ಐಫೋನ್ ಖರೀದಿಸಲಿರುವವರಿಗೆ ಸಿಹಿಸುದ್ದಿ!: ಐಫೋನ್ 8ರಲ್ಲಿ ಇರಲಿದೆ 'ಟ್ರೂ ಟೋನ್ ಡಿಸ್ಪ್ಲೇ'!!
ಸದ್ಯ ಇಂಟರ್'ನೆಟ್ ನಲ್ಲಿ ಹರಿದಾಡುತ್ತಿರುವಂತೆ ಆ್ಯಪಲ್ ಇನ್ನು ಮುಂದೆ ಲಾಂಚ್ ಮಾಡಲಿರುವ ಐಫೋನ್'ಗಳು ‘ಟ್ರೂ ಟೋನ್ ಕಲರ್’ ಡಿಸ್ಪ್ಲೇಯನ್ನು ಹೊಂದಲಿವೆಯೆಂದು ತಿಳಿದು ಬಂದಿದೆ.
ಈಗಾಗಲೇ ಜನರ ಫೇವರಿಟ್ ಎನಿಸಿಕೊಂಡಿರುವ ಆ್ಯಪಲ್ ಈ ವರ್ಷದ ಕೊನೆಯಲ್ಲಿ ಮತ್ತೊಂದು ಟಾಪ್ ಎಂಡ್ ಐಫೋನ್ ಬಿಡುಗಡೆಗೊಳಿಸಲು ಸಿದ್ಧತೆ ನಡೆಸುತ್ತಿದೆ. ಪ್ರತಿ ಬಾರಿ ಆ್ಯಪಲ್ ತನ್ನ ಐಫೋನ್'ಗಳಲ್ಲಿ ಹೊಸ ಫೀಚರ್'ಗಳನ್ನು ನೀಡಿ ಸುದ್ದಿಯಾಗುತ್ತಿರುವುದರಿಂದ ಈ ಬಾರಿ ಬಿಡುಗಡೆಯಾಗಲಿರುವ ಐಫೋನ್ ಬಗ್ಗೆಯೂ ಜನರಲ್ಲಿ ಕುತೂಹಲ ಹಾಗೂ ನಿರೀಕ್ಷೆಗಳಿವೆ.
ಇವೆಲ್ಲದರ ಮಧ್ಯೆ ಟಾಪ್ ಎಂಡ್ ಐಫೋನಿನಲ್ಲಿರುವ ಫೀಚರ್ ಬ್ಗಗೆ ರೂಮರ್ ಒಂದು ಹರಿದಾಡಲಾರಂಭಿಸಿದೆ, ಇದು ಐಫೋನ್ ಪ್ರಿಯರನ್ನು ಖುಷಿಗೊಳಿಸುವುದರಲ್ಲಿ ಅನುಮಾನವಿಲ್ಲ.
ಸಾಮಾಜಿಕ ಜಾಲಾತಾಣಗಳಲ್ಲಿ ಹರಿದಾಡುತ್ತಿರುವ ಸುದ್ದಿಯನ್ವಯ ಈ ಐಫೋನ್'ಗಳಲ್ಲಿ 'ಟ್ರೂ ಟೋನ್ ಡಿಸ್ಪ್ಲೇ'ಗಳನ್ನು ಹೊಂದಲಿವೆ ಎಂದು ತಿಳಿದು ಬಂದಿದೆ. ಮಾಕ್ರೂಮರ್ಸ್ ಎಂಬ ವೆಬ್'ಸೈಟ್ ಇಂತಹುದ್ದೊಂದು ಸುದ್ದಿ ಬಿತ್ತರಿಸಿದ್ದು, ಲಾಂಚ್ ಆಗಲಿರುವ ಐಫೋನ್ 7ಎಸ್, ಐಪೋನ್ 7S ಮತ್ತು ಐಫೋನ್ 8 ಫೋನ್'ಗಳಲ್ಲಿ OLED ಡಿಸ್'ಪ್ಲೇ ಜೊತೆಗೆ ಅತ್ಯುತ್ತಮ ತಂತ್ರಜ್ಞಾನದ ಸ್ಪೆಕ್ಟ್ರಾಲ್ ಸೆನ್ಸಿಂಗ್ ಏಂಬಿಯೆಂಟ್ ಲೈಟ್ ಸೆನ್ಸಾರ್ ಅಳವಡಿತವಾಗಿರುತ್ತದೆ. ಇದರಿಂದ ಉತ್ಕೃಷ್ಟ ಕಲರ್ ಸ್ಕ್ರೀನ್ ನಿಮಗೆ ಕಾಣಸಿಗುತ್ತದೆ.
ಐಫೋನ್'ಗೆ ಅಳವಡಿಸುವ ಸೆನ್ಸಾರ್ ಕುರಿತಾಗಿ ಮಾಹಿತಿ ನೀಡಿರುವ ಈ ವೆವ್ಸೈಟ್ ಇವುಗಳನ್ನು 'ಆಸ್ಟ್ರಿಯನ್ ಸೆಮಿಕಂಡಕ್ಟರ್ ಮ್ಯಾನುಫ್ಯಾಕ್ಚರರ್' ಕಂಪೆನಿ ಪೂರೈಕೆ ಮಾಡಲಿರುವುದಾಗಿ ತಿಳಿಸಿದೆ.
ಓದಿರಿ: ಎಪ್ರಿಲ್ 2017 ರಲ್ಲಿ ಕೊಳ್ಳಬಹುದಾದ ಉತ್ತಮ ಸ್ಮಾರ್ಟ್‍ಫೋನ್‍ಗಳು
ಈವರೆಗೆ ಇಂತಹುದ್ದೊಂದು ವೈಶಿಷ್ಟ್ಯವಿರುವ 'ಟ್ರೂ ಟೋನ್ ಡಿಸ್ಪ್ಲೇ'ಗಳನ್ನು ಆ್ಯಪಲ್ ಕೇವಲ ತನ್ನ ಐಪಾಡ್ ಪ್ರೋ ಗಳಲ್ಲಿ ಅಳವಡಿಸಿತ್ತು. ಆದರೆ ಸ್ಮಾರ್ಟ್'ಫೋನ್ ಕ್ಷೇತ್ರದಲ್ಲಿ ದಿನಗಳೆದಂತೆ ಹೆಚ್ಚುತ್ತಿರುವ ಸ್ಪರ್ಧೆಯಿಂದಾಗಿ ಆ್ಯಪಲ್ ಬಿಡುಗಡೆಗೊಳ್ಳಲಿರುವ ಐಫೋನ್'ನಲ್ಲೂ ಈ ವೈಶಿಷ್ಟ್ಯವುಳ್ಳ ತಂತ್ರಜ್ಞಾನವನ್ನು ಪರಿಚಯಿಸುವ ಸಾಹಸ ಮಾಡಿದೆ.
ಇದು ಸದ್ಯ ಸಾಮಾಜಿಕ ಜಾಲಾತಾಣಗಳಲ್ಲಿ ಹರಿದಾಡುತ್ತಿರುವ ಅಂತೆ ಕಂತೆಗಳಾಗಿದ್ದು, ಆ್ಯಪಲ್ ಮಾಹಿತಿಯನ್ನು ಇನ್ನೂ ದೃಢೀಕರಿಸಿಲ್ಲ, ಅಧಿಕೃತ ಹೇಳಿಕೆ ಬಳಿಕವಷ್ಟೇ ಖಚಿತವಾಗಬೇಕಿದೆ. ಅದೇನಿದ್ದರೂ ಈ ಸುದ್ದಿ ಐಫೋನ್ ಖರೀದಿಸಲು ಸಜ್ಜಾಗಿರುವವರಿಗೆ ಖುಷಿಪಡಿಸುವುದರಲ್ಲಿ ಅನುಮಾನವಿಲ್ಲ.


Click it and Unblock the Notifications









