2020ರ ಐಫೋನ್‌ಗಳಲ್ಲಿ ಇರಲಿದೆ 5G ಸಂಪರ್ಕ!

|

ಪ್ರಸಿದ್ಧ ಆಪಲ್ ಲೀಕರ್ ಮಿಂಗ್-ಚಿ ಕುವೊ ಅವರ ಇತ್ತೀಚಿನ ವರದಿಯು 2020ರಲ್ಲಿ ಆಪಲ್ ಐಫೋನ್‌ಗಳು 5G ಸಂಪರ್ಕ ಹೊಂದಿರುವ ಬಗ್ಗೆ ಮಾಹಿತಿ ನೀಡಿದೆ. ಮುಂದಿನ ವರ್ಷದ ದ್ವಿತೀಯಾರ್ಧದಲ್ಲಿ ಆಪಲ್ ಕಂಪೆನಿಯ ಉನ್ನತ ಆವೃತ್ತಿಯ ಐಫೋನ್‌ಗಳು 5ಜಿ ಪಡೆಯಲು ಸಿದ್ಧವಾಗಿವೆ ಎಂದು ವರದಿಯಲ್ಲಿ ತಿಳಿಸಲಾಗಿದ್ದು, ಐಫೋನ್ 11 ನಂತರ ಎಲ್ಲಾ ಹೊಸ ಮಾದರಿಯ ಐಫೋನ್‌ಗಳು 5G ಸಂಪರ್ಕ ಹೊಂದಿರುತ್ತವೆ ಎಂದು ತಿಳಿದುಬಂದಿದೆ.

2020ರ ಐಫೋನ್‌ಗಳಲ್ಲಿ ಇರಲಿದೆ 5G ಸಂಪರ್ಕ!

ಹೌದು, ಕೆಲ ಹಿಂದಿನ ವದಂತಿಗಳಿಗೆ ಅನುಗುಣವಾಗಿ 2020 ರವರೆಗೆ ಆಪಲ್ 5ಜಿ ಯನ್ನು ತಡೆಹಿಡಿದಿದೆ ಎನ್ನಲಾಗಿತ್ತು. ಆದರೆ, ಇದೀಗ 5G ಕುರಿತು ಕಂಪೆನಿ ವಿಶೇಷವಾಗಿ ಗಮನ ಹರಿಸಿದ್ದು, 5G ತಂತ್ರಜ್ಞಾನ ಕ್ಷೇತ್ರದಲ್ಲಿ ಮುಂದಿನ ಬೆಳವಣಿಗೆ ಮತ್ತು ತಾಂತ್ರಿಕ ಅವಶ್ಯಕತೆಗಳನ್ನು ಗಮನದಲ್ಲಿರಿಸಿಕೊಂಡು 5G ತರುವ ಕ್ರಮಕ್ಕೆ ಮುಂದಾಗಿದೆ ಎನ್ನಲಾಗಿದೆ. ಹುವಾವೇ ಮತ್ತು ಸ್ಯಾಮ್‌ಸಂಗ್ ಕಂಪೆನಿಗಳಿಗಿಂತ ಹಿಂದುಳಿಯುವುದನ್ನು ಆಪಲ್ ತಪ್ಪಿಸಿಕೊಳ್ಳಲು ಮುಂದಾಗಿದೆ ಎನ್ನಲಾಗಿದೆ.

2020 ರಲ್ಲಿ ಆಪಲ್ ಎರಡು 5ಜಿ ಐಫೋನ್‌ಗಳನ್ನು ಅನಾವರಣಗೊಳಿಸಲಿದೆ ಎಂದು ಹೊಸ ವರದಿಯು ಸೂಚಿಸಿದ್ದು, ಈ ಎರಡೂ ಐಫೋನ್ಗಳು 5 ಜಿ ಸಂಪರ್ಕಕ್ಕೆ ಬೆಂಬಲವನ್ನು ನೀಡಲಿವೆ. ಇನ್ನು 2020ರ ಒಂದು ಪ್ರೀಮಿಯಂ ಐಫೋನ್ ಮಾದರಿಯು 6.7-ಇಂಚಿನ ಬೃಹತ್ OLED ಡಿಸ್ಪ್ಲೇಯನ್ನು ಪ್ಯಾಕ್ ಮಾಡುತ್ತದೆ. ಹಾಗೆಯೇ, ಮತ್ತೊಂದು ಐಫೋನ್ 5.4-ಇಂಚಿನ OLED ಪ್ರದರ್ಶನವನ್ನು ಹೊಂದಿರುತ್ತದೆ ಎಂದು ವಿಶ್ಲೇಷಕರಾದ ಮಿಂಗ್-ಚಿ ಕುವೊ ಅವರು ಹೇಳಿದ್ದಾರೆ.

2020ರ ಐಫೋನ್‌ಗಳಲ್ಲಿ ಇರಲಿದೆ 5G ಸಂಪರ್ಕ!

ಈಗಾಗಲೇ 5G ತಂತ್ರಜ್ಞಾನ ಫೋನ್‌ಗಳು ಪರೀಕ್ಷಾರ್ಥ ಬಳಕೆಯಲ್ಲಿವೆ. ಹೀಗಾಗಿ ಹೊಸ 5G ತಂತ್ರಜ್ಞಾನವನ್ನು ಐಫೋನ್‌ನಲ್ಲಿ ಅಳವಡಿಸಲು ಆಪಲ್ ಕಂಪೆನಿ ಸಿದ್ಧತೆ ನಡೆಸಿರುವುದರಲ್ಲಿ ಆಶ್ಚರ್ಯವೇನಿಲ್ಲ. ಏಕೆಂದರೆ, ಆಂಡ್ರಾಯ್ಡ್ ಫೋನ್ ಮಾರುಕಟ್ಟೆ ಬಲಗೊಳ್ಳುತ್ತಿದ್ದು, ಅದರ ಜತೆ ಸ್ಪರ್ಧಿಸುವ ಅನಿವಾರ್ಯತೆಯೂ ಆಪಲ್‌ಗೆ ಸೃಷ್ಟಿಯಾಗಿದೆ. ಆದರೆ, ಈ ಬಗ್ಗೆ ಆಪಲ್ ಕಂಪೆನಿಯು ಯಾವುದೇ ಸ್ಷಷ್ಟನೆ ನೀಡದೇ ಇರುವುದರಿಂದ ಇದು ಕೂಡ ವದಂತಿಯಾಗಿ ಉಳಿದಿದೆ.

ಐಫೋನ್ ಫೋಟೋಗ್ರಫಿ ಸ್ಪರ್ಧೆ: ಕೋಲಾರದಲ್ಲಿ ಬಿಲ್ಲು ಹಿಡಿದ ಶ್ರೀರಾಮನ ಚಿತ್ರ ಫಸ್ಟ್!ಐಫೋನ್ ಫೋಟೋಗ್ರಫಿ ಸ್ಪರ್ಧೆ: ಕೋಲಾರದಲ್ಲಿ ಬಿಲ್ಲು ಹಿಡಿದ ಶ್ರೀರಾಮನ ಚಿತ್ರ ಫಸ್ಟ್!

ಇನ್ನು ಮುಂಬರುವ ಐಫೋನ್ 11 ಸರಣಿ ಬಗ್ಗೆ ಸಿಕ್ಕಿರುವ ಮಾಹಿತಿಯಂತೆ, ಐಫೋನ್ 11 ಸುಧಾರಿತ ಫೇಸ್ ಐಡಿ ತಂತ್ರಜ್ಞಾನದೊಂದಿಗೆ ಬರಲಿದೆ ಎಂದು ವದಂತಿಗಳು ತಿಳಿಸಿವೆ. ಐಫೋನ್ 11 ಮುಂಭಾಗದಲ್ಲಿ ಹೆಚ್ಚಿನ ಸಂವೇದಕಗಳನ್ನು ಆಪಲ್ ಸೇರಿಸುತ್ತದೆ ಎನ್ನಲಾಗಿದೆ. ಟ್ರಿಪಲ್ ಕ್ಯಾಮೆರಾ ಸೆಟಪ್ ಸಾಮಾನ್ಯ ಕ್ಯಾಮೆರಾ, ಟೆಲಿಫೋಟೋ ಲೆನ್ಸ್ ಹೊಂದಿರುವ ಎರಡನೇ ಸಂವೇದಕ ಮತ್ತು ಅಲ್ಟ್ರಾ-ವೈಡ್ ಲೆನ್ಸ್ ಹೊಂದಿರುವ ಮೂರನೇ ಸಂವೇದಕವನ್ನು ತರುವ ಸಾಧ್ಯತೆಯಿದೆ.

Best Mobiles in India

English summary
A new report from popular analyst Ming-Chi Kuo claims that all the 2020 iPhones will offer OLED panels with two new screen sizes. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X