ಆಪಲ್ ಸೀಕ್ರೆಟ್ ಬಯಲು

By Varun
|
ಆಪಲ್ ಸೀಕ್ರೆಟ್ ಬಯಲು

ನಂ. 1 ಸ್ಥಾನ ಕಾಪಾಡಿಕೊಳ್ಳಲು ಕಂಪನಿಗಳು ಏನೆಲ್ಲ ಕಸರತ್ತು ಮಾಡುತ್ತವೆ ಎಂಬುದಕ್ಕೆ ಆಪಲ್ ಗಿಂತ ಸ್ಯಾಂಪಲ್ ಮತ್ತೊಂದಿಲ್ಲ. ತನ್ನ ಉತ್ಪನ್ನಗಳು ಮಾರುಕಟ್ಟೆಗೆ ಬಿಡುಗಡೆಯಾಗುವ ಮೊದಲು, ಅದು ಉಪಯೋಗಿಸುವ ತಂತ್ರಜ್ಞಾನ, ಒಳಗೊಂಡ ಫೀಚರ್ಗಳ ಬಗ್ಗೆ ಸಣ್ಣ ಸುಳಿವೂ ಬಿಟ್ಟುಕೊಡುವುದಿಲ್ಲ. ಹೀಗಾಗಿ ಅದರ ಎದುರಾಳಿ ಕಂಪನಿಗಳು ತಂತ್ರ ರಚಿಸುವುದು ಕಷ್ಟ.

ಆಡಂ ಲಶಿನ್ ಸ್ಕಿಎಂಬಾತ ಬರೆದಿರುವ ಇನ್ಸೈಡ್ ಆಪಲ್ ಪುಸ್ತಕದಲ್ಲಿ ಆಪಲ್ ನಡೆಸುವ ಹಲವಾರು ತಂತ್ರಗಳನ್ನು ಉಲ್ಲೇಖಿಸಿದ್ದಾನೆ.ಆ ಪುಸ್ತಕದ ಪ್ರಕಾರಈಗ ಹೊರಬಿದ್ದಿರುವಮಹತ್ವದ ರಹಸ್ಯ ಏನೆಂದರೆ, ಆಪಲ್ ತಾನು ಸೇರಿಸಿಕೊಳ್ಳುವ ಹೊಸ ಇಂಜಿನೀಯರ್ ಗಳನ್ನ ಪ್ರಾಯೋಗಿಕವಾಗಿ ತಾನೆಂದೂ ಬಿಡುಗಡೆ ಮಾಡದ ನಕಲು ಉತ್ಪನ್ನಗಳ ಮೇಲೆ ಕೆಲಸ ಮಾಡಿಸುತ್ತದೆಯಂತೆ. ಹೊಸಬರು ಎಲ್ಲಿ ತನ್ನ ಹೊಸ ಉತ್ಪನ್ನಗಳ ಬಗ್ಗೆ ಮಾಹಿತಿ ಸೋರಿಕೆ ಮಾಡುತ್ತಾರೋ ಎಂಬ ಅಪನಂಬಿಕೆ ಇರುವುದರಿಂದಲೇ ಈ ಎಚ್ಚರಿಕೆ. ಅವರನ್ನು ನಿರಂತರ ಸಂದರ್ಶನ ಮಾಡಿ ನಂಬಿಕೆ ಬಂದಮೇಲೆಯೇ ಮುಖ್ಯ ಕೆಲಸಗಳಲ್ಲಿ ಅವರನ್ನು ತೊಡಗಿಸುವುದಂತೆ.

ಈ ರೀತಿ ಬುದ್ದಿ ಓಡಿಸುವುದರಿಂದಲೇ ತಾನೇ ನಾವು ನೀವು ಆಪಲ್ ಕಂಪನಿಯನ್ನು ಅಷ್ಟು ಗೌರವಿಸುವುದು.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X