ಅಮೂಲ್ಯ ಜೀವ ಉಳಿಸಿದ ಆಪಲ್‌ ಸ್ಮಾರ್ಟ್‌ವಾಚ್‌..!

By Gizbot Bureau
|

ಎಲ್ಲಾ ಕ್ಷೇತ್ರಗಳಂತೆ, ತಂತ್ರಜ್ಞಾನಕ್ಕೂ ಎರಡು ಮುಖಗಳಿವೆ. ಒಂದು ಮುಖ ನಮ್ಮ ಆರೋಗ್ಯ ಹದಗೆಡಿಸಿ, ನಮ್ಮ ವೇಗ, ಕಾರ್ಯಕ್ಷಮತೆ ಹಾಗೂ ಉದ್ಯೋಗಗಳನ್ನು ಕೊಂದರೆ, ಇನ್ನೊಂದು ಜೀವನದಿಂದ ಹೆಚ್ಚಿನದನ್ನು ಪಡೆಯಲು ನಮಗೆ ಸಹಾಯ ಮಾಡುತ್ತದೆ. ಸದ್ಯ, ನಾವು ಮಾಡುವ ಹೆಚ್ಚಿನ ದೈನಂದಿನ ಕಾರ್ಯಗಳು ಸಂಪೂರ್ಣವಾಗಿ ತಂತ್ರಜ್ಞಾನವನ್ನು ಅವಲಂಭಿಸಿವೆ. ತಂತ್ರಜ್ಞಾನವು ಸಹ ಅನೇಕ ಬಾರಿ ಜೀವ ಉಳಿಸಿರುವ ಉದಾಹರಣೆಗಳಿವೆ. ಅಂತಹದ್ದೇ ಒಂದು ಮಹತ್ವಾಕಾಂಕ್ಷೆ ಕಥೆ ಇಲ್ಲಿದೆ ನೋಡಿ.

ಜೀವ ಉಳಿಸಿದ ಆಪಲ್ ವಾಚ್

ಜೀವ ಉಳಿಸಿದ ಆಪಲ್ ವಾಚ್

ಆಪಲ್ ವಾಚ್ ವಿಶ್ವದಲ್ಲಿ ಹೆಚ್ಚು ಬಳಕೆಯಾಗುತ್ತಿರುವ ಸ್ಮಾರ್ಟ್ ವಾಚ್ ಆಗಿದ್ದು, ಇತ್ತೀಚಿನ ವರ್ಷಗಳಲ್ಲಿ ಕಂಪನಿ ಸಾಕಷ್ಟು ಆರೋಗ್ಯ ಮತ್ತು ಫಿಟ್ನೆಸ್ ಫೀಚರ್‌ಗಳನ್ನು ಸ್ಮಾರ್ಟ್‌ವಾಚ್‌ನಲ್ಲಿ ಪರಿಚಯಿಸಿದೆ. ಅಂತಹ ಫೀಚರ್‌ಗಳಲ್ಲಿ ಕುಸಿಯುವುದನ್ನು ಪತ್ತೆಹಚ್ಚುವ ಫಾಲ್‌ ಡಿಟೆಕ್ಷನ್‌ ಕೂಡ ಒಂದು.

ಎಮರ್ಜೆನ್ಸಿ ಸಂಪರ್ಕಗಳಿಗೆ ಸಂದೇಶ

ಎಮರ್ಜೆನ್ಸಿ ಸಂಪರ್ಕಗಳಿಗೆ ಸಂದೇಶ

ವಿಶೇಷ ಸಂವೇದಕ ಮತ್ತು ಸಾಫ್ಟ್‌ವೇರ್‌ನೊಂದಿಗೆ ಆಪಲ್ ವಾಚ್ ತುರ್ತು ಸಂಪರ್ಕಗಳಿಗೆ ನೊಟಿಫಿಕೇಷನ್‌ ಕಳುಹಿಸುತ್ತದೆ. ಗೇಬ್ ಬರ್ಡೆಟ್ ಎಂಬಾತ ತನ್ನ ತಂದೆಯ ಜೀವ ಉಳಿಸಲು ಆಪಲ್ ವಾಚ್ ಹೇಗೆ ಸಹಾಯ ಮಾಡಿತು ಎಂಬುದನ್ನು ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದ್ದು, ಕಥೆ ಓದಿದರೆ ನೀವು ತಂತ್ರಜ್ಞಾನದ ಕೊಡುಗೆಯನ್ನು ಖಂಡಿತ ಮರೆಯಲ್ಲ.

ಜಿಪಿಎಸ್‌ ನೊಟಿಫಿಕೇಷನ್‌

ಜಿಪಿಎಸ್‌ ನೊಟಿಫಿಕೇಷನ್‌

ಗೇಬ್ ತನ್ನ ತಂದೆಯೊಂದಿಗೆ ಮೌಂಟೇನ್ ಬೈಕಿಂಗ್‌ಗೆ ಹೋಗಿದ್ದನು. ಮ್ಯಾಪ್‌ ಲೊಕೇಷನ್‌ನೊಂದಿಗೆ ಹಾರ್ಡ್ ಫಾಲ್ ಆಗಿದೆ ಎಂಬ ಅಧಿಸೂಚನೆಯನ್ನು ಬೇಗ್‌ ಸ್ವೀಕರಿಸುತ್ತಾನೆ. ಆದರೆ, ಗೇಬ್‌ ಮ್ಯಾಪ್‌ನಲ್ಲಿ ಸೂಚಿಸಿದ ಸ್ಥಳಕ್ಕೆ ಸ್ಥಳಕ್ಕೆ ಬರುವಷ್ಟರಲ್ಲಿ ಅವರ ತಂದೆ ಎಲ್ಲಿಯೂ ಕಾಣಲಿಲ್ಲ. ನಂತರ, ಗೇಬ್‌ ಹತ್ತಿರದ ಆರೋಗ್ಯ ಕೇಂದ್ರ ತೋರಿಸುವ ಮ್ಯಾಪ್‌ ಲೊಕೇಷನ್‌ ತಿಳಿಸುವ ಮತ್ತೊಂದು ಸಂದೇಶವನ್ನು ಪಡೆಯುತ್ತಾನೆ.

ರಕ್ಷಣಾ ತಂಡಕ್ಕೂ ಸಂದೇಶ

ರಕ್ಷಣಾ ತಂಡಕ್ಕೂ ಸಂದೇಶ

ಬೈಕ್‌ ಚಲಿಸುವಾಗ ಗೇಬ್‌ ತಂದೆ ತಲೆಕೆಳಗಾಗಿ ಬಿದ್ದಿದ್ದಾರೆ. ಅಪಘಾತ ಆಗಿರುವುದನ್ನು ಅರಿತ ಸ್ಮಾರ್ಟ್‌ವಾಚ್ ಫಾಲ್‌ ಡಿಟೆಕ್ಷನ್‌ನೊಂದಿಗೆ ಸ್ವಯಂಚಾಲಿತವಾಗಿ 911ಗೆ ನಿಖರವಾದ ಸ್ಥಳದೊಂದಿಗೆ ನೊಟಿಫಿಕೇಷನ್‌ ಕಳುಹಿಸಿದೆ. ನಂತರ, ರಕ್ಷಣಾ ತಂಡ 30 ನಿಮಿಷಗಳಲ್ಲಿ ಅವರನ್ನು ಆಸ್ಪತ್ರೆಗೆ ಕರೆದೊಯ್ದು ಚಿಕತ್ಸೆ ಕೊಡಿಸಲು ಸಾಧ್ಯವಾಗಿದೆ. ನಂತರ, ತಮ್ಮ ಫೇಸ್‌ಬುಕ್ ಪೋಸ್ಟ್‌ನಲ್ಲಿ ಗೇಬ್‌, ತನ್ನ ತಂದೆಗೆ ಸಣ್ಣಪುಟ್ಟ ಗಾಯಗಳಾಗಿವೆ. ಸದ್ಯ ಉತ್ತಮವಾಗಿದ್ದಾರೆ, ಪ್ರತಿಯೊಬ್ಬರೂ ಆಪಲ್ ವಾಚ್ ಹೊಂದಿದ್ದರೆ ಫಾಲ್‌ ಡಿಟೆಕ್ಷನ್‌ ಆನ್‌ ಮಾಡಿ ಎಂದಿದ್ದಾರೆ.

ಆಪಲ್‌ನ ಹೆಗ್ಗಳಿಕೆ

ಆಪಲ್‌ನ ಹೆಗ್ಗಳಿಕೆ

ಅಂತರ್ನಿರ್ಮಿತ ಇಸಿಜಿ (ಎಲೆಕ್ಟ್ರೋಕಾರ್ಡಿಯೋಗ್ರಾಮ್) ನೊಂದಿಗೆ ಸ್ಮಾರ್ಟ್ ವಾಚ್ ಪ್ರಾರಂಭಿಸಿರುವ ಮೊದಲ ಕಂಪನಿ ಎಂಬ ಹೆಗ್ಗಳಿಕೆ ಆಪಲ್‌ನದ್ದಾಗಿದೆ. ಆದರೆ, ಸ್ಪಷ್ಟ ರೋಗನಿರ್ಣಯಕ್ಕೆ ಇದು ಸಾಕಾಗುವುದಿಲ್ಲ. ಹೃದಯ ಬಡಿತಗಳಲ್ಲಿ ಯಾವುದೇ ಅಸಹಜತೆಗಳು ಇದ್ದಲ್ಲಿ ಸೂಚಿಸುವ ತಂತ್ರಜ್ಞಾನವನ್ನು ಆಪಲ್‌ ತರಬೇಕಾಗಿದೆ.

Best Mobiles in India

Read more about:
English summary
Apple Watch Saves Another Life: An Inspiring Facebook story

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X