ಆಪಲ್ ದಿಗ್ಗಜನ ಜೊತೆ ಊಟ ಮಾಡಲು ಬೇಕು ರೂ. 1,96,02,000

Posted By:

ನಿಮ್ಮ ಸ್ನೇಹಿತರ ಜೊತೆ ನೀವು ಉಚಿತವಾಗಿ ಸಮಯ ಕಳೆಯಬಹುದು ಊಟ ಮಾಡಬಹುದು ಸುತ್ತಾಡಬಹುದು ಆದರೆ ಅತಿರಥ ಮಹಾರಥರೊಂದಿಗೆ ಸ್ವಲ್ಪ ಸಮಯವನ್ನು ವಿನಿಯೋಗಿಸುವುದೆಂದರೆ ಅದಕ್ಕೂ ದುಬಾರಿ ಬೆಲೆಯನ್ನು ತೆರಬೇಕು ಎಂಬುದು ನಿಮಗೆ ತಿಳಿದಿಯೇ?

ಆಪಲ್ ಕಂಪೆನಿ ಸಿಇಒ ಟಿಮ್ ಕುಕ್ ಜೊತೆ ಒಂದು ಮಧ್ಯಾಹ್ನದ ಊಟ ಮಾಡಲು ಬೇಕು ರೂ. 1,96,02,000 ಎಂಬುದು ಇತ್ತೀಚೆಗೆ ನಡೆದ ಬಿಡ್ ಮೂಲಕ ಸಾಬೀತಾಗಿದೆ. ಒಬ್ಬ ವ್ಯಕ್ತಿ ಇಷ್ಟು ಮೊತ್ತವನ್ನು ಪಾವತಿಸಿ ಟಿಮ್ ಕುಕ್ ಜೊತೆ ಊಟ ಮಾಡಿದ್ದಾನೆ. ಟಿಮ್ ಈ ಹಣವನ್ನು ಮಾನವ ಹಕ್ಕುಗಳ ಕೇಂದ್ರಕ್ಕೆ ಸಹಾಯಾರ್ಥವಾಗಿ ನೀಡಿದ್ದಾರೆ. ಪ್ರತಿ ನಿಮಿಷಕ್ಕೆ ರೂ. 3,26,700 ಯಂತೆ ಟಿಮ್ ಕುಕ್ ನಿಗದಿಪಡಿಸಿದ್ದರು.

ಆಪಲ್ ದಿಗ್ಗಜನ ಜೊತೆ ಊಟ ಮಾಡಲು ಬೇಕು ರೂ. 1,96,02,000

ತನ್ನ ಜೊತೆ ಸಮಯ ಕಳೆಯಲು ಹೊರಟವರಿಗೆ ಟಿಮ್ ಕುಕ್ ಬಿಡ್ ಅನ್ನು ಒಡ್ಡುತ್ತಾರೆ. ಯಾರು ವಿಜಯಿಯಾಗುತ್ತಾರೋ ಅವರೊಂದಿಗೆ ಆ ಮೊತ್ತಕ್ಕೆ ನಿಶ್ಚಯಿಸಿದ ಸಮಯವನ್ನು ಕಳೆಯುತ್ತಾರೆ. ಹೀಗೆ ಪಡೆದ ಹಣವನ್ನು ಕುಕ್ ಸಹಾಯಾರ್ಥಿಗಳಿಗೆ ಕೇಂದ್ರಗಳಿಗೆ ವಿನಿಯೋಗಿಸುತ್ತಿದ್ದಾರೆ.

ಮುಂದಿನ ಆಪಲ್ ಈವೆಂಟ್‌ನಲ್ಲಿ ಭಾಗಹಿಸುವ ಆಮಂತ್ರಣವನ್ನು ಬಿಡ್ ವಿಜಯಿಗಳಿಗೆ ಟಿಮ್ ಕುಕ್ ನೀಡಿದ್ದಾರೆ. ಕುಕ್ ಇಂತಹ ಬಿಡ್‌ನಲ್ಲಿ ಭಾಗವಹಿಸಿ ಸಂಸ್ಥೆಗಳಿಗೆ ಧನಸಹಾಯ ನೀಡುವುದು ಸರ್ವೇ ಸಾಮಾನ್ಯವಾದ ಮಾತಾಗಿದೆ ಎಂದು ಆಂಗ್ಲ ಪತ್ರಿಕೆಯೊಂದು ತಿಳಿಸಿದೆ. ಇದೇ ರೀತಿ ಈ ಹಿಂದೆ ಕೂಡ ಕುಕ್ ಕಾಫಿ ಕುಡಿಯಲು ರೂ. 3,62,34,000 ಅನ್ನು ತೆಗೆದುಕೊಂಡಿದ್ದರು. ಈ ಕಾಫಿ ಸೇವನೆಗೆ 30-60 ನಿಮಿಷಗಳು ತಗಲಿದ್ದರಿಂದ ಇಷ್ಟು ದುಬಾರಿ ಕಾಫಿ ಸೇವನೆಗೆ ಇದು ಕಾರಣವಾಯಿತು.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot