Home
ಸುದ್ದಿಜಾಲ

ಭಾರತದಲ್ಲಿ ಆಪಲ್‌ಗೆ 2025ನೇ ವರ್ಷ ಒಂದು ಮೈಲಿಗಲ್ಲು!..ಏಕೆ ಗೊತ್ತಾ?

ಭಾರತದಲ್ಲಿ ಆಪಲ್‌ಗೆ 2025ನೇ ವರ್ಷ ಒಂದು ಮೈಲಿಗಲ್ಲಾಗಿ ಪರಿಣಮಿಸಿದೆ. ಜಾಗತಿಕವಾಗಿ ಎರಡನೇ ಅತಿ ದೊಡ್ಡ ಸ್ಮಾರ್ಟ್‌ಫೋನ್ ಮಾರುಕಟ್ಟೆಯಾಗಿರುವ ಭಾರತದಲ್ಲಿ ಐಫೋನ್ ಮಾರಾಟವು ಹೊಸ ದಾಖಲೆಗಳನ್ನು ನಿರ್ಮಿಸಿದ್ದು, ಕಂಪನಿಯ ಮಾರುಕಟ್ಟೆ ಪಾಲು ಗಮನಾರ್ಹವಾಗಿ ಹೆಚ್ಚಾಗಿದೆ. ವಿಶೇಷವೆಂದರೆ, ಒಟ್ಟಾರೆ ಸ್ಮಾರ್ಟ್‌ಫೋನ್ ಉದ್ಯಮದಲ್ಲಿ ಹೆಚ್ಚಿನ ಬೆಳವಣಿಗೆ ಕಂಡುಬರದಿದ್ದರೂ, ಆಪಲ್ ಮಾತ್ರ ಸ್ಥಿರವಾಗಿ ಮುನ್ನಡೆ ಸಾಧಿಸಿದೆ. ಇದರಿಂದ ಭಾರತದಲ್ಲಿ ಆಪಲ್‌ಗೆ 2025ನೇ ವರ್ಷ ಒಂದು ಮೈಲಿಗಲ್ಲು ಎಂದು ನಾವು ಹೇಳಬಹುದು

ಮಾರುಕಟ್ಟೆ ಸಂಶೋಧನಾ ಸಂಸ್ಥೆ ಕೌಂಟರ್‌ಪಾಯಿಂಟ್ ರಿಸರ್ಚ್ ಅಂಕಿಅಂಶಗಳ ಪ್ರಕಾರ, 2025ರಲ್ಲಿ ಭಾರತದಲ್ಲಿ ಐಫೋನ್ ಶಿಪ್‌ಮೆಂಟ್‌ಗಳು ದೊಡ್ಡ ಪ್ರಮಾಣದಲ್ಲಿ ಏರಿಕೆಯಾಗಿ, ಆಪಲ್‌ನ ಮಾರುಕಟ್ಟೆ ಪಾಲು 9 ಶೇಕಡಾಗೆ ತಲುಪಿದೆ. 2024ರಲ್ಲಿ ಇದು ಸುಮಾರು 7 ಶೇಕಡಾಗಿತ್ತು. ಈ ಸಾಧನೆ, ಭಾರತದಲ್ಲಿ ಇದುವರೆಗಿನ ಆಪಲ್‌ನ ಅತ್ಯುತ್ತಮ ವಾರ್ಷಿಕ ಪ್ರದರ್ಶನವೆಂದು ಉದ್ಯಮ ತಜ್ಞರು ವಿಶ್ಲೇಷಿಸಿದ್ದಾರೆ.

ಈ ಬೆಳವಣಿಗೆಗೆ ಪ್ರಮುಖ ಕಾರಣವೆಂದರೆ ಆಪಲ್ ತನ್ನ ಉತ್ಪನ್ನ ಪೋರ್ಟ್ಫೋಲಿಯೊವನ್ನು ವಿಸ್ತರಿಸಿರುವುದು. ಇತ್ತೀಚೆಗೆ ಬಿಡುಗಡೆಯಾದ ಐಫೋನ್ 17 ಸರಣಿಯಿಂದ ಹಿಡಿದು, ಐಫೋನ್ 16 ಸರಣಿ ಹಾಗೂ ಹೆಚ್ಚು ಕೈಗೆಟುಕುವ ಐಫೋನ್ 16e ಮಾದರಿವರೆಗೆ ಗ್ರಾಹಕರಿಗೆ ಹಲವು ಆಯ್ಕೆಗಳು ಲಭ್ಯವಾಗಿವೆ. ಇದರ ಜೊತೆಗೆ, ಆನ್‌ಲೈನ್ ಮತ್ತು ಆಫ್‌ಲೈನ್ ಮಾರುಕಟ್ಟೆಗಳಲ್ಲಿ ಐಫೋನ್‌ಗಳ ಸುಲಭ ಲಭ್ಯತೆ, ನೊ-ಕಾಸ್ಟ್ ಇಎಂಐ, ಬ್ಯಾಂಕ್ ರಿಯಾಯಿತಿಗಳು ಮತ್ತು ವಿನಿಮಯ ಆಫರ್‌ಗಳು ಮಾರಾಟವನ್ನು ಮತ್ತಷ್ಟು ಉತ್ತೇಜಿಸಿವೆ.

ಭಾರತದಲ್ಲಿ ಆಪಲ್‌ಗೆ 2025ನೇ ವರ್ಷ ಒಂದು ಮೈಲಿಗಲ್ಲು!..ಏಕೆ ಗೊತ್ತಾ?

ಇನ್ನೊಂದೆಡೆ, 2025ರಲ್ಲಿ ಭಾರತದ ಒಟ್ಟಾರೆ ಸ್ಮಾರ್ಟ್‌ಫೋನ್ ಮಾರುಕಟ್ಟೆ ಬಹುತೇಕ ಸ್ಥಿರವಾಗಿಯೇ ಉಳಿದಿದೆ. ವರ್ಷಪೂರ್ತಿ ಸುಮಾರು 152 ರಿಂದ 153 ಮಿಲಿಯನ್ ಯೂನಿಟ್‌ಗಳಷ್ಟೇ ಶಿಪ್‌ಮೆಂಟ್ ಆಗಿದ್ದು, ಉದ್ಯಮದಲ್ಲಿ ದೊಡ್ಡ ಏರಿಳಿತ ಕಂಡುಬರಲಿಲ್ಲ. ಆದರೆ ಈ ಸಮತಟ್ಟಾದ ಮಾರುಕಟ್ಟೆಯಲ್ಲಿಯೇ ಆಪಲ್ ತನ್ನ ಸ್ಥಾನವನ್ನು ಬಲಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ ಎಂಬುದು ಗಮನಾರ್ಹ ಸಂಗತಿ.

ಉತ್ಪಾದನಾ ವಲಯದಲ್ಲಿಯೂ ಆಪಲ್ ಭಾರತಕ್ಕೆ ಹೆಚ್ಚಿನ ಮಹತ್ವ ನೀಡುತ್ತಿದೆ. ಚೀನಾದ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವ ಉದ್ದೇಶದಿಂದ, ಕಂಪನಿ ತನ್ನ ಅಸೆಂಬ್ಲಿ ಕಾರ್ಯಾಚರಣೆಗಳನ್ನು ಹಂತ ಹಂತವಾಗಿ ಭಾರತಕ್ಕೆ ಸ್ಥಳಾಂತರಿಸುತ್ತಿದೆ. ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್ ಅವರ ಪ್ರಕಾರ, ಭಾರತದಲ್ಲಿ ತಯಾರಾದ ಐಫೋನ್‌ಗಳ ಒಟ್ಟು ರವಾನೆ ಮೌಲ್ಯ ಈಗಾಗಲೇ 50 ಬಿಲಿಯನ್ ಡಾಲರ್‌ಗಳಿಗೆ (ಸುಮಾರು ರೂ. 4.51 ಲಕ್ಷ ಕೋಟಿ) ತಲುಪಿದೆ.

'ಮೇಕ್ ಇನ್ ಇಂಡಿಯಾ' ಯೋಜನೆಯಡಿ ಪಿಎಲ್‌ಐ (PLI) ಪ್ರೋತ್ಸಾಹ ಯೋಜನೆಗೆ ಆಪಲ್ ತನ್ನ ಫಾಕ್ಸ್‌ಕಾನ್ ಸೇರಿದಂತೆ ಒಪ್ಪಂದ ಉತ್ಪಾದಕರ ಮೂಲಕ ಸೇರ್ಪಡೆಗೊಂಡಿದೆ. FY26ರ ಮೊದಲ ಒಂಬತ್ತು ತಿಂಗಳಲ್ಲೇ ಸುಮಾರು 16 ಬಿಲಿಯನ್ ಡಾಲರ್‌ ಮೌಲ್ಯದ ಐಫೋನ್‌ಗಳನ್ನು ಭಾರತದಿಂದ ರಫ್ತು ಮಾಡಲಾಗಿದೆ. FY22ರಿಂದಲೂ ಒಟ್ಟಾರೆ ರಫ್ತು ಮೊತ್ತ 50 ಬಿಲಿಯನ್ ಡಾಲರ್‌ ದಾಟಿರುವುದು ಭಾರತೀಯ ಎಲೆಕ್ಟ್ರಾನಿಕ್ಸ್ ಉತ್ಪಾದನಾ ಕ್ಷೇತ್ರದ ಬಲವನ್ನು ಸ್ಪಷ್ಟಪಡಿಸುತ್ತದೆ.

ಪ್ರಸ್ತುತ ಹಣಕಾಸು ವರ್ಷದ ಅಂತ್ಯಕ್ಕೆ ಇನ್ನೂ ಕೆಲವು ತಿಂಗಳುಗಳು ಉಳಿದಿರುವುದರಿಂದ, ಈ ಅಂಕಿಅಂಶಗಳು ಮುಂದಿನ ದಿನಗಳಲ್ಲಿ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಭಾರತದಲ್ಲಿ ಆಪಲ್‌ನ ಬಲವಾದ ಮಾರಾಟ, ಸ್ಥಳೀಯ ಉತ್ಪಾದನೆ ಮತ್ತು ಹೆಚ್ಚುತ್ತಿರುವ ರಫ್ತುಶವನ್ನು ಜಾಗತಿಕ ಸ್ಮಾರ್ಟ್‌ಫೋನ್ ಉದ್ಯಮದಲ್ಲಿ ಪ್ರಮುಖ ಕೇಂದ್ರವನ್ನಾಗಿ ರೂಪಿಸುತ್ತಿವೆ. ಈ ಬೆಳವಣಿಗೆಗಳು ಭಾರತೀಯ ಗ್ರಾಹಕರು ಹಾಗೂ ಆರ್ಥಿಕತೆಗೆ ದೀರ್ಘಾವಧಿಯಲ್ಲಿ ಮಹತ್ವದ ಲಾಭಗಳನ್ನು ತಂದುಕೊಡುವ ನಿರೀಕ್ಷೆಯಿದೆ. ಈ ಕುರಿತಂತೆ ನಿಮ್ಮ ಅನಿಸಿಕೆ ಏನು ಎಂಬುದನ್ನು ಈ ಕೆಳಗೆ ಕಾಮೆಂಟ್ ಮಾಡಿ ತಿಳಿಸಿ.

Best Mobiles in India

English summary
Apple recorded its best-ever year in India in 2025, with iPhone shipments rising to 14 million units and market share climbing to 9%, driven by a wider product lineup, strong retail presence, and attractive financing offers.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+