Home
ಸುದ್ದಿಜಾಲ

ಆಪಲ್, ಸ್ಯಾಮ್‌ಸಂಗ್ ಕಂಪೆನಿಗಳಿಗೆ ಕೋಟಿಗಟ್ಟಲೆ ದಂಡ!..ಬೆಚ್ಚಿಬೀಳಿಸುವ ಕಾರಣ!!

ಆಪಲ್ ಮತ್ತು ಸ್ಯಾಮ್‌ಸಂಗ್ ಮೊಬೈಲ್ ಸಂಸ್ಥೆಗಳು ಗ್ರಾಹಕರಿಗೆ ಪದೇ ಪದೇ ಸಾಫ್ಟ್‌ವೇರ್ ಅಪ್ ಡೇಟ್ ಮಾಡುವುದಕ್ಕೆ ತನ್ನ ಮೊಬೈಲ್ ಬಳಕೆದಾರರಿಗೆ ಪ್ರೇರೇಪಿಸುತ್ತಿವೆ. ಇದರಿಂದಾಗಿ ಸ್ಮಾರ್ಟ್‌ಫೋನ್ ಚಟುವಟಿಕೆ ನಿಧಾನವಾಗಿ ಮೊಬೈಲ್ ಬದಲಾವಣೆ ಮಾಡುವ ಅನಿವಾರ್ಯತೆ ಸೃಷ್ಟಿಸುತ್ತಿದೆ ಎಂದು ಈ ಎರಡು ಮೊಬೈಲ್ ಕಂಪೆನಿಗಳಿಗೆ ಭಾರೀ ದಂಡ ವಿಧಿಸಲಾಗಿದೆ.

ಹೌದು, ಎರಡೂ ಸಂಸ್ಥೆಗಳೂ ಅಪ್ರಾಮಾಣಿಕ ವಾಣಿಜ್ಯ ಆಚರಣೆಗಳಲ್ಲಿ ತೊಡಗಿವೆ ಎಂದು ಇಟಲಿಯ ಎಜಿಸಿಎಂ ಆರೋಪಿಸಿದ್ದು, ಸಾಫ್ಟ್ ವೇರ್ ಅಪ್ಡೇಟ್ ಮಾಡಲು ಪ್ರೇರೇಪಿಸಿ ಮೊಬೈಲ್‌ ಅನ್ನು ನಿಧಾನಗೊಳಿಸುತ್ತಿದ್ದ ಆಪಲ್, ಸ್ಯಾಮ್ ಸಂಗ್ ಸಂಸ್ಥೆಗಳಿಗೆ ಈ ಸಂಸ್ಥೆ ಮಿಲಿಯನ್ ಗಟ್ಟಲೆ ದಂಡ ವಿಧಿಸಿದೆ. ಇದರಿಂದ ಮೊಬೈಲ್‌ ಕಂಪೆನಿಗಳ ಮೋಸ ಮತ್ತೆ ಬಟ ಬಯಲಾಗಿದೆ.

ಆಪಲ್, ಸ್ಯಾಮ್‌ಸಂಗ್ ಕಂಪೆನಿಗಳಿಗೆ ಕೋಟಿಗಟ್ಟಲೆ ದಂಡ!..ಬೆಚ್ಚಿಬೀಳಿಸುವ ಕಾರಣ!!

ಆಪಲ್ ಹಾಗೂ ಸ್ಯಾಮ್ ಸಂಗ್ ಸಂಸ್ಥೆಗಳು ಅಪ್ರಾಮಾಣಿಕ ವಾಣಿಜ್ಯ ಆಚರಣೆಗಳಲ್ಲಿ ತೊಡಗಿವೆ ಎಂದು ಇಟಲಿಯ 'ಕಾಂಪಿಟೇಶನ್ ಅಥಾರಿಟಿ' ಆರೋಪಿಸಿದ್ದು, ಕ್ರಮವಾಗಿ 11.41 ಮಿಲಿಯನ್ ಹಾಗೂ 5.7 ಮಿಲಿಯನ್ ಡಾಲರ್ ದಂಡವನ್ನು ವಿಧಿಸಿದೆ. ಹಾಗಾದರೆ, ಏನಿದು ಶಾಕಿಂಗ್ ವರದಿ? ಮೊಬೈಲ್ ಕಂಪೆನಿಗಳ ಮೋಸ ಬಯಲಾಗಿದ್ದು ಹೇಗೆ ಎಂಬುದನ್ನು ಮುಂದೆ ಓದಿ ತಿಳಿಯಿರಿ.

ಮೊಬೈಲ್ ದಿಗ್ಗಜರಿಗೆ ಭಾರೀ ದಂಡ!

ಮೊಬೈಲ್ ದಿಗ್ಗಜರಿಗೆ ಭಾರೀ ದಂಡ!

ವಿಶ್ವದ ಮೊದಲೆರಡು ದಿಗ್ಗಜ ಮೊಬೈಲ್ ಸಂಸ್ಥೆಗಳಿಗೆ ಇಟಲಿಯ 'ಕಾಂಪಿಟೇಶನ್ ಅಥಾರಿಟಿ' ಕ್ರಮವಾಗಿ 11.41 ಮಿಲಿಯನ್ ಹಾಗೂ 5.7 ಮಿಲಿಯನ್ ಡಾಲರ್ ದಂಡವನ್ನು ವಿಧಿಸಿದೆ. ಅಂದರೆ, ಭಾರತೀಯ ರೂಪಾಯಿಗಳ ಲೆಕ್ಕದಲ್ಲಿ, ಆಪಲ್‌ಗೆ 81 ಕೋಟಿ ಹಾಗೂ ಸ್ಯಾಮ್‌ಸಂಗ್‌ಗೆ 41 ಕೋಟಿ ರೂ.ಗಳ ದಂಡವನ್ನು ವಿಧಿಸಲಾಗಿದೆ. ಇದರಿಂದ ಇವುಗಳ ಮೋಸ ಮತ್ತೆ ಬಯಲಾಗಿದೆ.

ಮೋಸ ಬಯಲಾಗಿದ್ದು ಹೇಗೆ?

ಮೋಸ ಬಯಲಾಗಿದ್ದು ಹೇಗೆ?

ಇಟಲಿಯ ಎಜಿಸಿಎಂ ವರದಿಯಂತೆ, ಆಪಲ್ ಕಂಪೆನಿ ಉದ್ದೇಶಪೂರ್ವಕವಾಗಿ ಗ್ರಾಹಕರನ್ನು ದಾರಿ ತಪ್ಪಿಸಲು ಪ್ರಯತ್ನಿಸಿದೆ ಎಂದು ವರದಿಯಲ್ಲಿ ತಿಳಿಸಿದೆ. ಸ್ಯಾಮ್‌ಸಂಗ್ ಸಂಸ್ಥೆ ಕೂಡ ಇದೆ ಕೆಲಸವನ್ನು ಮಾಡಿದ್ದು, ಈ ಎರಡೂ ಕಂಪೆನಿಗಳು ತಮ್ಮ ಅಪ್ರಾಮಾಣಿಕ ಅಭ್ಯಾಸಗಳ ತೀವ್ರತೆಯನ್ನು ಪ್ರತಿಬಿಂಬಿಸುವ ಸಾಧ್ಯತೆಗಳಿಗೆ ದಂಡ ವಿಧಿಸಲಾಗಿದೆ ಎಂದು ವರದಿಯಲ್ಲಿ ಹೇಳಿದೆ.

ತಂತ್ರಜ್ಞಾನ ಕಂಪೆನಿಗಳ ಮೋಸ!

ತಂತ್ರಜ್ಞಾನ ಕಂಪೆನಿಗಳ ಮೋಸ!

ತಂತ್ರಜ್ಞಾನ ಕಂಪೆನಿಗಳು ಹೊಸ ಉತ್ಪನ್ನಗಳ ಮಾರಾಟ ಹೆಚ್ಚಿಸಲು ಹಳೆ ಮೊಬೈಲ್‌ಗಳ ವೇಗವನ್ನು ಉದ್ದೇಶಪೂರ್ವಕವಾಗಿ ಕಡಿಮೆ ಮಾಡುತ್ತವೆ ಎಂದು ಹೇಳಲಾಗಿತ್ತು. ಒಂದು ಹೊಸ ಮೊಬೈಲ್ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದಾಗ ಅವುಗಳ ಮಾರಾಟ ಹೆಚ್ಚಿಸುವ ಸಲುವಾಗಿ ಕಂಪೆನಿ ಹೀಗೆ ಮಾಡುತ್ತಿವೆ. ದಂಡ ವಿಧಿಸಿರುವ ಪ್ರಕರಣಗಳು ಇದನ್ನು ದೃಢೀಕರಿಸಿವೆ.

ಹುಟ್ಟಿದೆ ಪರ ಮತ್ತು ವಿರೋಧ!

ಹುಟ್ಟಿದೆ ಪರ ಮತ್ತು ವಿರೋಧ!

ಸಾಫ್ಟ್ ವೇರ್ ಅಪ್ಡೇಟ್ ಮಾಡಲು ಪ್ರೇರೇಪಿಸಿ ಮೊಬೈಲ್‌ ಅನ್ನು ನಿಧಾನಗೊಳಿಸುತ್ತಿದ್ದ ಆಪಲ್, ಸ್ಯಾಮ್ ಸಂಗ್ ಸಂಸ್ಥೆಗಳಿಗೆ ಈ ಸಂಸ್ಥೆ ಮಿಲಿಯನ್ ಗಟ್ಟಲೆ ದಂಡ ವಿಧಿಸಿದ ನಂತರ ಈ ಬಗ್ಗೆ ಪರ ಮತ್ತು ವಿರೋಧ ವಾದಗಳು ಹುಟ್ಟಿಕೊಂಡಿವೆ. ಇದು ಮೋಸವೆಂದೇ ಹಲವರು ಅಭಿಪ್ರಾಯ ಪಡುತಿದ್ದರೆ, ಕೆಲ ತಜ್ಞರು ಇದು ಮೊಬೈಲ್ ಕಂಪೆನಿಗಳ ತಪ್ಪಲ್ಲ ಎಂದು ಹೇಳುತ್ತಿವೆ.

ದಿಗ್ಗಜರು ಒಪ್ಪಲು ತಯಾರಿಲ್ಲ!

ದಿಗ್ಗಜರು ಒಪ್ಪಲು ತಯಾರಿಲ್ಲ!

ಮೊಬೈಲ್ ‘ಕಂಪೆನಿಗಳು ಉದ್ದೇಶಪೂರ್ವಕವಾಗಿ ಹಳೆಯ ಫೋನ್‌ ನಿಧಾನವಾಗುವಂತೆ ಮಾಡಲು ಯಾವುದೇ ಬಲವಾದ ಕಾರಣಗಳಿಲ್ಲ' ಎಂದು ಮೈಕ್ರೋಸಾಫ್ಟ್‌ನ ಮಾಜಿ ಪ್ರೋಗ್ರಾಂ ಮ್ಯಾನೇಜರ್ ‘ಗ್ರೆಗ್ ರೈಜ್' ಅವರು ಹೇಳುತ್ತಾರೆ. ಸಾಫ್ಟ್‌ವೇರ್ ಅಪ್‌ಡೇಟ್ ಆದಂತೆ ಮೊಬೈಲ್‌ಗಳಲ್ಲಿ ಸಿಗುವ ಸೇವೆಗಳು ಹೆಚ್ಚಾಗಿ ಮೊಬೈಲ್‌ಗಳ ವೇಗ ಕಡಿಮೆಯಾಗುತ್ತವೆ ಎಂದಿದ್ದಾರೆ.

ಶೇಕಡಾ 50ರಷ್ಟು ಜನರು ಸಹ ಒಪ್ಪುತ್ತಾರೆ.

ಶೇಕಡಾ 50ರಷ್ಟು ಜನರು ಸಹ ಒಪ್ಪುತ್ತಾರೆ.

ಕಳೆದ ನವೆಂಬರ್‌ ಆರಂಭದಲ್ಲಿ ಆಪಲ್‌ ಕಂಪೆನಿಯು ‘ಐಫೋನ್ 8' ಅನ್ನು ಬಿಡುಗಡೆ ಮಾಡಿತ್ತು. ಆ ಸಂದರ್ಭ ‘ಐಫೋನ್ ಸ್ಲೋ' ಎಂಬ ವಿಷಯದ ಬಗ್ಗೆ ಗೂಗಲ್‌ನಲ್ಲಿ ಹುಡುಕಾಟ ನಡೆಸಿದವರ ಪ್ರಮಾಣ ಶೇಕಡಾ 50ರಷ್ಟು ಹೆಚ್ಚಿತ್ತು ಎಂದು ಅಂಕಿಅಂಶಗಳು ದೃಢಪಡಿಸಿವೆ. ಇದರಿಂದ ಆಪಲ್‌ ಸೇರಿದಂತೆ ಮೊಬೈಲ್ ಕಂಪೆನಿಗಳು ಮೋಸ ಮಾಡುತ್ತಿವೆ ಎಂದು ಜನರು ಸಹ ಒಪ್ಪುತ್ತಾರೆ.

ಯಾವುದು ನಿಜ? ಯಾವುದು ಸುಳ್ಳು?

ಯಾವುದು ನಿಜ? ಯಾವುದು ಸುಳ್ಳು?

ತಂತ್ರಜ್ಞಾನ ಕಂಪೆನಿಗಳು ಹೊಸ ಉತ್ಪನ್ನಗಳ ಮಾರಾಟ ಹೆಚ್ಚಿಸಲು ಹಳೆ ಮೊಬೈಲ್‌ಗಳ ವೇಗವನ್ನು ಉದ್ದೇಶಪೂರ್ವಕವಾಗಿ ಕಡಿಮೆ ಮಾಡುತ್ತವೆ ಎಂಬ ವಿಷಯ ಈಗ ಕಬ್ಬಿಣದ ಕಡಲೆಯಾಗಿದೆ. ಯಾವುದೇ ಸ್ಮಾರ್ಟ್‌ಫೋನ್ ಜುಟ್ಟು ಆ ಮೊಬೈಲ್ ಕಂಪೆನಿಯ ಕೈನಲ್ಲಿಯೇ ಇರುವುದರಿಂದ ಅವುಗಳೇ ಈ ಬಗ್ಗೆ ಸ್ಪಷ್ಟ ಮಾಹಿತಿ ನೀಡಬೇಕು ಎಂಬುದು ಹಲವರ ವಾದ.

Best Mobiles in India

English summary
The Italian Competition Authority (AGCM) fined Apple and Samsung 10 million and 5 million euros respectively ($11.41 million and $5.7 million). to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+