ಬೆಂಗಳೂರಲ್ಲಿ ಮಾತ್ರ ಆಂಡ್ರಾಯ್ಡ್ ಬೆಲೆಗೆ ಐಫೋನ್ ಮಾರಾಟ: ಯಾಕೆ..?

|

ದೇಶಿಯ ಮಾರುಕಟ್ಟೆಯಲ್ಲಿ ಐಫೋನ್ ಬೇಡಿಕೆಯೂ ಹೆಚ್ಚಾಗಿರುವ ಕಾರಣ ಇಲ್ಲಿಯೇ ಐಫೋನ್ ಅನ್ನು ನಿರ್ಮಿಸಲು ಆಪಲ್ ಮುಂದಾಗಿದೆ. ಈ ಹಿನ್ನಲೆಯಲ್ಲಿ ಬೆಂಗಳೂರಿನಲ್ಲಿ ಈಗಾಗಲೇ ಒಂದು ತಯಾರಿಕ ಘಟಕವನ್ನು ಹೊಂದಿರುವ ಆಪಲ್, ಮತ್ತೊಂದು ಐಫೋನ್ ನಿರ್ಮಾಣ ಘಟಕವನ್ನು ಆರಂಭಿಸಲು ಮುಂದಾಗಿದೆ. ಇದರಿಂದಾಗಿ ಕನ್ನಡಿಗರಿಗೆ ಏನು ಲಾಭ ಎನ್ನುವುದನ್ನು ಯೋಚನೆ ಮಾಡಿದ್ದೀರಾ.

ಬೆಂಗಳೂರಲ್ಲಿ ಮಾತ್ರ ಆಂಡ್ರಾಯ್ಡ್ ಬೆಲೆಗೆ ಐಫೋನ್ ಮಾರಾಟ: ಯಾಕೆ..?

ಸದ್ಯ ಭಾರತದಲ್ಲಿ ಐಫೋನ್ SE ಮಾತ್ರವೇ ನಿರ್ಮಾಣವಾಗುತ್ತಿದ್ದು, ಐಪೋನ್ 6S ಅನ್ನು ಸಹ ಇಲ್ಲೇ ನಿರ್ಮಾಣ ಮಾಡುವ ಯೋಜನೆಯನ್ನು ಆಪಲ್ ಹೊಂದಿದೆ. ಇದರೊಂದಿಗೆ ಹೊಸದಾಗಿ ಆರಂಭಿಸಲಿರುವ ಪ್ಲಾಟ್‌ನಲ್ಲಿ ಆಪಲ್ ತನ್ನ ಟಾಪ್ ಎಂಡ್ ಐಫೋನ್‌ಗಳನ್ನು ಅಸೆಂಬಲ್ ಮಾಡಲಿದೆ ಎನ್ನುವ ಮಾತುಗಳು ಕೇಳಿ ಬಂದಿದೆ. ಒಟ್ಟಿನಲ್ಲಿ ಐಪೋನ್ ಇಲ್ಲಿಯೇ ನಿರ್ಮಾಣವಾದರೆ ನಮ್ಮೆಲ್ಲರ ಐಫೋನ್ ಕನಸು ನನಸಾಗಲಿದೆ ಎನ್ನುವ ಮಾತು ಕೇಳಿ ಬಂದಿದೆ.

ಕೋಲಾರದಲ್ಲಿ ಪ್ಲಾಂಟ್:

ಕೋಲಾರದಲ್ಲಿ ಪ್ಲಾಂಟ್:

ನಮ್ಮ ರಾಜ್ಯದಲ್ಲಿಯೇ ಎರಡನೇ ಆಪಲ್ ತಯಾರಿಕ ಘಟಕವನ್ನು ಆರಂಭಿಸುತ್ತಿದ್ದು, ಆಗಸ್ಟ್ 15 ರಿಂದ ಘಟಕದ ನಿರ್ಮಾಣ ಕಾರ್ಯ ಕೋಲಾರದಲ್ಲಿ ಆರಂಭವಾಗಲಿದೆ. ಪ್ರಾರಂಭದಲ್ಲಿ ರೂ. 650 ಕೋಟಿ ವೆಚ್ಚದ ಕಾಮಗಾರಿಗಳು ಜರುಗಲಿದೆ. ಇದಾದ ನಂತರದಲ್ಲಿ ದೊಡ್ಡ ಮಟ್ಟದ ಹೂಡಿಕೆಯೂ ಇದೆ ಎನ್ನಲಾಗಿದೆ.

100 ಮಿಲಿಯನ್ ಐಫೋನ್ ತಯಾರಿಕೆ:

100 ಮಿಲಿಯನ್ ಐಫೋನ್ ತಯಾರಿಕೆ:

ಕೋಲಾರದಲ್ಲಿ ಆರಂಭವಾಗಲಿರುವ ಎರಡನೇ ಆಪಲ್ ತಯಾರಿಕ ಘಟಕದಲ್ಲಿ ಪ್ರತಿ ವರ್ಷ ಸುಮಾರು 100 ಮಿಲಿಯನ್ ಐಫೋನ್ ತಯರಾಗಲಿದೆ ಎನ್ನಲಾಗಿದೆ. ಹೆಚ್ಚಾಗಿ ಇಲ್ಲಿ ನಿರ್ಮಾಣವಾಗಿದ್ದ ಐಫೋನ್ ಗಳನ್ನು ಭಾರತೀಯ ಮಾರುಕಟ್ಟೆಯಲ್ಲಿಯೇ ಮಾರಾಟ ಮಾಡಲಿದೆ.

ಮೇಕ್ ಇನ್ ಇಂಡಿಯಾ:

ಮೇಕ್ ಇನ್ ಇಂಡಿಯಾ:

ಕೇಂದ್ರ ಸರಕಾರದ ಮಹತ್ವಾಂಕ್ಷಿ ಯೋಜನೆ ಮೇಕ್ ಇನ್ ಇಂಡಿಯಾ ಆಡಿಯಲ್ಲಿ ಕಾರ್ಯನಿರ್ವಹಿಸಲಿರುವ ಆಪಲ್ ಘಟಕವು, ಭಾರತೀಯರಿಗೆ ಭಾರತದಲ್ಲಿಯೇ ನಿರ್ಮಾಣವಾದ ಫೋನ್‌ಗಳನ್ನು ನೀಡಲಿದೆ. ಅಲ್ಲದೇ ಇಲ್ಲಿಂದ ಬೇರೆ ಏಷ್ಯಾದ ರಾಷ್ಟ್ರಗಳಿಗೆ ಐಪೋನ್‌ಗಳನ್ನು ರಪ್ತು ಮಾಡಲಿದೆ.

ಕನ್ನಡಿಗರಿಗೆ ಉದ್ಯೋಗ:

ಕನ್ನಡಿಗರಿಗೆ ಉದ್ಯೋಗ:

ಕೋಲಾರದಲ್ಲಿ ಆರಂಭವಾಗಲಿರುವ ಆಪಲ್ ಘಟಕವು ಸುಮಾರು 15000 ಉದ್ಯೋಗಗಳನ್ನು ಸೃಷ್ಠಿಸಲಿದ್ದು, ಇದರಲ್ಲಿ ಹೆಚ್ಚಿನ ಪ್ರಮಾಣದ ಕೆಲಸವು ಕನ್ನಡಿಗರಿಗೆ ದೊರೆಯಲಿದೆ ಎನ್ನಲಾಗಿದೆ. ಅದರಲ್ಲಿಯೂ ಕೋಲಾರ ಭಾಗದ ಜನರಿಗೆ ಹೆಚ್ಚಿನ ಪ್ರಮಾಣದಲ್ಲಿ ನೀಡಲಿದೆ ಎನ್ನಲಾಗಿದೆ,

ಐಫೋನ್ ಬೆಲೆಯಲ್ಲಿ ಇಳಿಕೆ:

ಐಫೋನ್ ಬೆಲೆಯಲ್ಲಿ ಇಳಿಕೆ:

ಕರ್ನಾಟಕದಲ್ಲಿಯೇ ಹೆಚ್ಚಿನ ಪ್ರಮಾಣದಲ್ಲಿ ಐಫೋನ್ ನಿರ್ಮಾಣವಾಗುವುದರಿಂದಾಗಿ ರಾಜ್ಯದಲ್ಲಿ ಐಫೋನ್ ಬೆಲೆಯಲ್ಲಿ ಕಡಿಮೆ ಇರಲಿದೆ. ಇದರಿಂದಾಗಿ ಹೆಚ್ಚಿನ ಪ್ರಮಾಣದ ಐಫೋನ್ ರಾಜ್ಯದಲ್ಲಿ ಕಾಣಿಸಿಕೊಳ್ಳಲಿದೆ ಎನ್ನಲಾಗಿದೆ.

Best Mobiles in India

English summary
Apple set up new plant in Karnataka. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X