ಆಪಲ್ ವಾಚ್‌ನಲ್ಲಿದೆ ಬಳಕೆದಾರರಿಗಾಗಿ ವಿಶೇಷ ಸವಲತ್ತುಗಳು

By: Shwetha PS

ಆಪಲ್ ಕಂಪನಿಯು ಸಿರೀಸ್ 3 ವಾಚ್ ಅನ್ನು ಘೋಷಿಸಿದ್ದು ಕ್ಯಾಲಿಫೋರ್ನಿಯಾದ ಆಪಲ್ ಪಾರ್ಕ್ ಈ ಸಂಭ್ರಮಕ್ಕೆ ವೇದಿಕೆಯಾಯಿತು. ವಾಚ್ ಬಗ್ಗೆ ಹೇಳುವುದಾದರೆ ಇದು ಬಿಲ್ಟ್ ಇನ್ ಸೆಲ್ಯುಲಾರ್ ಕನೆಕ್ಟವಿಟಿಯೊಂದಿಗೆ ಬಂದಿದ್ದು ಸ್ಟಾಂಡಲೋನ್ ಡಿವೈಸ್‌ನಂತೆ ಬಳಸಲು ಇದು ಅನುಮತಿಸುತ್ತದೆ. ನಿಮ್ಮ ಐಫೋನ್‌ನಲ್ಲಿರುವ ಅದೇ ಸಂಖ್ಯೆಯನ್ನು ವಾಚ್ ಒಳಗೊಂಡಿದ್ದು ಇದರಿಂದ ಸಂಪರ್ಕಿಸಲು ಸುಲಭವಾಗಿದೆ.

ಆಪಲ್ ವಾಚ್‌ನಲ್ಲಿದೆ ಬಳಕೆದಾರರಿಗಾಗಿ ವಿಶೇಷ ಸವಲತ್ತುಗಳು

ಸಿರಿ ಮತ್ತು ಸಂದೇಶಗಳನ್ನು ವಾಚ್ ಒಳಗೊಂಡಿದೆ. ನೀವು ಮ್ಯಾಪ್ಸ್ ಅನ್ನು ವಾಚ್‌ನಲ್ಲಿ ಚೆಕ್ ಮಾಡಬಹುದಾಗಿದ್ದು ಇದರಲ್ಲಿರುವ ಬಿಲ್ಟ್ ಇನ್ ಸೆಲ್ಯುಲಾರ್ ಕನೆಕ್ಟಿವಿಟಿ ಮತ್ತು ಜಿಪಿಎಸ್ ಅನುವು ಮಾಡಿಕೊಡುತ್ತದೆ. ಏರ್‌ಪೋಡ್‌ಗಳಿಂದ ಹಾಡು ಆಲಿಸಲು ಇದು ಅನುವು ಮಾಡಿಕೊಡುತ್ತದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ವಿಶೇಷತೆಗಳು

ವಿಶೇಷತೆಗಳು

ಸಿರೀಸ್ 2 ರ ಅದೇ ಗಾತ್ರವನ್ನು ಸಿರೀಸ್ 3 ಹೊಂದಿದೆ. ಇದು ಕೆಂಪು ಬಣ್ಣದ ಬಟನ್ ಹೊಂದಿದ್ದು ಡಿಸ್‌ಪ್ಲೇ ಆಂಟೆನಾವನ್ನು ದುಪ್ಪಟ್ಟುಮಾಡುತ್ತದೆ. ಮೈಕ್ರೋಫೋನ್ ಅನ್ನು ಇದು ಹೊಂದಿದ್ದು ಬಕೆದಾರರು ಕರೆಯನ್ನು ಸ್ವೀಕರಿಸಬಹುದಾಗಿದೆ. ಸಿರಿಯನ್ನು ಇದೇ ಪ್ರಥಮ ಬಾರಿಗೆ ಆಪಲ್ ವಾಚ್‌ನಲ್ಲಿ ಅಳವಡಿಸಲಾಗಿದೆ. ಬ್ಲೂಟೂತ್, ಸೆಲ್ಯುಲಾರ್ ಕನೆಕ್ಟಿವಿಟಿ ಇದರಲ್ಲಿದೆ.

ವಾಚ್ ಓಎಸ್4

ವಾಚ್ ಓಎಸ್4

ಸೆಪ್ಟೆಂಬರ್ 19 ರಿಂದ ಎಲ್ಲಾ ಆಪಲ್ ಬಳಕೆದಾರರಿಗೆ ವಾಚ್ ಓಎಸ್4 ದೊರೆಯಲಿದೆ. ಈಜುಗಾರರು, ಜಿಮ್ ಪಟುಗಳಿಗೆ ವಾಚ್‌ನಲ್ಲಿ ವಿಶೇಷ ವೈಶಿಷ್ಟ್ಯಗಳನ್ನು ಅಳವಡಿಸಲಾಗಿದೆ. ನಿಮ್ಮ ಮಣಿಗಂಟಿನಲ್ಲಿಯೇ ನಿಮ್ಮ ಹೃದಯ ಬಡಿತವನ್ನು ನೀವು ಆಲಿಸಬಹುದಾಗಿದೆ. ರೆಸ್ಟಿಂಗ್ ರೇಟ್, ರಿಕವರಿ ರೇಟ್ ಮತ್ತು ಇನ್ನಷ್ಟು ವಿಶೇಷತೆಗಳನ್ನು ಇದು ತೋರಿಸಲಿದೆ.

1.02 ಲಕ್ಷ ಬೆಲೆಯ ಐಫೋನ್ X ಇಲ್ಲಿ ಕೇವಲ ರೂ.6500ಕ್ಕೆ ಲಭ್ಯ

 ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ಕೇಸ್ ಮತ್ತು ಬ್ಯಾಂಡ್‌ಗಳ ಶ್ರೇಣಿಯಲ್ಲಿ ವಾಚ್ ಬರಲಿದೆ. ಅಲ್ಯುಮಿನಿಯಂ ಗೋಲ್ಡ್‌ನಂತಹ ಬೇರೆ ಬೇರೆ ಬಣ್ಣಗಳೊಂದಿಗೆ ಇದು ದೊರೆಯಲಿದೆ. ಸಿರೀಸ್ 3 ವಾಚ್ ಮಾರಾಟವು ಸೆಪ್ಟೆಂಬರ್ 22 ರಿಂದ ನಡೆಯಲಿದೆ. ಸೆಲ್ಯುಲಾರ್ ವಾಚ್‌ ಬೆಲೆ $399 ನಿಂದ ಆರಂಭವಾಗಲಿದ್ದು ಸೆಲ್ಯುಲಾರ್ ರಹಿತ ವಾಚ್ ಬೆಲೆ $329 ಆಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Read more about:
English summary
The Apple Watch Series 3 smartwatch has been announced today at the event held in California. The device comes with in-built GPS and LTE connectivity.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot