100 ಮಿಲಿಯನ್ ದಾಟಿದ ಆಪಲ್‌ ವಾಚ್‌ ಸಕ್ರಿಯ ಬಳಕೆದಾರರ ಸಂಖ್ಯೆ !

|

ಟೆಕ್ ವಲಯದಲ್ಲಿ ಆಪಲ್‌ ಕಂಪೆನಿ ತನ್ನ ಗುಣಮಟ್ಟದ ಪ್ರಾಡಕ್ಟ್‌ಗಳಿಗೆ ಹೆಸರುವಾಸಿಯಾಗಿದೆ. ಇದೇ ಕಾರಣಕ್ಕೆ ಹೆಚ್ಚಿನ ಜನರು ಆಪಲ್‌ ಸಂಸ್ಥೆಯ ಉತ್ಪನ್ನಗಳನ್ನು ಖರೀದಿಸಲ ಇಚ್ಚಿಸುತ್ತಾರೆ. ಇನ್ನು ಆಪಲ್‌ನ ಐಫೋನ್‌ ಮಾತ್ರವಲ್ಲದೆ ಆಪಲ್‌ ಕಂಪೆನಿಯ ಸ್ಮಾರ್ಟ್‌ವಾಚ್‌ಗಳಿಗೂ ಕೂಡ ಹೆಚ್ಚಿನ ಬೇಡಿಕೆ ಇದ್ದೆ ಇದೆ. ಸದ್ಯ ಮಾರುಕಟ್ಟೆ ಸಂಶೋಧನಾ ಸಂಸ್ಥೆ ಕೌಂಟರ್‌ಪಾಯಿಂಟ್‌ನ ಇತ್ತೀಚಿನ ವರದಿಯ ಪ್ರಕಾರ, ಆಪಲ್ ವಾಚ್‌ನ ಸಕ್ರಿಯ ಬಳಕೆದಾರರ ಸಂಖ್ಯೆ ಜಾಗತಿಕವಾಗಿ 100 ಮಿಲಿಯನ್ ಬಳಕೆದಾರರನ್ನು ದಾಟಿದೆ ಎನ್ನಲಾಗಿದೆ.

ಆಪಲ್‌ ವಾಚ್‌

ಹೌದು, ಆಪಲ್‌ ಕಂಪೆನಿ ತನ್ನ ಆಪಲ್‌ ವಾಚ್‌ ಸಕ್ರಿಯ ಬಳಕೆದಾರರ ಸಂಖ್ಯೆಯಲ್ಲಿ ದಾಖಲೆ ಬರೆದಿದೆ. Q2 2021 ರಲ್ಲಿ ಆಪಲ್‌ ವಾಚ್‌ ವಿಭಾಗದಲ್ಲಿ ತನ್ನ ಉನ್ನತ ಸ್ಥಾನವನ್ನು ಕಾಯ್ದುಕೊಂಡಿದೆ ಎಂದು ಸಂಸ್ಥೆ ಹೇಳಿದೆ. ಆದಾಗ್ಯೂ, ಅಗ್ಗದ ಸ್ಮಾರ್ಟ್ ವಾಚ್ ಮಾದರಿಗಳ ಸ್ಪರ್ಧೆಯಿಂದಾಗಿ ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಆಪಲ್ ಮಾರುಕಟ್ಟೆ ಪಾಲಿನಲ್ಲಿ ಸ್ವಲ್ಪ ಕುಸಿತ ಕಂಡಿದೆ ಎಂದು ಹೇಳಲಾಗಿದೆ. ಹಾಗಾದ್ರೆ ಕೌಂಟರ್‌ ಪಾಯಿಂಟ್‌ ವರದಿಯಲ್ಲಿ ಏನಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಆಪಲ್‌

ಕೌಂಟರ್‌ಪಾಯಿಂಟ್‌ನ ವರದಿ ಪ್ರಕಾರ ಆಪಲ್‌ ವಾಚ್‌ನಲ್ಲಿರುವ ಆರೋಗ್ಯ ಸಂಬಂಧಿತ ಫೀಚರ್ಸ್‌ಗಳ ಉತ್ತಮ ಏಕೀಕರಣವು ಮಾರುಕಟ್ಟೆ ಪಾಲಿನ ವಿಷಯದಲ್ಲಿ ಸ್ಥಿರವಾದ ಏರಿಕೆ ಕಾಣಲು ಸಹಾಯ ಮಾಡುತ್ತಿದೆ ಎಂದು ಹೇಳಲಾಗಿದೆ. ಅಲ್ಲದೆ ಆಪಲ್ ವಾಚ್ ಬಳಕೆದಾರರಿಗೆ ಯುಎಸ್ ಮತ್ತೊಮ್ಮೆ ಪ್ರಮುಖ ಮಾರುಕಟ್ಟೆಯಾಗಿದೆ ಎಂದು ವಿಶ್ಲೇಷಕರು ಹೇಳಿದ್ದಾರೆ, ಇದು ಅದರ ಅರ್ಧದಷ್ಟು ಬಳಕೆದಾರರ ಬೇಸ್‌ಗೆ ಕೊಡುಗೆ ನೀಡುತ್ತದೆ. ಇನ್ನು ಈ ವರದಿಯು ಆಪಲ್ ವಾಚ್ ಸರಣಿ 6 Q2, 2021 ರಲ್ಲಿ ಜಾಗತಿಕವಾಗಿ ಹೆಚ್ಚು ಮಾರಾಟವಾದ ಸ್ಮಾರ್ಟ್ ವಾಚ್ ಎಂದು ಹೇಳುತ್ತದೆ. ಅಗ್ರ ಐದು ಮಾರಾಟವಾದ ಸ್ಮಾರ್ಟ್ ವಾಚ್‌ಗಳಲ್ಲಿ ಆಪಲ್ ವಾಚ್ ಎಸ್‌ಇ ಮತ್ತು ಆಪಲ್ ವಾಚ್ ಸರಣಿ 3 ಕೂಡ ಸೇರಿವೆ.

ಸ್ಮಾರ್ಟ್ ವಾಚ್

ಇದಲ್ಲದೆ ವಿಶ್ಲೇಷಕ ಸುಜೆಯೊಂಗ್ ಲಿಮ್, ಪ್ರಕಾರ "ಸ್ಮಾರ್ಟ್ ವಾಚ್ ಗಳಿಗೆ ಸ್ಮಾರ್ಟ್ ವಾಚ್ ಲಗತ್ತಿಸುವ ದರಗಳು ನಿರಂತರವಾಗಿ ಏರುತ್ತಿವೆ. ಆಕರ್ಷಕ ವಿನ್ಯಾಸಗಳು, ಆರೋಗ್ಯದ ವೈಶಿಷ್ಟ್ಯಗಳು ಮತ್ತು ಸಂಬಂಧಿತ ಸೇವೆಗಳಲ್ಲಿ ಬ್ರಾಂಡ್ ತಯಾರಿಸುತ್ತಿರುವುದರಿಂದ ಆಪಲ್‌ ಎಕೋ ಸಿಸ್ಟಂ ಹೆಚ್ಚಿನ ಲಗತ್ತಿಸುವ ದರವನ್ನು ನೋಡುತ್ತಿದೆ. ಇದೆ ಕಾರಣಕ್ಕೆ ಆಪಲ್ ವಾಚ್ ನ ಬಳಕೆದಾರರ ಸಂಖ್ಯೆ ದಾಟಿದೆ. ಜೂನ್ ಅಂತ್ಯದ ತ್ರೈಮಾಸಿಕದಲ್ಲಿ ಮೊದಲ ಬಾರಿಗೆ 100 ಮಿಲಿಯನ್ ಮಾರ್ಕ್,ದಾಟಿದ್ದ ಆಪಲ್‌ ವಾಚ್‌ ಜಾಗತಿಕವಾಗಿ ಸ್ಮಾರ್ಟ್ ವಾಚ್ ಬಳಕೆದಾರರ ಸಿಂಹಪಾಲು ವಶಪಡಿಸಿಕೊಂಡಿದೆ.

ಆಪಲ್

ಇತ್ತೀಚಿನ ಮಾಹಿತಿಯ ಪ್ರಕಾರ, ಆಪಲ್ ಶೇಕಡಾ 28 ರಷ್ಟು ಮಾರುಕಟ್ಟೆ ಪಾಲನ್ನು ಹೊಂದಿದೆ ಮತ್ತು ಹುವಾವೇ, ಸ್ಯಾಮ್‌ಸಂಗ್, ಗಾರ್ಮಿನ್ ಮತ್ತು ಇತರ ಪ್ರತಿಸ್ಪರ್ಧಿಗಳ ವಿರುದ್ಧ ವ್ಯಾಪಕವಾದ ಮಾರುಕಟ್ಟೆ ಪಾಲನ್ನು ಹೊಂದಿದೆ. ಕೌಂಟರ್‌ಪಾಯಿಂಟ್ ತನ್ನ ಡೇಟಾದೊಂದಿಗೆ ಬಂದಿರಬಹುದು, ಆದರೆ ಈ ವರ್ಷದ ಆರಂಭದಲ್ಲಿ ವಿಶ್ಲೇಷಕರು ಆಪಲ್ ವಾಚ್ ಅನ್ನು ಜಾಗತಿಕವಾಗಿ 100 ದಶಲಕ್ಷಕ್ಕೂ ಹೆಚ್ಚು ಜನರು ಧರಿಸುತ್ತಿದ್ದಾರೆ ಎಂದು ಹೇಳಿಕೊಂಡಿದ್ದಾರೆ. ಕೌಂಟರ್‌ಪಾಯಿಂಟ್‌ನ ಹಿರಿಯ ವಿಶ್ಲೇಷಕಿ ಅಂಶಿಕಾ ಜೈನ್ ಅವರು ಕಳೆದ ವರ್ಷ ಎರಡನೇ ತ್ರೈಮಾಸಿಕದಲ್ಲಿ ಭಾರತವು ಅತ್ಯಂತ ಚಿಕ್ಕ ಮಾರುಕಟ್ಟೆಯಾಗಿತ್ತು, ಆದರೂ ಈ ವರ್ಷ ಗಮನಾರ್ಹ ಏರಿಕೆ ಕಂಡುಬಂದಿದೆ. ಉಪ $ 100 ಸ್ಮಾರ್ಟ್ ವಾಚ್‌ಗಳಿಗೆ ಬೇಡಿಕೆ ಹೆಚ್ಚಾಗಿದೆ.

Best Mobiles in India

English summary
As per Counterpoint, the Apple Watch Series 6 was the best-selling smartwatch model globally in the Q2 quarter.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X