ಐಫೋನ್ 11 ಜೊತೆಗೆ ನಾಳೆಯಿಂದಲೇ ಐಒಎಸ್ 13 ಅಧಿಕೃತ ಚಾಲನೆ!
ಇದೆ ಸೆಪ್ಟೆಂಬರ್ 10 ರಂದು, ಅಂದರೆ ನಾಳೆ ಆಪಲ್ ಕಂಪೆನಿಯ ವಾರ್ಷಿಕ ಐಫೋನ್ ಕಾರ್ಯಕ್ರಮ ಕ್ಯಾಲಿಫೋರ್ನಿಯಾದಲ್ಲಿ ಆಯೋಜನೆಯಾಗಿದೆ. ಅಲ್ಲಿ ಹೊಸ ಐಫೋನ್ 11 ಸರಣಿಯು ಅನಾವರಣಗೊಳಿಸುತ್ತದೆ ಎಂದು ಟೆಕ್ ಲೋಕದಲ್ಲಿ ನಂಬಲಾಗಿದೆ. ಇದರ ಜೊತೆಗೆ ಮತ್ತೊಂದು ಸಿಹಿಸುದ್ದಿ ಏನೆಂದರೆ, ಆಪಲ್ ತನ್ನ ಐಒಎಸ್ 13 ಅನ್ನು ನಾಳೆಯೇ ಅಧಿಕೃತವಾಗಿ ಚಾಲನೆ ಮಾಡುವ ನಿರೀಕ್ಷೆಯಿದೆ.! ಹೌದು, ಡಬ್ಲ್ಯೂಡಬ್ಲ್ಯೂಡಿಸಿ 2019 ರಲ್ಲಿ ಘೋಷಿಸಲಾಗಿದ್ದ ಇತ್ತೀಚಿನ ಆವೃತ್ತಿ ಆಪಲ್ 'ಐಓಎಸ್ 13' ಗ್ರಾಹಕರಿಗೆ ಲಭ್ಯವಾಗಲಿದೆ ಎನ್ನಲಾಗಿದೆ.

ಈ ಬಗ್ಗೆ ಟೆಕ್ ವಲಯದಿಂದ ಖಚಿತ ಮಾಹಿತಿಗಳು ಹೊರಬಿದ್ದಿದ್ದು, ಆಪಲ್ ಡೆವಲಪರ್ ಕಾನ್ಫರೆನ್ಸ್ ಡಬ್ಲ್ಯೂಡಬ್ಲ್ಯೂಡಿಸಿ 2019 ರಲ್ಲಿ ಘೋಷಿಸಿದಂತೆ 'ಐಓಎಸ್ 13' ಆಪರೇಟಿಂಗ್ ವ್ಯವಸ್ಥೆ ಹಲವು ಅಪ್‌ಡೇಟ್‌ಗಳನ್ನು ಪಡೆದುಕೊಂಡು ನಾಳೆ ಬಿಡುಗಡೆಯಾಗುತ್ತಿದೆ. ಆಪಲ್ ಐಫೋನ್ 6S ನಂತರದ ಆವೃತ್ತಿಗಳಿಗೆ ಈ ನೂತನ ಅಪ್‌ಡೇಟ್ ಲಭ್ಯವಾಗಲಿದ್ದು, ಈ ಅಪ್‌ಡೇಟ್‌ನಲ್ಲಿ ಡಾರ್ಕ್ಮೋಡ್, ಹೊಸ ಫೋಟೋ ಟೂಲ್ ಸೇರಿದಂತೆ 'ಐಫೋನ್' ಬಳಕೆದಾರರು ಹೆಚ್ಚು ಖುಷಿಪಡುವಂತಹ ಭರ್ಜರಿ ಸಿಹಿ ಸುದ್ದಿಯೊಂದನ್ನು ಸಹ ನೀಡಲಾಗಿದೆ.

ಈ ಭಾರಿ ಐಫೋನ್ ಬಳಕೆದಾರರು ಹೆಚ್ಚು ಖುಷಿಪಡುವಂತಹ ಸುದ್ದಿ ಎಂದರೆ, ಐಓಎಸ್ 13 ಓಎಸ್ ಅಪ್‌ಡೇಟ್ ಐಪೋನ್‌ಗಳ ವೇಗವನ್ನು ಹೆಚ್ಚಿಸಲಿದೆ.! ಐಒಎಸ್ 13 ತನ್ನ ವೇಗದ ಓಎಸ್ ಆಗಲಿದೆ ಎಂದು ಆಪಲ್ ಹೇಳಿದ್ದು, ಅಪ್ಲಿಕೇಶನ್‌ಗಳು ಮತ್ತು ಅವುಗಳ ನವೀಕರಣಗಳನ್ನು ತಲುಪಿಸುವ ವಿಧಾನವನ್ನು ಬದಲಿಸಿದೆ ಮತ್ತು ಜೊತೆಗೆ ಐಫೋನ್ ಫೇಸ್‌ಲಾಕ್ ವೇಗ ಶೇ.30 ರಷ್ಟು ಏರಿಕೆಯಾಗಿದೆ ಎಂದು ಹೇಳುತ್ತದೆ. ಹಾಗಾದರೆ, ಆಪಲ್‌ನ ಹೊಸ ಐಓಎಸ್ 13 ನಲ್ಲಿ ಏನೆಲ್ಲಾ ಹೊಸ ಹೊಸ ಅಪ್‌ಡೇಟ್‌ಗಳು ಬಂದಿವೆ ಎಂಬುದನ್ನು ಮುಂದೆ ಓದಿ ತಿಳಿಯಿರಿ.

ಆಪಲ್ 'ಐಓಎಸ್ 13' ಸೆಪ್ಟೆಂಬರ್ ಅಂತ್ಯದ ವೇಳೆಗೆ ಐಫೋನ್ 6S ಮತ್ತು ನಂತರದ ಆವೃತ್ತಿಗಳಿಗೆ ಲಭ್ಯವಾಗಲಿದೆ. ಹಾಗಾಗಿ, ಐಫೋನ್ 6S ಮಾದರಿ ಒಳಗಿನ ಬಳಕೆದಾರರಿಗೆ ಅಪ್‌ಡೇಟ್ ಸಗುವುದಿಲ್ಲ. ಈ ಮೊದಲು ಆಪಲ್ ಐಪ್ಯಾಡ್‌ಗಳಿಗೆ ಕೂಡ ಐಓಎಸ್ ಬಳಸಲಾಗುತ್ತಿತ್ತು. ಆದರೆ ಈ ಬಾರಿ ಆಪಲ್ ಐಪ್ಯಾಡ್ ಓಎಸ್ ಪರಿಚಯಿಸಿದ್ದು, ಪ್ರತ್ಯೇಕವಾಗಿ ಕಾರ್ಯನಿರ್ವಹಿಸಲಿದೆ.

ಆಪಲ್ ಐಓಎಸ್ 13 ಒಎಸ್ ಮೂಲಕ ಐಫೋನ್‌ಗಳಿಗೆ ಡಾರ್ಕ್ ಮೋಡ್, ಹೊಸ ಫೋಟೋ ಟೂಲ್, ಆಕರ್ಷಕ ಮ್ಯಾಪ್ಸ್, ಸ್ವೈಪ್ ಕೀಬೋರ್ಡ್, ಮಿಮೋಜಿ ಮತ್ತು ವೀಡಿಯೋ ಎಡಿಟಿಂಗ್ ಟೂಲ್‌ಗಳು ಲಭ್ಯವಾಗಲಿವೆ. ಜತೆಗೆ ಇ ಮೇಲ್ ಮತ್ತು ಸಾಮಾಜಿಕ ತಾಣಗಳಿಗೆ ಲಾಗಿನ್ ಆಗಲು, ಗರಿಷ್ಟ ಭದ್ರತೆ ಮತ್ತು ಸುರಕ್ಷತೆ ಸೈನ್ ಇನ್ ಅನ್ನು ಕೂಡ ಆಪಲ್ ಪರಿಚಯಿಸಿದೆ.

ಆಪಲ್ ಐಓಎಸ್ 13 ಅಪ್‌ಡೇಟ್ ಮೂಲಕ ಐಫೋನ್‌ಗಳ ವೇಗ ಹೆಚ್ಚಲಿದೆ ಎಂದು ಆಪಲ್ ಹೇಳಿದೆ. ಮೊಬೈಲ್ ಅಪ್ಲಿಕೇಶನ್‌ಗಳು ಮೊದಲಿಗಿಂತ ಎರಡು ಪಟ್ಟು ವೇಗವಾಗಿ ತೆರೆಯುತ್ತದೆ ಎಂದು ಆಪಲ್ ತಿಳಿಸಿದ್ದು, ವೇಗ ಹೆಚ್ಚುವ ಬಗ್ಗೆ ಮಾಹಿತಿ ನೀಡಿದೆ. ಇನ್ನು ಆಪಲ್ ಫೇಸ್ ಐಡಿಯು ನಿಮ್ಮ ಐಫೋನ್ ಅನ್ನು ಹಿಂದೆಗಿಂತಲೂ 30 ಪ್ರತಿಶತ ವೇಗವಾಗಿ ಅನ್ಲಾಕ್ ಮಾಡುತ್ತದೆ.

ಐಒಎಸ್ 13 ಒಎಸ್‌ನಲ್ಲಿ ಕೀಬೋರ್ಡ್ ಅಪ್ಲಿಕೇಶನ್ ಸ್ವೈಪ್ ಕಾರ್ಯಾಚರಣೆಯನ್ನು ಪಡೆಯುತ್ತದೆ. ಅಂದರೆ, ನೀವು ಈಗ ಪದಗಳನ್ನು ಟೈಪ್ ಮಾಡಲು ಕೀಗಳ ಮೇಲೆ ನಿಮ್ಮ ಬೆರಳುಗಳನ್ನು ಸ್ವೈಪ್ ಮಾಡಿದರೆ ಸಾಕಾಗುತ್ತದೆ. ಪದಗಳ ಮೇಲೆ ಸ್ವೈಪ್ ಮಾಡಿದರೆ ಇದು ವಾಕ್ಯವನ್ನು ಒಟ್ಟಾಗಿ ಸಂಯೋಜಿಸುತ್ತದೆ. ಇದರಿಂದ ಸಂಪೂರ್ಣ ಸಂಭಾಷಣೆಗೆ ಇದು ಸಹಕಾರಿಯಾಗಿದೆ.

ಐಒಎಸ್ 13 ಒಎಸ್‌ನಲ್ಲಿ ಫೋಟೊಗಳ ಟ್ಯಾಬ್ ಅನ್ನು ಘೋಷಿಸಿರುವಂತೆ ಸಂಪೂರ್ಣವಾಗಿ ಹೊಸ ಫೋಟೋ ಎಡಿಟಿಂಗ್ ಇಂಟರ್ಫೇಸ್ ಅನ್ನು ಆಪಲ್ ಕಂಪೆನಿ ಪರಿಚಯಿಸಿದೆ. ಇದು ಸುಧಾರಿತ ಫೋಟೊ ವಿಂಗಡಣೆ ಮತ್ತು ಕೃತಕ ಬುದ್ಧಿಮತ್ತೆ (ಎಐ) ವ್ಯಾಪಕ ಬಳಕೆಯೊಂದಿಗೆ ಫೋಟೋಗಳ ಅಪ್ಲಿಕೇಷನ್ ಅನ್ನು ಪುನರ್ ರಚಿಸಲಾಗಿದೆ ಎಂದು ಆಪಲ್ ಹೇಳಿಕೊಂಡಿದೆ.

ಇತ್ತೀಚಿನ ಟ್ರೆಂಡಿಂಗ್ ಫೀಚರ್ ಡಾರ್ಕ್ ಮೋಡ್ ಹೆಚ್ಚು ಕಾಯುವಿಕೆಯ ನಂತರ ಸಿಕ್ಕಿದೆ. ಆಪಲ್‌ನ ಸ್ವಂತ ಆಪ್‌ಗಳ ಜೊತೆಗೆ ಥರ್ಡ್ ಪಾರ್ಟಿಆಪ್‌ಗಳು ಕೂಡ ಡಾರ್ಕ್ ಮೋಡ್ ಆಯ್ಕೆಯನ್ನು ಪಡೆದುಕೊಳ್ಳಲಿವೆ. ಐಓಎಸ್ 13 ಮೂಲಕ ಡಾರ್ಕ್ ಮೋಡ್ ಸಕ್ರಿಯಗೊಳಿಸಿದಾಗ ಅಧಿಸೂಚನೆಗಳು ಸಹ ಗಾಢವಾದ ವರ್ಣಗಳನ್ನು ಸಾಧಿಸುತ್ತವೆ, ಅನುಭವವನ್ನು ಸರಳವಾಗಿ ಸೇರಿಸುತ್ತವೆ.

ಐಒಎಸ್ 13 ಒಎಸ್ ಮೂಲಕ ಮೇಲ್, ಸಂದೇಶಗಳು, ಟಿಪ್ಪಣಿಗಳು ಮತ್ತು ರಿಮೆಂಬರ್‌ಗಳು ಸೇರಿದಂತೆ ಎಲ್ಲಾ ಅಪ್ಲಿಕೇಶನ್‌ಗಳಲ್ಲಿ ಹೊನವೀಕರಣಗಳನ್ನು ತರಲಾಗಿದೆ.ಉದಾಹರಣೆಗೆ, ಡೆಸ್ಕ್ಟಾಪ್ ಸ್ಟೈಲ್ ಫಾರ್ಮ್ಯಾಟಿಂಗ್ ಹೊಂದಿಸಲಾಗಿದೆ. ಪ್ರತಿ ವೆಬ್ಸೈಟ್ ಅನ್ನು ನೀವು ಹೇಗೆ ವೀಕ್ಷಿಸುತ್ತೀರಿ ಮತ್ತು ಫಾಂಟ್ ಗಾತ್ರದಂತಹ ಸೂಕ್ಷ್ಮ ವಿವರಗಳನ್ನು ನೆನಪಿನಲ್ಲಿ ಇಟ್ಟುಕೊಳ್ಳಲಿದೆ.


Click it and Unblock the Notifications