2018ರಲ್ಲಿ ಆಪಲ್ ಕಂಪೆನಿಯ ಸಿಇಒ ಪಡೆದ ಸಂಬಳ ಎಷ್ಟು ಗೊತ್ತಾ?

|

ಇತ್ತಿಚಿಗಷ್ಟೇ 100 ಟ್ರಿಲಿಯನ್ ಡಾಲರ್ ಮೌಲ್ಯದ ಮೊಟ್ಟ ಮೊದಲ ಟೆಕ್ ಕಂಪೆನಿ ಎಂದು ಹೆಸರಾದ ಆಪಲ್ ಈಗ ಮತ್ತೆ ಸುದ್ದಿಯಲ್ಲಿದೆ. ಆಪಲ್ ಕಂಪೆನಿಯ ಸಿಇಒ ಟಿಮ್ ಕುಕ್‌ ಅವರು 2018ನೇ ವರ್ಷದಲ್ಲಿ ಬರೋಬ್ಬರಿ 110 ಕೋಟಿ ರೂ.ಗಳಿಗಿಂತ ಹೆಚ್ಚು ವೇತನ ಪಡೆದು ಗಮನಸೆಳೆದಿದ್ದಾರೆ. ಇದರಲ್ಲಿ 84 ಕೋಟಿ ರೂ.ಗಳನ್ನು ಬೋನಸ್ ರೂಪದಲ್ಲಿ ಪಡೆದುಕೊಂಡಿದ್ದಾರೆ.

ಹೌದು, ಸೆಕ್ಯುರಿಟೀಸ್ ಅಂಡ್ ಎಕ್ಸ್‌ಚೇಂಜ್ ಕಮೀಷನ್ ಫೈಲಿಂಗ್ ಸಂದರ್ಭದಲ್ಲಿ ಆಪಲ್ ಕಂಪೆನಿ ಈ ವಿವರಗಳನ್ನು ಬಹಿರಂಗಪಡಿಸಿದ್ದು, 2018ನೇ ವರ್ಷದಲ್ಲಿ ಸಿಇಒ ಟಿಮ್ ಕುಕ್‌ ಅವರು ಒಟ್ಟು 15.7 ಮಿಲಿಯನ್ ಡಾಲರ್ ಹಣವನ್ನು ವೇತನವಾಗಿ ಪಡೆದಿರುವುದನ್ನು ಖಚಿತಪಡಿಸಿದೆ. ಭಾರತೀಯ ಕರೆನ್ಸಿಯಲ್ಲಿ ಇದರ ಮೌಲ್ಯ ಸುಮಾರು 110 ಕೋಟಿ ರೂ.ಗಳಿಗಿಂತ ಹೆಚ್ಚಾಗಲಿದೆ.

2018ರಲ್ಲಿ ಆಪಲ್ ಕಂಪೆನಿಯ ಸಿಇಒ ಪಡೆದ ಸಂಬಳ ಎಷ್ಟು ಗೊತ್ತಾ?

'2018ರಲ್ಲಿ ಆಪಲ್ ಸಂಸ್ಥೆ 265.6 ಬಿಲಿಯನ್ ಡಾಲರ್‌ಗಳಷ್ಟು ವ್ಯವಹಾರ ನಡೆಸಿದ್ದು, ಕಂಪೆನಿಗೆ 70.9 ಬಿಲಿಯನ್ ಡಾಲರ್ ಆದಾಯ ಹರಿದು ಬಂದಿದೆ. ಇದು ಹಿಂದಿನ ವರ್ಷಕ್ಕೆ ಹೋಲಿಸಿದರೆ ಇದು ಶೇ.16 ಪಟ್ಟು ಜಾಸ್ತಿ. ಹಾಗಾಗಿ, ಆಪಲ್ ಉತ್ಪನ್ನಗಳ ಮಾರಾಟ ಭಾರೀ ಹೆಚ್ಚಾಗಿರುವ ಕಾರಣ ಬೋನಸ್ ಸಹ ಹೆಚ್ಚಾಗಿ ನೀಡಲಾಗಿದೆ ಎಂದು ಆಪಲ್ ಕಂಪೆನಿ ಫೈಲಿಂಗ್ನಲ್ಲಿ ತಿಳಿಸಿದೆ.

ಇನ್ನು 2011ರಲ್ಲಿ ಆಪಲ್ ಸಿಇಒ ಆಗಿ ಅಧಿಕಾರ ಸ್ವೀಕರಿಸಿದ ಟೀಮ್ ಕುಕ್ ಅವರು ಇದೇ ಭಾರಿ ಇಷ್ಟು ದೊಡ್ಡ ಮೊತ್ತದ ವೇತನ ಪಡೆದಿದ್ದಾರೆ. 2016ರಲ್ಲಿ ಟಿಮ್ ಕುಕ್ ವೇತನ 8.7 ಮಿಲಿಯನ್ ಡಾಲರ್‌ಗಳಷ್ಟಿದ್ದರೆ, ಕಳೆದ ವರ್ಷ 12.8 ಮಿಲಿಯನ್ ಡಾಲರ್ ವೇತನ ಪಡೆದಿದ್ದಾದ್ದರು. ಆದರೆ,ಈ ಬಾರಿ ಅವರ ವೇತನ ಮತ್ತಷ್ಟು ಜಿಗಿದು ಒಟ್ಟು 15.7 ಮಿಲಿಯನ್ ವೇತನವನ್ನು ಪಡೆದಿದ್ದಾರೆ.

2018ರಲ್ಲಿ ಆಪಲ್ ಕಂಪೆನಿಯ ಸಿಇಒ ಪಡೆದ ಸಂಬಳ ಎಷ್ಟು ಗೊತ್ತಾ?

ಕೇವಲ ಟೀಮ್ ಕುಕ್ ಮಾತ್ರವಲ್ಲದೆ ನಮ್ಮ ಎಗ್ಸಿಕ್ಯೂಟೀವ್ ಅಧಿಕಾರಿಗಳ ವೇತನ ಮತ್ತು ಬೋನಸ್ ಅನ್ನು ಸಹ ಹೆಚ್ಚಿಸಲಾಗಿದೆ ಎಂದು ಆಪಲ್ ತಿಳಿಸಿದೆ. ವಿಶ್ವದಾಧ್ಯಂತ ಮಾರುಕಟ್ಟೆಯನ್ನು ವಿಸ್ತರಿಸಿಕೊಂಡಿರುವ ಆಪಲ್ ತನ್ನ ಎಲ್ಲಾ ಉತ್ಪನ್ನಗಳ ಗುಣಮಟ್ಟ ಮತ್ತು ಸುರಕ್ಷಿತೆಗೆ ಮತ್ತೊಂದು ಹೆಸರಾಗಿದೆ. ಇದು ಆಪಲ್ ಕಂಪೆನಿಯನ್ನು ಮತ್ತಷ್ಟು ಎತ್ತರಕ್ಕೇರಿಸಿದೆ ಎಂದು ಹೇಳಬಹುದು.

Best Mobiles in India

English summary
Apple's Tim Cook got big pay bump in 2018. Apple gave its chief executive Tim Cook a hefty 22 per cent pay raise in 2018. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X