸ್‌' ಜತೆಗೆ ಆಪಲ್ ಗೇಮ್‌ ಆಪ್‌ ‘ಆರ್ಕೇಡ್‌' ಮತ್ತು ಸುದ್ದಿಗಳನ್ನು ನೀಡುವ ‘ನ್ಯೂಸ್‌ +' ಆಪ್‌ಗಳನ್ನು ಸಹ ಬಿಡುಗಡೆ ಮಾಡುವುದಾಗಿ ಹೇಳಿದೆ. ದಿ ನ್ಯೂಯಾರ್ಕರ್, ನ್ಯಾಷನಲ್‌ ಜಿಯೋಗ್ರಾಫಿಕ್, ಇನ್‌ಸ್ಟೈಲ್ ಮತ್ತು ದಿ ವಾಲ್‌ ಸ್ಟೀಟ್ ಜರ್ನಲ್‌ ಮೊದಲಾದ 300 ಕ್ಕೂ ಹೆಚ್ಚು ನಿಯತಕಾಲಿಕೆ ಪ್ರಸಾರ ಮಾಡಲಾಗುವ ‘ನ್ಯೂಸ್‌ +' ಸೇವೆಗೆ ತಿಂಗಳಿಗೆ 9.9 ಡಾಲರ್‌ (ಅಂದಾಜು 700 ರೂಪಾಯಿ) ಹಣ ನಿಗದಿ ಪಡಿಸಿದೆ.

Best Mobiles in India

English summary
oday, Apple has released iOS 12.3, a major point update with several new features. Six beta versions appeared before today’s release and it brings to the software something promised by Apple at its event in March. Here are the details.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X