Home
ಸುದ್ದಿಜಾಲ

ಇಂದು iPhone 17 ಸರಣಿ ರಿಲೀಸ್: ಈವೆಂಟ್ ಟೈಮ್, ಲಿಂಕ್ ಮತ್ತು ಪೂರ್ಣ ಮಾಹಿತಿ!

ಆಪಲ್ ಕಂಪನಿಯ ಬಹುನಿರೀಕ್ಷಿತ 'Awe Dropping' ಹಾರ್ಡ್‌ವೇರ್‌ ಲಾಂಚ್ ಕಾರ್ಯಕ್ರಮ ಇಂದು ನಡೆಯಲಿದೆ. ಕಳೆದ ಒಂದು ವರ್ಷದಿಂದ iPhone 17 ಸರಣಿಯ ಹರಿದಾಡುತ್ತಿದ್ದ ಎಲ್ಲಾ ಊಹಾಪೋಹಗಳಿಗೆ ಈ ಕಾರ್ಯಕ್ರಮವು ತೆರೆ ಎಳೆಯಲಿದೆ. ಈಈವೆಂಟ್‌ನಲ್ಲಿ ಹೊಸ iPhone 17 ಸರಣಿಯ ಪರಿಚಯದ ಜೊತೆಗೆ, Apple Watch Series 11, Watch Ultra 3, Watch SE 3 ಮತ್ತು AirPods Pro (3ನೇ ತಲೆಮಾರು) ಕೂಡ ಅನಾವರಣಗೊಳ್ಳುವ ಸಾಧ್ಯತೆ ಇದೆ. ಕಾರ್ಯಕ್ರಮದ ಕೊನೆಯಲ್ಲಿ, ಹೊಸ iOS 26, iPadOS 26 ಮತ್ತು ಇತರ ಸಾಫ್ಟ್‌ವೇರ್ ಆಪ್‌ಡೇಟ್‌ಗಳ ಬಿಡುಗಡೆ ದಿನಾಂಕಗಳನ್ನು ಸಹ ಘೋಷಿಸಲಾಗುತ್ತದೆ ಎಂದು ನಿರೀಕ್ಷಿಸಲಾಗಿದೆ. ಹಾಗಾದರೆ, pple ನ 'Awe Dropping' ಕಾರ್ಯಕ್ರಮವನ್ನು ಲೈವ್‌ಸ್ಟ್ರೀಮ್ ವೀಕ್ಷಿಸುವುದು ಹೇಗೆ? ಮತ್ತು ಇನ್ನಿತರ ಪ್ರಮುಖ ಅಂಶಗಳು ಯಾವುವು ಎಂಬುದನ್ನು ನೋಡೋಣ ಬನ್ನಿ.

ಕಾರ್ಯಕ್ರಮದ ಲೈವ್‌ಸ್ಟ್ರೀಮ್ ವಿವರಗಳು
Apple ನ 'Awe Dropping' ಕಾರ್ಯಕ್ರಮವು ಕ್ಯಾಲಿಫೋರ್ನಿಯಾದ ಕುಪರ್ಟಿನೊದಲ್ಲಿರುವ Apple Park ನ ಸ್ಟೀವ್ ಜಾಬ್ಸ್ ಥಿಯೇಟರ್‌ನಲ್ಲಿ ಪ್ರಾರಂಭವಾಗಲಿದೆ. ಭಾರತದಲ್ಲಿ ಇದನ್ನು ರಾತ್ರಿ 10:30ಕ್ಕೆ (IST) ವೀಕ್ಷಿಸಬಹುದು. ಆಪಲ್‌ನ ಅಧಿಕೃತ ವೆಬ್‌ಸೈಟ್, ಯೂಟ್ಯೂಬ್ ಚಾನೆಲ್ ಹಾಗೂ Apple TV ಅಪ್ಲಿಕೇಶನ್ ಮೂಲಕ ಕಾರ್ಯಕ್ರಮದ ನೇರ ಪ್ರಸಾರವನ್ನು ಲೈವ್ ಆಗಿ ನೋಡಬಹುದು. ಈ ಅಪ್ಲಿಕೇಶನ್ ಅನ್ನು ಐಫೋನ್, ಐಪ್ಯಾಡ್, ಮ್ಯಾಕ್, ಆಂಡ್ರಾಯ್ಡ್ ಫೋನ್‌ಗಳು ಮತ್ತು ಸ್ಮಾರ್ಟ್ ಟಿವಿಗಳಲ್ಲಿ ಬಳಸಲು ಲಭ್ಯವಿದೆ.

iPhone 17 ಸರಣಿಯಲ್ಲಿ ಹೊಸದೇನು?
ಈ ವರ್ಷ ಆಪಲ್ ನಾಲ್ಕು ಹೊಸ ಐಫೋನ್ ಮಾದರಿಗಳನ್ನು ಪರಿಚಯಿಸುವ ನಿರೀಕ್ಷೆಯಿದೆ. ಅವುಗಳೆಂದರೆ, iPhone 17 (ಮೂಲ ಮಾದರಿ), iPhone 17 Pro, iPhone 17 Pro Max ಹಾಗೂ ಹೊಸದಾಗಿ ಸೇರ್ಪಡೆಯಾಗಲಿರುವ iPhone 17 Air. ಈ ಹೊಸ 'Air' ಮಾದರಿಯು ಹಿಂದಿನ 'Plus' ಮಾದರಿಯ ಬದಲಿಯಾಗಿ ಬರಲಿದೆ ಎಂದು ಹೇಳಲಾಗುತ್ತಿದೆ. ಇದು ಆಪಲ್ ಇಲ್ಲಿಯವರೆಗೂ ತಯಾರಿಸಿದ ಅತ್ಯಂತ ತೆಳುವಾದ ಐಫೋನ್ ಆಗುವ ಸಾಧ್ಯತೆಯಿದೆ. ಈ ಹೊಸ ಮಾದರಿಗಳ ಬಿಡುಗಡೆಯಿಂದ ತಂತ್ರಜ್ಞಾನ ಪ್ರಿಯರ ಕುತೂಹಲ ಮತ್ತಷ್ಟು ಹೆಚ್ಚಾಗಿದೆ.

ಇಂದು iPhone 17 ಸರಣಿ ರಿಲೀಸ್: ಈವೆಂಟ್ ಟೈಮ್, ಲಿಂಕ್ ಮತ್ತು ಪೂರ್ಣ ಮಾಹಿತಿ!

ಇತರೆ ನಿರೀಕ್ಷಿತ ಉತ್ಪನ್ನಗಳು ಮತ್ತು ಸಾಫ್ಟ್‌ವೇರ್ ಅಪ್‌ಡೇಟ್‌ಗಳು
ಐಫೋನ್‌ಗಳ ಜೊತೆಗೆ, ಮೂರು ಹೊಸ ಸ್ಮಾರ್ಟ್‌ವಾಚ್‌ಗಳು ಬಿಡುಗಡೆಯಾಗುವ ಸಾಧ್ಯತೆಗಳಿವೆ. ಅವುಗಳೆಂದರೆ Apple Watch Series 11, Apple Watch Ultra 3 ಮತ್ತು Apple Watch SE 3. ಮೂರು ವರ್ಷಗಳ ನಂತರ AirPods Pro (3rd Gen) ಅನ್ನು ಕೂಡ ಆಪಲ್ ಪರಿಚಯಿಸಬಹುದು ಎಂದು ನಿರೀಕ್ಷಿಸಲಾಗಿದೆ. ಇದರಲ್ಲಿ ಹೃದಯ ಬಡಿತ ಅಳೆಯುವಂತಹ ಹೊಸ ಸಂವೇದಕಗಳನ್ನು ಅಳವಡಿಸಲಾಗುವುದು ಎಂಬ ಮಾಹಿತಿ ಹೊರಬಂದಿದೆ.ಹಾರ್ಡ್‌ವೇರ್‌ ಜೊತೆಗೆ,

ಆಪಲ್ ತನ್ನ ಮುಂದಿನ ತಲೆಮಾರಿನ ಸಾಫ್ಟ್‌ವೇರ್ ಆವೃತ್ತಿಗಳಾದ iOS 26, iPadOS 26, watchOS 11 ಹಾಗೂ macOS 15 ಗಳ ಅಧಿಕೃತ ಬಿಡುಗಡೆ ದಿನಾಂಕಗಳನ್ನು ಕೂಡ ಇದೇ ಕಾರ್ಯಕ್ರಮದಲ್ಲಿ ಪ್ರಕಟಿಸುವ ಸಾಧ್ಯತೆ ಇದೆ. ಈ ಬಾರಿಯ ಕಾರ್ಯಕ್ರಮ ಕೇವಲ ಐಫೋನ್‌ಗಳಿಗಷ್ಟೇ ಸೀಮಿತವಾಗಿಲ್ಲ, ಬದಲಿಗೆ ಹಲವಾರು ಹೊಸ ಸಾಧನಗಳು ಮತ್ತು ಸಾಫ್ಟ್‌ವೇರ್ ಆಪ್‌ಡೇಟ್‌ಗಳ ಪರಿಚಯಕ್ಕೆ ವೇದಿಕೆಯಾಗಲಿದೆ. ಈ ಹೊಸ ಉತ್ಪನ್ನಗಳ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯಲು ನೀವು ಆಪಲ್‌ನ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಬಹುದು ಅಥವಾ ನಮ್ಮ ಕನ್ನಡ ಗಿಜ್‌ಬಾಟ್ ವೆಬ್‌ಸೈಟ್‌ ಅನ್ನು ಅನುಸರಿಸಿ.

Best Mobiles in India

English summary
Apple is hosting its much-anticipated iPhone 17 ‘Awe Dropping’ event today, revealing the latest iPhone lineup, features, and other major product announcements, with the event livestream available worldwide.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+