ಭಾರತದಲ್ಲಿ ವಾಯ್ಸ್ ಕಾಲಿಂಗ್ ವೈಶಿಷ್ಟ್ಯವಿರುವ ವಾಚ್ ಸೀರಿಸ್ 3 ಪರಿಚಯಿಸಲು ಮುಂದಾದ ಆಪಲ್!!
ವಾಯ್ಸ್ ಕಾಲಿಂಗ್ ವೈಶಿಷ್ಟ್ಯವಿರುವ ಆಪಲ್ ವಾಚ್ ಸೀರೀಸ್ 3 ಭಾರತದಲ್ಲಿ ಪರಿಚಯಿಸಲು ಆಪಲ್ ಮುಂದಾಗಿದೆ. ಸೆಪ್ಟೆಂಬರ್ 29ರಂದು ಬಿಡುಗಡೆ ಮಾಡಲು ಆಪಲ್ ಸಜ್ಜುಗೊಂಡಿದೆ.
ನೆನ್ನೆಯಷ್ಟೆ ಸ್ಟೀವ್ ಜಾಬ್ಸ್ ಥಿಯೇಟರಿನಲ್ಲಿ ನಡೆದ ಭವ್ಯ ಸಮಾರಂಭದಲ್ಲಿ ಹಲವು ವೈಶಿಷ್ಟ್ಯತೆಯಿಂದ ಕೂಡಿರುವ ಐಫೋನ್ ಎಕ್ಸ್, ಐಫೋನ್ 8 ಮತ್ತು ಐಫೋನ್ 8 ಪ್ಲಸ್ ವಾಚ್ ಸೀರಿಸ್ 3 ಯನ್ನು ಲೋಕಾರ್ಪಣೆಗೊಳಿಸುವ ಮೂಲಕ ಜಗತ್ತಿಗೆ ಪರಿಚಯಿಸಿದೆ.

ಮೂರನೆಯ ತಲೆಮಾರಿನ ಆಪಲ್ ಸ್ಮಾರ್ಟ್ ವಾಚ್ 3 ಇಲ್ಲಿಯವರೆಗೆ ಅನಾವರಣಗೊಂಡಿರುವ ಅತ್ಯಂತ ಸುಧಾರಿತ ಸ್ಮಾರ್ಟ್ ವಾಚ್ ಎಮದು ವಿಶ್ಲೇಷಿಸಲಾಗುತ್ತಿದೆ. ಏಕೆಂದರೆ, ಆಪಲ್ ವಾಚ್ ಸೀರೀಸ್ 3 ಸೆಲ್ಯುಲರ್ ಸಂಪರ್ಕದೊಂದಿಗೆ ಪ್ರಾರಂಭಿಸಲಾಗಿದೆ. ಇದು ಸ್ಮಾರ್ಟ್ಫೋನ್ ಅವಶ್ಯಕತೆ ಇಲ್ಲದೆ ಕರೆಗಳನ್ನು ಸ್ವೀಕರಿಸುವ ಹಾಗೂ ಉತ್ತರಿಸಬಹುದಾದ ಒಂದು ಸ್ವತಂತ್ರ ಸಾಧನವಾಗಿ ಕಾರ್ಯನಿರ್ವಹಿಸುವುದು ಇದರ ವಿಶೇಷತೆಯಾಗಿದೆ.
ಆದಾಗ್ಯೂ, ಈ ಸಾಧನವು ಬಿಡುಗಡೆಯಾಗುವ ಎಲ್ಲ ಜಾಗತಿಕ ಮಾರುಕಟ್ಟೆಗಳಿಗೆ ಸೆಲ್ಯುಲರ್ ಸಂಪರ್ಕ ವೈಶಿಷ್ಟ್ಯವನ್ನು ಪಡೆಯಲು ಸಾಧ್ಯವಾಗುವುದಿಲ್ಲ. ಆಪಲ್ ವಾಚ್ ಸೀರೀಸ್ 3 ಅನ್ನು ಎರಡು ರೂಪಾಂತರಗಳಲ್ಲಿ ಬಿಡುಗಡೆ ಮಾಡಲಾಗಿದೆ. ಸೆಲ್ಯುಲಾರ್ ಸಂಪರ್ಕ ಮತ್ತು ಸೆಲ್ಯುಲರ್ ಸಂಪರ್ಕ ಇಲ್ಲದೆಯೂ ಕಾರ್ಯ ನಿರ್ವಹಿಸಲಿದೆ. ದುರದೃಷ್ಟವಶಾತ್, ಭಾರತದಲ್ಲಿ ಆಪಲ್ ಅಭಿಮಾನಿಗಳು ಈ ವೈಶಿಷ್ಟತೆಯನ್ನು ಅನುಭವಿಸಲು ಸಾಧ್ಯವಾಗುತ್ತಿರಲಿಲ್ಲ. ಏಕೆಂದರೆ ಈ ರೂಪಾಂತರವನ್ನು ಭಾರತದಲ್ಲಿ ಬಿಡುಗಡೆ ಮಾಡಿರಲಿಲ್ಲ.
ಸೆಪ್ಟೆಂಬರ್ 29 ರಂದು ಸೆಲ್ಯುಲರ್ ಸಂಪರ್ಕವಿಲ್ಲದೆಯೇ ಆಪಲ್ ವಾಚ್ ಸೀರೀಸ್ 3 ಅನ್ನು ಭಾರತದಲ್ಲಿ ಬಿಡುಗಡೆ ಮಾಡಲು ಆಪಲ್ ಸಜ್ಜುಗೊಂಡಿದೆ ಎಂದು ಮೂಲಗಳು ಖಚಿತ ಪಡಿಸಿವೆ. ಅದರ ಕನಿಷ್ಠ ಬೆಲೆ ರೂ. 29,900. ರಿಂದ ಹಿಡಿದು ಇನ್ನೂ ಹೆಚ್ಚಿನ ಮೊತ್ತಕ್ಕೆ ಮಾರಾಟಕ್ಕೆ ಮುಂದಾಗಿದೆ.
ಭಾರತದಲ್ಲಿ ಸ್ಮಾರ್ಟ್ ವಾಟ್ ಪ್ರಾರಂಭಿಸದೇ ಇರುವುದರಿಂದ ಕುಪರ್ಟ್ರಿನೊ ಮೂಲದ ಟೆಕ್ ಇನ್ನೂ ಬಹಿರಂಗಪಡಿಸಿರಲಿಲ್ಲ ಎನ್ನಲಾಗುತ್ತಿದೆ. ಆದರೆ ದೇಶದ ಎಲ್ಲ ಮೂಲಗಳು ಇದಕ್ಕೆ ಕಾರಣ ಎಂದು ಉದ್ಯಮ ಮೂಲಗಳು ಹೇಳಿವೆ.
ಭಾರತದಲ್ಲಿ ಪ್ರಸ್ತುತ ಟೆಲಿಕಾಂ ಆಪರೇಟರ್ಸ್ ಇ-ಸಿಮ್ (ಇಲೆಕ್ಟ್ರಾನಿಕ್ ಸಿಮ್) ಕಾರ್ಡ್ ತಂತ್ರಜ್ಞಾನವನ್ನು ಬೆಂಬಲಿಸುತ್ತಿಲ್ಲ. ಆಪಲ್ ವಾಚ್ ಸೀರೀಸ್ 3 ಇ-ಸಿಮ್ ತಂತ್ರಜ್ಞಾನವನ್ನು ಅವಲಂಬಿಸಿದೆ. ಹೀಗಾಗಿ ಜಿಪಿಎಸ್ ಭಿನ್ನತೆಯನ್ನು ಮಾತ್ರ ದೇಶದಲ್ಲಿ ಬಿಡುಗಡೆ ಮಾಡಲಾಗುವುದು. ಸೇವಾ ಪೂರೈಕೆದಾರರು ಈ ವೈಶಿಷ್ಟ್ಯಕ್ಕಾಗಿ ಬೆಂಬಲ ನೀಡಲು ಪ್ರಾರಂಭಿಸಿದಾಗ ಆಪಲ್ ಸೆಲ್ಯುಲರ್ ಸಂಪರ್ಕದೊಂದಿಗೆ ವಾಚ್ 3 ಅನ್ನು ಪ್ರಾರಂಭಿಸುವ ಸಾಧ್ಯತೆಯಿದೆ.
ಇ-ಸಿಮ್ ಕಾರ್ಡ್ ತಂತ್ರಜ್ಞಾನ ನಮ್ಮ ಸ್ಮಾರ್ಟ್ಫೋನ್ಗಳಲ್ಲಿ ನಾವು ಬಳಸುವ ಸಾಮಾನ್ಯ ಸಿಮ್ ಕಾರ್ಡುಗಳಂತೆ ಇರುವುದಿಲ್ಲ. ಈ ತಂತ್ರಜ್ಞಾನವು ಆಪಲ್ ವಾಚ್ ಸೀರೀಸ್ 3 ಐಫೋನ್ನಲ್ಲಿ ಬಳಸಲಾಗುವ ಅದೇ ಫೋನ್ ಸಂಖ್ಯೆಯನ್ನು ಉಳಿಸಿಕೊಳ್ಳುತ್ತದೆ. ಗಮನಾರ್ಹವೆಂದರೆ, ಆಪಲ್ ವಾಚ್ ಸರಣಿ 3 ಸೆಲ್ಯುಲರ್ ಸಂಪರ್ಕವನ್ನು ಹೊಂದಿರುವ ಮೊದಲ ಸ್ಮಾರ್ಟ್ ವಾಚ್ ಅಲ್ಲ.
ಕಳೆದ ವರ್ಷ ಬಿಡುಗಡೆಯಾದ ಸ್ಯಾಮ್ಸಂಗ್ ಗ್ಯಾಲಕ್ಸಿ ಗೇರ್ ಎಸ್ 2 ಸ್ಮಾರ್ಟ್ ವಾಚ್ ಕೂಡ ಫೋನ್ ಕರೆಗಳನ್ನು ಮಾಡಲು ಅವಕಾಶ ಮಾಡಿಕೊಡಲಾಗಿತ್ತು. ಭಾರತದಲ್ಲಿ ಬೆಂಬಲವಿಲ್ಲದ ಕಾರಣ ಮಾರುಕಟ್ಟೆಗೆ ಪರಿಚಯಿಸಲು ಸಾಧ್ಯವಾಗಿರಲಿಲ್ಲ.


Click it and Unblock the Notifications