ಐಟ್ಯೂನ್ಸ್ ಅಪ್ಲಿಕೇಶನ್‌ನಿಂದ ಬಿಲ್ಟ್ ಇನ್ ಅಪ್ಲಿಕೇಶನ್ ಸ್ಟೋರ್ ತೆಗೆದುಹಾಕುತ್ತಿರುವ ಆಪಲ್
ಆಪಲ್ ಐಟ್ಯೂನ್ಸ್ ಅಪ್ಲಿಕೇಶನ್‌ನಿಂದ ಬಿಲ್ಟ್ ಇನ್ ಅಪ್ಲಿಕೇಶನ್ ಸ್ಟೋರ್ ಅನ್ನು ಕಂಪನಿಯು ತೆಗೆದುಹಾಕುತ್ತಿದ್ದು ಇದು ಏಕೆ ಎಂಬುದರ ಕಾರಣವಿನ್ನೂ ತಿಳಿದು ಬಂದಿಲ್ಲ.
ಈಗಾಗಲೇ ನಮಗೆ ತಿಳಿದಿರುವಂತೆ ಆಪಲ್ ಹೊಸ ಐಫೋನ್‌ಗಳಾದ ಐಫೋನ್ 8, ಐಫೋನ್ 8 ಪ್ಲಸ್ ಮತ್ತು ಐಫೋನ್ ಎಕ್ಸ್ ಅನ್ನು ಲಾಂಚ್ ಮಾಡಿದೆ. ಬಳಕೆದಾರರಿಗೆ ಅತ್ಯುನ್ನತ ಫೋನ್‌ಗಳನ್ನು ನೀಡುತ್ತಿರುವ ಕ್ಯುಪರ್ಟಿನೊ ದೈತ್ಯ ಇದೀಗ ಕೆಲವೊಂದು ವೈಶಿಷ್ಟ್ಯಗಳನ್ನು ಸುಧಾರಿಸುವ ನಿಟ್ಟಿನಲ್ಲಿ ಮಹತ್ವದ ಯೋಜನೆಗಳನ್ನು, ತೀರ್ಮಾನಗಳನ್ನು ಕೈಗೊಳ್ಳುತ್ತಿದೆ.

ತನ್ನ ಐಟ್ಯೂನ್ಸ್ ಅಪ್ಲಿಕೇಶನ್‌ನಿಂದ ಬಿಲ್ಟ್ ಇನ್ ಅಪ್ಲಿಕೇಶನ್ ಸ್ಟೋರ್ ಅನ್ನು ಕಂಪನಿಯು ತೆಗೆದುಹಾಕುತ್ತಿದ್ದು ಇದು ಏಕೆ ಎಂಬುದರ ಕಾರಣವಿನ್ನೂ ತಿಳಿದು ಬಂದಿಲ್ಲ. ಐಟ್ಯೂನ್ಸ್ ಅಪ್ಲಿಕೇಶನ್‌ಗಳಲ್ಲಿ ಅಪ್ಲಿಕೇಶನ್ ಸ್ಟೋರ್ ಮಹತ್ವದ ಭಾಗವಾಗಿದೆ ಅದಾಗ್ಯೂ ಕಂಪನಿ ಈ ರೀತಿಯ ತೀರ್ಮಾನವನ್ನು ಕೈಗೊಂಡಿದೆ.
ಕಂಪನಿ ಹೇಳುತ್ತಿರುವಂತೆ ಈಗ ಅದು ಸಂಗೀತ, ಚಲನಚಿತ್ರ, ಟಿವಿ ಶೋಗಳು, ಪೋಡ್‌ಕಾಸ್ಟ್‌ಗಳು ಮತ್ತು ಇತರ ಮನರಂಜನಾ ವಿಷಯಗಳಿಂದ ಅಪ್ಲಿಕೇಶನ್ ಗಮನವನ್ನು ಬೇರೆಡೆಗೆ ತಿರುಗಿಸಲಿದೆ ಎಂದಾಗಿದೆ.
ನೀವು ಐಟ್ಯೂನ್ಸ್ ಆವೃತ್ತಿ 12.7 ಅನ್ನು ಅಪ್‌ಡೇಟ್ ಮಾಡಿಕೊಂಡಿದ್ದರೆ ನಿಮಗೆ ಬಿಲ್ಟ್ ಇನ್ ಅಪ್ಲಿಕೇಶನ್ ಸ್ಟೋರ್ ಮತ್ತು ರಿಂಗ್‌ಟೋನ್ಸ್ ಸೆಕ್ಶನ್ ದೊರೆಯುವುದಿಲ್ಲ. ಇಂಟರ್ನೆಟ್ ರೇಡಿಯೊವನ್ನು ಇದರಲ್ಲಿ ಸೇರಿಸಲಾಗಿದ್ದು ಐಟ್ಯೂನ್ಸ್ ಯು ಕಲೆಕ್ಶನ್ ಅನ್ನು ಪೋಡ್‌ಕಾಸ್ಟ್ ಸೆಕ್ಶನ್‌ಗೆ ಸರಿಸಲಾಗಿದೆ.
ಹೊಸ ಐಟ್ಯೂನ್ಸ್ ಸಂಗೀತ, ಚಲನಚಿತ್ರ, ಟಿವಿ ಶೋಗಳು, ಪೋಡ್‌ಕಾಸ್ಟ್, ಆಡಿಯೋಬುಕ್‌ಗಳಿಗೆ ಗಮನಹರಿಸಲಿದೆ ಎಂಬುದಾಗಿ ಕಂಪನಿ ತಿಳಿಸಿದ್ದು, ಐಫೋನ್, ಐಪ್ಯಾಡ್ ಮತ್ತು ಐಪೋಡ್ ಟಚ್‌ಗೆ ವಿಶೇಷವಾಗಿ ಲಭ್ಯವಿರುವ ಅಪ್ಲಿಕೇಶನ್‌ಗಳು ಹೊಸ ಅಪ್ಲಿಕೇಶನ್ ಸ್ಟೋರ್ ಮತ್ತು ಐಓಎಸ್‌ನಲ್ಲಿ ದೊರೆಯುತ್ತಿದೆ. ಐಟ್ಯೂನ್ಸ್ 12.7 ಅಪ್‌ಡೇಟ್ ಐಓಎಸ್ 11 ಸಾಧನಗಳಿಗೆ ಸಿಂಕ್ ಮಾಡುವ ಸಾಮರ್ಥ್ಯವನ್ನು ನೀಡಲಿದೆ. ಇದರಲ್ಲಿ ಪ್ರೊಫೈಲ್‌ಗಳನ್ನು ರಚಿಸಲು ಸಾಧ್ಯವಾಗಿದ್ದು ಇತರರು ಏನನ್ನು ಆಲಿಸುತ್ತಾರೆ ಎಂಬುದನ್ನು ನಿಮಗೆ ತಿಳಿದುಕೊಳ್ಳಬಹುದಾಗಿದೆ.
ಈ ರೀತಿ ಮಾಡುವುದರಿಂದ ಕಂಪನಿಗೆ ಒಳ್ಳೆಯದು ನಡೆಯಲಿದೆಯೋ ಹಾನಿ ನಡೆಯಲಿದೆಯೋ ಎಂಬುದು ತಿಳಿದು ಬಂದಿಲ್ಲ. ಐಟ್ಯೂನ್ಸ್ ಅಪ್ಲಿಕೇಶನ್‌ನಿಂದ ಆಪಲ್ ಅಪ್ಲಿಕೇಶನ್ ಸ್ಟೋರ್ ಅನ್ನು ತೆಗೆದುಹಾಕುವ ನಿರ್ಧಾರದ ಬಗ್ಗೆ ಇನ್ನೂ ಖಚಿತತೆ ದೊರಕಿಲ್ಲ.


Click it and Unblock the Notifications








