Home
ಸುದ್ದಿಜಾಲ

ಟಿಮ್ ಕುಕ್ ನಂತರ ಆಪಲ್‌ನ CEO ಆಗುವ ವ್ಯಕ್ತಿ ಇವರಂತೆ ನೋಡಿ!

ವಿಶ್ವ ಟೆಕ್ ದೈತ್ಯ ಆಪಲ್‌ನಲ್ಲಿ ನಾಯಕತ್ವ ಬದಲಾವಣೆ ಸಾಧ್ಯತೆ ಎಂಬ ಸುದ್ದಿಗಳು ಇತ್ತೀಚಿಗಷ್ಟೇ ಬಿತ್ತರವಾಗಿದ್ದವು. ಆಪಲ್ ಕಂಪನಿ ಈಗ ಕೃತಕ ಬುದ್ಧಿಮತ್ತೆ (AI) ಕ್ಷೇತ್ರದಲ್ಲಿ ಹೊಸ ಹಾದಿಯನ್ನು ಹುಡುಕುತ್ತಿರುವ ವೇಳೆಯಲ್ಲಿ, ಕಂಪನಿಯೊಳಗೆ CEO ಬದಲಾವಣೆ ಕುರಿತ ವದಂತಿಗಳು ಸಾಮಾಜಿಕ ಜಾಲತಾಣಗಳಲ್ಲಿ ಜೋರಾಗಿವೆ. ಪ್ರಸ್ತುತ CEO ಟಿಮ್ ಕುಕ್ (Tim Cook) ನಿವೃತ್ತಿ ವಯಸ್ಸಿನ ಹಂತ ತಲುಪುತ್ತಿರುವ ಹಿನ್ನೆಲೆಯಲ್ಲಿ, ಆಪಲ್ ತನ್ನ ಮುಂದಿನ ನಾಯಕತ್ವಕ್ಕಾಗಿ ಒಳಗಿನಿಂದಲೇ ಒಬ್ಬ ಅಭ್ಯರ್ಥಿಯನ್ನು ತಯಾರಿಸುತ್ತಿದೆ ಎಂಬ ಮಾಹಿತಿ ಹರಿದಾಡುತ್ತಿದೆ. ಆ ಹೆಸರೇ ಜಾನ್ ಟೆರ್ನಸ್ (John Ternus).!

ಈ ಹಿಂದಿನ ದಶಕದಲ್ಲಿ ಸ್ಟೀವ್ ಜಾಬ್ಸ್ ನಂತರ ಬಂದ ಟಿಮ್ ಕುಕ್ ಅವರು ಆಪಲ್ ಅನ್ನು ಅದ್ಭುತ ಭವಿಷ್ಯದತ್ತ ಕೊಂಡೊಯ್ಯುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಇದೀಗ ಟಿಮ್ ಕುಕ್ ಅವರ ಸ್ಥಾನಕ್ಕೆ ಜಾನ್ ಟೆರ್ನಸ್ ಹೆಜ್ಜೆ ಹಾಕುವ ಬಗ್ಗೆ ವದಂತಿಗಳು ಹೆಚ್ಚುತ್ತಿವೆ. ಪ್ರಸ್ತುತ ಜಾನ್ ಟೆರ್ನಸ್ ಅವರು ಆಪಲ್‌ನ ಹಾರ್ಡ್‌ವೇರ್ ಎಂಜಿನಿಯರಿಂಗ್‌ನ ಹಿರಿಯ ಉಪಾಧ್ಯಕ್ಷರಾಗಿದ್ದು, ಕಳೆದ ಎರಡು ದಶಕಗಳಿಂದ ಕಂಪನಿಯ ಪ್ರಮುಖ ಹಾರ್ಡ್‌ವೇರ್ ಯೋಜನೆಗಳಲ್ಲಿ ನಿರಂತರ ಪಾತ್ರವಹಿಸಿದ್ದಾರೆ. ಇದೀಗ 50 ವರ್ಷದ ಎಂಜಿನಿಯರ್ ಜಾನ್ ಟೆರ್ನಸ್ ಅವರೇ ಆಪಲ್‌ನ CEO ಆಗಬಹುದು ಎಂದು ಹೇಳಲಾಗುತ್ತಿದೆ.

ಫಿನಾನ್ಸಿಯಲ್ ಎಕ್ಸ್‌ಪ್ರೆಸ್ ವರದಿ ಮಾಡಿರುವಂತೆ, ಆಪಲ್ ತನ್ನ AI ಮಾರ್ಗಸೂಚಿಯನ್ನು ವೇಗಗೊಳಿಸಲು ಒತ್ತಡವನ್ನು ಎದುರಿಸುತ್ತಿರುವಾಗ ಜಾನ್ ಟೆರ್ನಸ್ ಮೇಲೆ ಬೆಳಕು ಚೆಲ್ಲುತ್ತಿದೆ. ಅದರ Siri ಮತ್ತು Apple Intelligence ಫೀಚರ್‌ಗಳಿಗೆ Google Gemini AI ಮಾದರಿಯನ್ನು ಬಳಸಲು ಕಂಪನಿಯು ಒಪ್ಪಂದ ಮಾಡಿದೆ. ಈ ಬೆಳವಣಿಗೆಯು ಆಪಲ್‌ನ ' ಸ್ವಂತ AI ಅಭಿವೃದ್ಧಿ' ಕುರಿತ ಆತ್ಮವಿಶ್ವಾಸವನ್ನು ಕುಗ್ಗಿಸಿದಂತಾಗಿದೆ. ಇದನ್ನು ಸರಿಪಡಿಸಲು, ಆಪಲ್‌ನೊಳಗೆ ಹೊಸ AI ದೃಷ್ಟಿಕೋನವನ್ನು ರೂಪಿಸಲು ಟೆರ್ನಸ್ ಅವರನ್ನು ಮುಂದಿನ ನಾಯಕತ್ವದ ಭಾಗವನ್ನಾಗಿಸಲು ಚರ್ಚೆ ನಡೆಯುತ್ತಿದೆ ಎಂದು ಹೇಳಿದೆ.

ಟಿಮ್ ಕುಕ್ ನಂತರ ಆಪಲ್‌ನ CEO ಆಗುವ ವ್ಯಕ್ತಿ ಇವರಂತೆ ನೋಡಿ!
AI generated image

ಜಾನ್ ಟೆರ್ನಸ್ ಯಾರು?
ಮೊದಲೇ ಹೇಳಿದಂತೆ, ಜಾನ್ ಟೆರ್ನಸ್ ಅವರು ಪ್ರಸ್ತುತ ಆಪಲ್‌ನ ಹಾರ್ಡ್‌ವೇರ್ ಎಂಜಿನಿಯರಿಂಗ್‌ನ ಹಿರಿಯ ಉಪಾಧ್ಯಕ್ಷರಾಗಿದ್ದು, ಕಳೆದ ಎರಡು ದಶಕಗಳಿಂದ ಕಂಪನಿಯ ಪ್ರಮುಖ ಹಾರ್ಡ್‌ವೇರ್ ಯೋಜನೆಗಳಲ್ಲಿ ನಿರಂತರ ಪಾತ್ರವಹಿಸಿದ್ದಾರೆ. 2001ರಲ್ಲಿ Product Design ತಂಡದ ಸದಸ್ಯರಾಗಿ ಆಪಲ್‌ಗೆ ಸೇರ್ಪಡೆಯಾದ ಅವರು, 2013ರಲ್ಲಿ Hardware Engineering ವಿಭಾಗದ ಉಪಾಧ್ಯಕ್ಷರಾಗಿ ಏರಿದರು. ಇಂದಿನ ದಿನಗಳಲ್ಲಿ ಅವರು iPhone, iPad, ಮತ್ತು Mac ಸರಣಿಗಳ ವಿನ್ಯಾಸ ಮತ್ತು ತಾಂತ್ರಿಕ ಅಭಿವೃದ್ಧಿಗೆ ಮುಂಚೂಣಿಯಲ್ಲಿದ್ದಾರೆ. ಇವರ ಪ್ರಮುಖ ಸಾಧನೆಯಾಗಿ, ಆಪಲ್‌ನ ಸ್ವಂತ Apple Silicon (M-ಸರಣಿಯ ಚಿಪ್‌ಗಳು) ಗೆ ಮಾಡಿದ ಪರಿವರ್ತನೆ ಎಂದು ಗುರುತಿಸಲಾಗಿದೆ. ಈ ಬದಲಾವಣೆ ಮ್ಯಾಕ್ ಉತ್ಪನ್ನಗಳ ಸಾಮರ್ಥ್ಯವನ್ನು ಹೊಸ ಮಟ್ಟಕ್ಕೆ ಕೊಂಡೊಯ್ದು, ಆಪಲ್‌ನ್ನು ತಾಂತ್ರಿಕ ಸ್ವಾವಲಂಬನೆಯ ಹಾದಿಯಲ್ಲಿ ಮುಂದೂಡಿತು ಎಂದು ಹೇಳಲಾಗಿದೆ.

ಟಿಮ್ ಕುಕ್ ಅವರು ತಕ್ಷಣ ನಿವೃತ್ತಿಯಾಗುವ ಯಾವುದೇ ಅಧಿಕೃತ ಸೂಚನೆಗಳಿಲ್ಲದಿದ್ದರೂ, ಆಪಲ್ ಒಳಗೆ ಜಾನ್ ಟೆರ್ನಸ್ ಅವರನ್ನು 'ಭವಿಷ್ಯದ CEO' ಎಂದು ಪರಿಗಣಿಸಲಾಗುತ್ತಿದೆ. ಅವರ ತಾಂತ್ರಿಕ ನಾಯಕತ್ವ, ಉತ್ಪನ್ನ ಕೇಂದ್ರೀಕೃತ ದೃಷ್ಟಿಕೋಣ, ಹಾಗೂ ಆಪಲ್‌ನ ಮೌಲ್ಯಗಳನ್ನು ಉಳಿಸುವ ಶೈಲಿ ಇವುಗಳೆಲ್ಲ ಅವರನ್ನು ಈ ಹುದ್ದೆಗೆ ಶಕ್ತಿಯುತ ಅಭ್ಯರ್ಥಿಯನ್ನಾಗಿಸುತ್ತಿವೆ .ವಿಶ್ಲೇಷಕರ ಪ್ರಕಾರ, ಟೆರ್ನಸ್ ನೇತೃತ್ವದಲ್ಲಿ ಆಪಲ್ ಮತ್ತೆ ತನ್ನ ಮೂಲ ತತ್ತ್ವವಾದ 'ಉತ್ಪನ್ನವೇ ಕೇಂದ್ರ, ಅನುಭವವೇ ಪ್ರಾಮುಖ್ಯ' ಎಂಬ ಧೋರಣೆಗೆ ಹಿಂದಿರುಗಬಹುದು. AI ಯುಗದಲ್ಲಿ ಹಾರ್ಡ್‌ವೇರ್ ಮತ್ತು ಸಾಫ್ಟ್‌ವೇರ್ ನಡುವೆ ಸಮತೋಲನ ಸಾಧಿಸುವಲ್ಲಿ ಅವರು ಪ್ರಮುಖ ಪಾತ್ರವಹಿಸುವ ನಿರೀಕ್ಷೆಯಿದೆ. ಸ್ಟೀವ್‌ ಜಾಬ್ಸ್ ಮತ್ತು ಟಿಮ್ ಕುಕ್ ಅವರಂತೆಯೇ ಜಾನ್ ಟೆರ್ನಸ್ ಅವರು ಆಪಲ್‌ನ ಚುಕ್ಕಾಣಿ ಹಿಡಿಯಬಹುದೇ?. ಈ ಕುರಿತಂತೆ ನಿಮ್ಮ ಅನಿಸಿಕೆ ಏನು?, ಕೆಳಗೆ ಕಾಮೆಂಟ್ ಮಾಡಿ ತಿಳಿಸಿ.

ಆಧಾರ: ಫಿನಾನ್ಸಿಯಲ್ ಎಕ್ಸ್‌ಪ್ರೆಸ್

Best Mobiles in India

English summary
Tim Cook, who took over from Steve Jobs and guided Apple through a decade of remarkable growth, may soon be passing the baton. Rumors are now intensifying that John Ternus could be the one to step in as Apple’s next leader.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+