ಭರ್ಜರಿ ಸೋಲು ಕಂಡ ಆಪಲ್ ಟಿವಿ, ಭಾರತದಲ್ಲಿ ಟಿವಿಗಿಲ್ಲ ಮಾನ್ಯತೆ
ಆಪಲ್ ಟಿವಿಯು ಭಾರತದಲ್ಲಿ ತನ್ನ ಬೇಡಿಕೆಯನ್ನು ಕಳೆದುಕೊಂಡಿದ್ದು ಅಮೇರಿಕಾದಲ್ಲಿ ಪಡೆದಿರುವ ಜನಪ್ರಿಯತೆಯನ್ನು ಇಲ್ಲಿ ಪಡೆದುಕೊಂಡಿಲ್ಲ.
ಅಮೇರಿಕಾದಲ್ಲಿರುವ ಯುಎಸ್ ಅಭಿಮಾನಿಗಳಿಗಾಗಿ ಆಪಲ್ ಮಾರುಕಟ್ಟೆಯನ್ನು ರಚಿಸಿದೆ. ಜನಪ್ರಿಯ ಮೀಡಿಯಾ ಪ್ಲೇಯರ್ ಅನ್ನು ಟಿವಿ ಹೊಂದಿದೆ. ಬಳಕೆದಾರರಾದ್ಯಂತ ಟಿವಿ ಕುತೂಹಲವನ್ನು ಕೆರಳಿಸಿದ್ದು ಇದು ಇನ್ನೂ ಉತ್ತಮ ಮಾರಾಟವನ್ನು ಕಂಡುಕೊಳ್ಳುತ್ತಿದೆ. ಆಪಲ್ ರೋಕು, ಅಮೆಜಾನ್ ಫೈಯರ್ ಟಿವಿ ಮತ್ತು ಗೂಗಲ್ ಕ್ರೋಮ್‌ಕಾಸ್ಟ್ ಅನ್ನು ಅನುಸರಿಸುತ್ತಿದೆ.

ಆಪಲ್ ಟಿವಿ ಮಾರುಕಟ್ಟೆಯ ಷೇರು ಪ್ರಥಮ ತ್ರೈಮಾಸಿಕದಲ್ಲಿಯೇ 15 ಶೇಕಡಾದಷ್ಟು ಕೆಳಕ್ಕೆ ಇಳಿದಿದೆ. ಇನ್ನು ಹೊಸ ವರದಿಯು ಹೇಳುವಂತೆ 10,000 ಮನೆಗಳಲ್ಲಿ ಈ ಟಿವಿ ಇರುವುದಾಗಿ ಮಾಹಿತಿಯು ಲಭ್ಯವಾಗಿದೆ. ಇನ್ನು ರೋಕು ಅಂದಾಜು ಸಮಯದಲ್ಲಿ 37 ಶೇಕಡಾದಷ್ಟು ಪ್ರಮುಖತೆಯನ್ನು ಪಡೆದುಕೊಂಡಿದೆ. ಕ್ರೋಮ್‌ಕಾಸ್ಟ್ 24 ಹಾಗೂ 18 ಶೇಕಡಾದಷ್ಟು ಪ್ರಮುಖತೆಯನ್ನು ಹೊಂದಿದೆ.
ತನ್ನ ಮುಖ್ಉ ಸ್ಪರ್ಧಿಗಳೆಡೆಯಲ್ಲಿ ಆಪಲ್ ಟಿವಿ ದುಬಾರಿ ಎನಿಸಿದ್ದು ರೋಕು ರೀಟೈಲ್ ಬೆಲೆ $40, ಕ್ರೋಮ್‌ಕಾಸ್ಟ್ ಆರಂಭ ಬೆಲೆ $35, ಫೈರ್ ಟಿವಿ $90 ಹೀಗೆ ಬೆಲೆಗಳನ್ನು ಹೊಂದಿದೆ. ಹೆಚ್ಚು ಬೆಲೆಯ ಆಪಲ್ ಟಿವಿಯು ಉನ್ನತ ವೈಶಿಷ್ಟ್ಯತೆಗಳನ್ನು ಪಡೆದುಕೊಂಡು ಮಾರುಕಟ್ಟೆಗೆ ಬರುತ್ತಿವೆ.
ಫೆಬ್ರವರಿ ಮಾಸದಲ್ಲಿ ಆಪಲ್ 4 ಕೆ ಟಿವಿಯನ್ನು ಪರೀಕ್ಷಿಸುತ್ತಿದೆ ಎಂಬುದಾಗಿ ವರದಿ ದೊರೆತಿತ್ತು. ಅಂತೆಯೇ ಇನ್ನಷ್ಟು ಬಣ್ಣಗಳಲ್ಲಿ ಈ ಟಿವಿಯು ಮಾರುಕಟ್ಟೆಗೆ ಬರಲಿದೆ ಎಂಬುದಾಗಿ ಮಾಹಿತಿ ದೊರಕಿದೆ. ಆಪಲ್ ಅಭಿಮಾನಿಗಳು 4 ಕೆ ಶ್ರೇಣಿಯಲ್ಲೂ ಇನ್ನೂ ತಮ್ಮ ಮೆಚ್ಚಿನ ಟಿವಿಯನ್ನು ಕಂಡುಕೊಳ್ಳಬಹುದಾಗಿದೆ. ಗ್ರಾಹಕರು 4 ಕೆ ಮೀಡಿಯಾ ಪ್ಲೇಯರ್‌ಗಾಗಿ ನಿರೀಕ್ಷಿಸುತ್ತಿದ್ದು ಈ ಸೌಲಭ್ಯವನ್ನು ಒದಗಿಸದೇ ಇರುವ ಸಿಸ್ಟಮ್‌ಗೆ ಹಣ ಹೂಡಲು ಮನಸ್ಸು ಹೊಂದಿಲ್ಲ.


Click it and Unblock the Notifications








