ಆಪಲ್‌ ವಾಚ್‌ ನೆರವಿನೊಂದಿಗೆ ಅತ್ಯಾಚಾರದಿಂದ ಪಾರಾದ ಮಹಿಳೆ..!

By Gizbot Bureau
|

ಆಪಲ್ ವಾಚ್ ಏಕೆ ಧರಿಸಬೇಕು ಎಂದು ಕೇಳುವವರಿಗೆ ಇಲ್ಲಿ ಮತ್ತೊಂದು ಉತ್ತರ ಸಿಕ್ಕಿದೆ. ಹೌದು, ಕೆನಡಾ ಪ್ರಾಂತ್ಯದ ಆಲ್ಬರ್ಟಾದ ಕ್ಯಾಲ್ಗರಿಯಲ್ಲಿರುವ ಮಹಿಳೆಯೊಬ್ಬಳ ಜೀವವನ್ನು ಆಪಲ್‌ ವಾಚ್‌ ಉಳಿಸಿದೆ. ಇದಲ್ಲದೇ, ಆ ಮಹಿಳೆ ಸಂಭಾವ್ಯ ಅತ್ಯಾಚಾರದಿಂದ ಪಾರಾಗಿದ್ದಾಳೆ.

ವಾಚ್‌ ಮೂಲಕ ಮೆಸೇಜ್‌

ವಾಚ್‌ ಮೂಲಕ ಮೆಸೇಜ್‌

ಅಂದು ಏಪ್ರಿಲ್ 1, ಆ ಮಹಿಳೆ ದೈನಂದಿನ ಕೆಲಸ ಮುಗಿಸಿ ತನ್ನ ಮನೆಯಲ್ಲಿ ಮಲಗಿದ್ದಳು.

ಆದರೆ, ನಾಯಿಗಳು ಬೊಗಳುವ ಶಬ್ದಕ್ಕೆ ಅವಳು ಎಚ್ಚರಗೊಂಡಿದ್ದಾಳೆ. ನಂತರ, ತನ್ನ ಮನೆಯ ಸುತ್ತಲೂ ಚಲಿಸುವ ಆಕೃತಿಯನ್ನು ನೋಡಿ ಭಯಗೊಂಡ ಮಹಿಳೆ ಫೋನ್‌ ಹುಡುಕಲು ಮುಂದಾಗಿದ್ದಾಳೆ. ಆದರೆ, ಆ ತಕ್ಷಣಕ್ಕೆ ಫೋನ್‌ ಸಿಗಲಿಲ್ಲವಾದ್ದರಿಂದ ತನ್ನ ಆಪಲ್‌ ವಾಚ್‌ ಮೂಲಕ ಗೆಳೆಯನಿಗೆ ಸಂದೇಶ ಕಳುಹಿಸಿದ್ದಾಳೆ ಎಂದು ಸಿಬಿಸಿ ವರದಿ ಮಾಡಿದೆ.

ಆರೋಪ ಸಾಬೀತು

ಆರೋಪ ಸಾಬೀತು

ಪೊಲೀಸರು ಬಂದು ಬಾಗಿಲು ಒಡೆದು ಮನೆಗೆ ನುಗ್ಗಿದಾಗ ಶಂಕಿತ ಜಾನ್ ಜೋಸೆಫ್ ಮ್ಯಾಕಿಂಡೋ ಮಹಿಳೆಯ ಅಡುಗೆಮನೆಯಲ್ಲಿ ಅಡಗಿಕೊಂಡಿರುವುದು ಬೆಳಕಿಗೆ ಬಂದಿದೆ. ತನಿಖೆಯ ನಂತರ, ಕ್ಯಾಲ್ಗರಿಯ ನ್ಯಾಯಾಲಯದಲ್ಲಿ ಮ್ಯಾಕಿಂಡೋ ತಪ್ಪೊಪ್ಪಿಕೊಂಡಿದ್ದಾನೆ. ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗುವ ಉದ್ದೇಶದಿಂದ ಮನೆ ಪ್ರವೇಶಿಸಿರುವುದು ಸಾಬೀತಾಗಿದೆ.

ಅತ್ಯಾಚಾರಕ್ಕೆ ತಯಾರಿ

ಅತ್ಯಾಚಾರಕ್ಕೆ ತಯಾರಿ

ಪೊಲೀಸರ ವರದಿಯ ಪ್ರಕಾರ, ಮ್ಯಾಕಿಂಡೋ ಮಹಿಳೆಯ ಮೇಲೆ ಅತ್ಯಾಚಾರ ನಡೆಸಲು ಯೋಚಿಸಿದ್ದಾನೆ. ಇದಕ್ಕಾಗಿ ಆ ಮಹಿಳೆಯ ಮನೆಯ ನಕಲಿ ಪ್ರವೇಶ ಕಾರ್ಡ್‌ ಮತ್ತು ಕೀಗಳನ್ನು ಅವನು ಹೊಂದಿದ್ದನು. ಇದಲ್ಲದೇ, ಮ್ಯಾಕಿಂಡೋ ಹತ್ತಿರ ಪತ್ತೆಯಾದ ಚೀಲದಲ್ಲಿ ಬಾಲಾಕ್ಲಾವಾ, ಬಕ್ ಚಾಕು, ಇಕ್ಕಳ, ಜಿಪ್ ಟೈಸ್‌, ಕಾಂಡೋಮ್‌ಗಳು, ಲೂಬ್ರಿಕಂಟ್, ಬೆನಾಡ್ರಿಲ್, ಬಾಲ್ ಗಾಗ್ ಮತ್ತು ಹೆಚ್ಚಿನವು ಸಿಕ್ಕಿವೆ.

ಮಹಿಳೆಯ ಒಳಉಡುಪು ಪತ್ತೆ

ಮಹಿಳೆಯ ಒಳಉಡುಪು ಪತ್ತೆ

ಮ್ಯಾಕಿಂಡೋ ಮನೆಯಲ್ಲಿ ಹೆಚ್ಚಿನ ತನಿಖೆ ನಡೆಸಿದಾಗ ಮಹಿಳೆಯ ಕೂದಲಿನ ಕ್ಲಿಪ್‌‌ಗಳು ಮತ್ತು ಆ ಮಹಿಳೆಯ ಎರಡು ಜೋಡಿ ಒಳ ಉಡುಪುಗಳು ಸಿಕ್ಕಿದ್ದು, ಆರೋಪಕ್ಕೆ ಮತ್ತಷ್ಟು ಸಾಕ್ಷ್ಯ ಒದಗಿಸಿವೆ.

Best Mobiles in India

Read more about:
English summary
Apple Watch Saves A Women From Getting Raped

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X