ಅಪ್ಲಿಕೇಶನ್‌ ಡೆವಲಪರ್‌ಗಳಿಗೆ ಮತ್ತೊಮ್ಮೆ ಸಂದೇಶ ಕಳುಹಿಸಿದ ಆಪಲ್‌ ಕಂಪೆನಿ!

|

ಆಪಲ್‌ ಕಂಪೆನಿ ಅಪ್ಲಿಕೇಶನ್‌ ಡೆವಲಪರ್‌ಗಳಿಗೆ ಮತ್ತೊಮ್ಮೆ ಎಚ್ಚರಿಕೆಯ ಸಂದೇಶವನ್ನು ರವಾನಿಸಿದೆ. ತನ್ನ ಆಫ್‌ಸ್ಟೋರ್‌ನಲ್ಲಿ ಔಟ್‌ಡೇಟೆಡ್‌ ಆಗಿರುವ ಅಪ್ಲಿಕೇಶನ್‌ಗಳನ್ನು ಅಪ್ಡೇಟ್‌ ಮಾಡಲು ಹೇಳಿದೆ. ಇದೇ ಜೂನ್‌ 30ರ ಒಳಗೆ ಈ ಅಪ್ಲಿಕೇಶನ್‌ಗಳನ್ನು ಅಪ್ಡೇಟ್‌ ಮಾಡದೇ ಹೋದರೆ ಆಪ್‌ ಸ್ಟೋರ್‌ನಿಮದ ರಿಮೂವ್‌ ಮಾಡುವುದಾಗಿ ಮತ್ತೊಮ್ಮೆ ನೆನಪಿಸಿದೆ. ತನ್ನ ಆಪ್‌ಸ್ಟೋರ್‌ನ ಹೊಸ ನೀತಿಗಳ ಅನ್ವಯ ನಿರ್ಧಿಷ್ಟ ಸಮಯದಿಂದ ಅಪ್ಡೇಟ್‌ ಆಗದ ಅಪ್ಲಿಕೇಶನ್‌ಗಳನ್ನು ರಿಮೂವ್‌ ಮಾಡುವುದಾಗಿ ಆಪಲ್‌ ಕಂಪೆನಿ ಹೇಳಿದೆ.

ಆಪಲ್‌

ಹೌದು, ಆಪಲ್‌ ಕಂಪೆನಿ ಆಪ್‌ಸ್ಟೋರ್‌ನಲ್ಲಿ ಅಪ್ಡೇಟ್‌ ಆಗದ ಅಪ್ಲಿಕೇಶನ್‌ಗಳನ್ನು ರಿಮೂವ್‌ ಮಾಡುವ ವಿಚಾರವನ್ನು ಮತ್ತೊಮ್ಮೆ ನೆನಪಿಸಿದೆ. ಜೂನ್‌ 30ರ ನಂತರ ಈ ಅಪ್ಲಿಕೇಶನ್‌ಗಳನ್ನು ರಿಮೂವ್‌ ಮಾಡಲಿದೆ. ಇನ್ನು ಈ ಆಪ್ ಸ್ಟೋರ್ ರಿವ್ಯೂ ಗೈಡ್‌ಲೈನ್ 5.1.1 ಬಳಕೆದಾರರಿಗೆ ಅವರ ಡೇಟಾದ ಮೇಲೆ ಹೆಚ್ಚಿನ ನಿಯಂತ್ರಣವನ್ನು ನೀಡುವ ಗುರಿಯನ್ನು ಹೊಂದಿದೆ. ಹಾಗಾದ್ರೆ ಆಪಲ್‌ ಕಂಪೆನಿ ಅಪ್ಲಿಕೇಶನ್‌ ಡೆವಲಪರ್‌ಗಳಿಗೆ ಹೇಳಿದ್ದೇನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಆಪಲ್‌

ಆಪಲ್‌ ಕಂಪೆನಿ ತನ್ನ ಹೊಸ ಆಪ್‌ಸ್ಟೋರ್‌ ನೀತಿಯನ್ನು ಜೂನ್‌ 30ರಿಂದ ಜಾರಿಗೆ ತರಲಿದೆ. ಅದಕ್ಕೀ ಮುನ್ನವೇ ಅಪ್ಲಿಕೇಶನ್‌ ಡೆವಲಪರ್‌ಗಳು ತಮ್ಮ ಹಳೆಯ ಅಪ್ಲಿಕೇಶನ್‌ಗಳನ್ನು ಅಪ್ಡೇಟ್‌ ಮಾಡಲೇಬೇಕಿದೆ. ಒಂದು ವೇಳೆ ಈ ನಿಗದಿತ ಸಮಯವನ್ನು ಮೀರಿದರೆ ಆಪ್‌ ಸ್ಟೋರ್‌ನಲ್ಲಿ ಔಟ್‌ಡೇಟೆಡ್‌ ಅಪ್ಲಿಕೇಶನ್‌ಗಳು ರಿಮೂವ್‌ ಆಗಲಿವೆ. ಈ ಬದಲಾವಣೆಯನ್ನು ಆಪಲ್‌ ಈ ಹಿಂದೆ ಜನವರಿ 31 ರಂದು ಜಾರಿಗೆ ಬರುವಂತೆ ಹೊಂದಿಸಲಾಗಿತ್ತು. ಆದರೆ ಹೆಚ್ಚುವರಿಯಾಗಿ, ಅಪ್ಲಿಕೇಶನ್‌ ಡೆವಲಫರ್‌ಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಜೂನ್ 30ರಂದು ಹೊಸ ನಿಯಮವನ್ನು ಜಾರಿಗೆ ಬರಲಿದೆ.

ಆಪ್

ಇನ್ನು ಆಪ್ ಸ್ಟೋರ್ ರಿವ್ಯೂ ಗೈಡ್‌ಲೈನ್ಸ್ v5.1.1 ನಲ್ಲಿ ವಿವರಿಸಲಾದ ಬದಲಾವಣೆಗಳನ್ನು WWDC 2021 ಸಮಯದಲ್ಲಿ ಘೋಷಿಸಲಾಗಿತ್ತು. ಅದರಂತೆ ಅಪ್ಲಿಕೇಶನ್‌ ಡೆವಲಪರ್‌ಗಳು ತಮ್ಮ ಅಪ್ಲಿಕೇಶನ್‌ಗಳನ್ನು ನವೀಕರಿಸುವಾಗ ನಿರ್ದಿಷ್ಟ ಮಾನದಂಡಗಳನ್ನು ಪೂರೈಸುವ ಅಗತ್ಯವಿದೆ. ಖಾತೆಯನ್ನು ಡಿಲೀಟ್‌ ಮಾಡುವ ಆಯ್ಕೆಯು ಅಪ್ಲಿಕೇಶನ್‌ನಲ್ಲಿ ಹುಡುಕಲು ಸುಲಭವಾಗಿರಬೇಕು ಅನ್ನೊದು ಆಪಲ್‌ ಕಂಪೆನಿಯ ನೀತಿಯಾಗಿದೆ. ಇದಲ್ಲದೆ ಖಾತೆಯನ್ನು ನಿಷ್ಕ್ರಿಯಗೊಳಿಸುವುದರ ಹೊರತಾಗಿ, ಅಪ್ಲಿಕೇಶನ್‌ಗಳು ಬಳಕೆದಾರರು ತಮ್ಮ ವೈಯಕ್ತಿಕ ಡೇಟಾದೊಂದಿಗೆ ತಮ್ಮ ಖಾತೆಗಳನ್ನು ಅಳಿಸಲು ಅವಕಾಶ ನೀಡಬೇಕು.

ಆಪಲ್‌

ಆಪಲ್‌ನ ಆಪ್ ಸ್ಟೋರ್‌ನಲ್ಲಿರುವ ಅಪ್ಲಿಕೇಶನ್‌ಗಳು ಆಪಲ್‌ನೊಂದಿಗೆ ಸೈನ್ ಇನ್ ಅನ್ನು ನೀಡಿದರೆ, ಖಾತೆಯನ್ನು ಅಳಿಸುವಾಗ ಡೆವಲಪರ್‌ಗಳು ಬಳಕೆದಾರರ ಟೋಕನ್‌ಗಳನ್ನು ಹಿಂತೆಗೆದುಕೊಳ್ಳಬೇಕಾಗುತ್ತದೆ. ಇದಲ್ಲದೆ ಹೆಚ್ಚು ಕಂಟ್ರೋಲ್‌ ಬ್ಯುಸಿನೆಸ್‌ನಲ್ಲಿನ ಅಪ್ಲಿಕೇಶನ್‌ಗಳು ಅಕೌಂಟ್‌ ಡಿಲೀಟ್‌ ಅನ್ನು ದೃಢೀಕರಿಸಲು ಹೆಚ್ಚುವರಿ ಗ್ರಾಹಕ ಸೇವಾ ಹರಿವುಗಳನ್ನು ಒದಗಿಸಬೇಕಾಗುತ್ತದೆ. ಇನ್ನು ಬಳಕೆದಾರರ ಖಾತೆ ಮಾಹಿತಿಯನ್ನು ಸ್ಟೋರೇಜ್‌ ಮಾಡಲು ಮತ್ತು ಸೇವ್‌ ಮಾಡಲು ಸಂಬಂಧಿತ ಕಾನೂನು ಅವಶ್ಯಕತೆಗಳನ್ನು ಅನುಸರಿಸುವುದಕ್ಕೆ ಡೆವಲಪರ್‌ಗಳನ್ನು ಕೇಳಲಾಗುತ್ತದೆ.

ಆಪಲ್‌

ಇನ್ನು ಆಪಲ್‌ ಆಪ್‌ ಸ್ಟೋರ್‌ನಲ್ಲಿ ಪಾವತಿ ಮಾಡುವ ಮೂಲಕ ಸೇವೆನೀಡುತ್ತಿರುವ ಅಪ್ಲಿಕೇಶನ್‌ಗಳು ಅಗತ್ಯವಿರುವ ಆಪ್ ಸ್ಟೋರ್ ನಿಯಮವನ್ನು ಜೂನ್ 30 ರಿಂದ ಪಾಲಿಸಬೇಕಾಗುತ್ತದೆ. ಸದ್ಯ ಆಪಲ್‌ ಕಂಪೆನಿ ತನ್ನ ಈ ರಿಮೈಂಡರ್‌ ಸಂದೇಶವನ್ನು ಎಲ್ಲಾ ಅಪ್ಲಿಕೇಶನ್‌ ಡೆವಲಪರ್‌ಗಳಿಗೆ ಕಳುಹಿಸಿದೆ.

Best Mobiles in India

English summary
Apple started reminding developers about the new App Store guidelines.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X