Home
ಸುದ್ದಿಜಾಲ

ಭಾರತದಲ್ಲೇ ಐಫೋನ್ ಎಕ್ಸ್‌ಆರ್ ಉತ್ಪಾದನೆ ಆರಂಭ!..ಕಡಿಮೆ ಬೆಲೆಗೆ ಸಿಗಲಿದೆಯೇ ಫೋನ್?

ಭಾರತದಲ್ಲಿ ಆಪಲ್ ಮತ್ತೆ ವಿಜೃಂಭಣೆಯಿಂದ ಮೆರೆಯಲು ನೆರವಾದ ಜನಪ್ರಿಯ ಐಫೋನ್ ಎಕ್ಸ್ ಆರ್ ಫೋನನ್ನು ಭಾರತದಲ್ಲೆ ಉತ್ಪಾದನೆ ಮಾಡಲು ಕಂಪೆನಿ ಮುಂದಾಗಿದೆ. ಆಪಲ್ ಕಂಪೆನಿ ಭಾರತದಲ್ಲಿ ಐಫೋನ್ ಎಕ್ಸ್‌ಆರ್ ತಯಾರಿಸಲು ಪ್ರಾರಂಭಿಸಿದೆ ಎಂದು ವರದಿಯಾಗಿದ್ದು, ಕೈಗೆಟುಕುವ ಐಫೋನ್ ಮಾದರಿಯ ಉತ್ಪಾದನೆಯನ್ನು ಪ್ರಸ್ತುತ ಚೆನ್ನೈನ ಫಾಕ್ಸ್ಕಾನ್ ಸ್ಥಾವರದಲ್ಲಿ ಮಾಡಲಾಗುತ್ತಿದೆ. ಐಫೋನ್ 6 ಎಸ್, ಐಫೋನ್ 7 ಮತ್ತು ಐಫೋನ್ ಎಕ್ಸ್ ನಂತರ, ಐಫೋನ್ ಎಕ್ಸ್ಆರ್ ಭಾರತದಲ್ಲಿ ತಯಾರಾದ ನಾಲ್ಕನೇ ಐಫೋನ್ ಇದಾಗಿದೆ.

 ತಂತ್ರಜ್ಞಾನ

ಹೌದು, ತಂತ್ರಜ್ಞಾನ ಕ್ಷೇತ್ರದಲ್ಲಿ ಹೊಸ ಭಾಷ್ಯ ಬರೆದಿರುವ ಆಪಲ್ ತನ್ನ ಜನಪ್ರಿಯ ಬಜೆಟ್ ಫೋನ್ 'ಐಫೋನ್ ಎಕ್ಸ್' ಅನ್ನು ಭಾರತದಲ್ಲೆ ಉತ್ಪಾದನೆ ಮಾಡಲು ಮುಂದಾಗಿದೆ. ಅಮೇರಿಕಾ ಮತ್ತು ಚೀನಾ ನಡುವಿನ ವಾಣಿಜ್ಯ ಸಮರದಿಂದಾಗಿ ಭಾರತದಲ್ಲೂ ಐಫೋನ್ ಉತ್ಪಾದನಾ ಘಟಕವನ್ನು ಆರಂಭಿಸಲಾಗುವುದು ಎಂದು ಆಪಲ್ ಸಂಸ್ಥೆ ಈ ಹಿಂದೆಯೇ ತಿಳಿಸಿತ್ತು. ಜೊತೆಗೆ ಭಾರತದಲ್ಲಿ ಐಫೋನ್ ಎಕ್ಸ್ ಆರ್ ಫೋನ್‌ಗಳಿಗೆ ಭಾರೀ ಬೇಡಿಕೆಯಿರುವುದರಿಂದ ದೇಶದಲ್ಲೇ ಫೋನ್ ಗಳ ತಯಾರಿಕೆ ಕಂಪೆನಿ ನಿರ್ಧರಿಸಿದೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ.

ಐಫೋನ್ ಎಕ್ಸ್‌ಆರ್

ವಾಲ್ ಸ್ಟ್ರೀಟ್ ಜರ್ನಲ್ ವರದಿಯ ಪ್ರಕಾರ ಆಪಲ್ ಭಾರತದಲ್ಲಿ ಐಫೋನ್ ಎಕ್ಸ್‌ಆರ್ ತಯಾರಿಸಲು ಪ್ರಾರಂಭಿಸಿದೆ ಎಂದು ಹೇಳಿದೆ. ಯುಎಸ್ ಮತ್ತು ಚೀನಾ ನಡುವಿನ ಹೆಚ್ಚುತ್ತಿರುವ ವ್ಯಾಪಾರ ಯುದ್ಧದಿಂದಾಗಿ ಟೆಕ್ ದೈತ್ಯ ತನ್ನ ಉತ್ಪಾದನೆಯನ್ನು ಭಾರತಕ್ಕೆ ವರ್ಗಾಯಿಸಲು ನಿರ್ಧರಿಸಿದ್ದು, ಐಫೋನ್ ಎಕ್ಸ್‌ಆರ್‌ನ ಚಿಲ್ಲರೆ ಪೆಟ್ಟಿಗೆಯ ಚಿತ್ರದ ಹಿಂಭಾಗದಲ್ಲಿ ‘ಅಸೆಂಬ್ಲ್ಡ್ ಇನ್ ಇಂಡಿಯಾ' ಲೇಬಲ್ ಅನ್ನು ಒಳಗೊಂಡಿದೆ ಎಂದು ತಿಳಿಸಿದೆ. ಇನ್ನು ಹೆಚ್ಚು ಅತ್ಯಾಧುನಿಕ ಫೋನ್ ತಯಾರಿಸಲು ಫಾಕ್ಸ್‌ಕಾನ್ ತನ್ನ ಸ್ಥಾವರವನ್ನು ನವೀಕರಿಸಿದೆ ಎಂದು ವರದಿಯಾಗಿದೆ.

 20 ಪ್ರತಿಶತ

ಭಾರತವು ಮೇಕ್ ಇನ್ ಇಂಡಿಯಾ ಯೋಜನೆ ಜೊತೆ ಶೇ.30 ರಷ್ಟು ಉತ್ತಪನ್ನಗಳನ್ನು ಭಾರತದಲ್ಲೇ ತಯಾರಿಸಬೇಕೆಂಬ ನಿಯಮ ರೂಪಿಸಿತ್ತು. ಭಾರತದಲ್ಲಿ ಉತ್ಪಾದನೆ ಮಾಡುವುದರಿಂದ ಆಮದು ಸುಂಕ ಕೂಡ ಕಡಿತವಾಗಲಿದೆ. ಇದರಿಂದ ಗ್ರಾಹಕರಿಗೆ ಕಡಿಮೆ ಬೆಲೆಯಲ್ಲಿ ಐಫೋನ್ ದೊರಕುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ಆದರೆ, ಆಮದು ಸುಂಕದಲ್ಲಿ ಆಪಲ್ ಸುಮಾರು 20 ಪ್ರತಿಶತವನ್ನು ಉಳಿಸಿದರೂ, ಭಾರತದಲ್ಲಿ ಉತ್ಪಾದನೆ ಮಾಡಿದ ನಂತರವೂ ಐಫೋನ್ 6 ಎಸ್ ಮತ್ತು ಐಫೋನ್ 7 ಬೆಲೆಯನ್ನು ಕಡಿತಗೊಳಿಸಲಿಲ್ಲ ಎಂಬುದನ್ನು ನೆನಪಿಸಿಕೊಳ್ಳಬೇಕು.

ಆಪಲ್ ಸ್ಟೋರ್

ಆಪಲ್ ತನ್ನ ಉತ್ಪಾದನಾ ಸೌಲಭ್ಯಗಳನ್ನು ವಿಸ್ತರಿಸಲು ಭಾರತದಲ್ಲಿ 1 ಬಿಲಿಯನ್ ಡಾಲರ್ ಹೂಡಿಕೆ ಮಾಡಲು ಯೋಜಿಸುತ್ತಿದೆ ಎಂದು ವರದಿಯಾಗಿದೆ. ವಿದೇಶಿ ಕಂಪನಿಗಳಿಗೆ ಭಾರತ ಸರ್ಕಾರ ಕೆಲವು ನಿಯಮಗಳನ್ನು ಸಡಿಲಿಸಿದ ನಂತರ ಈ ವರದಿ ಬಂದಿದೆ. ಮುಂದಿನ ವರ್ಷ ಮುಂಬೈನಲ್ಲಿ ತನ್ನ ಮೊದಲ ಆಪಲ್ ಸ್ಟೋರ್ ತೆರೆಯುವ ಮೂಲಕ ಆಪಲ್ ತನ್ನ ಮೊದಲ ಎಕ್ಸ್‌ಪೀರಿಯನ್ಸ್ ಸ್ಟೋರ್ ಅನ್ನು ಭಾರತಕ್ಕೆ ತರಲು ಯೋಜಿಸುತ್ತಿದ್ದು, ಚೀನಾದ ಮೇಲಿದ್ದ ಆಪಲ್‌ನ ಒಲವು ನಿಧಾನವಾಗಿ ಭಾರತದತ್ತ ವಾಲುತ್ತಿದೆ ಎಂದು ವರದಿಗಳು ಅಭಿಪ್ರಾಯಪಟ್ಟಿವೆ.

Best Mobiles in India

English summary
The report includes an image of the iPhone XR’s retail box that features an ‘Assembled in India’ label at the back. Foxconn has reportedly upgraded its plant to manufacture the more-sophisticated smartphone. to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+