Home
ಸುದ್ದಿಜಾಲ

ಸ್ಮಾರ್ಟ್‌ ವೆರಿಯೆಬಲ್ಸ್‌ ಮಾರಾಟದಲ್ಲಿ ಆಪಲ್‌ ಸಂಸ್ಥೆಗೆ ಮತ್ತೆ ಅಗ್ರಸ್ಥಾನ!

ಇಡೀ ವಿಶ್ವವೇ ಕೊರೋನಾ ವೈರಸ್‌ನಿಂದ ಬಳಲುತ್ತಿದೆ. ಜಗತ್ತಿನ ಬಹುತೇಕ ರಾಷ್ಟ್ರಗಳು ಕಲೆದ ಮೂರು ತಿಂಗಳಿನಿಂದ ಲಾಕ್‌ಡೌನ್‌ ಆದೇಶವನ್ನ ಜಾರಿಗೊಳಿಸಿವೆ. ಜಗತ್ತಿನಾದ್ಯಂತ ಇನ್ನು ಕೂಡ ಕೆಲವೆಡೆ ಲಾಕ್‌ಡೌನ್‌ ಆದೇಶ ಜಾರಿಯಲ್ಲಿದೆ. ಇನ್ನು ಕೆಲವೆಡೆ ಲಾಕ್‌ಡೌನ್‌ ಅನ್ನು ಸಡಿಲಿಕೆ ಮಾಡಲಾಗಿದೆ. ಇನ್ನು ಏಕಾಎಕಿ ಲಾಕ್‌ಡೌನ್‌ ಮಾಡಿದ್ದರಿಂದ ಜಗತ್ತಿನ ಬಹುತೇಕ ವಲಯಗಳು ನಷ್ಟವನ್ನ ಅನುಭವಿಸಿವೆ. ಇದಕ್ಕೆ ಟೆಕ್‌ ವಲಯವೂ ಕೂಡ ಹೊರತಾಗಿಲ್ಲ. ಆದರೆ ಇದರಲ್ಲಿ ಸ್ಮಾರ್ಟ್‌ವಾಚ್‌ ವಲಯ ಯಾವುದೇ ನಷ್ಟವನ್ನ ಅನುಭವಿಸಿಲ್ಲ ಎಂದು ವರದಿ ಆಗಿದೆ.

ಸ್ಮಾರ್ಟ್‌ವಾಚ್

ಹೌದು, ಇಂಟರ್‌ನ್ಯಾಷನಲ್ ಡಾಟಾ ಕಾರ್ಪೊರೇಷನ್ (IDC) ನಡೆಸಿರುವ ಇತ್ತೀಚಿನ ಸಂಶೋಧನೆಯ ಪ್ರಕಾರ, ಧರಿಸಬಹುದಾದ ಸ್ಮಾರ್ಟ್‌ವಾಚ್‌ ಮಾರುಕಟ್ಟೆಯು 2020 ರ ಮೊದಲ ತ್ರೈಮಾಸಿಕದಲ್ಲಿ ಸ್ಥಿರವಾದ ಬೆಳವಣಿಗೆಯನ್ನು ಕಂಡಿದೆ. ಅದರಲ್ಲೂ ನಿರ್ದಿಷ್ಟವಾಗಿ ವೆರಿಯೆಬಲ್‌ ಸ್ಮಾರ್ಟ್‌ವಾಚ್‌ ಮಾರುಕಟ್ಟೆ, COVID-19 ನಿಂದ ಉಂಟಾದ ತೊಂದರೆಯ ನಡುವೆಯೂ ಸ್ಥಿರವಾದ ಬೆಳವಣಿಗೆಯನ್ನ ಕಂಡಿದೆ ಎನ್ನಲಾಗ್ತಿದೆ. ಅಷ್ಟಕ್ಕೂ ಈ ವರದಿ ಪ್ರಕಾರ ಯಾವೆಲ್ಲಾ ಕಂಪೆನಿಯ ಸ್ಮಾರ್ಟ್‌ವಾಚ್‌ಗಳ ಮಾರಾಟ ಜಾಸ್ತಿ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಸ್ಮಾರ್ಟ್‌ವಾಚ್

ಸದ್ಯ IDC ಸಂಸ್ಥೆ ನಡೆಸಿರುವ ಸಂಶೋದನೆ ಪ್ರಕಾರ 2020 ರ ಮೊದಲ ತ್ರೈಮಾಸಿಕದಲ್ಲಿ ಸ್ಮಾರ್ಟ್‌ವಾಚ್‌ಗಳ ಮಾರಾಟ 68.3% ದಷ್ಟು ಹೆಚ್ಚಾಗಿದೆ. ಅದರಲ್ಲೂ ಆಪಲ್ ಕಂಪೆನಿ ಧರಿಸಬಹುದಾದ ಸ್ಮಾರ್ಟ್‌ವಾಚ್‌ ವಿಭಾಗದಲ್ಲಿ 29.3% ಮಾರುಕಟ್ಟೆ ಪಾಲನ್ನು ಹೊಂದಿದೆ. ಜೊತೆಗೆ ಅಪಲ್‌ ಕಂಪನಿಯು ಒಟ್ಟು 2.12 ಕೋಟಿ ಸ್ಮಾರ್ಟ್‌ ವೆರಿಯೆಬಲ್ಸ್‌ ಅನ್ನು ರವಾನಿಸಿದೆ. ಇದು ಆಪಲ್ ವಾಚ್ ಯೂನಿಟ್‌, ಬೀಟ್ಸ್ ಶ್ರೇಣಿ ಮತ್ತು ಏರ್‌ಪಾಡ್ಸ್ ಶ್ರೇಣಿಯನ್ನು ಸಹ ಒಳಗೊಂಡಿದೆ.

ರಿಸ್ಟ್‌ಬ್ಯಾಂಡ್

ಇನ್ನು 2020 ರ ಮೊದಲ ತ್ರೈಮಾಸಿಕದಲ್ಲಿ ಒಟ್ಟು 7.26 ಕೋಟಿ ವೇರಿಯೆಬಲ್ಸ್‌ ಘಟಕಗಳನ್ನು ರವಾನಿಸಲಾಗಿದೆ ಎಂದು ಐಡಿಸಿ ಹೇಳಿದೆ, ಕಳೆದ ವರ್ಷದ ಇದೇ ಅವಧಿಯಲ್ಲಿ ನಡೆದಿದ್ದ ಮಾರಾಟವನ್ನ ಗಮನಿಸಿದರೆ ಈ ಭಾರಿ 5.6 ಕೋಟಿ ಯುನಿಟ್‌ಗಳಷ್ಟು ಹೆಚ್ಚಳವಾಗಿದೆ. ಜೊತೆಗೆ ರಿಸ್ಟ್‌ಬ್ಯಾಂಡ್ ವಿಭಾಗವು ಶೇಕಡಾ 16.2 ರಷ್ಟು ಏರಿಕೆಯಾದರೆ, ಹಿಯರಬಲ್ಸ್ ವಿಭಾಗವು 68.3 ಪ್ರತಿಶತದಷ್ಟು ಹೆಚ್ಚಾಗಿದೆ. ಈ ಹೆಚ್ಚಳದ ಕಾರಣ, ಹಿಯರಬಲ್ಸ್ ವಿಭಾಗವು ಈಗ ಜಾಗತಿಕ ಧರಿಸಬಹುದಾದ ಮಾರುಕಟ್ಟೆ ಸಾಗಣೆಯಲ್ಲಿ 54.9 ಪ್ರತಿಶತದಷ್ಟಿದೆ ಎಂದು ಸಂಶೋಧನಾ ಸಂಸ್ಥೆ ಹೇಳಿಕೊಂಡಿದೆ.

ವೆರಿಯೆಬಲ್ಸ್‌

ಸದ್ಯ ವೆರಿಯೆಬಲ್ಸ್‌ ವಿಭಾಗದಲ್ಲಿ ಆಪಲ್ ಮತ್ತೊಮ್ಮೆ ಅಗ್ರ ಸ್ಥಾನವನ್ನು ಗಳಿಸುವಲ್ಲಿ ಯಶಸ್ವಿಯಾಗಿದ್ದು. ಇನ್ನು 1.01 ಕೋಟಿ ವೆರಿಯೆಬಲ್ಸ್‌ ಸ್ಮಾರ್ಟ್‌ ಪ್ರಾಕಡ್ಟ್‌ಗಳನ್ನ ರವಾನಿಸಿರುವ ಶಿಯೋಮಿ ಎರಡನೇ ಸ್ಥಾನವನ್ನು ಪಡೆದುಕೊಂಡಿದೆ, ಇದು ಮಾರುಕಟ್ಟೆ ಪಾಲಿನ 14% ಹೆಚ್ಚಾಗಿದೆ. ಸ್ಯಾಮ್‌ಸಂಗ್ ಮತ್ತು ಹುವಾವೇ ಕ್ರಮವಾಗಿ ಶೇ 11.9 ಮತ್ತು ಮಾರುಕಟ್ಟೆ ಪಾಲನ್ನು ಶೇ 11.1 ರಷ್ಟು ಪಡೆದುಕೊಂಡಿದೆ. ಹಾಗೇ ಗಮನಿಸುವುದಾದರೆ ಸ್ಯಾಮ್‌ಸಂಗ್‌ ಕೂಡ ಈ ನಿಟ್ಟಿನಲ್ಲಿ ಉತ್ತಮ ವ್ಯವಹಾರವನ್ನೇ ನಡೆಸಿದೆ. ಒಟ್ಟು ವಹಿವಾಟಿನಲ್ಲಿ ಶೇಖಡ 74 ದಷ್ಟು ಪಾಲನ್ನು ಹೊಂದಿದೆ. ಇದರ ನಡುವೆ ಹುವಾವೇ ಕಂಪೆನಿ ಕೂಡ 2020ರ ಮೊದಲ ತ್ರೈಮಾಸಿಕದಲ್ಲಿ ಒಟ್ಟು 81 ಲಕ್ಷ ಯುನಿಟ್ ಧರಿಸಬಹುದಾದ ವಸ್ತುಗಳನ್ನು ರವಾನಿಸುವಲ್ಲಿ ಯಶಸ್ವಿಯಾಗಿದೆ, ಇದರಲ್ಲಿ ಇದರ ಅಂಗಸಂಸ್ಥೆ ಹಾನರ್‌ ಕೂಡ ಸೇರಿಕೊಂಡಿದೆ.

Best Mobiles in India

English summary
The wearables market saw a steady growth in the first quarter of 2020, with a 29.7 percent year-over-year increase.to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+