Subscribe to Gizbot

ಆಪಲ್ ಟಿವಿ ಬರೇ ರೂ 5,900 ಕ್ಕೆ!!!

Written By:

ಆಪಲ್ ಟಿವಿಯನ್ನು ನಿಮ್ಮದಾಗಿಸಿಕೊಳ್ಳುವ ಸುವರ್ಣವಕಾಶ ನಿಮಗೊದಗಿ ಬಂದಿದೆ. ಹೌದು ಈ ಟಿವಿ ಇದೀಗ ರೂ 5,900 ಕ್ಕೆ ಲಭ್ಯವಿದ್ದು ತನ್ನ ಬೆಲೆಯಲ್ಲಿ ಅಸಾಧಾರಣ ಇಳಿಕೆಯನ್ನು ಕಂಡುಕೊಂಡಿದೆ. ಇನ್ನು ಅಧಿಕೃತ ಪತ್ರಿಕಾ ಪ್ರಕಟಣೆಯಲ್ಲಿ ಆಪಲ್ ಟಿವಿ ಬೆಲೆ ಇಳಿಕೆ ಕಂಡುಬಂದಿಲ್ಲ.

ಆಪಲ್ ಟಿವಿ ಬರೇ ರೂ 5,900 ಕ್ಕೆ!!!

ಇನ್ನು ಟಿವಿಯ ಸೆಟಪ್ ಬಾಕ್ಸ್ ರೂ 2,000 ಕ್ಕೆ ಭಾರತದಲ್ಲಿ ಲಭ್ಯವಿದ್ದು ಗೂಗಲ್ ಕ್ರೋಮ್‌ಕಾಸ್ಟ್ ರೂ 2,999 ಕ್ಕೆ ದೊರೆಯುತ್ತಿದೆ. ಇದು ದುಬಾರಿಯಾಗಿದ್ದರೂ ಆಪಲ್‌ನ ಮುಖ್ಯ ಗುರಿ ಆದಷ್ಟು ದುಡ್ಡು ಸಂಪಾದನೆ ಮಾಡುವುದಾಗಿದೆ. ಮೂರು ತಿಂಗಳುಗಳ ಕಾಲ ಎಚ್‌ಬಿವೊ ತನ್ನ ಸಿನಿಮಾಗಳು ಮತ್ತು ಪ್ರದರ್ಶನಗಳನ್ನು ಆಪಲ್ ಟಿವಿನಲ್ಲಿ ಪ್ರಸಾರ ಮಾಡುತ್ತಿದ್ದು ಬಳಕೆದಾರರು ಎಚ್‌ಬಿವೊಗೆ ಚಂದಾದಾರಿಕೆಯನ್ನು ಮಾಡಿಕೊಂಡು ಈ ಪ್ರಯೋಜನವನ್ನು ಪಡೆದುಕೊಳ್ಳಬಹುದಾಗಿದೆ.

ಆಪಲ್ ಟಿವಿ ಬರೇ ರೂ 5,900 ಕ್ಕೆ!!!

ಇನ್ನು ಆಪಲ್ ಟಿವಿ ತನ್ನೊಂದಿಗೆ ಸಣ್ಣ ಪೆಟ್ಟಿಗೆಯನ್ನು ಹೊಂದಿದ್ದು ಇದರಿಂದ ವೀಡಿಯೊಗಳು ಮತ್ತು ಇತರ ಮನರಂಜನಾ ಕಾರ್ಯಕ್ರಮಗಳನ್ನು ಇಂಟರ್ನೆಟ್‌ನಿಂದ ನಿಮ್ಮ ಟಿವಿಗೆ ಪಡೆದುಕೊಳ್ಳಬಹುದಾಗಿದೆ. ಇನ್ನು ಐಟ್ಯೂನ್ಸ್ ಸ್ಟೋರ್ ಕೂಡ ಸಿನಿಮಾಗಳ ಅದ್ಭುತ ಸಂಗ್ರಹವನ್ನೇ ತನ್ನಲ್ಲೇ ಹೊಂದಿದ್ದು ಇದನ್ನು ನಿಮಗೆ ಖರೀದಿ ಮಾಡಬಹುದಾಗಿದೆ.

English summary
This article tells about Apple TV india price slashed, now selling for Rs 5900.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot