ಭಾರತೀಯರು ಕೇವಲ ₹ 99 ಪಾವತಿಸಿದರೆ ಸಿಗಲಿದೆ 'ಆಪಲ್ ಟಿವಿ ಪ್ಲಸ್'!..ಏನಿದು?

|

ನೆಟ್‌ಫ್ಲಿಕ್ಸ್, ಅಮೆಜಾನ್‌ ಪ್ರೈಮ್‌ನಂತಹ ಬೃಹತ್‌ ಜಾಗತಿಕ ಕಂಪನಿಗಳಿಗೆ ಸೆಡ್ಡು ಹೊಡೆಯಲು ತಂತ್ರಜ್ಞಾನ ದಿಗ್ಗಜ ಆಪಲ್ ವಿಡಿಯೋ ಸ್ಟ್ರೀಮಿಂಗ್ ಕ್ಷೇತ್ರಕ್ಕೆ ದಾಗುಂಡಿ ಇಟ್ಟಿರುವುದು ನಿಮಗೆಲ್ಲಾ ಈಗಾಗಲೇ ತಿಳಿದಿರಬಹುದು. ಆಪಲ್‌ ಐಟ್ಯೂನ್ಸ್ ಹೆಸರಿನಲ್ಲಿ ಸಂಗೀತ ಕ್ಷೇತ್ರದಲ್ಲಿ ಸಾಕಷ್ಟು ಜನಪ್ರಿಯತೆಯನ್ನು ಗಳಿಸಿದ್ದ ಆಪಲ್, ಇದೀಗ ಭಾರಿ ಹೂಡಿಕೆ ಮತ್ತು ಬೆಳವಣಿಗೆ ಕಾಣುತ್ತಿರುವ ವಿಡಿಯೋ ಸ್ಟ್ರೀಮಿಂಗ್ ಕ್ಷೇತ್ರಕ್ಕಾಗಿ 'ಆಪಲ್‌ ಟಿವಿ ಪ್ಲಸ್‌' ಎಂಬ ಹೆಸರಿನ ವಿಡಿಯೋ ಸ್ಟ್ರೀಮಿಂಗ್ ಆಪ್ ಅನ್ನು ಬಿಡುಗಡೆ ಮಾಡಿದೆ.

ಉತ್ಪನ್ನಗಳ ಮಾರಾಟ ಇಳಿಮುಖ

ಜಾಗತಿಕ ಮಾರುಕಟ್ಟೆಯಲ್ಲಿ ಪೈಪೋಟಿ ಹೆಚ್ಚುತ್ತಿರುವುದರಿಂದ ಆಪಲ್ ಸಂಸ್ಥೆಯ ಉತ್ಪನ್ನಗಳ ಮಾರಾಟ ಇಳಿಮುಖವಾಗಿದೆ. ಹೀಗಾಗಿ ಕಂಪನಿಯು ಐಫೋನ್ ( ಸದ್ಯಕ್ಕೆ, ಐಫೋನ್‌ನಿಂದಲೇ ಕಂಪನಿಗೆ ಹೆಚ್ಚಿನ ವರಮಾನವನ್ನು ಪಡೆಯುತ್ತಿ) ಮೇಲಿನ ಅವಲಂಬನೆ ತಗ್ಗಿಸಲು ನಿರ್ಧರಿಸಿದೆ. ಇದರ ಭಾಗವಾಗಿ, ವಿಡಿಯೊ ಆಫರಿಂಗ್ ಮತ್ತು ಆಪಲ್‌ ಟಿವಿ ಪ್ಲಸ್‌ಗೆ ಹೆಚ್ಚಿನ ಗಮನ ಹರಿಸಲಿದೆ. ಇದರಲ್ಲಿ ನೆಟ್‌ಫ್ಲಿಕ್‌ ಮತ್ತು ಅಮೆಜಾನ್‌ ರೀತಿಯಲ್ಲಿಯೇ ಮನರಂಜನಾ ಕಾರ್ಯಕ್ರಮಗಳು ಮತ್ತು ಮಕ್ಕಳ ಕಾರ್ಯಕ್ರಮಗಳನ್ನು ಒದಗಿಸಲಿದೆ.

ಆಪಲ್‌ ಟಿವಿ ಪ್ಲಸ್‌

ನವೆಂಬರ್‌ 1 ರಂದು ನೂರಕ್ಕೂ ಹೆಚ್ಚಿನ ನಗರಗಳಲ್ಲಿ ಆಪಲ್‌ ಟಿವಿ ಪ್ಲಸ್‌ ಸೇವೆಗಳನ್ನು ಬಿಡುಗಡೆ ಮಾಡಲಿರುವುದಾಗಿ ಆಪಲ್ ಘೋಷಿಸಿದೆ. ಆಪಲ್‌ನ ಯಾವುದೇ ಉತ್ಪನ್ನ ಖರೀದಿಸಿದರೆ ಮೊದಲ ವರ್ಷ ಟಿವಿ ಪ್ಲಸ್‌ನ ಸೇವೆಯು ಸಂಪೂರ್ಣವಾಗಿ ಉಚಿತವಾಗಿರಲಿದೆ. ಭಾರತೀಯರು ತಿಂಗಳಿಗೆ ₹ 99 ಪಾವತಿಸಿದರೆ ಆಪಲ್‌ ಟಿವಿ ಆಪ್‌ನಲ್ಲಿ ಆಪಲ್‌ ಟಿವಿ ಪ್ಲಸ್‌ ಲಭ್ಯವಾಗಲಿದೆ. ಹಾಗಾದರೆ, ಏನಿದು ‘ಆಪಲ್‌ ಟಿವಿ ಪ್ಲಸ್‌'? ವಿಡಿಯೋ ಸ್ರೀಮಿಂಗ್ ಸೇವೆಗಳನ್ನು ನೀಡಲು ಆಪಲ್ ಸಿದ್ಧವಾಗಿರುವುದು ಏಕೆ ಎಂಬುದನ್ನು ಮುಂದೆ ಓದಿ ತಿಳಿಯಿರಿ.

ಏನಿದು ‘ಆಪಲ್‌ ಟಿವಿ ಪ್ಲಸ್‌’

ಏನಿದು ‘ಆಪಲ್‌ ಟಿವಿ ಪ್ಲಸ್‌’

ಮೊದಲೇ ಹೇಳಿದಂತೆ, ನೆಟ್‌ಫ್ಲಿಕ್ಸ್, ಅಮೆಜಾನ್‌ನಂತೆ ‘ಆಪಲ್‌ ಟಿವಿ ಪ್ಲಸ್‌' ಕೂಡ ವಿಡಿಯೋ ಸ್ಟ್ರೀಮಿಂಗ್ ಆಪ್ ಆಗಿದೆ. ಈ ಆಪಲ್‌ ಟಿವಿ ಪ್ಲಸ್‌ನಲ್ಲಿ ಎಕ್ಸ್‌ಕ್ಲೂಸಿವ್ ಟಿವಿ ಪ್ರೋಗ್ರಾಂಗಳು ಇರಲಿವೆ. ಇವು ಜಾಹೀರಾತು ರಹಿತ ವಿಡಿಯೋ ಸೇವೆಗಳಾಗಿದ್ದು, ನೆಟ್‌ಫ್ಲಿಕ್ಸ್, ಅಮೆಜಾನ್‌ನಂತೆ ಆಪಲ್‌ಗೂ 99 ರೂ. ತಿಂಗಳ ಚಂದಾ ಇರಲಿದೆ. ಇದರಲ್ಲಿ ಎಚ್‌ಬಿಒ, ಶೋಟೈಮ್ಸ್, ಸ್ಟಾರ್ಜ್ ಮತ್ತು ಸಿಬಿಎಸ್‌ನ ಕಾರ್ಯಕ್ರಮಗಳೂ ಪ್ರಸಾರವಾಗಲಿವೆ ಎಂದು ತಿಳಿದುಬಂದಿದೆ.

100 ದೇಶಗಳ ಜನರು ವೀಕ್ಷಿಸಬಹುದು!

100 ದೇಶಗಳ ಜನರು ವೀಕ್ಷಿಸಬಹುದು!

ನೆಟ್‌ಫ್ಲಿಕ್ಸ್, ಅಮೆಜಾನ್‌ನಂತೆ ಆಪಲ್‌ ‘ಆಪಲ್‌ ಟಿವಿ ಪ್ಲಸ್‌' ಜಾಹೀರಾತು ರಹಿತ ವಿಡಿಯೋ ಸೇವೆಗಳನ್ನು 100 ದೇಶಗಳ ಜನರು ವೀಕ್ಷಿಸಬಹುದಾಗಿದೆ ಎಂಬುದನ್ನು ಆಪಲ್ ತಿಳಿಸಿದೆ. ನವೆಂಬರ್‌ 1 ರಂದು ನೂರಕ್ಕೂ ಹೆಚ್ಚಿನ ನಗರಗಳಲ್ಲಿ ಆಪಲ್‌ ಟಿವಿ ಪ್ಲಸ್‌ ಸೇವೆಗಳನ್ನು ಆಪಲ್ ಬಿಡುಗಡೆ ಮಾಡಲಿದೆ. ಐಟ್ಯೂನ್ಸ್ ಹೆಸರಿನಲ್ಲಿ ಸಂಗೀತ ಕ್ಷೇತ್ರದಲ್ಲಿ ಸಾಕಷ್ಟು ಜನಪ್ರಿಯತೆಯನ್ನು ಗಳಿಸಿದ್ದ ಆಪಲ್ 'ಆಪಲ್‌ ಟಿವಿ ಪ್ಲಸ್‌' ಮೂಲಕ ಜನಪ್ರಿಯತೆ ಪಡೆಯಲು ಮುಂದಾಗಿದೆ.

ಕಂಟೆಂಟ್‌ನತ್ತ ಆಪಲ್ ಬಂದಿದ್ದೇಕೆ?

ಕಂಟೆಂಟ್‌ನತ್ತ ಆಪಲ್ ಬಂದಿದ್ದೇಕೆ?

ತಂತ್ರಜ್ಞಾನ ದಿಗ್ಗಜನೆಂದೇ ಕರೆಸಿಕೊಂಡಿರುವ ಆಪಲ್ ಎಂದೂ ವಿಡಿಯೋ ಕಂಟೆಂಟ್ ಬಗ್ಗೆ ತಲೆಕೆಡಿಸಿಕೊಂಡಿರಲಿಲ್ಲ. ಗ್ರಾಹಕರು ಆಪಲ್‌ ಐಫೋನ್‌ ಮತ್ತು ಟ್ಯಾಬ್ಲೆಟ್‌ಗಳ ಖರೀದಿಗೆ ಮುಗಿಬೀಳುತ್ತಿದ್ದರಿಂದ ಕಂಪನಿಗೆ ದೊಡ್ಡ ಮೊತ್ತದ ಲಾಭವನ್ನು ತಂದುಕೊಡುತ್ತಿತ್ತು. ಆದರೆ, ಈಗ ಅಮೆಜಾನ್ ಮತ್ತು ನೆಟ್‌ಫ್ಲಿಕ್ಸ್ ಮಾರುಕಟ್ಟೆ ಬೆಳವಣಿಗೆ ಆಪಲ್‌ ಕಂಪೆನಿಗೆ ತಲೆಕೆಡಿಸಿದೆ. ಹಾಗಾಗಿಯೇ, ಕೇವಲ ಉತ್ಪನ್ನಗಳ ಮಾರಾಟವವನ್ನು ಬಿಟ್ಟು ಕಂಟೆಂಟ್‌ನತ್ತ ಆಪಲ್ ವಾಲಿದೆ.

ಮಾರುಕಟ್ಟೆಯಲ್ಲಿ ಭಾರೀ ಪೈಪೋಟಿ

ಮಾರುಕಟ್ಟೆಯಲ್ಲಿ ಭಾರೀ ಪೈಪೋಟಿ

ಸದ್ಯದ ಆನ್‌ಲೈನ್‌ ವಿಡಿಯೋ ಸ್ಟ್ರೀಮಿಂಗ್ ಮಾರುಕಟ್ಟೆಯನ್ನು ನೆಟ್‌ಫ್ಲಿಕ್ಸ್ ಮತ್ತು ಅಮೆಜಾನ್‌ ಆಳುತ್ತಿವೆ. ಕೆಲವು ತಿಂಗಳ ಹಿಂದೆಬ್ರಿಟನ್‌ನ ಪ್ರಮುಖ ಬ್ರಾಡ್‌ಕಾಸ್ಟ್‌ ಕಂಪನಿಗಳಾದ ಬಿಬಿಸಿ ಮತ್ತು ಐಟಿವಿ ಒಂದಾಗಿ 'ಬ್ರಿಟ್‌ಬಾಕ್ಸ್‌' ಹೆಸರಿನಲ್ಲಿ ಸ್ಟ್ರೀಮಿಂಗ್ ಮಾರುಕಟ್ಟೆಯನ್ನು ಪಡೆದುಕೊಳ್ಳಲು ಮುಂದಾಗಿವೆ. ಇದೇ ವೇಳೆಯಲ್ಲಿ ಆನ್‌ಲೈನ್‌ ವಿಡಿಯೋ ಸ್ಟ್ರೀಮಿಂಗ್ ಮಾರುಕಟ್ಟೆಗೆ ಆಪಲ್‌ನ ಪ್ರವೇಶವಾಗಿರುವುದು ಮಾರುಕಟ್ಟೆಯಲ್ಲಿ ಭಾರೀ ಪೈಪೋಟಿ ಕಾರಣವಾಗಬಹುದು ಎಂದು ಹೇಳಲಾಗುತ್ತಿದೆ.

ಇನ್ನೂ ಹಲವು ಸೇವೆಗಳ ಬಿಡುಗಡೆ!

ಇನ್ನೂ ಹಲವು ಸೇವೆಗಳ ಬಿಡುಗಡೆ!

ವಿಡಿಯೋ ಸ್ಟ್ರೀಮಿಂಗ್ 'ಆಪಲ್‌ ಟಿವಿ ಪ್ಲಸ್‌' ಜತೆಗೆ ಆಪಲ್ ಗೇಮ್‌ ಆಪ್‌ ‘ಆರ್ಕೇಡ್‌' ಮತ್ತು ಸುದ್ದಿಗಳನ್ನು ನೀಡುವ ‘ನ್ಯೂಸ್‌ +' ಆಪ್‌ಗಳನ್ನು ಸಹ ಬಿಡುಗಡೆ ಮಾಡುವುದಾಗಿ ಹೇಳಿದೆ. ದಿ ನ್ಯೂಯಾರ್ಕರ್, ನ್ಯಾಷನಲ್‌ ಜಿಯೋಗ್ರಾಫಿಕ್, ಇನ್‌ಸ್ಟೈಲ್ ಮತ್ತು ದಿ ವಾಲ್‌ ಸ್ಟೀಟ್ ಜರ್ನಲ್‌ ಮೊದಲಾದ 300 ಕ್ಕೂ ಹೆಚ್ಚು ನಿಯತಕಾಲಿಕೆ ಪ್ರಸಾರ ಮಾಡಲಾಗುವ ‘ನ್ಯೂಸ್‌ +' ಸೇವೆ ಕೂಡ ಸಿಗಲಿದೆ. ಇನ್ನು ಇದೀಗ ‘ಆಪಲ್‌ ಟಿವಿ ಪ್ಲಸ್‌'' ಅನ್ನು ತಿಂಗಳಿಗೆ ₹ 99 ಪಾವತಿಸಿ ಗ್ರಾಹಕರು ಬಳಸಿಕೊಳ್ಳಬಹುದಾಗಿದೆ.

Best Mobiles in India

English summary
Apple TV+ will be available to users in India starting 1 November and will be available to users at just Rs 99 per month. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X