ಹಳೆಯ ಡಿವೈಸ್‌ಗಳಲ್ಲಿ ಕಾರ್ಯಕ್ಷಮತೆ ಸುಧಾರಣೆ ಆಪಲ್ ಮುನ್ನಡೆ

By Shwetha
|

ತನ್ನ ಐಫೋನ್, ಐಪ್ಯಾಡ್ ಮತ್ತು ಐಪೋಡ್ ಟಚ್ ಮಾಲೀಕರುಗಳಿಗಾಗಿ ಆಪಲ್ ಸೋಮವಾರ ಐಓಎಸ್ 8.1.1 ಬಿಡುಗಡೆ ಮಾಡಿದೆ. ಐಓಎಸ್ 8.1 ಬಿಡುಗಡೆಯಾದ ನಂತರ, ಈ ಬಿಡುಗಡೆಗೆ ಹತ್ತಿರ ಹತ್ತಿರ ತಿಂಗಳುಗಳೇ ಸಂದಿವೆ. ಇನ್ನು ಬಿಡುಗಡೆಯ ಮಾಹಿತಿಗಳ ಪ್ರಕಾರ, ಇದೀಗ ಬಗ್ ಫಿಕ್ಸ್‌ಗಳ ಮೇಲೆ ಹೆಚ್ಚಿನ ಗಮನವನ್ನು ನೆಟ್ಟಿದ್ದು, ಐಪ್ಯಾಡ್ 2 ಮತ್ತು ಐಫೋನ್ 4 ಎಸ್ ನಂತಹ ಹಳೆಯ ಡಿವೈಸ್‌ಗಳ ಕಾರ್ಯಕ್ಷಮತೆಯನ್ನು ಸುಧಾರಿಸುವತ್ತ ಇದೀಗ ಕಂಪೆನಿ ಲಕ್ಷ್ಯ ಹರಿಸಿದೆ.

ಹೆಚ್ಚು ಪ್ರಚಲಿತ: ಪ್ರಯಾಣಕ್ಕಾಗಿ ಉತ್ತಮ ಸಂಗಾತಿ ಯೂಬರ್

ಐಫೋನ್ 4 ಎಸ್ ಮತ್ತು ಐಪ್ಯಾಡ್ 2 ತಾಂತ್ರಿಕವಾಗಿ ಐಓಎಸ್ 8 ಅನ್ನು ಚಾಲನೆ ಮಾಡಬಹುದಾಗಿದ್ದರೂ, ಆದರೂ ಇದರ ಪರ್ಫೋನ್ಸ್ ಯಾವಾಗಲೂ ಅದ್ಭುತವಾಗಿಲ್ಲ. ಎನಿಮೇಶನ್‌ಗಳು, ಕೆಲವೊಮ್ಮೆ ಲೋಡ್ ಆಗುವುದರಲ್ಲಿ ಹೆಚ್ಚಿನ ಸಮಯ, ಹೀಗೆ ಕೆಲವೊಂದು ಸಮಸ್ಯೆಗಳನ್ನು ಇವುಗಳು ಹೊಂದಿವೆ. ಈ ಡಿವೈಸ್‌ಗಳಲ್ಲಿ ಐಓಎಸ್ 7 ಚಾಲನೆಯಾಗುತ್ತಿದ್ದಲಿಂದಲೂ ಇತ್ತೀಚಿನ ಓಎಸ್ ಪತನವನ್ನು ಕಂಡಿದೆ.

ಹಳೆಯ ಡಿವೈಸ್‌ಗಳಲ್ಲಿ ಕಾರ್ಯಕ್ಷಮತೆ ಸುಧಾರಣೆ ಆಪಲ್ ಮುನ್ನಡೆ

ಐಓಎಸ್ 8 ನವೀಕರಿಸುತ್ತಿರುವ ಸಂದರ್ಭದಲ್ಲೇ, ಆಪಲ್ ಸಣ್ಣ ನವೀಕರಣವನ್ನು ಓಎಸ್ ಎಕ್ಸ್ ಯೋಸ್ಮಿಟ್‌ಗೆ ಸಹ ಬಿಡುಗಡೆ ಮಾಡಿದೆ, ಈಗ ಇದನ್ನು ಓಎಸ್ ಎಕ್ಸ್ 10.10.1 ಆಗಿ ಡಬ್ ಮಾಡಲಾಗಿದೆ. ಇದು ವೈಫೈ ಕಾರ್ಯಕ್ಷಮತೆ ಮತ್ತು ಇತರ ಸಮಸ್ಯೆಗಳನ್ನು ಹೊಂದಿಸುತ್ತದೆ.

ಇನ್ನು ಬಳಕೆದಾರರು ತಮ್ಮ ಡಿವೈಸ್‌ಗಳಲ್ಲಿ ಹಸ್ತಚಾಲಿತವಾಗಿ ಈ ನವೀಕರಣವನ್ನು ಸೆಟ್ಟಿಂಗ್ಸ್> ಜನರಲ್>ಸಾಫ್ಟ್‌ವೇರ್ ಅಪ್‌ಡೇಟ್ ಇಲ್ಲಿಗೆ ಹೋಗುವುದರ ಮೂಲಕ ಮಾಡಬಹುದಾಗಿದೆ, ಇಲ್ಲದಿದ್ದಲ್ಲಿ ಆಪಲ್ ಇದನ್ನು ಸ್ವಯಂಚಾಲಿತವಾಗಿ ಬಿಡುಗಡೆಗೊಳಿಸುವವರೆಗೆ ನಿರೀಕ್ಷಿಸಬಹುದು.

Best Mobiles in India

English summary
This article tells about Apple releases iOS 8.1.1 to improve performance on older devices.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X