ಇನ್ಮುಂದೆ ವರ್ಷಕ್ಕೆ ಎರಡು ಸಲ ಐಫೋನ್‌ ಲಾಂಚ್..!

By Gizbot Bureau
|

2018ರಲ್ಲಿ ಆಪಲ್ ಕಂಪನಿ ಐಫೋನ್ ಎಕ್ಸ್‌ಆರ್ ಬಿಡುಗಡೆಗೊಳಿಸುವುದರೊಂದಿಗೆ ವಿಶ್ವದಾದ್ಯಂತ ತನ್ನ ಅಭಿಮಾನಿಗಳನ್ನು ಬೆರಗುಗೊಳಿಸಿತ್ತು. ಇದು ಸಾಮಾನ್ಯ ಮತ್ತು ಪ್ಲಸ್-ಗಾತ್ರದ ಐಫೋನ್ ಮಾದರಿಗಳಿಗೆ ಹೆಚ್ಚುವರಿಯಾದ ಮೂರನೇ ಮಾದರಿಯಾಗಿತ್ತು. ಆಪಲ್ ಈ ವರ್ಷವು ಕೂಡ ಐಫೋನ್ 11 ಸರಣಿ ಫೋನ್‌ಗಳೊಂದಿಗೆ ಈ ಮಾದರಿ ಅನುಸರಿಸಿತ್ತು. ಹಲವು ವರದಿಗಳ ಪ್ರಕಾರ, ತ್ರಿ-ಮಾದರಿ ತಂತ್ರವು ಆಪಲ್‌ನಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ, ಐಫೋನ್ 11 ಎಲ್‌ಸಿಡಿ ಡಿಸ್‌ಪ್ಲೇ ಮತ್ತು ಕೇವಲ ಎರಡು ಕ್ಯಾಮೆರಾ ಒಳಗೊಂಡಿದ್ದರೂ ಉತ್ತಮ ಮಾರಾಟದ ದಾಖಲೆ ಬರೆದಿದೆ. ಇದು 2021ರಲ್ಲಿ ಹೆಚ್ಚಿನ ಐಫೋನ್ ರೂಪಾಂತರಗಳ ಬಿಡುಗಡೆಗೆ ಕಾರಣವಾಗಬಹುದಾಗಿದ್ದು, ಎರಡು ಹೊಸ ಸ್ಕ್ರೀನ್‌ ಗಾತ್ರಗಳನ್ನು ಆಪಲ್‌ ಗ್ರಾಹಕರಿಗೆ ನೀಡುವ ಸಾಧ್ಯತೆ ಇದೆ.

2020ರ ಕೊನೆಯಲ್ಲಿ ಐಫೋನ್ 12

2020ರ ಕೊನೆಯಲ್ಲಿ ಐಫೋನ್ 12

ಜೆಪಿ ಮೋರ್ಗಾನ್‌ನ ವಿಶ್ಲೇಷಕ ಸಮಿಕ್ ಚಟರ್ಜಿ ಪ್ರಕಾರ, ಮುಂದಿನ ವರ್ಷದ ಕೊನೆಯಲ್ಲಿ ಆಪಲ್ ಐಫೋನ್ 12 ಸರಣಿಯನ್ನು ಬಿಡುಗಡೆ ಮಾಡಲಿದ್ದು, 2021ರಿಂದ ಕ್ಯುಪರ್ಟಿನೊ ಮೂಲದ ಟೆಕ್ ದೈತ್ಯ ಚಥುರ್ಮಾದರಿ ತಂತ್ರಕ್ಕೆ ಮೊರೆ ಹೋಗಲಿದೆ, ಸ್ಯಾಮ್‌ಸಂಗ್, ಒನ್‌ಪ್ಲಸ್, ಶಿಯೋಮಿ ಮತ್ತು ಮೂಲತಃ ಎಲ್ಲಾ ಇತರ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ತಯಾರಕರಂತೆ ತನ್ನ ಕಾರ್ಯವಿಧಾನವನ್ನು ವಿಸ್ತರಿಸಲಿದೆ.

ಚಥುರ್ಮಾದರಿ ತಂತ್ರ

ಚಥುರ್ಮಾದರಿ ತಂತ್ರ

ಆಪಲ್ ಕಂಪನಿ 2021ರ ಮೊದಲಾರ್ಧದ ಮಾರ್ಚನಲ್ಲಿ ಎರಡು ಮಾದರಿಯ ಐಫೋನ್‌ಗಳನ್ನು ಬಿಡುಗಡೆ ಮಾಡುತ್ತದೆ, ನಂತರ, ಸೆಪ್ಟೆಂಬರ್‌ನಲ್ಲಿ ಮತ್ತೆರಡು ರೂಪಾಂತರಗಳ ಐಫೋನ್‌ ಬಿಡುಗಡೆ ಮಾಡುತ್ತದೆ. ಈ ರೀತಿಯಲ್ಲಿ, ಆಪಲ್ ತನ್ನ ಆಂಡ್ರಾಯ್ಡ್ ಪ್ರತಿಸ್ಪರ್ಧಿಗಳನ್ನು ಮಾರುಕಟ್ಟೆಯಲ್ಲಿ ಎದುರಿಸಲು ಮುಂದಾಗಿದೆ.

ಹೊಸ ಸ್ಕ್ರೀನ್ ಗಾತ್ರ

ಹೊಸ ಸ್ಕ್ರೀನ್ ಗಾತ್ರ

ಆಪಲ್ 6.1 ಇಂಚಿನ ಡಿಸ್‌ಪ್ಲೇ ಹೊಂದಿರುವ ಎರಡು ಐಫೋನ್ ಮಾದರಿಗಳನ್ನು ಹೊಂದಿರುತ್ತದೆ ಎಂದು ಹೇಳಲಾಗುತ್ತಿದ್ದು, 5.4 ಇಂಚಿನ ಕಾಂಪ್ಯಾಕ್ಟ್ ರೂಪಾಂತರ ಮತ್ತು ಇನ್ನೂ ದೊಡ್ಡದಾದ 6.7 ಇಂಚಿನ ಫ್ಯಾಬ್ಲೆಟ್ ಗಾತ್ರವನ್ನು ಹೊಂದಿರುವ ಇತರ ಎರಡು ಮಾದರಿಗಳನ್ನು ಒಳಗೊಂಡಿರಲಿದೆ. ಐಫೋನ್‌ ಮಾದರಿಗಳ ಬಗ್ಗೆ ಚಟರ್ಜಿಗೆ ಯಾವುದೇ ವಿವರಗಳು ದೊರೆತಿಲ್ಲವಾದರೂ, ಜನಪ್ರಿಯ ಸಲಹೆಗಾರ ಬೆನ್ ಗೆಸ್ಕಿನ್ ಹೇಳುವಂತೆ ಆಪಲ್ 5.4 ಇಂಚಿನ ಮತ್ತು 6.1 ಇಂಚಿನ ಒಎಲ್‌ಇಡಿ ಡಿಸ್‌ಪ್ಲೇಯೊಂದಿಗೆ ಸಾಮಾನ್ಯ ಐಫೋನ್ ಮಾದರಿಯನ್ನು ಬಿಡುಗಡೆ ಮಾಡಬಹುದಾಗಿದೆ.

ಹೊಸ ಟೈಮ್‌ಲೈನ್‌

ಹೊಸ ಟೈಮ್‌ಲೈನ್‌

2020ರಿಂದ ಆಪಲ್ ತನ್ನ ಹೊಸ ಉತ್ಪನ್ನ ಬಿಡುಗಡೆ ಮಾಡಲು ಟೈಮ್‌ಲೈನ್ ಅನುಸರಿಸುವ ಸಾಧ್ಯತೆಗಳಿವೆ. ಮುಂದಿನ ವರ್ಷದಿಂದ ನಾವು ನಿರೀಕ್ಷಿಸಬಹುದಾದ ಕೆಲವು ವೈಶಿಷ್ಟ್ಯಗಳೆಂದರೆ 5ಜಿ ಕನೆಕ್ಟಿವಿಟಿ ಮತ್ತು ಪ್ರೊ ಆವೃತ್ತಿಗಳಿಗಾಗಿ ಹಿಂಭಾಗದಲ್ಲಿ 3 ಡಿ ಸೆನ್ಸಿಂಗ್ ಕ್ಯಾಮೆರಾ ಬೆಂಬಲ ನೀಡಬಹುದಾಗಿದೆ.

ಐಫೋನ್ ಎಸ್‌ಇಗೆ ಉತ್ತರಾಧಿಕಾರಿ..?

ಐಫೋನ್ ಎಸ್‌ಇಗೆ ಉತ್ತರಾಧಿಕಾರಿ..?

ಇದು ಕೇವಲ ಊಹಾಪೋಹಗಳಾಗಿದ್ದರೂ, 2016 ರಿಂದ ಆಪಲ್ ಐಫೋನ್ ಎಸ್‌ಇಗೆ ಉತ್ತರಾಧಿಕಾರಿಯನ್ನು ಹುಡುಕುವ ಕೆಲಸದಲ್ಲಿದೆ ಎಂಬ ಮಾತುಗಳು ಆಗಾಗ ತೂರಿಬರುತ್ತಿವೆ. ಇದರ ಲಾಂಚಿಂಗ್‌ 2020ರ ಆರಂಭದಲ್ಲಿ ಆಗಬಹುದಾಗಿದೆ. ಹೊಸ 2020 ಐಫೋನ್ ಎಸ್‌ಇ ಐಫೋನ್‌ 8 ಆಗಿ ಮಾರುಕಟ್ಟೆಗೆ ಬರಲಿದ್ದು, ಐಫೋನ್ 11 ಸರಣಿಯ ಹೊಸ ಚಿಪ್‌ಸೆಟ್‌ನೊಂದಿಗೆ ಪರಿಷ್ಕರಿಸಲಾಗಿರುತ್ತದೆ. ದೊಡ್ಡ ಬ್ಯಾಟರಿ, ಹೊಸ ಬಣ್ಣ, 4.7 ಇಂಚಿನ ಎಲ್‌ಸಿಡಿ ಡಿಸ್‌ಪ್ಲೇ ಜೊತೆ ಅದರ ತೆಳುವಾದ ಬೆಜೆಲ್‌ಗಳನ್ನು ಉಳಿಸಿಕೊಳ್ಳುವ ಸಾಧ್ಯತೆಯಿದೆ.

Best Mobiles in India

Read more about:
English summary
Apple To Have Two iPhone Launches Per Year From 2021

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X