Home
ಸುದ್ದಿಜಾಲ

ಭಾರತೀಯರಿಗೆ ಶಾಕಿಂಗ್ ನ್ಯೂಸ್ ನೀಡಿದ ಆಪಲ್!

ಭಾರತದ ಮೊಬೈಲ್ ಮಾರುಕಟ್ಟೆಯಿಂದ ಆಪಲ್ ಸಂಸ್ಥೆಯ ಜನಪ್ರಿಯ ಹಳೆಯ ಮಾದರಿ ಐಪೋನ್‌ಗಳಿನ್ನು ಹೊರನಡೆಯುತ್ತಿವೆ.! ಆರಂಭಿಕ ಹಂತದ ಮತ್ತು ಹೆಚ್ಚಿನ ಭಾರತೀಯರು ಖರೀದಿಸುವ ಆಪಲ್ ಐಫೋನ್ SE, ಐಫೋನ್ 6, ಐಫೋನ್ 6 ಪ್ಲಸ್ ಮತ್ತು 6S ಸರಣಿಯ ಐಫೋನ್‌ಗಳ ಮಾರಾಟವನ್ನು ನಿಲ್ಲಿಸಲು ಆಪಲ್ ಮುಂದಾಗಿದೆ ಎಂಬ ಶಾಕಿಂಗ್ ನ್ಯೂಸ್ ಇದೀಗ ಹೊರಬಿದ್ದಿದೆ.

ಭಾರತೀಯರಿಗೆ ಶಾಕಿಂಗ್ ನ್ಯೂಸ್ ನೀಡಿದ ಆಪಲ್!

ಹೌದು, ಆಪಲ್ ಈಗ ತನ್ನ ಮಾರಾಟ ಸಂಖ್ಯೆಯನ್ನು ಇನ್ನಷ್ಟು ಸಂಕುಚಿತಗೊಳಿಸುವುದು ಖಚಿತವಾಗಿದೆ. ಆಪಲ್ ಕಂಪನಿಯು ಭಾರತಕ್ಕೆ ತನ್ನ ಐಫೋನ್ ಎಸ್ಇ, ಐಫೋನ್ 6, ಐಫೋನ್ 6 ಪ್ಲಸ್ ಮತ್ತು ಐಫೋನ್ 6 ಎಸ್ ಪ್ಲಸ್ ನೀಡುವುದನ್ನು ನಿಲ್ಲಿಸಿದೆ. ದೇಶದಲ್ಲಿ ಐಫೋನ್ ಎಸ್ಇ ಮತ್ತು ಐಫೋನ್ 6 ಹೆಚ್ಚು ಮಾರಾಟವಾಗುತ್ತಿದ್ದರೂ ಸಹ ಅವುಗಳನ್ನು ಸಹ ಕೊನೆಗೊಳಿಸುತ್ತಿದೆ.

ಕೆಲವು ವಿಶ್ಲೇಷಣೆಗಳ ಪ್ರಕಾರ, ಆಪಲ್‌ನ ಸ್ಮಾರ್ಟ್‌ಫೋನ್‌ಗಳು ಸರಾಸರಿ ಭಾರತೀಯರ ಬಜೆಟ್‌ಗಿಂತ ಹೆಚ್ಚಿನ ಬೆಲೆಯಿದೆ ಎಂದು ಹೇಳಿವೆ ಮತ್ತು ಅದಕ್ಕಾಗಿಯೇ ಆಪಲ್ ಈ ಕ್ರಮವನ್ನು ಕೈಗೊಂಡಿದೆ ಎಂದು ಹೇಳಲಾಗುತ್ತಿದೆ. ಆದರೆ, ಆಪಲ್ 10 ಸರಣಿ ಸ್ಮಾರ್ಟ್‌ಫೋನ್‌ಗಳ ಪ್ರವೇಶದ ಬೆನ್ನಲ್ಲೇ ಅಮೆರಿಕದಲ್ಲಿ ಹಳೆಯ ಮಾದರಿಗಳಾದ ಐಪೋನ್ ಎಸ್‌ಇ, ಐಫೋನ್ 6 ಮತ್ತು 6s ಮಾರಾಟವನ್ನು ಸ್ಥಗಿತಗೊಳಿಸಿತ್ತು.

ಭಾರತೀಯರಿಗೆ ಶಾಕಿಂಗ್ ನ್ಯೂಸ್ ನೀಡಿದ ಆಪಲ್!

ಆಪಲ್ ತನ್ನ ಕಡಿಮೆ ಬೆಲೆಯ ಆರಂಭಿಕ ಹಂತದ ಐಫೋನ್‌ಗಳನ್ನು ರದ್ದುಪಡಿಸಿದರೆ, ನಂತರ ಹೆಚ್ಚುವರಿ ಸುಮಾರು 8,000 ರೂ. ವರೆಗೆ ಹೆಚ್ಚು ಹಣ ವ್ಯಯಿಸಿ ಐಫೋನ್ ಕೊಳ್ಳಬೇಕಾಗುತ್ತದೆ. ಇದರಿಂದ ಗ್ರಾಹಕರಿಗೆ ಹೊರೆಯಾಗಲಿದೆ. ಪ್ರಸ್ತುತ ಐಫೋನ್ SE ದೇಶದಲ್ಲಿ ಕಡಿಮೆ ಬೆಲೆಗೆ ದೊರೆಯುವ ಐಫೋನ್ ಆಗಿದ್ದು, ಆನ್‌ಲೈನ್‌ನಲ್ಲಿ ಅಂದಾಜು 19,000 ರೂ. ದರ ಹೊಂದಿದೆ.

ಆಪಲ್ ತನ್ನ ಘಟಕಗಳಿಂದ ಹೆಚ್ಚು ಲಾಭ ಗಳಿಸುವದೃಷ್ಟಿಕೋನದಿಂದ, ಅಗ್ಗದ ಮಾದರಿಗಳನ್ನು ತೊಡೆದುಹಾಕಲು ಅರ್ಥವಿಲ್ಲ. ಹೇಗಾದರೂ ಮಾರಾಟ ಸಂಖ್ಯೆಗಳ ಪಂದ್ಯವನ್ನು ಗೆಲ್ಲಲು ಮುಂದಾಗಿತ್ತು. ಹಾಗಾಗಿ, ಆಪಲ್ ಭಾರತದಲ್ಲಿ ತನ್ನ ಪ್ರೀಮಿಯಂ-ನೆಸ್ ಅನ್ನು ದ್ವಿಗುಣಗೊಳಿಸುತ್ತಿದೆ ಎಂದು ತೋರುತ್ತಿದೆ. ಏಕೆಂದರೆ ಅದು ಉತ್ತಮ ಜನರಿಗೆ ಮಾತ್ರ ಮಾರಾಟವಾಗುತ್ತಿದೆ ಎಂದು ಕೆಲ ವರದಿಗಳು ಅಭಿಪ್ರಾಯಪಟ್ಟಿವೆ.

Best Mobiles in India

English summary
Apple hasn't been doing very well, sales-wise, in India, a country that devours well priced Android phones. Some quick armchair analysis would reveal that Apple's smartphones are priced way above the average Indian's budget, and that's why. to know more visit to kannada.gzbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+