Home
ಸುದ್ದಿಜಾಲ

Apple ಬಹುನಿರೀಕ್ಷಿತ WWDC ಕಾರ್ಯಕ್ರಮ ಆರಂಭ ; ಲೈವ್‌ ವೀಕ್ಷಣೆ ಹೇಗೆ ?

ಕ್ಯುಪರ್ಟಿನೋ ಮೂಲ್ ಟೆಕ್ ದೈತ್ಯ ಆಪಲ್ ತನ್ನ ಬುಹು ನಿರೀಕ್ಷಿತ ವಾರ್ಷಿಕ ಕಾರ್ಯಕ್ರಮವಾಗಿರುವ ವರ್ಲ್ಡ್‌ ವೈಡ್ ಡೆವಲಪರ್ಸ್ ಕಾನ್ಫರೆನ್ಸ್ (WWDC) 2024 ನ್ನು ಜೂನ್ 10 ರಿಂದ ಕ್ಯಾಲಿಫೋರ್ನಿಯಾದಲ್ಲಿ ಆಯೋಜಿಸಿದೆ. ಈ ಕಾರ್ಯಕ್ರಮದಲ್ಲಿ ಸಂಸ್ಥೆ ತನ್ನ ಹಲವಾರು ಸಾಫ್ಟ್‌ವೇರ್ ಅಪ್ಡೇಟ್‌ಗಳನ್ನು ಮಾಡಲಿದೆ ಎಂದು ಹೇಳಲಾಗುತ್ತಿದೆ. ಕಂಪನಿಯು iPhone, iPad, Mac ಸೇರಿ ಮುಂತಾದವುಗಳಿಗೆ ನೆಕ್ಸ್ಟ್‌ ಜನರೇಷನ್ ಸಾಫ್ಟ್‌ವೇರ್ ಅನ್ನು ಅನಾವರಣಗೊಳಿಸುವ ಸಾಧ್ಯತೆಗಳು ಹೆಚ್ಚಾಗಿವೆ ಹಾಗಾದ್ರೆ ಇಂದಿನಿಂದ ಆರಂಭವಾಗಲಿರು ಈ ಕಾರ್ಯಕ್ರಮವನ್ನು ಹೇಗೆ ವೀಕ್ಷಣೆ ಮಾಡಬಹುದು ಎಂದು ತಿಳಿಯಲು ಈ ವರದಿ ಪೂರ್ತಿ ಓದಿ.

ಆಪಲ್ ಈ ಬಾರಿಯ ತನ್ನ WWDC ಕಾರ್ಯಕ್ರಮದಲ್ಲಿ ಕೃತಕ ಬುದ್ಧಿಮತ್ತೆ (AI) ಅಳವಡಿಕೆ ಈವೆಂಟ್‌ನ ಪ್ರಮುಖ ಅಂಶವಾಗಿದೆ ಎಂದು ನಿರೀಕ್ಷಿಸಲಾಗಿದೆ. ಆಪಲ್ ವಿವಿಧ ಆಪಲ್ ಉತ್ಪನ್ನಗಳಿಗಾಗಿ ಮುಂಬರುವ ಕೆಲವು Gen-AI-ಚಾಲಿತ ಪರಿಕರಗಳನ್ನು ಪ್ರದರ್ಶಿಸುವ ಸಾಧ್ಯತೆಗಳಿವೆ.

Apple ಬಹುನಿರೀಕ್ಷಿತ WWDC ಕಾರ್ಯಕ್ರಮ ಆರಂಭ

WWDC 2024 ಪೂರ್ಣ ವೇಳಾಪಟ್ಟಿ:

WWDC 2024 ಕೀನೋಟ್ ಮತ್ತು ಪ್ಲಾಟ್‌ಫಾರ್ಮ್‌ಗಳ ಸ್ಟೇಟ್ ಆಫ್ ಯೂನಿಯನ್ ಬಳಿಕ Apple ನ ಡೆವಲಪರ್ ಕಾನ್ಫರೆನ್ಸ್ ನಲ್ಲಿ 100 ಕ್ಕೂ ಹೆಚ್ಚು ತಾಂತ್ರಿಕ ಸೆಷನ್‌ಗಳು ನಡೆಯಲಿವೆ. ಈ ಸೆಷನ್‌ಗಳು ಆಪಲ್ ವಿನ್ಯಾಸಕರು, ಎಂಜಿನಿಯರ್‌ಗಳು ಮತ್ತು ಇತರ ತಜ್ಞರೊಂದಿಗೆ YouTube ಮತ್ತು Apple ಡೆವಲಪರ್ ವೆಬ್‌ಸೈಟ್‌ ಮತ್ತು ಆಪ್‌ಗಳಲ್ಲಿ ಮುಂದಿನ ಕೆಲವು ದಿನ ಲೈವ್ ಇರಲಿದೆ ಎಂದು ತಿಳಿದು ಬಂದಿದೆ.

ಕಂಪನಿಯು ಆಪಲ್ ಪಾರ್ಕ್‌ನಲ್ಲಿ ಮೂರು ದಿನಗಳ ಕಾಲ ವಾರ್ಷಿಕ ಸ್ವಿಫ್ಟ್ ಸ್ಟೂಡೆಂಟ್ ಚಾಲೆಂಜ್‌ನ 50 ಡಿಸ್ಟಿಂಗ್ವಿಶ್ಡ್ ವಿಜೇತರನ್ನು ಆಯೋಜಿಸುತ್ತದೆ. ಸಂಸ್ಥೆಯ ಪ್ರಕಾರ, ಈ ವಿಜೇತರು WWDC 2024 ರ ವಾರದಲ್ಲಿ ವಿಶೇಷ ಚಟುವಟಿಕೆಗಳಲ್ಲಿ ಭಾಗವಹಿಸಲಿದ್ದಾರೆ.

WWDC 2024 ರಲ್ಲಿ ವಾರ್ಷಿಕ ಆಪಲ್‌ ವಿನ್ಯಾಸ ಪ್ರಶಸ್ತಿಗಳ ವಿಜೇತರನ್ನು ಆಪಲ್ ಬಹಿರಂಗಪಡಿಸುವ ನಿರೀಕ್ಷೆಯಿದೆ. ಈ ವರ್ಷದ ಫೈನಲಿಸ್ಟ್‌ಗಳನ್ನು ಆಪಲ್ ಡೆವಲಪರ್ ವೆಬ್‌ಸೈಟ್ ಮತ್ತು ಅಪ್ಲಿಕೇಶನ್‌ನಲ್ಲಿ ಘೋಷಿಸಲಾಗಿದೆ ಮತ್ತು ಶೀಘ್ರದಲ್ಲೇ ವಿಜೇತರನ್ನು ಘೋಷಿಸುವುದಾಗಿ Apple ತಿಳಿಸಿದೆ.

WWDC 24 ರ ಈವೆಂಟ್‌ನಲ್ಲಿ ಆಯ್ದ ಕೆಲವು ಮಾಧ್ಯಮಗಳು, ವಿಶ್ಲೇಷಕರು ಮತ್ತು ಡೆವಲಪರ್‌ಗಳಿಗೆ ಆಹ್ವಾನ ನೀಡಲಾಗಿದೆ. ಈ ಕಾರ್ಯಕ್ರಮವು ಯೂಟ್ಯೂಬ್, X ಮತ್ತು ಕಂಪನಿಯ ಅಧಿಕೃತ ವೆಬ್‌ಸೈಟ್‌ನಲ್ಲಿ ಲೈವ್ ಸ್ಟ್ರೀಮ್ ಆಗಿರಲಿದೆ. ಈವೆಂಟ್ ಇಂದು 10.30 PM IST ಕ್ಕೆ ಪ್ರಾರಂಭವಾಗಲಿದ್ದು ಒಂದು ಗಂಟೆಯವರೆಗೆ ಇರುತ್ತದೆ ಎಂದು ನಿರೀಕ್ಷಿಸಲಾಗಿದೆ. ಆ ಅವಧಿಯಲ್ಲಿ, ಆಪಲ್ ತನ್ನ ಮುಂಬರುವ iOS 18, iPadOS 18, macOS 15, watchOS 11 ಮತ್ತು ಇತರೆ ಅಪ್ಡೇಟ್‌ಗಳ ಕುರಿತು ಮಾಹಿತಿ ನೀಡಲಿದೆ. ಪ್ರಾಥಮಿಕವಾಗಿ ನೂತನ AI ವೈಶಿಷ್ಟ್ಯಗಳನ್ನು ಹೈಲೈಟ್ ಮಾಡಲಿದೆ.

ಕ್ಯುಪರ್ಟಿನೊ ದೈತ್ಯ ತನ್ನ AI ವೈಶಿಷ್ಟ್ಯಗಳನ್ನು "ಆಪಲ್ ಇಂಟೆಲಿಜೆನ್ಸ್" ಎಂದು ಬ್ರಾಂಡ್ ಮಾಡಬಹುದು ಎಂದು ಹೇಳಲಾಗುತ್ತಿದೆ. ಇದು ChatGPT ರೀತಿಯ ಸಂಭಾಷಣಾ ಸಾಮರ್ಥ್ಯಗಳೊಂದಿಗೆ ಪರಿಷ್ಕರಿಸಿದ ಸಿರಿಯನ್ನು ಒಳಗೊಂಡಿರಬಹುದು. ಇದು ಇತರ ಫಸ್ಟ್ ಪಾರ್ಟಿ ಅಪ್ಲಿಕೇಶನ್‌ಗಳಾದ ಟಿಪ್ಪಣಿಗಳು, ಸಂಗೀತ, ಧ್ವನಿ ಮೆಮೊ ಮತ್ತು ಹೆಚ್ಚಿನವುಗಳನ್ನು ಉತ್ಪಾದಕ AI ಸಾಮರ್ಥ್ಯಗಳೊಂದಿಗೆ ಸೂಪರ್‌ಚಾರ್ಜ್ ಮಾಡುವ ನಿರೀಕ್ಷೆಯಿದೆ.

ಡಿವೈಸ್‌ ಮತ್ತು ಸೇವೆಯ ಆಧಾರದ ಮೇಲೆ, ಕೆಲವರು ಆನ್ ಡಿವೈಸ್ AI ಅನುಭವಗಳಿಗಾಗಿ ನ್ಯೂರಲ್ ಪ್ರೊಸೆಸಿಂಗ್ ಯೂನಿಟ್ (NPU) ಅನ್ನು ಬಳಸುವ ನಿರೀಕ್ಷೆಯಿದೆ. ಆದರೆ ಇತರರು ಕ್ಲೌಡ್-ಆಧಾರಿತ ನಿರ್ಣಯವನ್ನು ಅವಲಂಬಿಸುವ ನಿರೀಕ್ಷೆಯಿದೆ. ಬ್ಲೂಮ್‌ಬರ್ಗ್ ವರದಿಯ ಪ್ರಕಾರ, ಐಫೋನ್‌ಗಳಲ್ಲಿ AI ಅನುಭವಗಳನ್ನು ಒದಗಿಸಲು Apple OpenAI ಜೊತೆಗೆ ಕೈಜೋಡಿಸಿದೆ. AI ಅನ್ನು ಬಳಸಿಕೊಂಡು ಅಪ್ಲಿಕೇಶನ್‌ಗಳು ಮತ್ತು ಆಟಗಳನ್ನು ರಚಿಸುವಲ್ಲಿ ಡೆವಲಪರ್‌ಗಳಿಗೆ ಸಹಾಯ ಮಾಡಲು AI-ಬೆಂಬಲಿತ Xcode ನಂತಹ ಹೊಸ ಪರಿಕರಗಳನ್ನು ಪರಿಚಯಿಸಲು ಆಪಲ್ ಸಹ ನಿರೀಕ್ಷೆ ಹೊಂದಿದೆ.

iPhone 15 Pro ಸರಣಿಯಂತಹ ಆಯ್ದ ಸಾಧನಗಳು ಮಾತ್ರ ಪೂರ್ಣ ಶ್ರೇಣಿಯ ಹೊಸ AI ವೈಶಿಷ್ಟ್ಯಗಳನ್ನು ಸ್ವೀಕರಿಸಬಹುದು ಎಂದು ಊಹಿಸಲಾಗಿದೆ. iPad ಗಳು ಮತ್ತು Mac ಗಳಿಗೆ M1 ಅಥವಾ ಹೊಸ ಚಿಪ್ ಹೊಂದಿರುವ ಸಾಧನಗಳು ಮಾತ್ರ 'Apple Intelligence' ನಿಂದ ಪ್ರಯೋಜನ ಪಡೆಯಬಹುದು.

ಈವೆಂಟ್‌ನ ಬಳಿಕ ಶೀಘ್ರದಲ್ಲೇ ಮುಂಬರುವ ಅಪ್‌ಡೇಟ್‌ಗಾಗಿ ತಮ್ಮ ಅಪ್ಲಿಕೇಶನ್‌ಗಳು ಮತ್ತು ಸೇವೆಗಳನ್ನು ಆಪ್ಟಿಮೈಜ್ ಮಾಡಲು ಡೆವಲಪರ್‌ಗಳಿಗೆ ಸಹಾಯ ಮಾಡಲು ಆಪಲ್ ಈ ಸಾಫ್ಟ್‌ವೇರ್‌ನ ಆರಂಭಿಕ ಆವೃತ್ತಿಗಳನ್ನು ಬಿಡುಗಡೆ ಮಾಡುವ ನಿರೀಕ್ಷೆಯಿದೆ.

Best Mobiles in India

English summary
Apple has hosted its much-anticipated annual event Worldwide Developers Conference (WWDC) 2024 from June 10 in California.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+