Home
ಸುದ್ದಿಜಾಲ

Apple Watch: ಅಗ್ನಿಶಾಮಕ ಸಿಬ್ಬಂದಿಯ ಪ್ರಾಣವನ್ನೇ ಉಳಿಸಿದ ಆಪಲ್ ವಾಚ್! ಹೇಗೆ?

ಮನುಷ್ಯನ ಜೀವನದಲ್ಲಿ ಸಮಯಕ್ಕೆ ಬಹಳ ಮಹತ್ವವಿದೆ. ಟೈಮ್‌ ಅನ್ನು ತಿಳಿಸುವ ವಾಚ್‌ (Watch) ಕೂಡ ಆಧುನಿಕ ಜೀವನಶೈಲಿಯಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಅರೆ.. ಒಂದು ವಾಚ್‌ ನಮ್ಮ ಜೀವನದಲ್ಲಿ ಮಹತ್ವದ ಪಾತ್ರವನ್ನು ನಿರ್ವಹಣೆ ಮಾಡುತ್ತದೆಯೇ? ಅದು ಹೇಗೆ? ಅನ್ನೋದು ಬಹುತೇಕರ ಪ್ರಶ್ನೆ. ಅದಕ್ಕೆ ಇಲ್ಲಿದೆ ನೋಡಿ ಉತ್ತರ. ನಾವು ಬಳಸುವ ವಾಚ್‌ಗೆ ಯಾಕೆ ಅಷ್ಟು ಪ್ರಾಮುಖ್ಯತೆ ನೀಡುತ್ತಿದ್ದೇವೆ ಎಂದರೆ, ಒಂದು ವಾಚ್‌ ಅಗ್ನಿಶಾಮಕ ಸಿಬ್ಬಂದಿಯ ಪ್ರಾಣವನ್ನೇ ಉಳಿಸಿದ ಘಟನೆ ನಡೆದಿದೆ. ಏನಿದು ಘಟನೆ ಅನ್ನೋದನ್ನು ತಿಳಿಯೋಣ ಬನ್ನಿ.

ಹೌದು, Apple ವಾಚ್ ತನ್ನ ಜೀವ ಉಳಿಸುವ ಸಾಮರ್ಥ್ಯವನ್ನು ಮತ್ತೊಮ್ಮೆ ಸಾಬೀತುಪಡಿಸಿದೆ. ಆಪಲ್‌ ವಾಚ್‌ಗಳು ಸಾಕಷ್ಟು ಜನರ ಜೀವ ಉಳಿಸುವ ಮೂಲಕ ತಮ್ಮ ಮೌಲ್ಯವನ್ನು ಇನ್ನಷ್ಟು ಹೆಚ್ಚಿಗೆ ಮಾಡಿಕೊಂಡಿವೆ. ಅದರಂತೆ ಈಗ ಅಗ್ನಿಶಾಮಕ ಸಿಬ್ಬಂದಿಯ ಜೀವ ಕಾಪಾಡುವಲ್ಲಿ ಸಹಾಯ ಮಾಡಿದೆ. ಹಾಗಿದ್ರೆ, ಈ ಅಗ್ನಿಶಾಮಕ ಸಿಬ್ಬಂದಿಗೆ ಆಗಿದ್ದೇನು? ಇವರ ಪ್ರಾಣ ಉಳಿಸುವಲ್ಲಿ ಆಪಲ್‌ ಸ್ಮಾರ್ಟ್‌ ವಾಚ್‌ ಮಾಡಿದ ಕೆಲಸಗಳು ಏನು? ಎಂಬ ಬಗ್ಗೆ ತಿಳಿಯಲು ಮುಂದೆ ಓದಿ.

ಅಗ್ನಿಶಾಮಕ ಸಿಬ್ಬಂದಿಯ ಪ್ರಾಣವನ್ನೇ ಉಳಿಸಿದ ಆಪಲ್ ವಾಚ್! ಹೇಗೆ?

ಹಾಕಿ ಆಡುತ್ತಿದ್ದಾಗ ಲಘು ಹೃದಯಾಘಾತ!

ಈ ಘಟನೆ ಕೆನಡಾದಲ್ಲಿ ನಡೆದಿದೆ. 44 ವರ್ಷದ ಟ್ರಾವಿಸ್ ಚಾಲ್ಮರ್ಸ್ ಅಗ್ನಿಶಾಮಕ ದಳದಲ್ಲಿ ಕೆಲಸ ಮಾಡುತ್ತಿದ್ದರು. ಇವರು ತನ್ನ ಮಗನೊಂದಿಗೆ ಹಾಕಿ ಆಡುತ್ತಿದ್ದರು. ಈ ವೇಳೆ ಇದ್ದಕ್ಕಿದ್ದಂತೆ ಅವರಿಗೆ ಹೃಯದ ಮತ್ತು ತಲೆನೋವಿನ ಕೆಲವು ಲಕ್ಷಣಗಳು ಕಾಣಿಸಿಕೊಂಡಿವೆ. ಮೊದಲಿಗೆ ಇದು ಸರಳ ಅಲರ್ಜಿ ಎಂದು ಅವರು ಭಾವಿಸಿದ್ದರು. ಆದರೆ, ಅವರು ಕೈಯಲ್ಲಿ ಕಟ್ಟಿದ್ದ Apple Watch ಎಚ್ಚರಿಕೆ ನೀಡಿದೆ. ಹೃದಯ ಬಡಿತ ಅಸಹಜವಾಗಿದೆ ಎಂದು ಸೂಚಿಸಿದೆ.

ನಿದ್ರೆ ಮಾಡುತ್ತಿದ್ದಾಗ ಮತ್ತೆ ಎಚ್ಚರಿಕೆ ಸಂದೇಶ

ಈ ವೇಳೆ ಟ್ರಾವಿಸ್ ಚಾಲ್ಮರ್ಸ್ ಸ್ವಲ್ಪ ಕಾಲ ವಿಶ್ರಾಂತಿ ಪಡೆದರೆ ಸರಿ ಹೋಗುತ್ತೆ ಅಂದುಕೊಂಡಿದ್ದರು. ಅರ್ಧ ಗಂಟೆಯ ಬಳಿಕ ವಿಶ್ರಾಂತಿ ಪಡೆಯಲು ನಿದ್ದೆಗೆ ಜಾರಿದ್ದರು. ಆಗ, ಮತ್ತೆ ಆಪಲ್ ವಾಚ್‌ನಿಂದ ಹೃದಯಾಘಾತದ ಎಚ್ಚರಿಕೆ ಸಂದೇಶಗಳು ಬಂದಿವೆ. ಇದನ್ನರಿತ ಅವರು ಕೂಡಲೇ ಆಸ್ಪತ್ರೆಗೆ ತೆರಳಿದ್ದಾರೆ. ಆಗಲೇ ನಿಜಾಂಶ ತಿಳಿದಿದೆ. ಇವರನ್ನು ಪರೀಕ್ಷಿಸಿದ ವೈದ್ಯರು ಲಘು ಹೃದಯಾಘಾತವಾಗಿದೆ ಎಂದು ದೃಢಪಡಿಸಿದ್ದಾರೆ. ಇದನ್ನು ಕೇಳಿ ಟ್ರಾವಿಸ್ ಚಾಲ್ಮರ್ಸ್ ಆತಂಕಕ್ಕೆ ಒಳಗಾಗಿದ್ದಾರೆ.

ಆಪಲ್‌ ವಾಚ್‌ನಿಂದ ನನ್ನ ಪ್ರಾಣ ಉಳಿಯಿತು

ಈ ಹಿಂದೆ ನಮ್ಮ ಕುಟುಂಬದಲ್ಲಿ ಯಾರಿಗೂ ಈ ರೀತಿಯ ಆರೋಗ್ಯ ಸಮಸ್ಯೆಗಳಿರಲಿಲ್ಲ ಎಂದು ಟ್ರಾವಿಸ್ ಚಾಲ್ಮರ್ಸ್ ವೈದ್ಯರಿಗೆ ತಿಳಿಸಿದ್ದಾರೆ. ತಮ್ಮ 44ನೇ ವಯಸ್ಸಿನಲ್ಲಿ ಇಂತಹ ಸ್ಥಿತಿ ಬಂದಿರುವುದು ಅವರ ಆತಂಕಕ್ಕೆ ಕಾರಣವಾಗಿದೆ. Apple ಕಂಪನಿಯ ಕೈ ಗಡಿಯಾರದಿಂದ ನಾನು ಸಾವಿನಿಂದ ಪಾರಾಗಿದ್ದೇನೆ ಎಂದಿದ್ದಾರೆ. ಅಲ್ಲದೇ, ಸರಿಯಾದ ಸಮಯದಲ್ಲಿ ಎಚ್ಚರಿಕೆ ಸಂದೇಶಗಳನ್ನು ಕಳುಹಿಸಿದ್ದಕ್ಕಾಗಿ ಆಪಲ್ ಸ್ಮಾರ್ಟ್ ವಾಚ್‌ಗೆ ಟ್ರಾವಿಸ್ ಚಾಲ್ಮರ್ಸ್ ಧನ್ಯವಾದ ಅರ್ಪಿಸಿದ್ದಾರೆ.

ಆಪ್ಟಿಕಲ್ ಹಾರ್ಟ್ ಸೆನ್ಸರ್ ಮೂಲಕ ಮೇಲ್ವಿಚಾರಣೆ

ಹೃದಯ ಬಡಿತದಲ್ಲಿನ ಅಸಹಜ ಬದಲಾವಣೆಗಳನ್ನು ಪತ್ತೆಹಚ್ಚಲು ಆಪಲ್ ವಾಚ್ಓಎಸ್ 6 ನಲ್ಲಿ ವೈಶಿಷ್ಟ್ಯವನ್ನು ಪರಿಚಯಿಸಿದೆ. ಆಪ್ಟಿಕಲ್ ಹಾರ್ಟ್ ಸೆನ್ಸರ್ ಮೂಲಕ ಹೃದಯ ಬಡಿತವನ್ನು ಮೇಲ್ವಿಚಾರಣೆ ಮಾಡುತ್ತದೆ. ಹೃದಯ ಬಡಿತದಲ್ಲಿ ಬದಲಾವಣೆಗಳನ್ನು ಗಮನಿಸಿದರೆ ತಕ್ಷಣವೇ ಎಚ್ಚರಿಸುತ್ತದೆ. ಆ ಸಮಯದಲ್ಲಿ ಆಸ್ಪತ್ರೆಗೆ ಹೋಗಿ ವೈದ್ಯಕೀಯ ಸಹಾಯ ಪಡೆಯಲು ಸೂಚಿಸುತ್ತದೆ.

ಅಗ್ನಿಶಾಮಕ ಸಿಬ್ಬಂದಿಯ ಪ್ರಾಣವನ್ನೇ ಉಳಿಸಿದ ಆಪಲ್ ವಾಚ್! ಹೇಗೆ?

ಪಾರ್ಕಿನ್ಸನ್ ಕಾಯಿಲೆಯ ಲಕ್ಷಣ ಪತ್ತೆ

ಇತ್ತೀಚೆಗೆ, ಆಪಲ್ ಸ್ಮಾರ್ಟ್ ವಾಚ್ ಬಗ್ಗೆ ಆಸಕ್ತಿದಾಯಕ ಸಂಗತಿ ಬೆಳಕಿಗೆ ಬಂದಿದೆ. ಆಪಲ್ ಸ್ಮಾರ್ಟ್‌ವಾಚ್‌ಗಳು ಪಾರ್ಕಿನ್ಸನ್ ಕಾಯಿಲೆಯ ಲಕ್ಷಣಗಳನ್ನು ಪತ್ತೆ ಮಾಡಬಲ್ಲವು ಎಂದು ಅಧ್ಯಯನವೊಂದು ಬಹಿರಂಗಪಡಿಸಿದೆ. ಅಲ್ಲದೇ, ರೋಗಕ್ಕೆ ಹೇಗೆ ಚಿಕಿತ್ಸೆ ನೀಡಬೇಕು ಅನ್ನೋದನ್ನು ಅರ್ಥಮಾಡಿಕೊಳ್ಳಲು ಈ ಮಾಹಿತಿಯು ಉಪಯುಕ್ತವಾಗಿದೆ.

ಒಂದು ವರ್ಷದವರೆಗೆ ಆಪಲ್ ವಾಚ್ ಬಳಕೆ

ಯು.ಎಸ್.ನ ರೋಚೆಸ್ಟರ್ ವೈದ್ಯಕೀಯ ಕೇಂದ್ರದ ವಿಶ್ವವಿದ್ಯಾನಿಲಯದ ನರವಿಜ್ಞಾನಿಗಳು ಅಧ್ಯಯನ ಮಾಡಿದ್ದರು. ಪಾರ್ಕಿನ್ಸನ್ ಕಾಯಿಲೆಯ ಆರಂಭಿಕ ಹಂತಗಳಲ್ಲಿ ಜನರನ್ನು ಮೇಲ್ವಿಚಾರಣೆ ಮಾಡಲು ಒಂದು ವರ್ಷದವರೆಗೆ ಐಫೋನ್‌ಗೆ ಸಂಪರ್ಕಿಸಲಾದ ಆಪಲ್ ವಾಚ್ ಅನ್ನು ಬಳಸಿದರು. ಈ ಮೂಲಕ ಹಲವು ಅಂಶಗಳನ್ನು ಗುರುತಿಸಿರುವುದು ಗೊತ್ತಾಗಿದೆ. ವಾಯ್ಸ್ ರೆಕಾರ್ಡಿಂಗ್ ಮೂಲಕ ಧ್ವನಿಯ ವಿವರಗಳನ್ನು ತಿಳಿಯಲಾಯಿತು.

ವಾಚ್‌ನಲ್ಲಿ ತುರ್ತು ಕಾಲ್ ಮಾಡುವುದು ಹೇಗೆ?

ನಿಮಗೆ ಅಪಾಯ ಎದುರಾದಾಗ ಸ್ಮಾರ್ಟ್‌ವಾಚ್‌ನಲ್ಲಿ ತುರ್ತು ಕರೆ ಮಾಡಬಹುದು. ತುರ್ತು ಕರೆ ಸ್ಲೈಡರ್ ಕಾಣಿಸಿಕೊಳ್ಳುವವರೆಗೆ ನಿಮ್ಮ ವಾಚ್‌ನ ಸೈಡ್ ಬಟನ್ (ಡಿಜಿಟಲ್ ಕ್ರೌನ್‌ನ ಕೆಳಗಿನ ಬಟನ್) ಒತ್ತಿ ಹಿಡಿದುಕೊಳ್ಳಿ. ಕರೆಯನ್ನು ತಕ್ಷಣವೇ ಪ್ರಾರಂಭಿಸಲು ತುರ್ತು ಕರೆ ಸ್ಲೈಡರ್ ಅನ್ನು ಎಳೆಯಿರಿ. ಅಥವಾ ಸೈಡ್ ಬಟನ್ ಅನ್ನು ಹಿಡಿದಿಟ್ಟುಕೊಳ್ಳಬಹುದು. ಕೌಂಟ್‌ಡೌನ್ ನಂತರ ನಿಮ್ಮ ವಾಚ್ ತುರ್ತು ಸೇವೆಗಳಿಗೆ ಆಟೋಮ್ಯಾಟಿಕ್‌ ಆಗಿ ಕರೆ ಮಾಡುತ್ತದೆ.

Best Mobiles in India

English summary
Apple Watch has once again proven its life-saving capabilities. this time by aiding a Canadian firefighter in detecting a serious heart condition.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+